ಸುದ್ದಿ

ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಜಿತ್‌ ಪವಾರ್‌ ದುರ್ಮರಣ

ಪ್ರಧಾನಿ ಮೋದಿ, ಗಣ್ಯರಿಂದ ಸಂತಾಪದ ಮಹಾಪೂರ ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಪ್ರಭಾವಿ ರಾಜಕೀಯ ನಾಯಕ ಅಜಿತ್‌ ಪವಾರ್‌ ವಿಮಾನ ಅವಘಡದಲ್ಲಿ ಮೃತ್ಯುವಿಗೀಡಾಗಿರುವ ದುರ್ಘಟನೆ ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದೆ. ನಿನ್ನೆ ಮುಂಬೈಯಲ್ಲಿ ಸಚಿವ ಸಂಪುಟ ಸಭಯಲ್ಲಿ ಭಾಗವಹಿಸಿ ಇಂದು ಬೆಳಗ್ಗೆ 8 ಗಂಟೆಗೆ ಕಿರು ವಿಮಾನದಲ್ಲಿ ತನ್ನ ತವರು ಕ್ಷೇತ್ರವಾದ ಬಾರಾಮತಿಗೆ ಹೊರಟಿದ್ದ ಅಜಿತ್‌ ಪವಾರ್‌ 8.45ಕ್ಕೆಲ್ಲ ಇನ್ನಿಲ್ಲವಾಗಿದ್ದಾರೆ. ಬಾರಾಮತಿಯ ಜಿಲ್ಲಾ ಪರಿಸತ್‌ ಚುನಾವಣೆಯ ಪ್ರಚಾರಕ್ಕೆಂದು ಹೊರಟಿದ್ದ ಅವರ ಪಾಲಿಗೆ ಇದುವೇ ಕೊನೆಯ ಪ್ರಯಾಣವಾಗಿತ್ತು. ನಾಲ್ಕು ಸಭೆಗಳಲ್ಲಿ […]

ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಜಿತ್‌ ಪವಾರ್‌ ದುರ್ಮರಣ Read More »

ವಿಮಾನ ಅವಘಡದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ದುರ್ಮರಣ

ಮುಂಬೈ: ಎನ್‌ಸಿಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಬುಧವಾರ ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದಾಗ ಭೀಕರವಾಗಿ ಪತನಗೊಂಡಿದೆ. ಅಜಿತ್ ಪವಾರ್ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. 66 ವರ್ಷದ ಅಜಿತ್ ಪವಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಅವರ ಜೊತೆಗಿದ್ದ ಭದ್ರತಾ ಸಿಬ್ಬಂದಿ ಹಾಗೂ ಅವರ ವೈಯಕ್ತಿಕ ಸಹಾಯಕ ಕೂಡ ತೀವ್ರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ

ವಿಮಾನ ಅವಘಡದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ದುರ್ಮರಣ Read More »

ವಿಮಾನ ಪತನ : ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ಗೆ ಗಂಭೀರ ಗಾಯ, ಐವರು ಸಾವು

ಪುಣೆ ಸಮೀಪ ಬಾರಾಮತಿಯಲ್ಲಿ ಸಂಭವಿಸಿದ ಅವಘಡ ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಪ್ರಯಾಣಿಸುತ್ತಿದ್ದ ವಿಮಾನ ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡು ಅಜಿತ್‌ ಪವಾರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವಘಡದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವುನೋವುಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದರೆ ಇಂದು ಬೆಳಗ್ಗೆ ಸಂಭವಿಸಿದ ವಿಮಾನ ಪತನ ಅವಘಡದಲ್ಲಿ ಅಜಿತ್‌ ಪವಾರ್‌ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸವೆ. ಈಗಾಗಲೇ ಸ್ಥಳಕ್ಕೆ

ವಿಮಾನ ಪತನ : ಮಹಾರಾಷ್ಟ್ರದ ಡಿಸಿಎಂ ಅಜಿತ್‌ ಪವಾರ್‌ಗೆ ಗಂಭೀರ ಗಾಯ, ಐವರು ಸಾವು Read More »

