ಸುದ್ದಿ

ವೇದ, ಉಪನಿಷತ್‌ ಅಧ್ಯಯನ, ಸಾವಯವ ಕೃಷಿ… ದಿಢೀರ್‌ ನಿವೃತ್ತಿಯ ಮಾತನಾಡಿದ ಅಮಿತ್‌ ಶಾ

ರಾಜಕೀಯ ಚಾಣಕ್ಯನ ರಿಟೈರ್‌ಮೆಂಟ್‌ ಪ್ಲಾನ್‌ ಕೇಳಿ ದೇಶಾದ್ಯಂತ ಸಂಚಲನ ನವದೆಹಲಿ: ರಾಜಕಾರಣಿಗಳಿಗೆ ನಿವೃತ್ತಿಯಿಲ್ಲ ಎನ್ನುವುದು ಭಾರತದ ಮಟ್ಟಿಗೆ ಸತ್ಯವಾದ ಮಾತು. ಹಣ್ಣು ಹಣ್ಣು ಮುದುಕರಾಗಿ ಎದ್ದು ನಡೆಯಲು ಸಾಧ್ಯವಾಗದಿದ್ದರೂ ಅಧಿಕಾರಕ್ಕೆ ಅಂಟಿಕೂರುವವರು ನಮ್ಮ ದೇಶದ ರಾಜಕೀಯ ನಾಯಕರು. ಈ ಹಿನ್ನೆಲೆಯಲ್ಲಿ ಬಿಜೆಪಿ 75 ವರ್ಷ ದಾಟಿದವರಿಗೆ ನಿವೃತ್ತಿ ನೀಡುವ ಅಲಿಖಿತ ನಿಯಮವೊಂದನ್ನು ಪಾಲಿಸಿಕೊಂಡು ಬಂದಿದೆ. ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಎನ್ನುವುದು ಬೇರೆ ಮಾತು. ಪ್ರಧಾನಿ ನರೇಂದ್ರ ಮೋದಿಯವರೂ ಸದ್ಯದಲ್ಲೇ 75ರ ಹರೆಯಕ್ಕೆ ಪದಾರ್ಪಣೆ ಮಾಡಲಿದ್ದು, ಅವರು ನಿವೃತ್ತಿಯಾಗುತ್ತಾರೋ […]

ವೇದ, ಉಪನಿಷತ್‌ ಅಧ್ಯಯನ, ಸಾವಯವ ಕೃಷಿ… ದಿಢೀರ್‌ ನಿವೃತ್ತಿಯ ಮಾತನಾಡಿದ ಅಮಿತ್‌ ಶಾ Read More »

ಹೆಣ್ಣು ಮಕ್ಕಳನ್ನು ಶಾಲೆಯಲ್ಲೇ ವಿವಸ್ತ್ರಗೊಳಿಸಿದ ಮುಖ್ಯಶಿಕ್ಷಕ

ಹೆಡ್‌ಮೇಷ್ಟ್ರು ಸೇರಿ ಆರು ಮಂದಿ ವಿರುದ್ಧ ಪೋಕ್ಸೊ ಕೇಸ್‌ ಪುಣೆ : ಶಾಲೆಯ ಮುಖ್ಯಶಿಕ್ಷಕನೇ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ಶೌಚಾಲಯದಲ್ಲಿ ರಕ್ತದ ಕಲೆ ಕಂಡ ಹಿನ್ನೆಲೆಯಲ್ಲಿ ಮುಟ್ಟಾದವರು ಯಾರು ಎಂದು ತಿಳಿಯಲು ಮುಖ್ಯಶಿಕ್ಷಕ ಎಲ್ಲ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಂಗಳವಾರ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು.

ಹೆಣ್ಣು ಮಕ್ಕಳನ್ನು ಶಾಲೆಯಲ್ಲೇ ವಿವಸ್ತ್ರಗೊಳಿಸಿದ ಮುಖ್ಯಶಿಕ್ಷಕ Read More »

ಮನೋವ್ಯದ್ಯನಿಗೇ ಬ್ರೈನ್‌ವಾಶ್‌ ಮಾಡಿದ್ದ ಉಗ್ರ !

