ಸುದ್ದಿ

ಪುತ್ತೂರಿನ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಗೆ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿ | ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ನಾಗೇಶ್‍ ಕೆಡೆಂಜಿ, ವಸಂತ ವೀರಮಂಗಲ

ಪುತ್ತೂರು: ನಗರದ ಏಳ್ಮುಡಿಯಲ್ಲಿರುವ ಪ್ರಭು ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಫೆ.5 ಬುಧವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ‘ಪ್ರೇರಣಾ’ ಸಂಸ್ಥೆಯ ನಿರ್ದೇಶಕರಾದ ನಾಗೇಶ್‍ ಕೆಡೆಂಜಿ ಹಾಗೂ ವಸಂತ […]

ಪುತ್ತೂರಿನ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಗೆ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿ | ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ನಾಗೇಶ್‍ ಕೆಡೆಂಜಿ, ವಸಂತ ವೀರಮಂಗಲ Read More »

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ, ಮನೆ ಧ್ವಂಸ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಭಾಷಣದಿಂದ ಕೆರಳಿದ ವಿರೋಧಿಗಳ ಕೃತ್ಯ ಢಾಕಾ: ದಂಗೆಯಿಂದ ಕಂಗಾಲಾಗಿರುವ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಮಾಡಿದ ಭಾಷಣದಿಂದ ಕೆರಳಿದ ವಿರೋಧಿ ಬಣ ರಾಜಧಾನಿ ಢಾಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿ ಅಪಾರ ನಾಶನಷ್ಟ ಉಂಟುಮಾಡಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ, ಮನೆ ಧ್ವಂಸ Read More »

ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ವಿವಾಹಕ್ಕೆ ತಲಾ 10 ಲ.ರೂ. ಕೊಡುಗೆ

ಅದಾನಿ ಪುತ್ರ ಜೀತ್‌ ಅದಾನಿಯಿಂದ ವಿಶೇಷ ಚೇತನರಿಗೆ ಮದುವೆ ಉಡುಗೊರೆ ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಅವರ ಪುತ್ರ ಜೀತ್‌ ಅದಾನಿ ತನ್ನ ಮದುವೆ ಸಂದರ್ಭದಲ್ಲಿ ವಿಶೇಷ ಚೇತನ ಮಹಿಳೆಯರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ಮದುವೆಗೆ ತಲಾ 10 ಲ.ರೂ.ಯಂತೆ ದೇಣಿಗೆ ನೀಡುವುದಾಗಿ ಜೀತ್‌ ಅದಾನಿ ವಾಗ್ದಾನ ಮಾಡಿದ್ದಾರೆ. ಜೀತ್‌ ಅದಾನಿ ಅವರು ಫೆ.7ರಂದು ದಿವಾ ಶಾ ಅವರನ್ನು ವಿವಾಹವಾಗಲಿದ್ದಾರೆ. ಜೀತ್ ಮತ್ತು ದಿವಾ ತಮ್ಮ ದಾಂಪತ್ಯ ಜೀವನವನ್ನು ಒಂದು

ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ವಿವಾಹಕ್ಕೆ ತಲಾ 10 ಲ.ರೂ. ಕೊಡುಗೆ Read More »

ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ  ಸಾಮೂಹಿಕ ಧರಣಿ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ನಂತೂರು ಜಂಕ್ಷನ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರ, ಭ್ರಮರಕೊಟ್ಲು ಟೋಲ್ ಗೇಟ್ ತೆರವು, ಹೊಸ ಟೋಲ್ ಗೇಟ್ ನಿರ್ಮಿಸುವ ಮುನ್ನ ಟೋಲ್ ಗೇಟ್ ನಿಯಮಾವಳಿ ಪಾಲನೆ, ನಂತೂರು ಮೇಲ್ಸೇತುವೆ ಹಾಗೂ ಕೂಳೂರು ಸೇತುವೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಮಿತಿ ಮುಂದಿಟ್ಟಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮುನೀರ್ ಕಾಟಿಪಳ್ಳ

ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ  ಸಾಮೂಹಿಕ ಧರಣಿ Read More »

ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಮಹತ್ವದ ಆದೇಶ

ಬೆಂಗಳೂರು : ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಗಂಭೀರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್​​ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಜನವರಿ 31ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಬಗ್ಗೆ ಸಲಹೆ ನೀಡಲಾಗಿದೆ. ಸರ್ಕಾರಿ ಆದೇಶದಲ್ಲೇನಿದೆ? ಪ್ಲಾಸ್ಟಿಕ್‌ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ

ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧ ಕಟ್ಟುನಿಟ್ಟಿನ ಜಾರಿಗೆ ಮಹತ್ವದ ಆದೇಶ Read More »

ನ್ಯೂಸ್‍ ಪುತ್ತೂರು ಸಂಪಾದಕರಾಗಿ ಜ್ಯೋತಿ ಪ್ರಕಾಶ್‍ ಪುಣಚ

ಪುತ್ತೂರು : ಪುತ್ತೂರು ಕೇಂದ್ರವಾಗಿರಿಸಿ ಕಳೆದ ಕೆಲವು ವರ್ಷಗಳಿಂದ ಜನಪರ ಸೇವಾಧಾರಿತ ಕಾರ್ಯ ಚಟುವಟಿಗಳನ್ನು ನೀಡುತ್ತಾ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿರುವ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ವ್ಯಾಪ್ತಿಯಲ್ಲಿ ಜನಮನದ ಪ್ರತಿಧ್ವನಿಯಾಗಿ ಕಾರ್ಯಾಚರಿಸುತ್ತಿರುವ ಸಮಗ್ರ ನೈಜ ಸುದ್ದಿಗಳ ಪ್ರಸರಣದ “ನ್ಯೂಸ್ ಪುತ್ತೂರು” ವಾಹಿನಿಯ ಸಂಪಾದಕರಾಗಿ ಹಿರಿಯ ಅನುಭವಿ ಪತ್ರಕರ್ತ, ಸಾಹಿತಿ ಹಾಗೂ ಲೇಖಕರಾಗಿರುವ  ಜ್ಯೋತಿಪ್ರಕಾಶ್ ಪುಣಚ ಅವರನ್ನು ಸಂಸ್ಥೆ ನೇಮಕ ಮಾಡಿದೆ. ಕರಾವಳಿ ಮಾಧ್ಯಮ ಲೋಕದಲ್ಲಿ ಎರಡನೇಯ ವರ್ಷಕ್ಕೆ ಕಾಲಿಡುತ್ತಿರುವ ನ್ಯೂಸ್ ಪುತ್ತೂರು ಪುತ್ತೂರಿನ ಏಳ್ಮುಡಿಯಲ್ಲಿ ಸುಸಜ್ಜಿತ

ನ್ಯೂಸ್‍ ಪುತ್ತೂರು ಸಂಪಾದಕರಾಗಿ ಜ್ಯೋತಿ ಪ್ರಕಾಶ್‍ ಪುಣಚ Read More »

ದೇವಸ್ಥಾನದ ಜಮೀನಿನಲ್ಲಿದ್ದ ಮನೆ ತೆರವು ಪ್ರಕರಣ | ಜಮಾಯಿಸಿದ ಬಿಜೆಪಿ ಕಾರ್ಯಕರ್ತರು | ಸ್ಥಳಕ್ಕಾಗಮಿಸಿದ ಪೊಲೀಸರು

ಪುತ್ತೂರು : ಮುಖ್ಯ ರಸ್ತೆಗೆ ಬದಿಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿದ್ದ ರಾಜೇಶ್ ಬನ್ನೂರು  ವಾಸಿಸುತ್ತಿದ್ದ  ಮನೆಯನ್ನು ಮಂಗಳವಾರ ತಡ ರಾತ್ರಿ ತೆರವುಗೊಳಿಸಿದ ವಿಚಾರವಾಗಿ ಬುಧವಾರ ಬೆಳಿಗ್ಗೆ ಪೊಲೀಸ್‍  ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಸುಮಾರು 2.30ರಿಂದ 3 ಗಂಟೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ದೂರಲಾಗಿದೆ. ಮಂಗಳೂರಿನ ಜಾತ್ರೆಗೆ ತೆರಳಿದ್ದ ವೇಳೆ ಹಿಂಭಾಗದಿಂದ ಜೆಸಿಬಿ ಮೂಲಕ ಮನೆಯನ್ನು ದೂಡಿ ಹಾಕಲಾಗಿದೆ.

