ಸುದ್ದಿ

ವೇದಿಕೆ ಮೇಲೆ ಎಸ್‌ಪಿಗೆ ಹೊಡೆಯಲು ಕೈ ಎತ್ತಿದ ಸಿದ್ದರಾಮಯ್ಯ : ವೀಡಿಯೊ ವೈರಲ್‌

ಕಾಂಗ್ರೆಸ್‌ ಸಭೆಯೊಳಗೆ ಬಂದು ಸಿಎಂಗೆ ಕಪ್ಪು ಬಾವುಟ ತೋರಿಸಿ ಗೋ ಗೋ ಪಾಕಿಸ್ಥಾನ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತೆಯರು ಬೆಳಗಾವಿ : ಬೆಳಗಾವಿಯಲ್ಲಿ ನಿನ್ನೆ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ಪ್ರತಿಭಟನಾ ಸಭೆ ಗೊಂದಲದ ಗೂಡಾಯಿತು. ಬಿಜೆಪಿಯ ಮಹಿಳಾ ಕಾರ್ಯಕರ್ತರು ಸಭೆಯೊಳಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದು, ಇದರಿಂದ ಕೆರಳಿ ಕೆಂಡವಾದ ಸಿದ್ದರಾಮಯ್ಯನವರು ಬೆಳಗಾವಿ ಎಸ್‌ಪಿಯನ್ನು ವೇದಿಕೆಗೆ ಕರೆದು ಹೊಡೆಯಲು ಕೈ ಎತ್ತಿದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಿದ್ದರಾಮಯ್ಯನವರ ಸಾರ್ವಜನಿಕ […]

ವೇದಿಕೆ ಮೇಲೆ ಎಸ್‌ಪಿಗೆ ಹೊಡೆಯಲು ಕೈ ಎತ್ತಿದ ಸಿದ್ದರಾಮಯ್ಯ : ವೀಡಿಯೊ ವೈರಲ್‌ Read More »

ಕಾರಿನಲ್ಲೇ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ

ಕಾರ್ಕಳ : ಮಂಗಳೂರಿನಲ್ಲಿ ವಾಸವಿದ್ದ ಮೂಲತಃ ಕಾರ್ಕಳದವರಾದ ಉದ್ಯಮಿ ದಿಲೀಪ್‌ ಎನ್‌.ಆರ್‌. ಎಂಬವರು ಮಂಗಳವಾರ ನಸುಕಿನ ಹೊತ್ತು ಕಾರ್ಕಳದ ನಿಟ್ಟೆ ಸಮೀಪ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದರು.ವಾರ ನಸುಕಿನ ಹೊತ್ತು ಕಾರ್ಕಳದ ನಿಟ್ಟೆ ಸಮೀಪ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಮಂಗಳೂರಿನಲ್ಲಿ ವಾಸವಿದ್ದ ದಿಲೀಪ್‌ ಎನ್‌.ಆರ್‌. ಅವರು ನಿನ್ನೆ ರಾತ್ರಿ ಅಲ್ಲಿಂದ ತನ್ನ ಕ್ವಿಡ್‌ ಕಾರಿನಲ್ಲಿ ಹೊರಟವರು ನಿಟ್ಟೆ ದೂಪಕಟ್ಟೆಯ

ಕಾರಿನಲ್ಲೇ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ Read More »

ವೈಭವ್ ಸೂರ್ಯವಂಶಿ ವೈಭವದ ಆಟಕ್ಕೆ ಕ್ರಿಕೆಟ್‌ ಜಗತ್ತು ಫಿದಾ

14ರ ಹರೆಯದ ಪೋರ ಮುರಿದ ದಾಖಲೆಗಳೆಷ್ಟು ಗೊತ್ತೆ? ಜೈಪುರ: ನಿನ್ನೆ ರಾತ್ರಿ ನಡೆದ ಐಪಿಎಲ್‌ನ 47ನೇ ಪಂದ್ಯದಲ್ಲಿ ಇನ್ನೂ ಮೀಸೆ ಮೂಡದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿಯ ಸಿಡಿಲಬ್ಬರದ ಶತಕದ ಆಟ ಇಡೀ ಕ್ರಿಕೆಟ್‌ ಜಗತ್ತನ್ನು ಮೋಡಿ ಮಾಡಿಬಿಟ್ಟಿದೆ. ಇದರೊಂದಿಗೆ ವೈಭವ್‌ ಎಂಬ ಬಾಲಕ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್​ಗಳಲ್ಲಿ 209 ರನ್​ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್

