ಸುದ್ದಿ

ಕೌಡಿಚ್ಚಾರು : ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಅರಿಯಡ್ಕ : ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ ನೇತೃತ್ವದಲ್ಲಿ ಮತ್ತು ಶ್ರೀ ಕೃಷ್ಣ ಭಜನಾ ಮಂದಿರ (ರಿ) ಕೌಡಿಚ್ಚಾರು -ಅರಿಯಡ್ಕ ಇದರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಡಿ 20 ರಂದು ವಿಜೃಂಭಣೆಯಿಂದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಡಿ.20ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತಂಬಿಲ, ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ, ಭಜನಾ ಸಂಕೀರ್ತನೆ ನಡೆಯಿತು. ಭವ್ಯ ಮೆರವಣಿಗೆ ಶ್ರೀ ಅಯ್ಯಪ್ಪ ಭಜನ ಮಂದಿರ ಪೆರಿಗೇರಿಯವರ […]

ಕೌಡಿಚ್ಚಾರು : ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ Read More »

500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ

ಮಂಗಳೂರಿನ ಬ್ಯಾಂಕಿಗೆ ಪಂಗನಾಮ ಹಾಕಿದ ಖದೀಮ ಮಂಗಳೂರು : ಒಂದೆರಡಲ್ಲ ಬರೋಬ್ಬರಿ 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚನೆ ಎಸಗಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು ಮೋಸ ಮಾಡಿದ್ದಾನೆ.

500 ನಕಲಿ ಚಿನ್ನದ ಬಳೆ ಅಡವಿಟ್ಟು ಬ್ಯಾಂಕಿಗೆ 2 ಕೋಟಿ ರೂ. ವಂಚನೆ Read More »

ದ. ಕ. ಜಿಲ್ಲಾ. ಪಂಚಾಯತ್‍. ಉನ್ನತ. ಹಿರಿಯ. ಪ್ರಾಥಮಿಕ ಸತ್ತಿಕ್ಕಲ್ಲು ಶಾಲಾ  ಮಕ್ಕಳಿಗೆ  ಡೆಸ್ಕ್ ಮತ್ತು ಬೆಂಚು ವಿತರಣೆ

ಕೆದಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ವಲಯದ ಕೆದಿಲ ಕಾರ್ಯಕ್ಷೇತ್ರದ  ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಿಂದ  ಸತ್ತಿಕ್ಕಲ್ಲಿನ ದ. ಕ. ಜಿ. ಪಂ. ಉ. ಹಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ  5 ಡೆಸ್ಕ್ ಮತ್ತು 5 ಬೆಂಚನ್ನು ನೀಡಲಾಯಿತು. ಶಾಲಾ  ಮುಖ್ಯೋಪಾಧ್ಯಯ ಮಂಜುನಾಥ ಮತ್ತು  ಅಧ್ಯಾಪಕ ವೃಂದ ಹಾಗೂ  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಿಯಾಝ್,  ಉಪಾಧ್ಯಕ್ಷ ಶ್ವೇತರವರಿಗೆ  ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ 5 ಡೆಸ್ಕ್ ಮತ್ತು 5 ಬೆಂಚನ್ನು ವಿತರಿಸಿದರು. ಈ ಸಂದರ್ಭದಲ್ಲಿ

ದ. ಕ. ಜಿಲ್ಲಾ. ಪಂಚಾಯತ್‍. ಉನ್ನತ. ಹಿರಿಯ. ಪ್ರಾಥಮಿಕ ಸತ್ತಿಕ್ಕಲ್ಲು ಶಾಲಾ  ಮಕ್ಕಳಿಗೆ  ಡೆಸ್ಕ್ ಮತ್ತು ಬೆಂಚು ವಿತರಣೆ Read More »

