ಸುದ್ದಿ

ಬೋವಿ ನಿಗಮದಲ್ಲಿ 90 ಕೋ. ರೂ. ಭ್ರಷ್ಟಾಚಾರ

ಬಾಡಿಗೆದಾರರು, ನೆರೆಹೊರೆಯವರ ಹೆಸರಲ್ಲಿ ಕಂಪನಿ ತೆರೆದು ಹಣ ವರ್ಗಾವಣೆ ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಐದು ವರ್ಷಗಳಲ್ಲಿ ಸುಮಾರು 90 ಕೋ ರೂ. ಭ್ರಷ್ಟಾಚಾರವಾಗಿರುವುದನ್ನು ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪತ್ತೆ ಹಚ್ಚಿದೆ. ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ 34 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು, ಇಂಥ ಹಲವು ಅವ್ಯವಹಾರಗಳು ಕಂಡುಬಂದಿವೆ ಎನ್ನಲಾಗಿದೆ. ಕೆಲದಿನಗಳ ಹಿಂದೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಉದ್ಯಮಿ ಜೀವಾ ಎಂಬಾಕೆಯ ಖಾತೆಗೆ 7.16 […]

ಬೋವಿ ನಿಗಮದಲ್ಲಿ 90 ಕೋ. ರೂ. ಭ್ರಷ್ಟಾಚಾರ Read More »

ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕ ಎಂದು ಟೀಕಿಸಿದ ಸಿದ್ದರಾಮಯ್ಯ

ಸ್ವಾಮೀಜಿ ಸಂವಿಧಾನದ ಬಗ್ಗೆ ಮಾತನಾಡಿದ್ದು ಏಕೆ ಎಂದು ಪ್ರಶ್ನೆ ಬೆಂಗಳೂರು : ಎಲ್ಲರನ್ನೂ ಸಮಾನವಾಗಿ ಕಾಣುವ ಸಂವಿಧಾನ ಬೇಕೆಂದು ಹೇಳಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾಮೀಜಿ ಸಂವಿಧಾನದ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ ಅವರು ಮನುಸ್ಮೃತಿಯ ಪ್ರತಿಪಾದಕರು ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಕಚೇರಿಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಸ್ವಾಮೀಜಿಯವರ ಹೇಳಿಕೆ ಬಗ್ಗೆ ಕಿಡಿಕಾರಿದ್ದಾರೆ. ಪೇಜಾವರಶ್ರೀ ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಇಂಥ ಹೇಳಿಕೆ ನೀಡುವ

ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕ ಎಂದು ಟೀಕಿಸಿದ ಸಿದ್ದರಾಮಯ್ಯ Read More »

ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತುವ ಶಾಸಕರ ಬಾಯಿಗೆ ಡಿಕೆಶಿ ಬೀಗ

ಗ್ಯಾರಂಟಿಗಳನ್ನು ಪ್ರಶ್ನಿಸಿದರೆ ಶಿಸ್ತುಕ್ರಮದ ಎಚ್ಚರಿಕೆ ಬೆಂಗಳೂರು : ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗ್ಯಾರಂಟಿಗಳಿಂದಾಗಿ ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್‌ ಶಾಸಕರ ಬಾಯಿಮುಚ್ಚಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್‌ ಶಾಸಕ ಗವಿಯಪ್ಪ ನಿನ್ನೆ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಒಂದೆರಡು ಗ್ಯಾರಂಟಿಗಳನ್ನು ನಿಲ್ಲಿಸಿ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಆಗ್ರಹಿಸಿರುವುದು ಕಾಂಗ್ರೆಸ್‌ ಪಾಲಿಗೆ ತೀವ್ರ ಮುಜುಗರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿರುವ ಕೆಪಿಸಿಸಿ ಅಧ್ಯಕ್ಷರೂ

ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತುವ ಶಾಸಕರ ಬಾಯಿಗೆ ಡಿಕೆಶಿ ಬೀಗ Read More »

ಗ್ಯಾರಂಟಿಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಶಾಸಕರಿಂದಲೇ ಮನವಿ

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಅಸಮಾಧಾನ ಬೆಂಗಳೂರು: ಕಾಂಗ್ರೆಸ್‌ ಸರಕಾರ ಉಪಚುನಾವಣೆಯ ಕ್ಲೀನ್‌ಸ್ವೀಪ್‌ ಗೆಲುವಿಗೆ ಪಂಚ ಗ್ಯಾರಂಟಿಗಳೇ ಕಾರಣ ಎಂದು ಹೇಳುತ್ತಿದ್ದರೂ ಗ್ಯಾರಂಟಿಗಳ ವಿರುದ್ಧ ಕಾಂಗ್ರೆಸ್‌ ಶಾಸಕರೇ ಆಕ್ಷೇಪ ಎತ್ತಲು ತೊಡಗಿದ್ದಾರೆ. ಐದು ಗ್ಯಾರಂಟಿಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್​ ಪಕ್ಷದ ಶಾಸಕ ಗವಿಯಪ್ಪ ಹೇಳಿದ್ದಾರೆ. ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರಡು ಗ್ಯಾರಂಟಿಗಳು ಕಡಿಮೆ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ

ಗ್ಯಾರಂಟಿಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಶಾಸಕರಿಂದಲೇ ಮನವಿ Read More »

ಮೂಲ್ಕಿ ರೈಲು ನಿಲ್ದಾಣ ಬಳಿ ಸಂಭವಿಸಿದ್ದ ಹತ್ಯೆಯ ಆರೋಪಿ ಸೀರಿಯಲ್‌ ಕಿಲ್ಲರ್‌ ಸೆರೆ

ನಾಲ್ಕು ರಾಜ್ಯಗಳಲ್ಲಿ ಅತ್ಯಾಚಾರ, ಕೊಲೆಗಳನ್ನು ಮಾಡಿದ್ದ ಪಾತಕಿ ಅಹ್ಮದಾಬಾದ್‌ : ಮೂಲ್ಕಿ ರೈಲು ನಿಲ್ದಾಣದ ಸಮೀಪ ರೈಲು ಪ್ರಯಾಣಿಕರೊಬ್ಬರ ಹತ್ಯೆಯೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಸರಣಿ ಹತ್ಯೆ ಮತ್ತು ಅತ್ಯಾಚಾರಗಳನ್ನು ಮಾಡಿದ್ದ ಸೀರಿಯಲ್‌ ಕಿಲ್ಲರ್‌ನನ್ನು ಗುಜರಾತ್‌ ಪೊಲೀಸರು ವಾಪಿ ರೈಲು ನಿಲ್ದಾಣದ ಸಮೀಪ ಭಾನುವಾರ ರಾತ್ರಿ ಬಂಧಿಸಿದ್ದಾರೆ. ಅತ್ಯಾಚಾರ ಹಾಗೂ ಹಲವು ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಸರಣಿ ಹಂತಕ ಈತ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಯಾಣದ

ಮೂಲ್ಕಿ ರೈಲು ನಿಲ್ದಾಣ ಬಳಿ ಸಂಭವಿಸಿದ್ದ ಹತ್ಯೆಯ ಆರೋಪಿ ಸೀರಿಯಲ್‌ ಕಿಲ್ಲರ್‌ ಸೆರೆ Read More »