ವೈಭವ್ ಸೂರ್ಯವಂಶಿ ವೈಭವದ ಆಟಕ್ಕೆ ಕ್ರಿಕೆಟ್‌ ಜಗತ್ತು ಫಿದಾ Read More »

ಶರವೂರಿನಲ್ಲಿ ಇಂದ್ರಜಿತು ಕಾಳಗ ತಾಳಮದ್ದಳೆ

ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ  ಇಂದ್ರಜಿತು ಕಾಳಗ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ. ಕೆ ಆಚಾರ್ಯ ಹಳೆನೇರೆಂಕಿ ಹಿಮ್ಮೇಳದಲ್ಲಿ  ಮುರಳೀಧರ ಕಲ್ಲೂರಾಯ,  ಚಂದ್ರ ದೇವಾಡಿಗ ನಗ್ರಿ ಅರ್ಥದಾರಿಗಳಾಗಿ (ರಾಮ1)  ಜಯರಾಮ ಗೌಡ ಬಲ್ಯ (ಇಂದ್ರಜಿತು), ಜಬ್ಬಾರ್ ಸಮೋ ಸಂಪಾಜೆ(ಹನುಮಂತ), ದಿವಾಕರ ಆಚಾರ್ಯ ಹಳೆನೇರೆಂಕಿ (ಮಾಯಾ ಸೀತೆ 1),  ಗುರು ಪ್ರಸಾದ್ ಆಲಂಕಾರು (ಮಾಯಾ ಸೀತೆ 2), ರಾಘವೇಂದ್ರ ಭಟ್ ತೋಟಂತಿಲ (ವಿಭೀಷಣ), ರಾಮ್

ಶರವೂರಿನಲ್ಲಿ ಇಂದ್ರಜಿತು ಕಾಳಗ ತಾಳಮದ್ದಳೆ Read More »

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ | ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಡಾ.ದೀಪಕ್‍ ರೈ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಪದೇ ಪದೇ ಆಗುತ್ತಿರುವ ತೊಂದರೆಯ ನಿಟ್ಟಿನಲ್ಲಿ  ಆಸ್ಪತ್ರೆಯ ಪ್ರಮುಖ ಬಾಗಿಲುಗಳನ್ನು ಮುಚ್ಚಲಾಗುವುದು. ಅಲ್ಲದೆ ನಾಲ್ವರು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಈ ಕುರಿತು ಇಂದಿನಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಏ.25 ಶುಕ್ರವಾರ ನಡೆದ ಘಟನೆಯ ಕುರಿತು ಸ್ಪಷ್ಟನೆ ನೀಡಿ, ಮುಖ್ಯವಾಗಿ ಹೆರಿಗೆ ವಾರ್ಡಿನಲ್ಲಿ ಗಂಡಸರಿಗೆ ಎಂಟ್ರಿ ಇಲ್ಲ. ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ಘಟನೆಗೆ ಕಾರಣರಾದವರಿಗೆ ಹೊರಗೆ ಹೋಗುವಂತೆ

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ | ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಆರೋಗ್ಯಾಧಿಕಾರಿ ಡಾ.ದೀಪಕ್‍ ರೈ Read More »

ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ನೇಮೋತ್ಸವ | ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ, ಹರಕೆ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಎ.28 ರಂದು ಪೂರ್ವಶಿಷ್ಟ ಸಂಪ್ರದಾಯದಂತೆ ನೆರವೇರಿತು. ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯುವ ದೈವಸ್ಥಾನಕ್ಕೆ ಆಗಮಿಸಿದ ಬಳಿಕ ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಇತಿಹಾಸ ಪ್ರಸಿದ್ಧ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ನೇಮೋತ್ಸವ | ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ, ಹರಕೆ ಸಮರ್ಪಣೆ Read More »

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯದ, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಐಕ್ಯೂಸಿ ವಿಭಾಗದ ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏ.29 ಮಂಗಳವಾರ ಸಂಜೆ 3 ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಎನ್‍. ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಖ್ಯಾತ

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ Read More »

