ಸುದ್ದಿ

ಡೀಸೆಲ್‍ ಕಳವು ಪ್ರಕರಣ| ನಾಲ್ವರ ಬಂಧನ

ಮಂಗಳೂರು : ಮಂಗಳೂರು ತಾಲೂಕಿನ ಬಾಳ ಗ್ರಾಮದ ಟ್ಯಾಂಕರ್ ಯಾರ್ಡಿನಲ್ಲಿರುವ ಟ್ಯಾಂಕರುಗಳಿಂದ ಮಾಲಕರಿಗೆ ತಿಳಿಯದೇ ಡೀಸೆಲ್‌ನ್ನು ಕಳವು ಮಾಡಿ ದಾಸ್ತಾನು ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂದಿಸಿ ಪತ್ತೆ ಹಚ್ಚಿರುವ ಮಂಗಳೂರು ನಗರ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕುಳಾಯಿಗುಡ್ಡೆಯ ಸಂತೋಷ್ (42), ಕಾಟಿಪಳ್ಳದ ಐರನ್ ರಿತೇಶ್ ಮಿನೇಜ್ (36), ಟ್ಯಾಂಕರ್ ಚಾಲಕ ಕಡಿರುದ್ಯಾವರ, ನಾರಾಯಣ ( 23 ) ಮತ್ತು ಹೆಜಮಾಡಿಯ ರವಿ ಜನಾಂದ್ರ ಪುತ್ರನ್ (59)ಎಂದು ತಿಳಿದು ಬಂದಿದೆ. ಬಂಧಿತ […]

ಡೀಸೆಲ್‍ ಕಳವು ಪ್ರಕರಣ| ನಾಲ್ವರ ಬಂಧನ Read More »

ಮುಡಾ ಹಗರಣ : ಸಿಬಿಐ ತನಿಖೆ ಕೋರಿದ ಅರ್ಜಿಯ ವಿಚಾರಣೆ ಮುಂದೂಡಿಕೆ

ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಳ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಆರ್​ಟಿಐ ಕಾರ್ಯರಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜನವರಿ 27ಕ್ಕೆ ಮುಂದೂಡಿದೆ.ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ‌ವಾಗಿ ಕಪಿಲ್‌ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ

ಮುಡಾ ಹಗರಣ : ಸಿಬಿಐ ತನಿಖೆ ಕೋರಿದ ಅರ್ಜಿಯ ವಿಚಾರಣೆ ಮುಂದೂಡಿಕೆ Read More »

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ : ಹಿಟ್‌ & ರನ್‌ ಕೇಸ್‌ ದಾಖಲು

ಅನುಮಾನಕ್ಕೆ ಕಾರಣವಾದ ಚಾಲಕನ ದೂರು ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಲು ನಾಯಿಗಳು ಅಡ್ಡಬಂದದ್ದು ಕಾರಣ ಎನ್ನಲಾಗಿತ್ತು. ಕಾರಿನಲ್ಲೇ ಇದ್ದ ಸಚಿವೆಯ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕೂಡ ಮಾಧ್ಯಮದವರ ಮುಂದೆ ನಾಯಿಗಳು ಅಡ್ಡಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಕಾರಿನ ಚಾಲಕ ಅಪರಿಚಿತ ಕಂಟೇನರ್‌ ಚಾಲಕನ ವಿರುದ್ಧ ಹಿಟ್‌ & ರನ್‌ ದೂರು ದಾಖಲಿಸಿರುವುದರಿಂದ ಈ ಅಪಘಾತದ

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ : ಹಿಟ್‌ & ರನ್‌ ಕೇಸ್‌ ದಾಖಲು Read More »

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು

ಬಂಟ್ವಾಳ : ಬೈಕ್ – ಬೈಕ್ ಗಳ ನಡುವೆ ಅಪಘಾತ ಸಂಭವಿಸಿರುವ   ಘಟನೆ ಇಂದು ರಾತ್ರಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆಯಲ್ಲಿ ನಡೆದಿದೆ.           ಘಟನೆಯಿಂದ ಬೈಕ್ ನಲ್ಲಿ ಸಹಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃತಪಟ್ಟ ಬಾಲಕಿ. ಬೈಕ್ ಚಾಲಕ ಬಾಲಕಿಯ ತಂದೆ ಅಬ್ದುಲ್ ರಹಮಾನಿಗೆ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು Read More »

