ಸುದ್ದಿ

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ

ಇಡೀ ಬಂಧನ ಪ್ರಕ್ರಿಯೆ ಮುಂಬಯಿ ಪೊಲೀಸರ ಕಟ್ಟುಕತೆ ಎಂದ ಆರೋಪಿಯ ತಂದೆ ಮುಂಬಯಿ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಾಗಿರುವ ದಾಳಿಯ ಬಗ್ಗೆಯೇ ಹಲವು ಅನುಮಾನಗಳು ಸೃಷ್ಟಿಯಾಗಿರುವ ಬೆನ್ನಿಗೆ ಪೊಲೀಸರು ಬಂಧಿಸಿರುವುದು ನಕಲಿ ಆರೋಪಿ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವಶದಲ್ಲಿರುವ ಆರೋಪಿ ಮೊಹಮ್ಮದ್ ಶರೀಫುಲ್‌ ಇಸ್ಲಾಂನ ತಂದೆ ಶರೀಫುಲ್ ಫಕೀರ್, ತನ್ನ ಮಗನನ್ನು ವಿನಾಕಾರಣ ಬಂಧಿಸಲಾಗಿದೆ. ಆತ ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯಲ್ಲ. ಇದು ವ್ಯವಸ್ಥಿತಿ ಷಡ್ಯಂತ್ರ ಎಂದು ಹೇಳಿದ್ದಾರೆ. ಮುಂಬಯಿ ಪೊಲೀಸರು […]

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ Read More »

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು?

ಹಲವಾರು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ-ಹೆಂಡತಿ ಹೊಸದಿಲ್ಲಿ: ಭಾರತದ ಮಾಜಿ ಡ್ಯಾಶಿಂಗ್‌ ಓಪನರ್‌ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸೆಹವಾಗ್‌ ಅಭಿಮಾನಿಗಳನ್ನು ವಿಚಲಿತಗೊಳಿಸಿದೆ. ಸೆಹವಾಗ್‌ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನ ಮುಕ್ತಾಯ ಹಂತದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಸೆಹ್ವಾಗ್ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ಮದುವೆಯಾದ ಸೆಹ್ವಾಗ್‌ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಲವಾರು

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು? Read More »

ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಕಲಾವಿದನಿಂದ ಹಲ್ಲೆ

ಗೆಳೆಯರಾಗಿದ್ದ ಎರಡು ಮೇಳಗಳ ಕಲಾವಿದರ ನಡುವೆ ಹಣಕಾಸಿನ ತಕರಾರು ಪಡುಬಿದ್ರಿ: ಹಣಕಾಸು ವಹಿವಾಟಿನ ತಕರಾರಿನ ಹಿನ್ನೆಲೆಯಲ್ಲಿ ಒಂದು ಮೇಳದ ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಯಕ್ಷಗಾನ ಕಲಾವಿದ ಬರ್ಬರವಾಗಿ ಹಲ್ಲೆ ಮಾಡಿದ ಸಂಬಂಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಸಸಿಹಿತ್ಲು ಮೇಳದ ಕಲಾವಿದ ಪಡುಬಿದ್ರಿಯ ನಿತಿನ್‌ ಕುಮಾರ್‌ ಮೇಲೆ ಪಾವಂಜೆ ಮೇಳದ ಕಲಾವಿದ ಸಚಿನ್‌ ಅಮೀನ್‌ ಉದ್ಯಾವರ, ಅವರ ತಂದೆ ಕುಶಾಲಣ್ಣ ಹಾಗೂ ಓರ್ವ ಫೈನಾನ್ಶಿಯರ್‌ ಸೇರಿಕೊಂಡು ಉದ್ಯಾವರದ ಮನೆಯೊಂದರಲ್ಲಿ ಜ.21ರಂದು ಕೂಡಿಹಾಕಿ

ಯಕ್ಷಗಾನ ಕಲಾವಿದನ ಮೇಲೆ ಇನ್ನೊಂದು ಮೇಳದ ಕಲಾವಿದನಿಂದ ಹಲ್ಲೆ Read More »

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ

ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾದ ಸೋಂಕು ಮಂಗಳೂರು: ದುಬೈಯಿಂದ ಬಂದಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ 40 ವರ್ಷದ ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ಮಾಡಿ ಮಂಕಿಪಾಕ್ಸ್ (MPox) ಪ್ರಕರಣ ದೃಢಪಡಿಸಿದೆ. ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಜನವರಿ 17ರಂದು ಊರಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ದದ್ದುಗಳ ಲಕ್ಷಣಗಳು ಕಂಡುಬಂದವು ಮತ್ತು ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ Read More »

ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುವನ್ನೂರು ಗ್ರಾಮದ ಪುಂಡಿಕಾಯಿಯಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ಪುಂಡಿಕಾಯಿ ನಿವಾಸಿ  ವೆಯರಿಂಗ್ ಕೆಲಸ ಮಾಡುತ್ತಿದ್ದ ಮೋಹನ್ (31)ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಮೋಹನ್ ಅವರು ಜ.20ರಂದು ರಾತ್ರಿ ಊಟ ಮಾಡಿ ಮಲಗಿದವರು ಜ.21ರ ಬೆಳಗ್ಗೆ ನಾಪತ್ತೆಯಾಗಿದ್ದರು. ವಿಷಯ ಅರಿತು ಹುಡುಕಾಡಿದಾಗ ಮೋಹನ್ ಅವರು ಮನೆಯ ಪಕ್ಕದ ಪದ್ಮನಾಭ ಭಟ್ ಎಂಬವರ ಜಾಗದ ಕಾಡು

ಮರದ ಕೊಂಬೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ Read More »

ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ 

ಬೆಂಗಳೂರು : ಪತ್ನಿ ಮನೆಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಭಾವಿಯ ಎನ್​ಜಿಎಫ್​ ಲೇಔಟ್​ನ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ  ಪತಿ ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ. ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್​ಜಿಎಫ್ ಲೇಔಟ್​ನಲ್ಲಿರುವ ಹೆಂಡತಿ ವಾಸವಿದ್ದ ಮನೆಗೆ  8 ಗಂಟೆಗೆ ಮಂಜುನಾಥ್ ಬಂದಿದ್ದ. ಇದಿಕೆ ಪ್ರತಿಕ್ರೀಯಿಸಿದ ಪತ್ನಿ ನಯನ ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು

ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ  Read More »

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ

ಕಳೆಂಜ: ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಎಂಬವರು ಗಾಯಗೊಂಡಿರುವ ಘಟನೆ ಕಳಂಜ ಗ್ರಾಮದ ಬಂಡೇರಿ ಸೇತುವೆ ಬಳಿ ನಡೆದಿದೆ. ಕಳೆಂಜ ಗ್ರಾಮದ ಗೋಶಾಲೆ ಮಾರ್ಗ ಸಮೀಪದ ಮನೆಯ ವಿಶ್ವನಾಥ ಕುಂಬಾರ ಎಂಬವರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದರಿಂದ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಸಂಜೆ ಫೋನ್ ನಲ್ಲಿ ಮಾತನಾಡಲೆಂದು ಕುಳಿತಿದ್ದಾಗ ಒಂಟಿ ಸಲಗವೊಂದು ಹಿಂಬದಿಯಿಂದ ಬಂದು ಸೊಂಡಿಲಿನಿಂದ ತಳ್ಳಿ ಹಾಕಿದೆ. ಈ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ಅವರಿಗೆ ಕಿವಿ ಸರಿಯಾಗಿ

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ Read More »

ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್‌ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್‌, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್‍ ಪುತ್ತೂರು  ಸಂಸ್ಥೆ

ಪುತ್ತೂರು : ವಾಹನಗಳಲ್ಲಿ ವಿಚಿತ್ರ  ರೀತಿಯ  ಸ್ಟಿಕ್ಕರ್,  ಪೋಸ್ಟರ್’ ಗಳನ್ನು  ಅಂಟಿಸಿ  ಪ್ರದರ್ಶಿಸುವುದರ  ವಿರುದ್ಧ ಕ್ರಮ  ಕೈಗೊಳ್ಳಲು  ಮುಂದಾದ  ಸಾರಿಗೆ  ಇಲಾಖೆ  ಅಧಿಕಾರಿಗಳೇ  ನಿಮಗಿದೋ  ನ್ಯೂಸ್  ಪುತ್ತೂರು ವತಿಯಿಂದ  ಹೃದ್ಯ  ಅಭಿನಂದನೆಗಳು. ‘Better late than never’  ಎಂಬಂತೆ  ತಡವಾಗಿಯಾದರೂ  ದಿಟ್ಟ  ನಿರ್ಧಾರ  ಕೈಗೊಂಡ  ನೀವು ಶ್ಲಾಘನಾರ್ಹರು.  ನಿಮ್ಮ  ಈ  ನಡೆಗೆ  ನ್ಯೂಸ್  ಪುತ್ತೂರು  ಸರ್ವತ್ರ  ಬೆಂಬಲ  ನೀಡುತ್ತದೆ. ಹಾಗೆಯೇ  ನಮ್ಮದೊಂದು  ಮನವಿ.   ಈ  ಕೆಳಗಿನ  ಅಂಶಗಳನ್ನೂ  ದಯವಿಟ್ಟು  ಪರಿಗಣಿಸುವಿರಾ? 1) ಇಲಾಖೆಯ  ನಿಯಮಾನುಸಾರ  ವಾಹನ  ಉತ್ಪಾದಕ

ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್‌ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್‌, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್‍ ಪುತ್ತೂರು  ಸಂಸ್ಥೆ Read More »

ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌

ಇದು ನಿರೀಕ್ಷಿತ ತನಿಖಾ ವರದಿ ಎಂದ ಸ್ನೇಹಮಯಿ ಕೃಷ್ಣ ಬೆಂಗಳೂರು: ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಯವರಿಗೆ ಕ್ಲೀನ್‌ಚಿಟ್‌ ನೀಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ. ಮುಡಾ ಆಯುಕ್ತರು, ರೆವಿನ್ಯೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ.

ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌ Read More »

ಬಾಲಿವುಡ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಗೆ ಜೈಲು

ವಿಚಾರಣೆಗೆ ಹಾಜರಾಗದಿರುವುದಕ್ಕೆ ಬಂಧನ ವಾರಂಟ್‌ ಜಾರಿ ಮುಂಬಯಿ: ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಅವರಿಗೆ ಮುಂಬಯಿ ನ್ಯಾಯಾಲಯವೊಂದು ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಮೂರು ತಿಂಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು ದಂಡ ವಿಧಿಸಿದೆ. ರಾಮ್‌ಗೋಪಾಲ್‌ ವರ್ಮ ಸೋಮವಾರವಷ್ಟೇ ಹೊಸಚಿತ್ರ ಸಿಂಡಿಕೇಟ್‌ನ ಘೋಷಣೆ ಮಾಡಿದ್ದರು. ಇದಾದ ಮರುದಿನವೇ ಕೋರ್ಟ್‌ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ. ಇಷ್ಟು ಮಾತ್ರವಲ್ಲದೆ ತೀರ್ಪಿನ ದಿನವೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಿದೆ. ಅಂಧೇರಿಯ ನ್ಯಾಯಾಲಯದಲ್ಲಿ

ಬಾಲಿವುಡ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಗೆ ಜೈಲು Read More »

error: Content is protected !!
Scroll to Top