ಬಾಂಗ್ಲಾದೇಶದ ಬಳಿಕ ಪಾಕಿಸ್ಥಾನದಲ್ಲೂ ಶುರುವಾಯಿತು ದಂಗೆ

ಇಮ್ರಾನ್‌ ಖಾನ್‌ ಬೆಂಬಲಿಗರಿಂದ ಇಸ್ಲಾಮಾಬಾದ್‌ ಚಲೋ- ಐವರು ಪೊಲೀಸರು ಬಲಿ ಇಸ್ಲಾಮಾಬಾದ್‌: ಬಾಂಗ್ಲಾದೇಶದ ಬಳಿಕ ಈಗ ಇನ್ನೊಂದು ನೆರೆರಾಷ್ಟ್ರ ಪಾಕಿಸ್ಥಾನದಲ್ಲೂ ಆಂತರಿಕ ದಂಗೆ ಶುರುವಾಗಿದೆ. ಮಾಜಿ ಪ್ರಧಾನಿ ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಪಕ್ಷದ ಸಾವಿರಾರು ಬೆಂಬಲಿಗರು ರಾಜಧಾನಿ ಇಸ್ಲಾಮಾಬಾದ್‌ನತ್ತ ಮೋರ್ಚಾ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ ಐವರು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು ನೂರಾರು ಮಂದಿ ಪ್ರತಿಭಟನೆಕಾರರು ಗಾಯಗೊಂಡಿದ್ದಾರೆ. ಇಮ್ರಾನ್‌ ಖಾನ್‌ ಅವರ ಹೆಂಡತಿ ಬುಶ್ರಾ ಬೀಬಿ ಖಾನ್‌ ನೇತೃತ್ವದಲ್ಲಿ ನಡೆಯುತ್ತಿರುವ ಮೋರ್ಚಾ ಭಾನುವಾರ

ಬಾಂಗ್ಲಾದೇಶದ ಬಳಿಕ ಪಾಕಿಸ್ಥಾನದಲ್ಲೂ ಶುರುವಾಯಿತು ದಂಗೆ Read More »

ಏನಿದು ಒನ್‌ ನೇಶನ್‌ ಒನ್‌ ಸಬ್‌ಸ್ಕ್ರಿಪ್ಶನ್‌ ಯೋಜನೆ?

ಪ್ರಧಾನಿ ಮೋದಿಯವರೇ ವಿಶೇಷ ಮುತುವರ್ಜಿ ವಹಿಸಿರುವ ಯೋಜನೆಯ ಮಾಹಿತಿ ಇಲ್ಲಿದೆ ಹೊಸದಿಲ್ಲಿ : ಕೇಂದ್ರ ಸರಕಾರ ಸುಮಾರು 6000 ಕೋ. ರೂ. ವೆಚ್ಚದ ಒನ್‌ ನೇಶನ್‌ ಒನ್‌ ಸಬ್‌ಸ್ಕ್ರಿಪ್ಶನ್‌ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆ ಬಳಿಕ ಈ ವಿಶಿಷ್ಟ ಯೋಜನೆ ಕುರಿತಾಗಿ ದೇಶವ್ಯಾಪಿಯಾಗಿ ಬಹಳ ಚರ್ಚೆಯಾಗುತ್ತಿದೆ. ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರಿಗೆ ನೆರವಾಗುವ ಉದ್ದೇಶದಿಂದ ಈ ಮಹತ್ವದ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಈ ಯೋಜನೆಯನ್ನು ದೇಶಕ್ಕೆ ನೀಡುತ್ತಿದೆ.

ಏನಿದು ಒನ್‌ ನೇಶನ್‌ ಒನ್‌ ಸಬ್‌ಸ್ಕ್ರಿಪ್ಶನ್‌ ಯೋಜನೆ? Read More »

25,000 ಕೋ.ರೂ. ಮೌಲ್ಯದ ಮಾದಕ ವಸ್ತು ವಶ

ದೋಣಿ ಮೂಲಕ ಭಾರತಕ್ಕೆ ಬರುತ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್‌ ಹೊಸದಿಲ್ಲಿ : ಭಾರತೀಯ ಕೋಸ್ಟ್ ಗಾರ್ಡ್ ಪಡೆ ಅಂಡಮಾನ್ ದ್ವೀಪದ ಸಮೀಪ ಜಲಪ್ರದೇಶದಲ್ಲಿ ಮೀನುಗಾರಿಕಾ ದೋಣಿಯೊಂದರಿಂದ ಸುಮಾರು 5500 ಕೆಜಿ (5.5 ಟನ್) ತೂಕದ ಮಾದಕವಸ್ತು ವಶಪಡಿಸಿಕೊಂಡಿದೆ. ಇದರ ಬೆಲೆ 25,000 ಕೋಟಿ ರೂ. ಆಗಿದೆ. ಈ ಡ್ರಗ್ಸ್‌ ಎಲ್ಲಿಂದ ಬರುತ್ತಿತ್ತು ಮತ್ತು ಯಾರಿಗೆ ಮತ್ತು ಎಲ್ಲಿಗೆ ಸರಬರಾಜು ಮಾಡಬೇಕಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.ದೊಡ್ಡ ಪ್ರಮಾಣದ ಮಾದಕ ದ್ರವ್ಯ ವಶವಾಗಿರುವುದು ಡ್ರಗ್ಸ್‌ ವಿರುದ್ಧ ಸರಕಾರ ನಡೆಸುತ್ತಿರುವ