ತನಗೆ ಕೌನ್ಸೆಲಿಂಗ್‌ ಮಾಡುತ್ತಿದ್ದ ಮನೋವೈದ್ಯನನ್ನು ಉಗ್ರ ಕೃತ್ಯಕ್ಕೆ ಬಳಸಿಕೊಂಡ ಭಯೋತ್ಪಾದಕ ನಾಸಿರ್‌ ಬೆಂಗಳೂರು: ಪಾತಕ ಕೃತ್ಯಗಳನ್ನು ಎಸಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಮನಪರಿವರ್ತನೆ ಮಾಡಿ ಅವರು ಮತ್ತೆ ಅಪರಾಧ ಲೋಕದತ್ತ ಹೋಗಬಾರದು, ಉತ್ತಮ ನಾಗರಿಕರಾಗಿ ಬಾಳಬೇಕೆಂಬ ಉದ್ದೇಶದಿಂದ ಜೈಲಿಗೆ ಮನೋವೈದ್ಯರನ್ನು ನೇಮಿಸಲಾಗುತ್ತದೆ. ಇವರ ಮುಖ್ಯ ಧ್ಯೇಯವೇ ಕೈದಿಗಳ ಮನಸ್ಸನ್ನು ಪರಿವರ್ತಿಸಿ ಮನಸ್ಸಿನಲ್ಲಿ ಪ್ರಾಯಶ್ಚಿತ್ತ ಪ್ರಜ್ಞೆ ಮೂಡಿಸಿ ಬಿಡುಗಡೆಯಾಗಿ ಹೋದ ಬಳಿಕ ಮತ್ತೆ ಅಪರಾಧಗಳನ್ನು ಮಾಡದಂತೆ ತಡೆಯುವುದು. ಆದರೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಮಾತ್ರ ಉಲ್ಟಾ

ಮನೋವ್ಯದ್ಯನಿಗೇ ಬ್ರೈನ್‌ವಾಶ್‌ ಮಾಡಿದ್ದ ಉಗ್ರ ! Read More »

ಸುಳ್ಯ : ಗ್ರಾಪಂನ ಘನ ತ್ಯಾಜ್ಯ ಘಟಕ ಬೆಂಕಿಗಾಹುತಿ

ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಘಟಕ ಹೊತ್ತಿ ಉರಿದಿದೆ. ಬುಧವಾರ ಸಂಜೆ ಘಟನೆ ನಡೆದಿದೆ. ಘಟಕದಲ್ಲಿ ತ್ಯಾಜ್ಯ ಪೂರ್ತಿಯಾಗಿ ಬೇರ್ಪಡಿಸಿ ತುಂಬಿಡಲಾಗಿತ್ತು. ಬೆಂಕಿ ತಗುಲಿ ಈ ತ್ಯಾಜ್ಯ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ವಸ್ತುಗಳಿಗೆ ಸೇರಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಘನತ್ಯಾಜ್ಯ ಸಂಪೂರ್ಣ ಹೊತ್ತಿ ಉರಿದಿದೆ. ಘನತ್ಯಾಜ್ಯ ವಿಲೇವಾರಿ ಮಾಡುವ ನಾಲ್ಕು

ಸುಳ್ಯ : ಗ್ರಾಪಂನ ಘನ ತ್ಯಾಜ್ಯ ಘಟಕ ಬೆಂಕಿಗಾಹುತಿ Read More »

ಕಡಿದು ಬಿದ್ದ ವಿದ್ಯುತ್‌ ತಂತಿ ತುಳಿದು ವ್ಯಕ್ತಿ ಸಾವು

ಸುಳ್ಯ: ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ವಯರ್ ತುಳಿದು ವಿದ್ಯುತ್ ಆಘಾತದಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತಪಟ್ಟವರನ್ನು ಕಲ್ಲಪಣೆಯ ದಿವಾಕರ ಆಚಾರ್ಯ (45) ಎಂದು ಗುರುತಿಸಲಾಗಿದೆ. ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರನ್ನು ನೋಡದೆ ತುಳಿದಿದ್ದರು. ವಿದ್ಯುತ್‌ ಆಘಾತಕ್ಕೆ ಒಳಗಾದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಪೋಸ್ಟ್‌ಮಾರ್ಟಮ್ ನಡೆಸಿ ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.

