ಸುದ್ದಿ

ಯಕ್ಷನಮನ  ಆಜೇರು ಪುಣಚ ಇದರ 25 ನೇ ವರ್ಷದ ಯಕ್ಷ ಸಂಭ್ರಮ

ಪುಣಚ : ಯಕ್ಷನಮನ  ಆಜೇರು ಪುಣಚ. ಇದರ 25 ನೇ ವರ್ಷದ ಯಕ್ಷ ಸಂಭ್ರಮ 25  ಕಾರ್ಯಕ್ರಮವನ್ನು ಶ್ರೀ ದುರ್ಗಾನಿಲಯದಲ್ಲಿ ನಡೆಯಿತು. ಶ್ರೀ ಈಶ್ವರ ನಾಯಕ್  ಇವರ ಮನೆಯಲ್ಲಿ  ಶ್ರೀ ಸತ್ಯ ನಾರಾಯಣ ಪೂಜೆಯ ಪ್ರಯುಕ್ತ  ಯಕ್ಷ ಸಂಭ್ರಮ 25  ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಮದ್ದಲೆ ವಾದಕರಾದ ನೇರೋಳು  ಗಣಪತಿ  ನಾಯಕ್,  ಕಾವ್ಯಶ್ರಿ ಗುರುಪ್ರಸಾದ್‍ ಆಜೇರು ಮತ್ತು  ರಾಮದಾಸ್ ಶೆಟ್ಟಿ  ದೇವಸ್ಯ ಇವರಿಗೆ ನಾಟ್ಯಚಾರ್ಯ ದಿ.ಮುದುಕುಂಜ ವಾಸುದೇವ ಪ್ರಭು ಇವರ ಸಂಸ್ಮರಣ ಅಂಗವಾಗಿ ಯಕ್ಷ ಸಂಜೀವ ಪ್ರಶಸ್ತಿಯನ್ನು […]

ಯಕ್ಷನಮನ  ಆಜೇರು ಪುಣಚ ಇದರ 25 ನೇ ವರ್ಷದ ಯಕ್ಷ ಸಂಭ್ರಮ Read More »

ರಿಕ್ಕಿ ರೈ ಮೇಲೆ ಫೈರಿಂಗ್‌ : ಮಲತಾಯಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ ರಿಕ್ಕಿ ರೈ ರಾಮನಗರ : ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯ ಅವರ ಮನೆ ಬಳಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಮನಗರ ತಾಲೂಕಿನ ಬಿಡದಿ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಘಟನೆ ವೇಳೆ ಚಾಲಕ ಬಸವರಾಜ್​​ ಕಾರು ಚಾಲನೆ

ರಿಕ್ಕಿ ರೈ ಮೇಲೆ ಫೈರಿಂಗ್‌ : ಮಲತಾಯಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬ ಆಚರಣೆ ಘಟಕದ ವತಿಯಿಂದ ಏ.17 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಅತಿಥಿಗಳು ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಗೈದರು.  ವಿದ್ಯಾರ್ಥಿಗಳು ಅಂಬೇಡ್ಕರ ಹಾಡುಗಳನ್ನು ಗೀತ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಅತಿಥಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ವಾತಿ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ಮುಖಂಡನ ಭೀಕರ ಹತ್ಯೆ

ಅಪಹರಿಸಿ ಮನಬಂದಂತೆ ಥಳಿಸಿ ಕೊಂದು ಹಾಕಿದ ದುಷ್ಕರ್ಮಿಗಳು ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ನಾಯಕನನ್ನು ಮತಾಂಧರು ಭೀಕರವಾಗಿ ಸಾಯಿಸಿದ್ದಾರೆ. ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್‌ನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದ ಭಾಬೇಶ್‌ ಚಂದ್ರ ಅವರನ್ನು ನಿನ್ನೆ ಭೀಕರವಾಗಿ ಕೊಲೆ ಮಾಡಲಾಗಿದೆ. ಭಾಬೇಶ್‌ ಚಂದ್ರ ಅವರನ್ನು ದಿನಾಜ್‌ಪುರದ ಬಳಿ ಅಪಹರಿಸಿ, ಮನಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಭಾಬೇಶ್‌ ಚಂದ್ರ ಅವರನ್ನು ಅಪಹರಣ ಮಾಡಿ ಬಿರಾಲ್‌ನಿಂದ ದಿನಾಜ್‌ಪುರ್‌ ಮಾರ್ಗವಾಗಿ ನರಾಬರಿ

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ಮುಖಂಡನ ಭೀಕರ ಹತ್ಯೆ Read More »

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆಯಿತಾ ರಿಕ್ಕಿ ರೈ ಮೇಲೆ ಫೈರಿಂಗ್‌?

