ಸುದ್ದಿ

ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆ ಹಾನಿ

ಸುಳ್ಯ: ಭಾರೀ ಗಾಳಿ ಮಳೆಗೆ ತಾಲೂಕಿನ ತೊಡಿಕಾನ ಗ್ರಾಮದ ಬೊಳ್ಳುರು ಪದ್ಮಯ್ಯ ಗೌಡರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮನೆಯ ಹಂಚು ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಮನೆಯೊಳಗೆ ನೀರು ಬಂದಿದ್ದು, ಇದರಿಂದ ಮನೆಯೊಳಗೆ ಇದ್ದ ವಸ್ತುಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಲಾಗಿದೆ.

ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಮನೆ ಹಾನಿ Read More »

ಅಕ್ಷಯ ಕಾಲೇಜು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್!

ಪುತ್ತೂರಿನ ಸಂತ ಫಿಲೋಮಿನಾ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಅಂತರ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ತಂಡವು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. M.Com, M.Scಮತ್ತು MSW ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಅಕ್ಷಯ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಮೆರೆದಿದ್ದಾರೆ. ವಿದ್ಯಾರ್ಥಿಗಳ ಪ್ರಶಸ್ತಿಗಳ ವಿವರ ಹೀಗಿದೆ : Canvas Expression: ದ್ವಿತೀಯ ಬಹುಮಾನ – ಮಧುಸೂದನ್ ಮತ್ತು ಸುಜನ್ (ಪ್ರಥಮ ಇಂಟೀರಿಯರ್ ಡೆಕೋರೆಷನ್),,The Search Begins: ದ್ವಿತೀಯ ಬಹುಮಾನ – ಪೃಥ್ವಿರಾಜ್,

ಅಕ್ಷಯ ಕಾಲೇಜು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್! Read More »

ಸಮುದ್ರ ಮಾರ್ಗದಲ್ಲಿ ಶತ್ರುಗಳು ನುಸುಳುವ ಶಂಕೆ | ಉಡುಪಿಯಲ್ಲಿ ಬೋಟ್​ಗಳ ತೀವ್ರ ಶೋಧ

ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಂತರ ಕರ್ನಾಟಕ ಕರಾವಳಿಯಲ್ಲಿ ಕರಾವಳಿ ಕಾವಲು ಪೊಲೀಸರ ಕಟ್ಟೆಚ್ಚರ ವಹಿಸಿದೆ. ಕರಾವಳಿ ಮೂಲಕ ಭಯೋತ್ಪಾದಕ ಚಟುವಟಿಕೆ ಸಾಧ್ಯತೆಯ ಅನುಮಾನದ ಕಾರಣ ಕರಾವಳಿ ಕಾವಲು ಪೊಲೀಸರು ಕಣ್ಗಾವಲು ಹೆಚ್ಚಿಸಿದ್ದಾರೆ. ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಬೋಟ್​​ಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಉಡುಪಿ ಕರಾವಳಿ ಪೊಲೀಸ್ ಎಸ್. ಪಿ ಮಿಥುನ್ ಸೂಚನೆಯ ನಂತರ ಪೊಲೀಸರು ತಪಾಸಣೆ ಹೆಚ್ಚಿಸಿದ್ದಾರೆ. ಉಡುಪಿ ಜಿಲ್ಲೆಯ ಗಂಗೊಳ್ಳಿ ಕರಾವಳಿ ಪೊಲೀಸರಿಂದ ಆಳ ಸಮುದ್ರದಲ್ಲಿ ಗಸ್ತು ಕಾರ್ಯಚರಣೆ

ಸಮುದ್ರ ಮಾರ್ಗದಲ್ಲಿ ಶತ್ರುಗಳು ನುಸುಳುವ ಶಂಕೆ | ಉಡುಪಿಯಲ್ಲಿ ಬೋಟ್​ಗಳ ತೀವ್ರ ಶೋಧ Read More »

ಪಹಲ್ಗಾಮ್ ಯುದ್ದದಿಂದ ಕರ್ನಾಟಕ ಕರವಾಳಿಯಲ್ಲಿ ಕಟ್ಟುನಿಟ್ಟಿನ ಎಚ್ಚರ: ಉತ್ತರ ಕನ್ನಡ ಪ್ರವಾಸಿ ತಾಣಗಳಿಗೆಲ್ಲಾ ಪೊಲೀಸರ ಕಣ್ಗಾವಲು

ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ದೇಶದಲ್ಲಿ ಕ್ಷಣ ಕ್ಷಣಕ್ಕೂ ಮಹತ್ವದ ಬೆಳವಣಿಗೆಗಳಾಗುತ್ತಿವೆ. ದೇಶದ ಸುರಕ್ಷತೆಯ ವಿಚಾರವಾಗಿ ಭಾರಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆ, ಭಾರತೀಯ ಕೊಸ್ಟ್ ಗಾರ್ಡ್ ನೌಕಾ ನೆಲೆ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್ ಸಕ್ರಿಯರಾಗಿದ್ದಾರೆ. ಒಂದು ಕಡೆ ಅರಬ್ಬಿ ಸಮುದ್ರ, ಇನ್ನೊಂದು ಕಡೆ ದೇಶದ ದೊಡ್ಡ ನೌಕಾ ನೆಲೆ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುವ ದೇಶ ವಿದೇಶಿಗರು. ಈ ಎಲ್ಲ ಸೂಕ್ಷ್ಮ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ

ಪಹಲ್ಗಾಮ್ ಯುದ್ದದಿಂದ ಕರ್ನಾಟಕ ಕರವಾಳಿಯಲ್ಲಿ ಕಟ್ಟುನಿಟ್ಟಿನ ಎಚ್ಚರ: ಉತ್ತರ ಕನ್ನಡ ಪ್ರವಾಸಿ ತಾಣಗಳಿಗೆಲ್ಲಾ ಪೊಲೀಸರ ಕಣ್ಗಾವಲು Read More »

ಅರ್ಹರನ್ನು ಸನ್ಮಾನಿಸಿದರೆ ಸನ್ಮಾನಿಸಿದವರಿಗೊಂದು ಹೆಮ್ಮೆ : – ಡಾ. ಪ್ರಭಾಕರ ಭಟ್  ಕಲ್ಲಡ್ಕ | ನಿರಂಜನ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ಹಿರಿಯರಾದರೂ ಸಕ್ರಿಯರಾಗಿರುವ ಅನೇಕರ ಉತ್ಸಾಹ ನಮಗೆ ಪ್ರೇರಣೆ. ಸದಾಶಿವ ಭಟ್ ಪಳ್ಳು ಅವರಂತಹ ಸಾಧಕರು ಹತ್ತು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಾರೆ ಎಂದಾದರೆ ಅವರ ಸಂಪರ್ಕಕ್ಕೆ ಬಂದವರೂ ಒಳ್ಳೆಯ ಭಾಷಾ ಜ್ಞಾನವನ್ನು ಹೊಂದಬಹುದು. ಅರ್ಹ ವ್ಯಕ್ತಿಗಳಿಗೆ ಸನ್ಮಾನ ಮಾಡಿದರೆ ಸನ್ಮಾನಿಸಿದವರಿಗೂ ಅದು ಹೆಮ್ಮೆಯ ಕ್ಷಣ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ನುಡಿದರು. ಅವರು ಮಂಗಳವಾರ ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ

ಅರ್ಹರನ್ನು ಸನ್ಮಾನಿಸಿದರೆ ಸನ್ಮಾನಿಸಿದವರಿಗೊಂದು ಹೆಮ್ಮೆ : – ಡಾ. ಪ್ರಭಾಕರ ಭಟ್  ಕಲ್ಲಡ್ಕ | ನಿರಂಜನ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ Read More »

ಭಾರತದಿಂದ ಯುದ್ದ ಭೀತಿ : ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು – ಪಾಕ್‍ ರಕ್ಷಣಾ ಸಚಿವ

ಇಸ್ಲಾಮಾಬಾದ್: ಭಾರತ ಮತ್ತು ಪಾಕ್ ನಡುವಿನ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿವೆ. ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿಕೆ ನೀಡಿದ್ದಾರೆ. ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಇತರ ದೇಶಗಳು ಪ್ರಯತ್ನಗಳನ್ನು ಮಾಡಿದರೂ, ಕಾಲ ಕಳೆದಂತೆ ಭಾರತದೊಂದಿಗೆ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಗಮನಹರಿಸಿದಾಗ, ಕಾಲ ಕಳೆದಂತೆ ಸಂಘರ್ಷದ ಸಾಧ್ಯತೆ ಹೆಚ್ಚುತ್ತಿದ್ದು, ಕಡಿಮೆಯಾಗುತ್ತಿಲ್ಲ. ಆದರೂ ಅನೇಕ ದೇಶಗಳು ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು

ಭಾರತದಿಂದ ಯುದ್ದ ಭೀತಿ : ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು – ಪಾಕ್‍ ರಕ್ಷಣಾ ಸಚಿವ Read More »