ಕಡಿದು ಬಿದ್ದ ವಿದ್ಯುತ್‌ ತಂತಿ ತುಳಿದು ವ್ಯಕ್ತಿ ಸಾವು Read More »

ಶವಗಳ ಮೇಲೂ ಅತ್ಯಾಚಾರ : ಹಮಾಸ್‌ ಉಗ್ರರ ಭಯಾನಕ ಕ್ರೌರ್ಯ ಬಿಚ್ಚಿಟ್ಟ ವರದಿ

ಇಸ್ರೇಲ್‌ ಮಹಿಳೆಯರ ಮೇಲೆ ಲೈಂಗಿಕ ಹಿಂಸೆ ಎಸಗಿದ್ದ ಹಮಾಸ್‌ ಉಗ್ರರು ಟೆಲ್‌ಅವೀವ್‌ : ಹಮಾಸ್ ಉಗ್ರರು ತಮ್ಮ ಒತ್ತೆಸೆರೆಯಲ್ಲಿದ್ದ ಇಸ್ರೇಲ್‌ ಮಹಿಳೆಯರ ಮೇಲೆ ಎಸಗಿದ ಭೀಕರ ಕ್ರೌರ್ಯ ಈಗ ಬಯಲಾಗಿದೆ. ಹಮಾಸ್ ಉಗ್ರರು ಇಸ್ರೇಲಿ ಮಹಳೆಯರ ಮೃತದೇಹಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿಗುತ್ತಿದ್ದರು, ಖಾಸಗಿ ಭಾಗಗಳಿಗೆ ಗುಂಡು ಹಾರಿಸಿ ವಿಕೃತ ಖುಷಿ ಅನುಭವಿಸುತ್ತಿದ್ದರು ಎಂಬ ಭಯಾನಕ ವಿಚಾರವನ್ನು ಬದುಕಿ ಬಂದ ಕೆಲವರು ಹೇಳಿಕೊಂಡಿದ್ದಾರೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅಪ್ರಚೋದಿತ ದಾಳಿ ನಡೆಸಿದ ಬಳಿಕ

ಶವಗಳ ಮೇಲೂ ಅತ್ಯಾಚಾರ : ಹಮಾಸ್‌ ಉಗ್ರರ ಭಯಾನಕ ಕ್ರೌರ್ಯ ಬಿಚ್ಚಿಟ್ಟ ವರದಿ Read More »

ಸೇತುವೆ ಕುಸಿದು ನದಿಗೆ ಬಿದ್ದ ನಾಲ್ಕು ವಾಹನಗಳು : ಮೂರು ಮಂದಿ ಸಾವು

ಅಂಚಿನ ತನಕ ಬಂದು ಪವಾಡಸದೃಶವಾಗಿ ಪಾರಾದ ಬೃಹತ್‌ ಟ್ಯಾಂಕರ್‌ ಅಹಮದಾಬಾದ್: ಗುಜರಾತ್‌ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಹಳೇ ಸೇತುವೆ ಕುಸಿದ ಪರಿಣಾಮ ಅದರ ಮೇಲೆ ಸಂಚರಿಸುತ್ತಿದ್ದ ನಾಲ್ಕು ವಾಹನಗಳು ನದಿಗೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 7.45ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು

ಸೇತುವೆ ಕುಸಿದು ನದಿಗೆ ಬಿದ್ದ ನಾಲ್ಕು ವಾಹನಗಳು : ಮೂರು ಮಂದಿ ಸಾವು Read More »

