ಸುದ್ದಿ

ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಆರು ತಿಂಗಳ ಸೆರೆವಾಸದ ಬಳಿಕ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ನಿನ್ನೆಯೇ ಬಿಡುಗಡೆಯಾಗಬೇಕಿದ್ದರೂ ಕಾನೂನಿನ ವಿಧಿವಿಧಾನಗಳು ಪೂರ್ಣಗೊಳ್ಳದ ಕಾರಣ ಒಂದು ದಿನ ತಡವಾಗಿ ಜೈಲಿನಿಂದ ಹೊರಬರಬೇಕಾಯಿತು. 6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್‌ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ ನ್ಯಾ. ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಜಾಮೀನು […]

ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ Read More »

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ?

ಮೂರು ದಿನಗಳಿಂದ ಕಾಣಿಸದ ಸ್ನೇಹಮಯಿ ಕೃಷ್ಣ; ಮೊಬೈಲ್‌ ಸ್ವಿಚ್‌ ಆಫ್‌ ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದು ರಾಜ್ಯಾದ್ಯಂತ ಸಂಚಲನ ಉಂಟಾಗಿದೆ. ಸ್ನೇಹಮಯಿ ಕೃಷ್ಣ ಅವರ ದೂರಿನಿಂದಾಗಿ ಮುಡಾದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿತ್ತು. ದಿನಕ್ಕೊಂದರಂತೆ ದಾಖಲೆಗಳನ್ನು ಬಿಡುಗಡೆ ಮಾಡಿ ಸ್ನೇಹಮಯಿ ಕೃಷ್ಣ ಬಲಿಷ್ಠ ಕಾಂಗ್ರೆಸ್‌ ಸರಕಾರದ ವಿರುದ್ಧ ಸಮರವನ್ನೇ ಸಾರಿದ್ದರು. ಆ ಬಳಿಕ

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ? Read More »

ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಹೊಸದಿಲ್ಲಿ: ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದಾರಿದೀಪವಾಗಿದ್ದ ತುಳಸಿ ಗೌಡ ಜೀವನ ನಮಗೆಲ್ಲ ಪ್ರೇರಣೆಯಾಗಲಿ ಎಂದು ಮೋದಿ ಸಂತಾಪ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಖ್ಯಾತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ನಿಧನದಿಂದ ತೀವ್ರ ದುಃಖವಾಗಿದೆ. ಪ್ರಕೃತಿಯನ್ನು ಪೋಷಿಸಲು, ಸಾವಿರಾರು ಸಸಿಗಳನ್ನು ನೆಡಲು ಮತ್ತು ನಮ್ಮ ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟರು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಅವರು ಇನ್ನು ಮುಂದೆಯೂ ನಮಗೆ ದಾರಿದೀಪವಾಗಿ

ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ Read More »

ಶಬರಿಮಲೆ ಸನ್ನಿಧಾನದಲ್ಲೇ ಅಯ್ಯಪ್ಪ ವ್ರತಧಾರಿ ಆತ್ಮಹತ್ಯೆ

ಶಬರಿಮಲೆ : ಅಯ್ಯಪ್ಪ ವ್ರತಧಾರಿಯೊಬ್ಬರು ಶಬರಿಮಲೆ ಸನ್ನಿಧಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಅಯ್ಯಪ್ಪ ಭಕ್ತನನ್ನು ಕರ್ನಾಟಕದ ಕನಕಪುರ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಸಾವಿರಾರು ಭಕ್ತರ ಮುಂದೆಯೇ ಮಾಳಿಗೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತುಪ್ಪದ ಅಭಿಷೇಕ ಕೌಂಟರ್‌ ಮಂಟಪದ ಮೇಲಿನಿಂದ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವೀಡಿಯೊ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿ ಈಗ ವೈರಲ್‌ ಆಗಿದೆ. ಶಬರಿಮಲೆಯಲ್ಲಿ ಎಲ್ಲರೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿರುವಾಗ ಕುಮಾರಸ್ವಾಮಿ ಆತ್ಮಹತ್ಯೆಗೆ

ಶಬರಿಮಲೆ ಸನ್ನಿಧಾನದಲ್ಲೇ ಅಯ್ಯಪ್ಪ ವ್ರತಧಾರಿ ಆತ್ಮಹತ್ಯೆ Read More »

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು ಮಂಡನೆ

ಹೊಸದಿಲ್ಲಿ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಉದ್ದೇಶ ಹೊಂದಿರುವ ಒಂದು ದೇಶ ಒಂದು ಚುನಾವಣೆ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸುವ ನಿರೀಕ್ಷೆಯಿದೆ. ನಂತರ ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡುವಂತೆ ಮೇಘವಾಲ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.

ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು ಮಂಡನೆ Read More »

ರೆಸಾರ್ಟ್‌ನೊಳಗೆ 12 ಭಾರತೀಯರು ಶವವಾಗಿ ಪತ್ತೆ

ಕಾರ್ಬನ್‌ ಮೊನೊಕ್ಸೈಡ್‌ ಅನಿಲ ಸೋರಿಕೆಯಿಂದ ಸಾವು ಸಂಭವಿಸಿದ ಶಂಕೆ ಜಾರ್ಜಿಯಾ: ಜಾರ್ಜಿಯಾದ ಗುಡೌರಿ ಪರ್ವತದ ರೆಸಾರ್ಟ್‌ನ ರೆಸ್ಟೋರೆಂಟ್‌ನಲ್ಲಿ 12 ಭಾರತೀಯ ಪ್ರಜೆಗಳು ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಬನ್ ಮೊನೊಕ್ಸೈಡ್ ವಿಷಾನಿಲದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಜಾರ್ಜಿಯಾ ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಮೃತರೆಲ್ಲ ಈ ರೆಸಾರ್ಟ್‌ನ ನೌಕರರು. ರಾತ್ರಿ ಕರೆಂಟ್‌ ಹೋದಾಗ ಕೋಣೆಯ ಮೂಲೆಯಲ್ಲಿದ್ದ ಜನರೇಟರ್‌ ಸ್ಟಾರ್ಟ್‌ ಮಾಡಿದ್ದು, ಇದರಿಂದ ಹೊರಸೂಸಿದ ಕಾರ್ಬನ್‌ ಮೊನೊಕ್ಸೈಡ್‌ ಅನಿಲ ಸೇವಿಸಿ ಅವರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ರೆಸಾರ್ಟ್‌ ಮಾಲಕನ ವಿರುದ್ಧ ನಿರುದ್ದೇಶದ

ರೆಸಾರ್ಟ್‌ನೊಳಗೆ 12 ಭಾರತೀಯರು ಶವವಾಗಿ ಪತ್ತೆ Read More »

ರಾತ್ರಿ 1 ಗಂಟೆಯ ತನಕ ನಡೆದ ಕಲಾಪ

ರಜೆ, ಅಧಿವೇಶನ ಮೊಟಕು ಹಿನ್ನೆಲೆಯಲ್ಲಿ ದೀರ್ಘಾವಧಿ ಕಲಾಪ ಬೆಳಗಾವಿ: ಈ ಸಲದ ಚಳಿಗಾಲದ ಅಧಿವೇಶನ ಸೋಮವಾರ ತಡರಾತ್ರಿಯವರೆಗೂ ನಡೆದು ವಿಶೇಷ ದಾಖಲೆಯೊಂದನ್ನು ಮಾಡಿತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನ ಸೋಮವಾರ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸುಮಾರು 15 ಗಂಟೆಗಳ ಕಾಲ, ಅಂದರೆ ಬೆಳಗ್ಗೆ 10 ಗಂಟೆಗೆ ಆರಂಭವಾಗಿ ರಾತ್ರಿ 12.55ರ ವರೆಗೂ ಸೂಚನಾ ಕಲಾಪ ನಡೆದಿದೆ. ಕಳೆದೊಂದು ದಶಕದಲ್ಲೇ ಇದು ವಿಶೇಷ ದಾಖಲೆಯ ಕಲಾಪವಾಗಿದೆ. ನಮಗೆ ಅವಕಾಶ ಕೊಡಿ, ಸಮಯವಾಯಿತು ಎಂದು ಕೆಲ ಶಾಸಕರು

ರಾತ್ರಿ 1 ಗಂಟೆಯ ತನಕ ನಡೆದ ಕಲಾಪ Read More »