ಆಯುರ್ವೇದ ಎಂ.ಡಿ. ಪರೀಕ್ಷೆ: ಡಾ. ಮೇಘಶ್ರೀ ಬಿ.ಗೆ 2ನೇ ರ‍್ಯಾಂಕ್

ಪುತ್ತೂರು: ರಾಜೀವ್ ಗಾಂಧಿ ಯೂನಿವರ್ಸಿಟಿ ಅಧೀನದಲ್ಲಿ ನಡೆದ ಆಯುರ್ವೇದ ಎಂ.ಡಿ.ಯ ಅಂತಿಮ ಪರೀಕ್ಷೆಯಲ್ಲಿ ಪುತ್ತೂರಿನ ಡಾ. ಮೇಘಶ್ರೀ 2. 676 ಅಂಕ ಪಡೆದು ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ 2 ನೇ ರ‍್ಯಾಂಕ್ ಪಡೆದಿರುತ್ತಾರೆ. ಅವರು ಕುತ್ಪಾಡಿ ಎಸ್ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜ್ ನಲ್ಲಿ ಎಂ.ಡಿ. ವ್ಯಾಸಂಗ ಮಾಡಿದ್ದು, ಪ್ರಸ್ತುತ ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜ್ ಬೆಳ್ತಂಗಡಿ ಇಲ್ಲಿ ವೈದ್ಯಕೀಯ ವಿಭಾಗದ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಷಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ

ಆಯುರ್ವೇದ ಎಂ.ಡಿ. ಪರೀಕ್ಷೆ: ಡಾ. ಮೇಘಶ್ರೀ ಬಿ.ಗೆ 2ನೇ ರ‍್ಯಾಂಕ್ Read More »

ಬಿಯರ್ ಪ್ರಿಯಕರಿಗೆ ಶಾಕ್‍ | ಮತ್ತೇ ಏರಿದ ಮದ್ಯದ ದರ

ಬೆಲೆ ಏರಿಕೆಯ ಸದ್ದು ಜೋರಾಗಿದ್ದು, ಈಗಾಗಲೇ ಡೀಸೆಲ್, ಹಾಲು, ವಿದ್ಯುತ್ ದರ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಮದ್ಯದ ದರ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನ 195% ನಿಂದ 205% ಹೆಚ್ಚಿಸುವ ಬಗ್ಗೆ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್‍ಗಳ ದರವನ್ನ ಪ್ರತಿ ಕ್ವಾಟರ್‍ಗೆ 10 ರೂ.ನಿಂದ 15 ರೂ. ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೇ ಬಿಯರ್ ದರವನ್ನ

ಬಿಯರ್ ಪ್ರಿಯಕರಿಗೆ ಶಾಕ್‍ | ಮತ್ತೇ ಏರಿದ ಮದ್ಯದ ದರ Read More »

ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ಮೃತ್ಯು

ಒಂದೇ ಕುಟುಂಬದ 6 ಮಂದಿ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಗುಜರಾತ್​ನ ಖೇಡಾ ಜಿಲ್ಲೆಯ ಮೆಶ್ವೋ ನದಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ನಾಡಿಯಾಡ್ ಅಗ್ನಿಶಾಮಕ ದಳದ ತಂಡವು ಕನಿಜ್ ಗ್ರಾಮದ ಬಳಿ ಸ್ಥಳಕ್ಕೆ ತಲುಪಿ, ಆರು ಶವಗಳನ್ನು ನದಿಯಿಂದ ಹೊರತೆಗೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನಿಜ್ ಗ್ರಾಮದ ಬಳಿಯ ನದಿಯಲ್ಲಿ ಸಂಜೆ ಸ್ನಾನ ಮಾಡಲು ಆರು ಮಂದಿ ತೆರಳಿದ್ದರು. ನೀರಿನ ಆಳ ತಿಳಿಯದೇ ಇಳಿದು ಈಜಲಾಗದೆ ಪ್ರಾಣ

ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ಮೃತ್ಯು Read More »

ಅಕ್ರಮವಾಗಿ ಸಂಗ್ರಹವಾಗಿದ್ದ 500 ಕ್ವಿಂಟಾಲ್ ಅಕ್ಕಿ ವಶ

ಮಂಗಳೂರು: ನಗರದ ಖಾಸಗಿ ಕಾಲೇಜಿನ ಹಿಂಭಾಗದಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ, ಇಲಾಖೆಯ ಉಪ ನಿರ್ದೇಶಕಿ ಅನಿತಾ ವಿ. ಮತ್ತೂರು ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. “ಬಾಡಿಗೆ ಗೋದಾಮಿನಲ್ಲಿ ಬಾಸುಮತಿ, ಸೋನಾ ಮಸೂರಿ, ಜೀರಾ ರೈಸ್ ಮತ್ತು ತೌಡು ಅಕ್ಕಿ ಸೇರಿದಂತೆ ವಿವಿಧ ಬ್ರಾಂಡ್‌ಗಳ ಅಕ್ಕಿ ಚೀಲಗಳಿದ್ದವು. ಇದರ ಜೊತೆಗೆ, ಯಾವುದೇ ಬ್ರಾಂಡಿಂಗ್ ಇಲ್ಲದ ಬಿಳಿ

ಅಕ್ರಮವಾಗಿ ಸಂಗ್ರಹವಾಗಿದ್ದ 500 ಕ್ವಿಂಟಾಲ್ ಅಕ್ಕಿ ವಶ Read More »

error: Content is protected !!
Scroll to Top