ದೇವಸ್ಥಾನದ ಜಮೀನಿನಲ್ಲಿದ್ದ ಮನೆ ತೆರವು ಪ್ರಕರಣ | ಜಮಾಯಿಸಿದ ಬಿಜೆಪಿ ಕಾರ್ಯಕರ್ತರು | ಸ್ಥಳಕ್ಕಾಗಮಿಸಿದ ಪೊಲೀಸರು Read More »

ಕಾಂಗ್ರೆಸ್ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಮೇಲೆ ಫೈರಿಂಗ್

ವಿಟ್ಲ : ಇಂಟೆಕ್ ಪ್ರಮುಖ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಅವರ ಮೇಲೆ ಫೈರಿಂಗ್ ನಡೆದಿದೆ ಎಂದು ತಿಳಿದು ಬಂದಿದೆ ಎಂಬುವುದು ವರದಿಯಾಗಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಅನಂತಾಡಿ ಎಂಬಲ್ಲಿ ಫೈರಿಂಗ್ ನಡೆದಿದೆ ಎನ್ನಲಾಗಿದ್ದು, ಅವರು ಯಾಕೆ ಅಲ್ಲಿ  ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿಲ್ಲ. ಆತನ ಗನ್ ನಿಂದ ಮಿಸ್ ಫೈರಿಂಗ್ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಖಚಿತವಾದ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ಗಾಯಗೊಂಡ ಚಿತ್ತರಂಜನ್ ಶೆಟ್ಟಿ ಅವರನ್ನು ಮಂಗಳೂರು ಖಾಸಗಿ

ಕಾಂಗ್ರೆಸ್ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಮೇಲೆ ಫೈರಿಂಗ್ Read More »

ಮಹಾಕುಂಭಮೇಳ : ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದ ಮೋದಿ

ಪ್ರಯಾಗ್‌ರಾಜ್‌ : ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರಧಾನಿ ಮೋದಿ ಜೊತೆಗಿದ್ದರು. ಬೆಳಗ್ಗೆ ಪ್ರಯಾಗ್‌ರಾಜ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಪ್ರಯಾಗ್‌ರಾಜ್‌ ನದಿ ಬಳಿಗೆ ಸಾಗಿ ದೋಣಿಯಲ್ಲಿ ಹೋಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಕಳೆದ ಜ.13ರಂದು ಪ್ರಾರಂಭವಾಗಿರುವ ಮಹಾಕುಂಭಮೇಳಕ್ಕೆ ದೇಶ-ವಿದೇಶಗಳ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಈಗಾಗಲೇ 38 ಕೋಟಿಗೂ ಅಧಿಕ ಜನ

ಮಹಾಕುಂಭಮೇಳ : ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದ ಮೋದಿ Read More »

ಕರಾವಳಿಯಲ್ಲಿ ಮತ್ತೆ ಚಿಕಾನ್‍ ಪಾಕ್ಸ್

ಮಂಗಳೂರು : ಕರಾವಳಿಯ ಹಲವೆಡೆ ಚಿಕನ್ ಪಾಕ್ಸ್ ಕಂಡುಬಂದಿದ್ದು, ಇದೀಗ ಕಡಬ ತಾಲೂಕಿನ ವಿವಿಧ ಶಾಲೆಗಳಲ್ಲಿ  21ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ಪಾಕ್ಸ್ ಕಾಣಿಸಿಕೊಂಡಿದೆ ಎಂಬುವುದು ವರದಿಯಾಗಿದೆ. ಮಾಹಿತಿ ಪ್ರಕಾರ ನೆಲ್ಯಾಡಿಯಲ್ಲಿ ಎರಡು ಶಾಲೆಗಳಲ್ಲಿ ಒಟ್ಟು 9 ಮಕ್ಕಳಿಗೆ, ಸುಬ್ರಹ್ಮಣ್ಯದಲ್ಲಿ 6 ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ ಒಂದು ಮಗುವಿಗೆ, ಲಾವತ್ತಡ್ಕದಲ್ಲಿ ಒಂದು ಮಗುವಿಗೆ, ಗೊಳಿತ್ತೊಟ್ಟುವಿನಲ್ಲಿ ಒಂದು ಮಗುವಿಗೆ ಸೇರಿದಂತೆ ಒಟ್ಟು 21 ಮಕ್ಕಳಿಗೆ ಚಿಕನ್ ಪಾಕ್ಸ್ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕರಾವಳಿಯಲ್ಲಿ ಮತ್ತೆ ಚಿಕಾನ್‍ ಪಾಕ್ಸ್ Read More »

error: Content is protected !!
Scroll to Top