ನಾಳೆಯಿಂದ ಕೆಎಸ್‌ಆರ್‌ಟಿಸಿ ನೌಕರರ ಹೋರಾಟ : ಬಸ್‌ಗಳ ಸಂಚಾರ ವ್ಯತ್ಯಯ ಸಾಧ್ಯತೆ

ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ನೌಕರರು ಬೆಂಗಳೂರು: ಸಾರಿಗೆ ನೌಕರರು ತಮ್ಮ ದೀರ್ಘಾಕಾಲದ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜ.29ರಿಂದ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದಾರೆ. ಎಲ್ಲ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಹೀಗಾಗಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ. ಸಾರಿಗೆ ನೌಕರರ ಸಂಘಟನೆಗಳು ನಾಳೆ ತನಕ ಸರ್ಕಾರಕ್ಕೆ ಡೆಡ್‌ಲೈನ್ ನೀಡಿವೆ. ನಾಳೆ ಸಂಜೆಯೊಳಗೆ ಬೇಡಿಕೆ ಈಡೇರದೇ ಇದ್ದರೆ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನೀಡಿವೆ. ಕೆಎಸ್‌ಆರ್‌ಟಿಸಿ ಸೇರಿದಂತೆ ಕರ್ನಾಟಕದ

ನಾಳೆಯಿಂದ ಕೆಎಸ್‌ಆರ್‌ಟಿಸಿ ನೌಕರರ ಹೋರಾಟ : ಬಸ್‌ಗಳ ಸಂಚಾರ ವ್ಯತ್ಯಯ ಸಾಧ್ಯತೆ Read More »

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ

ಫೆ.1ರಂದು ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಇಂದು ಜಂಟಿ ಅಧಿವೇಶನವನ್ನುದ್ದೇಶಿಸಿ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಅಧಿವೇಶನದ ಮೊದಲ ಹಂತ ಜನವರಿ 28ರಿಂದ ಫೆಬ್ರವರಿ 13 ರವರೆಗೆ ಮತ್ತು ಎರಡನೇ ಹಂತ ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ಇರಲಿದೆ. ಜನವರಿ 31ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು. ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮೊದಲ

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ Read More »

ರಾಜೀವ್‌ ಗೌಡನಿಗೆ ಆಶ್ರಯ ನೀಡಿದ ಉದ್ಯಮಿ ಬಂಧನ, ಜಾಮೀನಿನಲ್ಲಿ ಬಿಡುಗಡೆ

ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಆರೋಪಿಗೆ ಅಡಗಿಕೊಳ್ಳಲು ಮಂಗಳೂರಿನಲ್ಲಿ ಆಶ್ರಯ ನೀಡಿದ ಉದ್ಯಮಿ ಮಂಗಳೂರು : ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್‌ ಮುಂಖಂಡ ರಾಜೀವ್ ಗೌಡನಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಮಂಗಳೂರಿನ ಉದ್ಯಮಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಮಂಗಳವಾರ ರಾಜೀವ್‌ ಗೌಡನ ಜೊತೆಗೆ ಉದ್ಯಮಿಯನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ರಾಜೀವ್‌ ಗೌಡನಿಗೆ 14 ದಿನಗಳ ಕಸ್ಟಡಿ ವಿಧಿಸಿದೆ. ಉದ್ಯಮಿ ಮೈಕಲ್ ಜೋಸೇಫ್ ರೆಗೋಗೆ ಜಾಮೀನು ನೀಡಿದೆ. ಮೈಕಲ್ ಜೋಸೇಫ್ ರೆಗೋಗೆ ಸೇರಿದ್ದ ಪಚ್ಚನಾಡಿಯ

ರಾಜೀವ್‌ ಗೌಡನಿಗೆ ಆಶ್ರಯ ನೀಡಿದ ಉದ್ಯಮಿ ಬಂಧನ, ಜಾಮೀನಿನಲ್ಲಿ ಬಿಡುಗಡೆ Read More »

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ಅರಿಜಿತ್‌ ಸಿಂಗ್‌ ದಿಢೀರ್‌ ವಿದಾಯ

ಇನ್ನು ಮುಂದೆ ಸಿನಿಮಾಗಳಿಗೆ ಹಾಡುವುದಿಲ್ಲ ಎಂದು ಘೋಷಿಸಿದ ಖ್ಯಾತ ಯುವ ಗಾಯಕ ಮುಂಬೈ: ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಾರು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಗಾಯಕ ಅರಿಜಿತ್ ಸಿಂಗ್ ಏಕಾಏಕಿ ನಿವೃತ್ತಿ ಘೋಷಿಸಿದ್ದಾರೆ. ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಇನ್ನೂ 38ರ ಹರೆಯದ ಅರಿಜಿತ್ ಸಿಂಗ್‌ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವಾರು ಲವ್ ಸಾಂಗ್​ಗಳನ್ನು ಹಾಡುವ ಮೂಲಕ ಅರಿಜಿತ್ ಸಿಂಗ್ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಧ್ವನಿಯಲ್ಲಿ ಹೊಸ ಹೊಸ ಹಾಡುಗಳನ್ನು

