ಸುದ್ದಿ

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸ್ವಚ್ಚ ಪುತ್ತೂರು ಕಾರ್ಯಕ್ರಮದ  ಅಂಗವಾಗಿ ಕಾರ್ಮಿಕ ದಿನಾಚರಣೆ ಮೇ 1 ರಂದು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಸಭಾಂಗಣದಲ್ಲಿ ಜರಗಲಿರುವುದು. ಕಾರ್ಯಕ್ರಮದಲ್ಲಿ  ಪೌರಕಾರ್ಮಿಕರಿಗೆ ಹಾಗೂ ನಗರಸಭೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಗೌರವಾರ್ಪಣೆ  ಕಾರ್ಯಕ್ರಮ ಜರಗಲಿದೆ. ಸ್ವಚ್ಚ ಪುತ್ತೂರು ಯೋಜನೆಯಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿರುವುದರಿಂದ  ಈ ಯೋಜನೆಯ ಭಾಗೀದಾರರು  ಎಂಬ ನೆಲೆಯಲ್ಲಿ ನಗರಸಭೆಗೆ ಸಂಬಂಧಿಸಿದವರನ್ನು ಗೌರವಿಸಲು ಈ […]

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ Read More »

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ ನೀಡಲಾಗಿದೆ. ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿದೆ. ಸಂಸ್ಕ್ರತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಜನರು  ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ. ಏಕೆಂದರೆ ಇದು ಕುಟುಂಬಕ್ಕೆ ಸಮೃದ್ದಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ. ಆದ್ದರಿಂದ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ Read More »

ಮಂಗಳೂರು : ಹೊತ್ತಿ ಉರಿದ ಲಾರಿ | ಚಾಲಕ  ಪ್ರಾಣಪಾಯದಿಂದ ಪಾರು

ಮಂಗಳೂರು: ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕೊಯನಾಡು ಬಳಿ ಲಾರಿಗೆ ಆಕಸ್ಮಿಕವಾಗಿ ಅಗ್ನಿ ಸ್ಪರ್ಶಗೊಂಡು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಮಡ್ ಬ್ಲಾಕ್ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಕೊಯನಾಡು ಸಮೀಪ ಲಾರಿಯಲ್ಲಿ ದಿಡೀ‌ರ್ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಚಾಲಕ ಲಾರಿಯನ್ನು ನಿಲ್ಲಿಸಿ ಇಳಿದಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸ್ಥಳೀಯರು, ಅಗ್ನಿಶಾಮಕ ದಳದವರು, ಪೊಲೀಸರು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಂಗಳೂರು : ಹೊತ್ತಿ ಉರಿದ ಲಾರಿ | ಚಾಲಕ  ಪ್ರಾಣಪಾಯದಿಂದ ಪಾರು Read More »

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ಸಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪ ನಡೆದಿದೆ. ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಬೈಕ್ ಇದಾಗಿದ್ದು, ಮೃತ ಸವಾರನ ಕುರಿತು ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು Read More »

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು

ಪುತ್ತೂರು: ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ ಸಿ ಕಾಲನಿಯಿಂದ ವರದಿಯಾಗಿದೆ. ರಬ್ಬರ್ ಟ್ಯಾಪಿಂಗ್ ಗೆ ತೆರಳಿದ ಅರ್ತಿಯಡ್ಕದ ಮಹಿಳೆಯೋರ್ವರ ಮೇಲೆ ಎ.29 ರಂದು ಮುಂಜಾನೆ ಆನೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು Read More »

ಕುಡುಪು ಕೊಲೆ ಪ್ರಕರಣ : ಹಲವು ಮಂದಿ ವಶ

ಕೋಮು ವೈಷಮ್ಯಕ್ಕೆ ಎಡೆಮಾಡಿಕೊಡದಂತೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮನವಿ ಮಂಗಳೂರು : ಮಂಗಳೂರಿನ ಹೊರವಲಯದ ಕುಡುಪು ಬಳಿ ಯುವಕನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಂತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಕ್ರಿಕೆಟ್ ಆಟ ಆಡುವ ವೇಳೆ ಆಟಗಾರರು ಹಾಗೂ ಅನ್ಯ ಕೋಮಿನ ಯುವಕನ ನಡುವೆ ಮಾತಿನ ಚಕಮಕಿ ನಡೆದು, ಯುವಕನ ಮೇಲೆ