ಮನು ಭಾಕರ್‌ ಪದಕ ಹಿಂಪಡೆಯಲು ಒಲಿಂಪಿಕ್ಸ್‌ ಸಮಿತಿ ನಿರ್ಧಾರ

ಭಾರತಕ್ಕೆ ಕೀರ್ತಿ ತಂದ ಕ್ರೀಡಾಪಟುವಿನ ಪದಕ ಹಿಂಪಡೆಯಲು ಕಾರಣ ಏನು ಗೊತ್ತೆ? ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್-2024ರ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟು ಮನು ಭಾಕರ್‌ ಗೆದ್ದಿರುವ ಎರಡು ಕಂಚಿನ ಪದಕಗಳನ್ನು ಒಲಿಂಪಿಕ್ಸ್‌ ಸಮಿತಿ ಹಿಂಪಡೆಯಲಿದೆ. ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸ ನಿರ್ಮಿಸಿದ್ದರು. ಭಾರತದ ಕೀರ್ತಿ ಪಾತಾಕೆ ಮುಗಿಲೆತ್ತರಕ್ಕೇರಲು ಕಾರಣವಾಗಿದ್ದ ಈ ಪದಕಗಳನ್ನು ಹಿಂಪಡೆಯಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಹಾಗೆಂದು ಮನು ಭಾಕರ್‌ ಅವರಿಂದ ಏನೂ ತಪ್ಪು ಆಗಿಲ್ಲ, ಪದಕಗಳ

ಮನು ಭಾಕರ್‌ ಪದಕ ಹಿಂಪಡೆಯಲು ಒಲಿಂಪಿಕ್ಸ್‌ ಸಮಿತಿ ನಿರ್ಧಾರ Read More »

ಕುಂಭಮೇಳ : ಎರಡು ದಿನದಲ್ಲಿ 4.5 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯಸ್ನಾನ

ಆಕಾಶದಿಂದ ಪುಷ್ಪವೃಷ್ಟಿ; ಸರಕಾರದ ಸಿದ್ಧತೆಗೆ ಬೇಷ್‌ ಎಂದ ಜನ ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎರಡು ದಿನದಲ್ಲಿ 4.5 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಸೋಮವಾರದಿಂದ ಕುಂಭಮೇಳ ಆರಂಭವಾಗಿದ್ದು ಮೊದಲ ದಿನವೇ ಸುಮಾರು 1.6 ಕೋಟಿ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳೆಗೆದ್ದು ಸ್ನಾನ ಮಾಡಿದ್ದರು.ಮಕರ ಸಂಕ್ರಾಂತಿ ದಿನವಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮುಳುಗಿ ಪ್ರಥಮ ಶಾಹಿ ಸ್ನಾನ ಮಾಡಿದ್ದಾರೆ. ಮೊದಲಿಗೆ ಶ್ರೀ

ಕುಂಭಮೇಳ : ಎರಡು ದಿನದಲ್ಲಿ 4.5 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯಸ್ನಾನ Read More »