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ

ಇರಲಿ ವಾರ್ಷಿಕೋತ್ಸವಗಳಿಗೊಂದು ಸಂಹಿತೆಯ ಚೌಕಟ್ಟು ಕಳೆದ ಹತ್ತಾರು ವರ್ಷಗಳಿಂದ ನೂರಾರು ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ನೋಡುತ್ತಾ ಬಂದಿರುವ ನನಗೆ ಇತ್ತೀಚೆಗೆ ಹೆಚ್ಚು ನಿರಾಸೆ ಕಾಡುತ್ತಿದೆ. ಕನ್ನಡದ ಸತ್ವವನ್ನು ಜಗತ್ತಿಗೆ ತೋರಿಸುವ ವಾರ್ಷಿಕೋತ್ಸವವನ್ನು ಮಾಡುವ ಶಾಲೆಗಳೂ ಇವೆ. ಅವರಿಗೆ ನಮ್ಮ ಅಭಿನಂದನೆ ಇರಲಿ. ವಾರ್ಷಿಕೋತ್ಸವ ಕಾರ್ಯಕ್ರಮಗಳ ಉದ್ದೇಶ ಏನು? ಈ ಮಕ್ಕಳ ಉತ್ಸವಗಳ ಉದ್ದೇಶ ಸಫಲ ಆಗ್ತಾ ಇದೆಯಾ? ಈ ಉಸಿರು ಕಟ್ಟುವ ಪ್ರೋಟೋಕಾಲ್ ಕಾರ್ಯಕ್ರಮಗಳಿಂದ ನಮ್ಮ ದೇವರಂತಹ ಮುಗ್ಧ ಮಕ್ಕಳ ನಿಜವಾದ ಪ್ರತಿಭೆ ಅರಳುತ್ತಿವೆಯಾ? ಯೋಚನೆ

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ Read More »

ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಗೆದ್ದು ಸಂಭ್ರಮಿಸಿದ ಹೆಮ್ಮೆಯ ದಿನ |  ಪಾಕಿಸ್ತಾನವು ಭಾರತದ ಜೊತೆ ಸೆಣಸಾಡಿದ  ಮಹತ್ವ, ಇತಿಹಾಸ ಹೀಗಿದೆ?

1971, ಡಿಸೆಂಬರ್ 16ರಂದು ಭಾರತ  ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಸೆಣಸಾಡಿ ಗೆಲುವು ಸಾಧಿಸಿ ವಿಜಯದ ಕಹಳೆ ಊದಿದೆ. ಅಂದಿನಿಂದ ಈ ದಿನವನ್ನು ಹೆಮ್ಮೆಯ ದಿನವಾಗಿ ಪರಿಗಣಿಸಿದ್ದು, ಇಡೀ ದೇಶವೇ ಈ ದಿನವನ್ನು ‘ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. 1999ರಲ್ಲಿ  ನಡೆದ ಭಾರತ- ಪಾಕಿಸ್ಥಾನ ಯುದ್ದದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವು  ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ.  ಪಾಕಿಸ್ತಾನದ ವಿರುದ್ಧದ ಗೆಲುವನ್ನು ನಮ್ಮ ದೇಶ ಮಹತ್ವದ ದಿನವೆಂದು  ಪರಿಗಣಿಸುತ್ತಾರೆ. ಅಂತೆಯೇ  ಡಿಸೆಂಬರ್ 16ರಂದು ಕೂಡ ಪಾಕಿಸ್ತಾನದ ವಿರುದ್ಧದ ಗೆಲುವನ್ನು ವಿಜಯ್ ದಿವಸ್

ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಗೆದ್ದು ಸಂಭ್ರಮಿಸಿದ ಹೆಮ್ಮೆಯ ದಿನ |  ಪಾಕಿಸ್ತಾನವು ಭಾರತದ ಜೊತೆ ಸೆಣಸಾಡಿದ  ಮಹತ್ವ, ಇತಿಹಾಸ ಹೀಗಿದೆ? Read More »

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಶಾಂತಿಗೋಡು ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ

ಪುತ್ತೂರು : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಶಾಂತಿಗೋಡು ಗ್ರಾಮದ ಹೊಸ ಮನೆ ಮೇದಪ್ಪ ಗೌಡರ ಮನೆಯಲ್ಲಿ  ಆರು ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ಡಿ.15 ರಂದು

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಶಾಂತಿಗೋಡು ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ Read More »

error: Content is protected !!
Scroll to Top