ಖತರ್‌ನಾಕ್‌ ಸೀರಿಯಲ್‌ ಕಿಲ್ಲರ್‌ ಕೊನೆಗೂ ಸೆರೆ

18 ತಿಂಗಳಲ್ಲಿ 11 ಪುರುಷರನ್ನು ಕೊಂದಿದ್ದ ಸರಣಿ ಹಂತಕ ಹೊಸದಿಲ್ಲಿ : 18 ತಿಂಗಳಲ್ಲಿ 11 ಪುರುಷರನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್​ನನ್ನು ಕೊನೆಗೂ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಹಂತಕ ಸಲಿಂಗಕಾಮಿಯಾಗಿದ್ದು, ಪುರುಷರೇ ಅವನ ಟಾರ್ಗೆಟ್‌ ಆಗಿದ್ದರು. ಕಳೆದ 18 ತಿಂಗಳಲ್ಲಿ ಬೆನ್ನುಬೆನ್ನಿಗೆ ನಡೆದ 11 ಪುರುಷರ ಹತ್ಯೆ ಪಂಜಾಬ್‌ ಪೊಲೀಸರಿಗೆ ಸವಾಲಾಗಿತ್ತು. ಪುರುಷರನ್ನು ಹತ್ಯೆ ಮಾಡುವ ಮುನ್ನ ಅವರ ಜತೆ ದೈಹಿಕ ಸಂಬಂಧ ಹೊಂದುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. 11 ಕೊಲೆ ಲೆಕ್ಕಕ್ಕೆ ಸಿಕ್ಕಿದ್ದರೂ ಕೆಲವು

ಖತರ್‌ನಾಕ್‌ ಸೀರಿಯಲ್‌ ಕಿಲ್ಲರ್‌ ಕೊನೆಗೂ ಸೆರೆ Read More »

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು

ರಾಮಕುಂಜ: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. ಕೊಂಡ್ಯಾಡಿ ನಿವಾಸಿ ದನ ಮಾಲಕಿ, ರಾಜೀವಿ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಅಬ್ಬಾಸ್ ಎಂದು ತಿಳಿದು ಬಂದಿದೆ. ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಕೊಟ್ಟಿಗೆಯಿಂದ ದನವನ್ನು ತೋಟಕ್ಕೆ ಮೇಯಲು ಬಿಟ್ಟಿದ್ದು, ದನ ಸಂಜೆಯಾದರೂ ಮರಳಿ ಮನೆಗೆ ಬಾರದೇ ಇದ್ದದನ್ನು ಕಂಡು ದನವನ್ನು ಹುಡುಕಾಡಿದಾಗ ಪಕ್ಕದ ಮನೆಯ ಅಬ್ಬಾಸ್ ಎಂಬವರ

ದನದ ಕಾಲು ಕಡಿದ ಅನ್ಯಕೋಮಿನ ವ್ಯಕ್ತಿ | ಆರೋಪಿ ವಿರುದ್ಧ ಪ್ರಕರಣ ದಾಖಲು Read More »

ಸೇನಾ ವಾಹನ ಕಮರಿಗೆ ಉರುಳಿ ಐವರು ಯೋಧರು ಸಾವು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸೇನಾ ವಾಹನ 300 ಅಡಿ ಆಳದ ಕಂದಕಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. 18 ಯೋಧರು ವಾಹನದಲ್ಲಿದ್ದರು ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. 11 ಮರಾಠಾ ಲೈಟ್ ಇನ್‌ಫೆಂಟ್ರಿಯ ಸೇನಾ ವಾಹನ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಆ ವಾಹನವು ಸುಮಾರು

ಸೇನಾ ವಾಹನ ಕಮರಿಗೆ ಉರುಳಿ ಐವರು ಯೋಧರು ಸಾವು Read More »

ನಾಳೆಯಿಂದ ಬೆಳಗಾವಿಯಲ್ಲಿ ಕಾಂಗ್ರೆಸ್‌ ಮಹಾಅಧಿವೇಶನದ ಶತಮಾನೋತ್ಸವ

ರಾಷ್ಟ್ರೀಯ ನಾಯಕರ ದಂಡೇ ಬೆಳಗಾವಿಗೆ; ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಬೆಳಗಾವಿ : ಬೆಳಗಾವಿಯ ಕಾಂಗ್ರೆಸ್‌ ಮಹಾಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ನೆನಪಿಗಾಗಿ ನೂರು ವರ್ಷ ಹಿಂದೆ ಅಧಿವೇಶನ ನಡೆದ ಬೆಳಗಾವಿಯಲ್ಲೇ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾಅಧಿವೇಶನ ನಡೆದಿತ್ತು. ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಶತಮಾನೋತ್ಸವ ಆಚರಿಸಲು ಸಜ್ಜಾಗಿದೆ. ಗುರುವಾರ ಮತ್ತು ಶುಕ್ರವಾರ ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಕಾಂಗ್ರೆಸ್