ಮಂಗಳೂರಿನ ವ್ಯಕ್ತಿಯೊಬ್ಬರ ಮೇಲೂ ಇದೆ ಅನುಮಾನದ ನೋಟ ರಾಮನಗರ : ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಈ ದಾಳಿಯಲ್ಲಿ ರಿಕ್ಕಿ ರೈ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಕ್ಕಿ ರೈ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬೆನ್ನಿಗೆ ರಿಕ್ಕಿ ರೈ ಮೇಲೆ ದಾಳಿಯಾಗಲು ಕಾರಣ ಏನು ಎನ್ನುವ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆಯಿತಾ ರಿಕ್ಕಿ ರೈ ಮೇಲೆ ಫೈರಿಂಗ್‌? Read More »

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ನಾಲ್ವರು ಸಾವು

ನವದೆಹಲಿ: ದೆಹಲಿಯ ಮುಸ್ತಫಾಬಾದ್‌ ಪ್ರದೇಶದಲ್ಲಿ ಇಂದು ನಸುಕಿನ ಜಾವ 4 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ 18 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಶಾನ್ಯ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಚಾಂದಿನಿ, ದಾನಿಶ್, ರೇಷ್ಮಾ ಮತ್ತು ನವೀದ್ ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿದಾಗ ಸುಮಾರು 24 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಅವರಲ್ಲಿ 18 ಮಂದಿಯನ್ನ

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ನಾಲ್ವರು ಸಾವು Read More »

ಬ್ರಾಹ್ಮಣ ಸಮುದಾಯದವರ ಕ್ಷಮೆ ಕೇಳಿದ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌

ಫುಲೆ ಚಿತ್ರ ವಿವಾದ ಹಿನ್ನೆಲೆಯಲ್ಲಿ ಬ್ರಾಹ್ಮಣರನ್ನು ಹೀನ ಮಾತಿನಿಂದ ನೋಯಿಸಿದ್ದ ನಿರ್ದೇಶಕ ಮುಂಬೈ: ಸಾವಿತ್ರಿಭಾಯಿ ಪುಲೆ ಜೀವನಾಧಾರಿತ ಸಿನಿಮಾವನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಕೊನೆಗೆ ಕ್ಷಮೆ ಯಾಚಿಸಿ ಈ ವಿವಾದವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಿದ್ದಾರೆ.ಸಾವಿತ್ರಿಬಾಯಿ ಪುಲೆ ಜೀವಾಧಾರಿತ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿ ಯು ಸರ್ಟಿಫಿಕೇಟ್ ನೀಡಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಪ್ರಮುಖವಾಗಿ ಈ

ಬ್ರಾಹ್ಮಣ ಸಮುದಾಯದವರ ಕ್ಷಮೆ ಕೇಳಿದ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ Read More »

ಮುರಿದು ಬಿದ್ದ ಬಪ್ಪನಾಡು ದೇವಿಯ ಬ್ರಹ್ಮರಥ

ವಾರ್ಷಿಕ ಜಾತ್ರೆ ವೇಳೆ ಸಂಭವಿಸಿದ ದುರ್ಘಟನೆ ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ವೇಳೆ ರಥ ಮುರಿದು ಬಿದ್ದ ದುರ್ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ವರ್ಷಾವಧಿ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಭಾಗ ಮುರಿದು ಬಿದ್ದಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಭಕ್ತರು ಇದ್ದರು. ಅರ್ಚಕರು ರಥದಲ್ಲೇ ಇದ್ದರು. ಆದರೆ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ.

ಮುರಿದು ಬಿದ್ದ ಬಪ್ಪನಾಡು ದೇವಿಯ ಬ್ರಹ್ಮರಥ Read More »

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್‌

ರಾಮನಗರ: ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿರುವ ಘಟನೆ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸದ ಮುಂಭಾಗದ ಕಾಂಪೌಂಡ್ ಬಳಿ ರಾತ್ರಿ 12.50ರ ಸುಮಾರಿಗೆ 2 ಸುತ್ತಿನ ಗುಂಡಿನ ದಾಳಿ ನಡೆದಿದೆ. ರಿಕ್ಕಿ ರೈ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿದೆ. ರಿಕ್ಕಿ ರೈ, ಮೂಗು, ಕೈಗೆ ಗುಂಡು ತಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್‌ Read More »

ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕ ಉದ್ಘಾಟನೆ

ಪುತ್ತೂರು: ನಗರಸಭೆ ಬೆಂಗಳೂರು ಸಾಹಸ ಸರಕಾರೇತರ ಸಂಸ್ಥೆಯ ಸಹಯೋಗದೊಂದಿಗೆ  ಎಚ್‍ ಡಿಬಿ ಫೈನಾನ್ಸಿಯಲ್ ಸರ್ವೀಸಸ್ ನ ಆರ್ಥಿಕ ನೆರವಿನ ಮೂಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಸ್ಥಾಪಿಸಲಾಯಿತು. ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಮಾಜಿ ಶಾಸಕ ಸಂಜೀವ ಮಟಂದೂರು ಚಾಲನೆ ನೀಡಿ, ಸ್ವಚ್ಛತೆಗೆ ಪುತ್ತೂರು ನಗರಸಭೆ ಸಹಕಾರ ನೀಡುತ್ತಿರುವ ಬಗ್ಗೆ ಕೃತಜ್ಞತೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ನಗರಸಭೆ ಅಧಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆ, ಸ್ಥಾಯಿ ಸಮಿತಿಯ ಅಧ್ಯಕ್ಷ

ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕ ಉದ್ಘಾಟನೆ Read More »

error: Content is protected !!
Scroll to Top