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ಅರಿಜಿತ್‌ ಸಿಂಗ್‌ ದಿಢೀರ್‌ ವಿದಾಯ Read More »

ಸ್ಲೀಪರ್‌ ಕೋಚ್‌ ಬಸ್‌ ಬೆಂಕಿಗಾಹುತಿ : ಪ್ರಯಾಣಿಕರಿಗೆ ಗಾಯ

ಸಂಪೂರ್ಣ ಸುಟ್ಟು ಕರಕಲಾದ ಬಸ್‌ ಶಿವಮೊಗ್ಗ : ಚಿತ್ರದುರ್ಗದ ಬಳಿ ನಡೆದ ಬಸ್​​ ದುರಂತ ನೆನಪಿನಿಂದ ಮಾಸುವ ಮುನ್ನವೇ ಇದೇ ಮಾದರಿಯ ಇನ್ನೊಂದು ಭೀಕರ ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್​​ ಕೋಚ್‌ ಬಸ್ಸೊಂದು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡುರು ಬಳಿ ನಡೆದಿದೆ. ನಿಟ್ಟೂರಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣೇಶ್ವೇರಿ ಟ್ರಾವಲ್ಸ್​​ಗೆ ಸೇರಿದ ಖಾಸಗಿ ಬಸ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಬಸ್​​ ನಿಲ್ಲಿಸಲು ಚಾಲಕ ಮುಂದಾದಾಗ ಮರಕ್ಕೆ

ಸ್ಲೀಪರ್‌ ಕೋಚ್‌ ಬಸ್‌ ಬೆಂಕಿಗಾಹುತಿ : ಪ್ರಯಾಣಿಕರಿಗೆ ಗಾಯ Read More »

ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ

ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾರುತ್ತಿದ್ದ ನಾಲ್ವರು ಸೆರೆ ಪುತ್ತೂರು : ಬೆಟ್ಟಂಪಾಡಿ, ಇರ್ದೆ, ರೆಂಜ ಹಾಗೂ ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಪುತ್ತೂರಿನ ಮೊಹಮ್ಮದ್ ಹರ್ಷದ್, ಮಹಮ್ಮದ್ ಆರೀಶ್, ಇಬ್ರಾಹಿಂ ಅಶ್ರಫ್ ಹಾಗೂ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಬಂಟ್ವಾಳದ ಮುಸ್ತಾಫ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50,000 ರೂ. ಮೌಲ್ಯದ 6.39 ಗ್ರಾಂ ಎಂಡಿಎಂಎ ಹಾಗೂ ಗಾಂಜಾ

ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ Read More »

ಆಪರೇಷನ್ ಸಿಂಧೂರ್ ‌ನಿಲ್ಲಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು: ಭಾರತ

ನ್ಯೂಯಾರ್ಕ್: ಈ ಹಿಂದೆ ಪಾಕಿಸ್ತಾನದ ವಿರುದ್ಧ ನಡೆಸಿದ್ದ ಆಪರೇಷನ್ ಸಿಂಧೂರ್ ‌ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ‌ಪಾಕ್ ಬೇಡಿಕೊಂಡಿತ್ತು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತ ತಿಳಿಸಿದೆ‌. ಜೊತೆಗೆ ಇಸ್ಲಾಮಾಬಾದ್‌ನ ಬಾಹ್ಯ ಹಸ್ತಕ್ಷೇಪದ ಹಕ್ಕುಗಳನ್ನು ತಳ್ಳಿ ಹಾಕಿದೆ. ಭಾರತದ ಶಾಶ್ವತ ಪ್ರತಿನಿಧಿ ಪಿ. ಹರೀಶ್ ಭಾರತದ ಪರವಾಗಿ ಮಾತನಾಡಿದ್ದು, ನಮ್ಮ ನಾಗರಿಕರನ್ನು ಕಾಪಾಡಲು, ಅವರ ಹಿತ ರಕ್ಷಣೆಯ ದೃಷ್ಟಿಯಿಂದ ಎಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ. ಭಯೋತ್ಪಾದನೆಯನ್ನು ಪಾಕಿಸ್ತಾನ ಬಯಸಿದ ರೀತಿಯಲ್ಲಿ ಸಾಮಾನ್ಯೀಕರಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ

ಆಪರೇಷನ್ ಸಿಂಧೂರ್ ‌ನಿಲ್ಲಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು: ಭಾರತ Read More »

error: Content is protected !!
Scroll to Top