ತಿರುಪತಿ : ದೇವರ ಅರ್ಧ ಕೆಜಿಗೂ ಅಧಿಕ ಚಿನ್ನ ಕಳ್ಳತನ

ಚಿನ್ನದ ಕಾಣಿಕೆಗಳನ್ನು ವಿಂಗಡಿಸುವಾಗ ಎಗರಿಸುತ್ತಿದ್ದ ನೌಕರ ಸೆರೆ ತಿರುಪತಿ: ಭಕ್ತರು ತಿರುಪತಿಯ ತಿಮ್ಮಪ್ಪನಿಗೆ ಭಕ್ತಿಯಿಂದ ಸಮರ್ಪಿಸಿದ್ದ ಅರ್ಧ ಕೆಜಿಗೂ ಅಧಿಕ ಬಂಗಾರದ ಒಡವೆಗಳು ಕಳವು ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬನನ್ನು ಕಳ್ಳತನಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ.ವಿ. ಪೆಂಚಲಯ್ಯ ಬಂಧಿತ ಆರೋಪಿ. ಈತ ಕಳೆದ ಒಂದು ವರ್ಷದಲ್ಲಿ 10 ರಿಂದ 15 ಸಲ ಚಿನ್ನದ ಬಿಸ್ಕೆಟ್‌ ಮತ್ತು ಇತರ ಆಭರಣಗಳು ಸೇರಿ ಸುಮಾರು 46 ಲಕ್ಷ

ತಿರುಪತಿ : ದೇವರ ಅರ್ಧ ಕೆಜಿಗೂ ಅಧಿಕ ಚಿನ್ನ ಕಳ್ಳತನ Read More »

ಮಲ್ಪೆಯ ಮೀನುಗಾರಿಕೆ ದೋಣಿ ಕಾರವಾರದಲ್ಲಿ ಮುಳುಗಡೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ದೋಣಿ ಕಾರವಾರ ಸಮೀಪ ಮುಳುಗಿ ಅಪಾರ ನಷ್ಟ ಉಂಟಾಗಿದೆ. ಮಲ್ಪೆಯ ಸೀ ಹಂಟರ್ ಹೆಸರಿನ ದೋಣಿಯ ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ನೀರು ತುಂಬಿಕೊಂಡು ಮುಳುಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲು ದೂರದ ಲೈಟ್‌ಹೌಸ್ ಬಳಿ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್

ಮಲ್ಪೆಯ ಮೀನುಗಾರಿಕೆ ದೋಣಿ ಕಾರವಾರದಲ್ಲಿ ಮುಳುಗಡೆ Read More »

ಬೆನ್ನು ಮೂಳೆ ಮುರಿತ : ಸಚಿವೆಗೆ ಒಂದು ತಿಂಗಳು ಬೆಡ್‌ರೆಸ್ಟ್‌

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳಗಾವಿ: ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ತುಸು ಗಂಭೀರವಾದ ಗಾಯವಾಗಿದೆ. ಎರಡು ಕಡೆ ಬೆನ್ನುಮೂಳೆ ಮುರಿತವಾಗಿದ್ದು, ಕನಿಷ್ಠ ಒಂದು ತಿಂಗಳು ಅತ್ತಿತ್ತ ಓಡಾಡದೆ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ.ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಚಿವೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಸಚಿವೆಯ ಸಹೋದರ, ಗನ್‌ಮ್ಯಾನ್‌ ಮತ್ತು ಕಾರಿನ ಡ್ರೈವರ್‌ ಕೂಡ ಗಾಯಗೊಂಡಿದ್ದಾರೆ. ಎಲ್ಲರಿಗೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಬೆನ್ನುಮೂಳೆಯ ಎಲ್1

ಬೆನ್ನು ಮೂಳೆ ಮುರಿತ : ಸಚಿವೆಗೆ ಒಂದು ತಿಂಗಳು ಬೆಡ್‌ರೆಸ್ಟ್‌ Read More »

ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧೆಯಲ್ಲಿ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರವರಿಗೆ 5ನೇ ಸ್ಥಾನ

ಮಂಗಳೂರು : ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜ.10ರಿಂದ ಜ.12ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಿತು. ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ‍ಂಸ್ಕೃತ  ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ 45ರ ವಯೋಮಾನದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, 400 ಮೀ ಹರ್ಡಲ್ಸ್ ಮತ್ತು ಹೈಜಂಪ್ ನಲ್ಲಿ 4ನೇ ಸ್ಥಾನ ಹಾಗೂ 110 ಮೀ ಹರ್ಡಲ್ಸ್ ನಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ ಮಾತ್ರವಲ್ಲದೇ

ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧೆಯಲ್ಲಿ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರವರಿಗೆ 5ನೇ ಸ್ಥಾನ Read More »

error: Content is protected !!
Scroll to Top