ಸುದ್ದಿ

ಕನ್ನಡಿಗರನ್ನು ಅವಮಾನಿಸಿದ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವ ಸಂದೇಶ ಪ್ರಕಟ ಬೆಂಗಳೂರು: ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಹೇಳಿಕೆ ಪ್ರಕಟಿಸಿದ ಬೆಂಗಳೂರಿನ ಕೋರಮಂಗಲದ ಜಿ.ಎಸ್​.ಸೂಟ್​ ಹೋಟೆಲ್‌ನ ಮ್ಯಾನೇಜರ್ ಸರ್ಫಜ್​​ ಎಂಬಾತನನ್ನು ಬಂಧಿಸಲಾಗಿದ್ದು, ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ. ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ನಗರದ ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿರುವ ಈ ಹೋಟೆಲ್‌ನಲ್ಲಿ ನಿನ್ನೆ ಕನ್ನಡಿಗರಿಗೆ ಅಪಮಾನ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಮ್ಮ‌ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ.‌ ಪದೇಪದೇ ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ ಎಂದು […]

ಕನ್ನಡಿಗರನ್ನು ಅವಮಾನಿಸಿದ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ Read More »

ಧರ್ಮಸ್ಥಳದ ಏರೋಸ್ಪೇಸ್‌ ಉದ್ಯೋಗಿ ಪಂಜಾಬಿನಲ್ಲಿ ನಿಗೂಢ ಸಾವು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಯುವತಿ ಪಂಜಾಬಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೇ 17ರಂದು ನಡೆದಿದೆ. ಮೃತ ಯುವತಿಯನ್ನು ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ಎಂದು ಗುರುತಿಸಲಾಗಿದೆ.ಪಂಜಾಬಿನ ಎಲ್‌ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಮುಂದೆ ಜಪಾನ್‌ಗೆ ಉದ್ಯೋಗಕ್ಕೆ ಹೋಗುವವರಿದ್ದು ಪಂಜಾಬ್ ಎಲ್‌ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ತೆರಳಿದ್ದರು. ಸರ್ಟಿಫಿಕೆಟ್

ಧರ್ಮಸ್ಥಳದ ಏರೋಸ್ಪೇಸ್‌ ಉದ್ಯೋಗಿ ಪಂಜಾಬಿನಲ್ಲಿ ನಿಗೂಢ ಸಾವು Read More »

ಕಕ್ಷೆ ಸೇರಲು ವಿಫಲವಾದ ಇಸ್ರೋ ಉಪಗ್ರಹ

1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಸ್ಯಾಟಲೈಟ್‌ ಅಮರಾವತಿ: ಇಂದು ನಸುಕಿನ ಹೊತ್ತು ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಇಸ್ರೋದ 101ನೇ ರಾಕೆಟ್ ಉಡಾವಣೆ ಇದಾಗಿದ್ದು, ಇಂದು ಬೆಳಗ್ಗೆ 5.59ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ EOS-09 ರೆಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಆದರೆ 3ನೇ

ಕಕ್ಷೆ ಸೇರಲು ವಿಫಲವಾದ ಇಸ್ರೋ ಉಪಗ್ರಹ Read More »

ತರೂರ್‌ ಅಮೆರಿಕಕ್ಕೆ, ಕನಿಮೋಳಿ ಗ್ರೀಸ್‌ಗೆ : ಪಾಕಿಸ್ಥಾನದ ಉಗ್ರ ಮುಖವಾಡ ಜಗತ್ತಿನೆದುರು ಕಳಚಲು ಭಾರತ ತಂತ್ರ

7 ಸಂಸದರ ತಂಡಗಳಿಂದ ಜಗತ್ತಿನ ಪ್ರಮುಖ ದೇಶಗಳಿಗೆ ಭೇಟಿ ನವದೆಹಲಿ: ಪಹಲ್ಗಾಮ್ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ಥಾನದ ಉಗ್ರ ನೆಲೆ, ಸೇನಾ ನೆಲೆಗಳ ಮೇಲೆ ಆಪರೇಷನ್ ಸಿಂದೂರ ದಾಳಿ ನಡೆಸಿದ್ದ ಭಾರತ, ಈಗ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ 7 ನಾಯಕರ ನೇತೃತ್ವದಲ್ಲಿ ಸಂಸದರ ನಿಯೋಗವೊಂದನ್ನು ಹಲವು ದೇಶಗಳಿಗೆ ರವಾನಿಸುವ ಮೂಲಕ ಪಾಕಿಸ್ಥಾನದ ಉಗ್ರವಾದದ ಮುಖವಾಡ ಬಯಲು ಮಾಡುವ ದಾಳ ಉರುಳಿಸಿದೆ. ಅಚ್ಚರಿಯ ವಿಷಯವೆಂದರೆ ಈ ಹಿಂದೆ ಕರ್ನಾಟಕ ವಿಧಾನಸಭೆಯಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂಸದ

ತರೂರ್‌ ಅಮೆರಿಕಕ್ಕೆ, ಕನಿಮೋಳಿ ಗ್ರೀಸ್‌ಗೆ : ಪಾಕಿಸ್ಥಾನದ ಉಗ್ರ ಮುಖವಾಡ ಜಗತ್ತಿನೆದುರು ಕಳಚಲು ಭಾರತ ತಂತ್ರ Read More »

ಪಹಲ್ಗಾಮ್‌ಗೂ ಭೇಟಿ ನೀಡಿದ್ದ ಪಾಕ್‌ ಏಜೆಂಟ್‌ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರ

ಪಾಕಿಸ್ಥಾನದ ಪರ ಗೂಢಚಾರಿಕೆ ಮಾಡುತ್ತಿದ್ದ ಯೂಟ್ಯೂಬರ್‌ ಸೆರೆ ನವದೆಹಲಿ: ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತದ ರಹಸ್ಯಗಳನ್ನು ರವಾನಿಸುತ್ತಿದ್ದ ಆರೋಪದಲ್ಲಿ ಸೆರೆಯಾಗಿರುವ ಹರ್ಯಾಣದ ಯೂಟ್ಯೂಬರ್‌ ಯುವತಿ ಜ್ಯೋತಿ ಮಲ್ಹೋತ್ರ ಕಾಶ್ಮೀರದ ಪಹಲ್ಗಾಮ್‌ಗೂ ಭೇಟಿ ನೀಡಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಜ್ಯೋತಿ ಇನ್‌ಸ್ಟಾಗ್ರಾಂನಲ್ಲಿ ಜನವರಿ ತಿಂಗಳಿನಲ್ಲಿ ಪಹಲ್ಗಾಮ್‌ಗೆ ತೆರಳಿದ್ದ ವಿಡಿಯೋ ಅಪ್ಲೋಡ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ವಿಡಿಯೋಗಳು ಈಗ ವೈರಲ್‌ ಆಗಿವೆ. ಪಾಕಿಸ್ಥಾನದ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರು ಮಂದಿಯನ್ನು ದೇಶದ ವಿವಿಧೆಡೆಯಿಂದ ಬಂಧಿಸಲಾಗಿದ್ದು, ಈ

ಪಹಲ್ಗಾಮ್‌ಗೂ ಭೇಟಿ ನೀಡಿದ್ದ ಪಾಕ್‌ ಏಜೆಂಟ್‌ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರ Read More »

ಕಾರು – ಆಟೋ ನಡುವೆ ಅಪಘಾತ | ಆಟೋ ಚಾಲಕ ಗಂಭೀರ

ವಿಟ್ಲ: ಕಾರು ಮತ್ತು ಆಟೋ ನಡುವೆ ಭೀಕರ ಅಪಘಾತವಾದ ಘಟನೆ ವಿಟ್ಲ-ಕನ್ಯಾನ ರಸ್ತೆಯ ಕಾಂತಡ್ಕದಲ್ಲಿ ನಡೆದಿದೆ. ಅಪಘಾತದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದಿಂದ ಆಟೋ ಚಾಲಕ ಒಕ್ಕೆತ್ತೂರು ನಿವಾಸಿ ಹುಸೈನ್ ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುವನ್ನು   ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಆಟೋದಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ಪ್ರಯಾಣಿಕರನ್ನು ದಾಖಲಿಸಲಾಗಿದೆ.

ಕಾರು – ಆಟೋ ನಡುವೆ ಅಪಘಾತ | ಆಟೋ ಚಾಲಕ ಗಂಭೀರ Read More »

ಗೇರುಕಟ್ಟೆ : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಗೇರುಕಟ್ಟೆ : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯತ್ ಕಳಿಯ ಸಹಯೋಗದಲ್ಲಿ  ಗೇರುಕಟ್ಟೆ ಅರಿವು ಗ್ರಂಥಾಲಯ ಕೇಂದ್ರದಲ್ಲಿ ಐದು ದಿನಗಳ  ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತಿದೆ.  ದಿನಪತ್ರಿಕೆ ವಾಚನ, ಪುಸ್ತಕ ಓದುವುದು, ನೀತಿ ಕಥೆಗಳು, ಕವನ ರಚನೆ, ಪತ್ರ ಬರೆಯುವುದು, ಭಾಷಣಕಲೆ, ಊರಿನ ಇತಿಹಾಸ ತಿಳಿಯುವುದು ಮತ್ತು ವ್ಯಕ್ತಿತ್ವ ವಿಕಸನ ಸಂಬಂಧಿ ಚಟುವಟಿಕೆಗಳನ್ನು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಡುತ್ತಿದ್ದಾರೆ. ಶಾಲಾ ರಜಾ ದಿನಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿಸುವ ಈ ಶಿಬಿರವು ಗ್ರಾಮೀಣ ಪ್ರದೇಶದ