ಕುಡುಪು ಕೊಲೆ ಪ್ರಕರಣ : ಹಲವು ಮಂದಿ ವಶ Read More »

ಕಾಶ್ಮೀರ : 48 ಪ್ರವಾಸಿ ತಾಣಗಳು ಬಂದ್‌

ಉಗ್ರರ ಇನ್ನಷ್ಟು ದಾಳಿಗಳು ನಡೆಯುವ ಮಾಹಿತಿ ಹಿನ್ನೆಲೆಯಲ್ಲಿ ಕ್ರಮ ಶ್ರೀನಗರ: ಪಹಲ್ಗಾಮ್‌ ದಾಳಿಯ ಮಾದರಿಯಲ್ಲೇ ಉಗ್ರರು ಇನ್ನಷ್ಟು ಪ್ರವಾಸಿ ತಾಣಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಸರಕಾರ 48 ಪ್ರವಾಸಿ ತಾಣಗಳನ್ನು ಮುಚ್ಚಿದೆ. ಕಾಶ್ಮೀರದಲ್ಲಿ ಒಟ್ಟು 87 ಪ್ರಮುಖ ಪ್ರವಾಸಿ ತಾಣಗಳಿದ್ದು, ಈ ಪೈಕಿ 47 ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಿ ಸರಕಾರ ಆದೇಶ ಹೊರಡಿಸಿದೆ. ಪಹಲ್ಗಾಮ್‌ ಉಗ್ರ ದಾಳಿಯ ಬಳಿಕ ಕಾಶ್ಮೀರ ಕಣಿವೆಯಲ್ಲಿರುವ ಕೆಲವು ಸ್ಲೀಪರ್‌

ಕಾಶ್ಮೀರ : 48 ಪ್ರವಾಸಿ ತಾಣಗಳು ಬಂದ್‌ Read More »

ಉಗ್ರರ ದಾಳಿಗೆ ಮೊದಲು ಅಲ್ಲಾಹು ಅಕ್ಬರ್‌ ಕೂಗಿದ್ದ ಜಿಪ್‌ಲೈನ್‌ ಆಪರೇಟರ್‌

ವೀಡಿಯೊದಲ್ಲಿ ಕಂಡು ಬಂದ ದೃಶ್ಯದ ಬಳಿಕ ನಾನಾ ಅನುಮಾನ ಶ್ರೀನಗರ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲೇ ಜಿಪ್‌ಲೈನ್‌ ಆಪರೇಟರ್‌ವೊಬ್ಬ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಕೂಗಿರುವುದು ಕಂಡುಬಂದಿದೆ. ಈ ದೃಶ್ಯ ಪ್ರವಾಸಿಗರೊಬ್ಬರ ಸೆಲ್ಫಿ ವೀಡಿಯೊದಲ್ಲಿ ಸೆರೆಯಾಗಿದೆ. ‘ಅಲ್ಲಾಹು ಅಕ್ಬರ್‌’ ಎಂದು ಕೂಗಿದ್ದ ಜಿಪ್‌ಲೈನ್‌ ಆಪರೇಟರ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ವಿಚಾರಣೆಗಾಗಿ ಕರೆಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಸ್ಥಳದಲ್ಲಿದ್ದ ಎಲ್ಲರನ್ನೂ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡಿವೆ. ಜಿಪ್‌ಲೈನ್ ಆಪರೇಟರ್‌ನನ್ನು