ಉಪ್ಪಿನಂಗಡಿ ಕಾಳಿಕಾಂಬಾ ಸಂಘದಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ

ಸಸಿಹಿತ್ತಿಲು ದೊಡ್ಡಮನೆ ಶ್ರೀಧರ ಅಮೀನ್ ಗೃಹಪ್ರವೇಶದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ನಿತೇಶ್ ಕುಮಾರ್. ವೈ, ಸಂತೋಷ್ ಕುಮಾರ್ ಹರಿಹರ, ಹಿಮ್ಮೇಳದಲ್ಲಿ ದೇವಿಪ್ರಸಾದ್ ಕಟೀಲು, ಎಸ್‌ ಎನ್ ಭಟ್ ಬಾಯಾರು, ರಘುಪತಿ ಭಟ್ ಸಸಿಹಿತ್ತಿಲು, ಅರ್ಥದಾರಿಗಳಾಗಿ  ಗುಡ್ಡಪ್ಪ ಬಲ್ಯ, ಗೀತಾ ಕರಾಯ (ವಿಕ್ರಮಾದಿತ್ಯ,) ದಿವಾಕರ ಆಚಾರ್ಯ ಗೇರುಕಟ್ಟೆ (ವಿಭಾಕರ), ಹರೀಶ ಆಚಾರ್ಯ ಬಾರ್ಯ(ಆಸ್ಥಾನ ವಿದ್ವಾಂಸ), ಆಶಾಲತಾ

ಉಪ್ಪಿನಂಗಡಿ ಕಾಳಿಕಾಂಬಾ ಸಂಘದಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ Read More »

ಪಾಕಿಸ್ಥಾನದ ಯೂಟ್ಯೂಬ್‌ ಚಾನೆಲ್‌ಗಳು ಬ್ಯಾನ್‌

ಭಾರತದ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದ ಚಾನೆಲ್‌ಗಳಿಗೆ ನಿಷೇಧ ನವದೆಹಲಿ: ಪಹಲ್ಗಾಮ್‌ ದಾಳಿಯ ನಂತರ ಭಾರತದ ಬಗ್ಗೆ ಸುಳ್ಳು ಮಾಹಿತಿ ಪ್ರಕಟಿಸುತ್ತಿದ್ದ ಪಾಕಿಸ್ಥಾನದ ಯೂಟ್ಯೂಬ್‌ ಚಾನೆಲ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲದ ಶಿಫಾರಸ್ಸಿನ ಆಧಾರದಲ್ಲಿ 16 ಯೂಟ್ಯೂಬ್‌ ಚಾನೆಲ್‌ಗಳನ್ನು ಯೂಟ್ಯೂಬ್‌ ಭಾರತದಲ್ಲಿ ಬ್ಲಾಕ್‌ ಮಾಡಿದೆ. ಬ್ಲಾಕ್‌ ಆದ ಚಾನೆಲ್‌ಗಳ ಪಟ್ಟಿಯಲ್ಲಿ ಡಾನ್ ನ್ಯೂಸ್, ಸಾಮ್ನಾ ಟಿವಿ, ಜಿಯೊ ನ್ಯೂಸ್, ಪಾಕ್‌ ಮಾಜಿ ಕ್ರಿಕೆಟ್‌ ಆಟಗಾರ ಶೋಯೆಬ್‌ ಅಕ್ತರ್‌ ಅವರ ಚಾನೆಲ್‌ ಇದೆ. ಉಗ್ರರ ದಾಳಿಯ

ಪಾಕಿಸ್ಥಾನದ ಯೂಟ್ಯೂಬ್‌ ಚಾನೆಲ್‌ಗಳು ಬ್ಯಾನ್‌ Read More »

ಕಾರು- ಮಿನಿ ಲಾರಿ ಡಿಕ್ಕಿ | ಓರ್ವ ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ನೆಲ್ಯಾಡಿ: ಕಾರು ಮತ್ತು ಮಿನಿ ಲಾರಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ನಿನ್ನೆ ನಡೆದಿದೆ. ನಿನ್ನೆ ಸಂಜೆ ಕಾರು ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಜೈಪುರ ಮೂಲದ ಅಬ್ದುಲ್ ಶುಕ್ರು ಚೌಧರಿ ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಹುಂಡೈ ಕಂಪನಿಯ ಕಾರು, ಬೆಂಗಳೂರು ಕಡೆಯಿಂದ ಬರುವ ಮಿನಿ ಲಾರಿ ಎನ್ನಲಾಗಿದೆ. ಕಾರಿನಲ್ಲಿ ಮೃತಪಟ್ಟ ಅಬ್ದುಲ್ ಅವರ ಪತ್ನಿ ಲತಿಕಾ, ಮಗಳು ಅನ್ವೇಷ, ಅಳಿಯ

ಕಾರು- ಮಿನಿ ಲಾರಿ ಡಿಕ್ಕಿ | ಓರ್ವ ಮೃತ್ಯು, ನಾಲ್ವರಿಗೆ ಗಂಭೀರ ಗಾಯ Read More »

error: Content is protected !!
Scroll to Top