25,000 ಕೋ.ರೂ. ಮೌಲ್ಯದ ಮಾದಕ ವಸ್ತು ವಶ Read More »

ಢಾಕಾ : ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ ವಿರೋಧಿಸಿ ಭಾರಿ ಪ್ರತಿಭಟನೆ

ಹಿಂದುಗಳ ಪರವಾಗಿ ಹೋರಾಡುತ್ತಿದ್ದ ಧಾರ್ಮಿಕ ನಾಯಕನನ್ನು ಕ್ಷುಲ್ಲಕ ಕೇಸ್‌ ಹಾಕಿ ಬಂಧಿಸಿದ ಪೊಲೀಸರು ಢಾಕಾ: ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲ, ಇಸ್ಕಾನ್ ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಬಂಧನವನ್ನು ವಿರೋಧಿಸಿ ಹಿಂದುಗಳು ನಿನ್ನೆ ರಾತ್ರಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾದ ಹಲವೆಡೆ ಹಿಂದುಗಳು ಬೀದಿಗಿಳಿದು ಮೆರವಣಿಗೆ, ಧರಣಿ ನಡೆಸಿದ್ದು, ಈ ಸಂದರ್ಭದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ನಿನ್ನೆ ಸಂಜೆ ಢಾಕಾ ವಿಮಾನ

ಢಾಕಾ : ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ ವಿರೋಧಿಸಿ ಭಾರಿ ಪ್ರತಿಭಟನೆ Read More »

ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ಇಂಜಿನಿಯರ್‌ ಈಗ ಬೆಂಗಳೂರಿನಲ್ಲಿ ಭಿಕ್ಷುಕ

ಇಂಜಿನಿಯರನ್ನು ಭಿಕ್ಷುಕನನ್ನಾಗಿ ಮಾಡಿದ್ದು ಬದುಕಿನ ಆ ಒಂದು ಆಘಾತಕಾರಿ ಘಟನೆ ಬೆಂಗಳೂರು: ಜರ್ಮನಿಯಲ್ಲಿ ಇಂಜಿನಿಯರಿಂಗ್‌ ಕಲಿತು, ಫ್ರಾಂಕ್‌ಫರ್ಟ್‌ನಲ್ಲಿ ಆರಂಕಿಯ ಸಂಬಳ ಪಡೆಯುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ವೀಡಿಯೊ ನಿನ್ನೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಕೆಂಪು ಬಣ್ಣದ ಹಳೆಯ ಟಿಶರ್ಟ್‌ ಮತ್ತು ಹರಕು ಜೀನ್ಸ್‌ ಪ್ಯಾಂಟ್‌ ಧರಿಸಿ ಕುರುಚಲು ಗಡ್ಡ ಬಿಟ್ಟು ಕಂಡೋರಿಗೆಲ್ಲ ಕೈಚಾಚಿ ಭಿಕ್ಷೆ ಕೇಳುತ್ತಿದ್ದ ಈ ವ್ಯಕ್ತಿಯನ್ನು ಶರತ್‌ ಯುವರಾಜ್‌ ಎಂಬವರು ಕುತೂಹಲದಿಂದ ಮಾತನಾಡಿಸಿದಾಗ ಆತನ

ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ಇಂಜಿನಿಯರ್‌ ಈಗ ಬೆಂಗಳೂರಿನಲ್ಲಿ ಭಿಕ್ಷುಕ Read More »

error: Content is protected !!
Scroll to Top