ನಾಳೆಯಿಂದ ಬೆಳಗಾವಿಯಲ್ಲಿ ಕಾಂಗ್ರೆಸ್‌ ಮಹಾಅಧಿವೇಶನದ ಶತಮಾನೋತ್ಸವ Read More »

ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ

ಬದುಕಿದ್ದರೆ ಇಂದವರಿಗೆ 100 ತುಂಬುತ್ತಿತ್ತು ‘ನನಗೆ ಅಷ್ಟೊಂದು ಎತ್ತರವನ್ನು ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!’ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ.ವಾಜಪೇಯಿ ಬದುಕಿದ ರೀತಿಯೇ ಹಾಗಿತ್ತು. ಅವರ ರಾಜಕೀಯ ವಿರೋಧಿಗಳೂ ಅವರನ್ನು ಟೀಕೆ ಮಾಡಲು ಹಿಂದೆಮುಂದೆ ನೋಡುತ್ತಿದ್ದರು. ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ

ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ Read More »

ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ ವ್ಹೀಲ್ ಚೇರ್ ವಿತರಣೆ

ಕೆದಿಲ : ಬಂಟ್ವಾಳ  ತಾಲೂಕು,ಕೆದಿಲ ಗ್ರಾಮದ ಆನಡ್ಕ (ಕರಿಮಜಲು) ಗಂಗಾಧರ ಸಪಲ್ಯರು  ಅಸೌಖ್ಯವಾಗಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯ ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ  ಡಿ. ರಂದು ಶೌಚಾಲಯಕ್ಕೆ  ಅನುಕೂಲಕ್ಕಾಗಿ  ಕೊಮೋಡೋ  ವೀಲ್ ಚೇರನ್ನು ವಿತರಿಸಲಾಯಿತು. ವಿಟ್ಲ ತಾಲೂಕು ಕೃಷಿ ಅಧಿಕಾರಿಯಾದ ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ವ್ಹೀಲ್‍ ಚೇರ್‍ ನ್ನು ವಿತರಿಸಿದ್ದಾರೆ.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಜಗದೀಶ ಕೆದಿಲ,

ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ ವ್ಹೀಲ್ ಚೇರ್ ವಿತರಣೆ Read More »

ಚಾಲಕನ ನಿರ್ಲ್ಯಕ್ಷ್ಯತನದಿಂದ ರೈಲ್ವೇ ಗೇಟ್ ಗೆ ಪಿಕಪ್‍ ಡಿಕ್ಕಿ

ಮುಲ್ಕಿ:  ಹಳೆಯಂಗಡಿ ರೈಲ್ವೇ ಗೇಟ್ ಬಳಿ ರೈಲು ಬರುವ ಕೆಲವೇ ಹೊತ್ತಲ್ಲಿ ಪಿಕಪ್ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ರೈಲ್ವೇ ಗೇಟ್ ಗೆ ಡಿಕ್ಕಿಯಾದ ಘಟನೆ ನಡೆದಿದೆ. ಡಿಕ್ಕಿಯಾದ ಪರಿಣಾಮ ರೈಲ್ವೆ ಗೇಟ್‍ ತುಂಡಾಗಿದ್ದು. ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ರೈಲ್ವೇ ಗೇಟ್ ಸಿಬ್ಬಂದಿ ರೈಲು ಬರುವ ಹೊತ್ತಿನಲ್ಲಿ ಗೇಟ್ ಹಾಕಲು ಮುಂದಾಗುವ ವೇಳೆ ಕಿನ್ನಿಗೋಳಿ ಕಡೆಯಿಂದ ಹಳೆಯಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನ ಇಂದ್ರ ನಗರ ರೈಲ್ವೇ ಗೇಟ್ ತಲುಪುತ್ತಿದ್ದಂತೆ ಪಿಕಪ್ ಚಾಲಕ

ಚಾಲಕನ ನಿರ್ಲ್ಯಕ್ಷ್ಯತನದಿಂದ ರೈಲ್ವೇ ಗೇಟ್ ಗೆ ಪಿಕಪ್‍ ಡಿಕ್ಕಿ Read More »

error: Content is protected !!
Scroll to Top