ಬೆಂಗಳೂರಿನಲ್ಲಿ ವಿದ್ವಂಸಕ್ಕೆ ಕೃತ್ಯಕ್ಕೆ ಸಂಚು ಮಾಡಿದ್ದ ಉಗ್ರರು

ಜೈಲಿನಲ್ಲಿದ್ದುಕೊಂಡೆ ಉಗ್ರರ ಸ್ಲೀಪರ್‌ ಸೆಲ್‌ ಕಟ್ಟಿದ್ದ ನಾಸೀರ್‌ ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿನ್ನೆ ರಾತ್ರಿ ಬೆಂಗಳೂರು ಮತ್ತು ಕೋಲಾರದ ಐದು ಕಡೆಗಳಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ ಬಳಿಕ ಬೆಂಗಳೂರಿನಲ್ಲಿ ಉಗ್ರಜಾಲ ವ್ಯವಸ್ಥಿತವಾಗಿ ಬೆಳೆಯುತ್ತಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮಂಗಳವಾರ ರಾತ್ರಿ ಬೆಂಗಳೂರು, ಕೋಲಾರದಲ್ಲಿ ದಿಢೀರ್ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ

ಬೆಂಗಳೂರಿನಲ್ಲಿ ವಿದ್ವಂಸಕ್ಕೆ ಕೃತ್ಯಕ್ಕೆ ಸಂಚು ಮಾಡಿದ್ದ ಉಗ್ರರು Read More »

ವಂಚನೆ : ನಟಿ ಅಲಿಯಾ ಭಟ್‌ ಮಾಜಿ ಸಹಾಯಕಿ ಬೆಂಗಳೂರಿನಲ್ಲಿ ಸೆರೆ

ನಟಿಯ ಸಿನಿಮಾ ನಿರ್ಮಾಣ ಸಂಸ್ಥೆಗೆ 77 ಲ.ರೂ. ವಂಚಿಸಿದ್ದ ವೇದಿಕಾ ಪ್ರಕಾಶ್‌ ಶೆಟ್ಟಿ ಮುಂಬೈ: ಸಿನಿಮಾ ನಿರ್ಮಾಣ ಸಂಸ್ಥೆಗೆ 77 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಮಾಜಿ ಆಪ್ತ ಸಹಾಯಕಿ ವೇದಿಕಾ ಪ್ರಕಾಶ್‌ ಶೆಟ್ಟಿ (32) ಎಂಬಾಕೆಯನ್ನು ಮುಂಬೈಯ ಜುಹು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಭಟ್‌ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ ಖಾತೆ ಹಾಗೂ ನಟಿಯ ಖಾತೆಯಿಂದ ಸುಮಾರು 76.9 ಲಕ್ಷ ರೂ. ಹಣ

ವಂಚನೆ : ನಟಿ ಅಲಿಯಾ ಭಟ್‌ ಮಾಜಿ ಸಹಾಯಕಿ ಬೆಂಗಳೂರಿನಲ್ಲಿ ಸೆರೆ Read More »

ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೂ ಸಿಬಿಎಸ್‌ಇ ಮಾದರಿ ಪರೀಕ್ಷೆ

ಪರೀಕ್ಷಾ ಪದ್ಧತಿಯಲ್ಲಿ ಸಮಗ್ರ ಬದಲಾವಣೆಗೆ ಸಮಿತಿ ಶಿಫಾರಸು ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೂ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲೇ ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಸುವ ಪ್ರಸ್ತಾವವೊಂದನ್ನು ಸರ್ಕಾರದ ಮುಂದಿಡಲಾಗಿದೆ. ಸಿಬಿಎಸ್‌ಇ ಪಠ್ಯಕ್ರಮದ ಪ್ರಕಾರ ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗಲಿದ್ದಾರೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೂ ಸಿಬಿಎಸ್‌ಇ ಮಾದರಿ ಪರೀಕ್ಷೆ Read More »

error: Content is protected !!
Scroll to Top