ಉಗ್ರರ ದಾಳಿಗೆ ಮೊದಲು ಅಲ್ಲಾಹು ಅಕ್ಬರ್‌ ಕೂಗಿದ್ದ ಜಿಪ್‌ಲೈನ್‌ ಆಪರೇಟರ್‌ Read More »

ಬದಲಾಗಲಿದೆ ಐಪಿಎಲ್‌ ಪಂದ್ಯಗಳ ಮಾದರಿ : ಪ್ರತಿ ತಂಡಕ್ಕೆ 18 ಮ್ಯಾಚ್‌

ರೌಂಡ್ ರಾಬಿನ್ ಸ್ವರೂಪದಲ್ಲಿ ಒಟ್ಟು 94 ಪಂದ್ಯ ಆಡಿಸಲು ತೀರ್ಮಾನ ಮುಂಬಯಿ: ಐಪಿಎಲ್‌ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ಬಿಸಿಸಿಐ ನಿರ್ಧರಿಸಿದೆ. ಇನ್ನಷ್ಟು ಹೆಚ್ಚು ಪಂದ್ಯಗಳನ್ನು ಆಡಿಸುವುದರ ಜೊತೆಗೆ ಪಂದ್ಯದ ಮಾದರಿಯನ್ನು ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಬಾರಿಯ ಐಪಿಎಲ್ ಲೀಗ್ ಹಂತದಲ್ಲಿ 70 ಪಂದ್ಯಗಳನ್ನಾಡಲಾಗುತ್ತದೆ. ಆದರೆ 21ನೇ ಸೀಸನ್​ ಐಪಿಎಲ್​ನಲ್ಲಿ ಈ ಸಂಖ್ಯೆಯು 90ಕ್ಕೇರಲಿದೆ. ಅಲ್ಲದೆ ಒಟ್ಟು 94 ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಐಪಿಎಲ್ ಪಂದ್ಯಗಳ ವಿಸ್ತರಣೆಗೆ ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. 2028ರಿಂದ

ಬದಲಾಗಲಿದೆ ಐಪಿಎಲ್‌ ಪಂದ್ಯಗಳ ಮಾದರಿ : ಪ್ರತಿ ತಂಡಕ್ಕೆ 18 ಮ್ಯಾಚ್‌ Read More »

ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ – ಬಲರಾಮ ಆಚಾರ್ಯ | ಫಿಲೋಕಾರ್ನಿವಾಲ್- 2025 ಪಿಜಿಫೆಸ್ಟ್ ಉದ್ಘಾಟನೆ

ಪುತ್ತೂರು: ಪುತ್ತೂರು ಸಂತ ಫಿಲೋಮಿನ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿಭಾಗಗಳ ಫೆಸ್ಟ್ “ಫಿಲೋಕಾರ್ನಿವಾಲ್ 2025” ಸೋಮವಾರ ಉದ್ಘಾಟನೆಗೊಂಡಿತು. ಜಿ..ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ಎಂಡಿ ಬಲರಾಮ ಆಚಾರ್ಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕೌಶಲ್ಯಗಳು ಬಹುಮುಖ್ಯವಾಗಿದ್ದು ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆಯ ಅಗತ್ಯವಿದೆ.  ವಿದ್ಯಾರ್ಥಿಗಳು ಕೇವಲ ತರಗತಿ ಚಟುವಟಿಗಳಲ್ಲಿ ಮಾತ್ರ ತೊಡಗಿಕೊಳ್ಳದೆ ಇಂತಹ ಫೆಸ್ಟ್ ಗಳನ್ನು ಆಯೋಜನೆ ಮಾಡಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಪ್ರತಿಯೊಬ್ಬರಲ್ಲೂ ಕೌಶಲ್ಯಗಳ ಅಭಿವೃದ್ಧಿ ಸಾಧ್ಯ

ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ – ಬಲರಾಮ ಆಚಾರ್ಯ | ಫಿಲೋಕಾರ್ನಿವಾಲ್- 2025 ಪಿಜಿಫೆಸ್ಟ್ ಉದ್ಘಾಟನೆ Read More »

error: Content is protected !!
Scroll to Top