ಗೇರುಕಟ್ಟೆ : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ Read More »

ನರೇಂದ್ರ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ವೇಗವಾಗಿ ಬೆಳೆಯುತ್ತಿರುವ ಔದ್ಯೋಗಿಕರಂಗದಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳಾಗುತ್ತಿರುತ್ತವೆ. ಅದಕ್ಕಾಗಿ ನಮ್ಮ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿ ದೆಸೆಯಿಂದಲೇ ಚಿಂತನೆ ಮಾಡಬೇಕಾಗಿದೆ. ಸಮಸ್ಯೆಗಳನ್ನು ಮೀರಿ ನಿಲ್ಲಲು ನಮಗೆ ಬೇಕಿರುವುದು ಉತ್ತೇಜನ. ಶ್ರದ್ಧೆಯಿಂದ ಅಧ್ಯಯನ ಮಾಡಿ ಯಶಸ್ಸು ಸಾಧಿಸಿ ಎಂದು ಆದಾಯ ತೆರಿಗೆ ಕಛೇರಿಯ ಟ್ಯಾಕ್ಸ್ ಅಸಿಸ್ಟೆಂಟ್ ತೇಜಸ್ವಿ ಮಕಿನ್ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಮಾರ್ಗಸೂಚಿಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ರಹಸ್ಯವು

ನರೇಂದ್ರ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ Read More »

ಮದುವೆ ಊಟದಿಂದ ಆರೋಗ್ಯದಲ್ಲಿ ಏರುಪೇರು | ಮಹಿಳೆ ಮೃತ್ಯು

ಬಂದಾರು : ಮಹಿಳೆಯೊಬ್ಬರು ವಾಂತಿ ಭೇದಿಯಿಂದಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬಂದಾರು ಗ್ರಾಮದಲ್ಲಿ ಮೇ 12 ರಂದು ನಡೆದ ಮದುವೆ ಊಟದ ನಂತರ ತುಂಬಾ ಜನರಿಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಅನೇಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಜಿರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ 5 ಮಂದಿ ದಾಖಲಾಗಿದ್ದಾರೆ ಎನ್ನಲಾಗಿದ್ದು, ಇವರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬಂದಾರು ಗ್ರಾಮದಲ್ಲಿ ಮದುವೆ ಸಮಾರಂಭಕ್ಕೆ ತೆರಳಿದವರಿಗೆಲ್ಲರಿಗು ವಾಂತಿ,

ಮದುವೆ ಊಟದಿಂದ ಆರೋಗ್ಯದಲ್ಲಿ ಏರುಪೇರು | ಮಹಿಳೆ ಮೃತ್ಯು Read More »

ಮದ್ಯ ಪರವಾನಗಿ ಶುಲ್ಕ ಇಮ್ಮಡಿಗೊಳಿಸಲು ಚಿಂತನೆ

ಮದ್ಯಪ್ರಿಯರಿಗೆ ಇನ್ನೊಂದು ಬರೆ ಎಳೆಯಲು ಮುಂದಾದ ಸರಕಾರ ಬೆಂಗಳೂರು: ಕಳೆದ ಎರಡು ವರ್ಷದ ಅಧಿಕಾರಾವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆಯನ್ನು ಹೆಚ್ಚಿಸಿದ ಕಾಂಗ್ರೆಸ್‌ ಸರ್ಕಾರ ಈಗ ಡಿಸ್ಟಿಲರಿಗಳು, ಬ್ರೂವರೀಸ್, ಮದ್ಯದ ಅಂಗಡಿಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮತ್ತು ಮದ್ಯ ಪೂರೈಸುವ ಕ್ಲಬ್‌ಗಳ ವಾರ್ಷಿಕ ಪರವಾನಗಿ ನವೀಕರಣ ಶುಲ್ಕವನ್ನು ಶೇಕಡ 100ರಷ್ಟು ಹೆಚ್ಚಿಸಲು ಮುಂದಾಗಿದೆ. ಪ್ರಸ್ತುತ ವಾರ್ಷಿಕ ಶುಲ್ಕದ ಮೂಲಕ ರೂ. 700 ಕೋಟಿ ಸಂಗ್ರಹಿಸುತ್ತಿರುವ ಸರ್ಕಾರ ಸುಮಾರು 12,000 ವಿವಿಧ ರೀತಿಯ ಪರವಾನಗಿಗಳಿಂದ ರೂ.1,400 ಕೋಟಿ ಸಂಗ್ರಹಿಸಲಿದೆ.

ಮದ್ಯ ಪರವಾನಗಿ ಶುಲ್ಕ ಇಮ್ಮಡಿಗೊಳಿಸಲು ಚಿಂತನೆ Read More »

error: Content is protected !!
Scroll to Top