ಸುದ್ದಿ

ಬಂಟ್ವಾಳ: ಗಿಫ್ಟ್‌ ಪಾರ್ಸೆಲ್‌ ನಂಬಿ 2.35 ಲ.ರೂ. ಕಳೆದುಕೊಂಡ ಮಹಿಳೆ

ಬಂಟ್ವಾಳ : ನಿಮಗೆ ಗಿಫ್ಟ್‌ ಪಾರ್ಸೆಲ್‌ ಇದೆ ಎಂದು ನಂಬಿಸಿ ಬಂಟ್ವಾಳದ ಮಹಿಳೆಯೊಬ್ಬರಿಗೆ ಸೈಬರ್‌ ಚೋರರು 2.35 ಲ.ರೂ. ವಂಚಿಸಿದ ಕುರಿತು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳದ ಭಾರತಿ ಕೆ. ಎಂಬ ಮಹಿಳೆಗೆ ಕಳೆದ ವರ್ಷ ಡಿ.3ರಂದು ದೆಹಲಿಯ ಡಿಎಚ್‌ಎಲ್‌ ಕೊರಿಯರ್‌ ಸಂಸ್ಥೆಯಿಂದ ಎಂದು ಹೇಳಿಕೊಂಡು ವಂಚಕರು ಕರೆ ಮಾಡಿದ್ದಾರೆ. ಚಿನ್ನ, ಐಫೋನ್‌ ಮತ್ತು 49 ಲ.ರೂ. ಮೌಲ್ಯದ ಕರೆನ್ಸಿ ಪಾರ್ಸೆಲ್‌ ಇದೆ. ಅದನ್ನು ಬಿಡಿಸಿಕೊಳ್ಳಬೇಕಾದರೆ ಮುಂಗಡವಾಗಿ ತೆರಿಗೆ ಪಾವತಿಸಬೇಕೆಂದು ಎಂದು ಮಹಿಳೆಯನ್ನು ನಂಬಿಸಿದ್ದಾರೆ. […]

ಬಂಟ್ವಾಳ: ಗಿಫ್ಟ್‌ ಪಾರ್ಸೆಲ್‌ ನಂಬಿ 2.35 ಲ.ರೂ. ಕಳೆದುಕೊಂಡ ಮಹಿಳೆ Read More »

ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ ಯುವಕನ ಹತ್ಯೆ

ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಹಾಕಿ ಶರಣಾದ ಆರೋಪಿ ಬೆಂಗಳೂರು: ಕೊಪ್ಪಳದ ಬಹದ್ದೂರ ಬಂಡಿ ಎಂಬಲ್ಲಿ ಭಾನುವಾರ ರಾತ್ರಿ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಇದಕ್ಕೆ ಆತ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು ಕಾರಣ ಎನ್ನಲಾಗಿದೆ. ಗವಿಸಿದ್ದಪ್ಪ ನಿಂಗಜ್ಜ ನಾಯಕ್ (30) ಕೊಲೆಯಾದ ಯುವಕ. ಸಾದಿಕ್ ಕೋಲ್ಕಾರ್​ ಎಂಬ ಯುವಕ ಗವಿಸಿದ್ದಪ್ಪ ನಾಯಕ್​​ನನ್ನು ಕೊಲೆ ಮಾಡಿದ್ದಾನೆ. ಅವನ ಜೊತೆಗೆ ಇನ್ನೂ ಮೂವರಿದ್ದರು ಎನ್ನಲಾಗಿದೆ. ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ

ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ ಯುವಕನ ಹತ್ಯೆ Read More »

ಧರ್ಮಸ್ಥಳ ಪ್ರಕರಣ : ಕಳೇಬರಗಳ ಪತ್ತೆಗೆ ಜಿಪಿಆರ್‌ ಬಳಸಲು ಒತ್ತಾಯ

ಭೂಮಿಯಡಿಯಲ್ಲಿರುವ ವಸ್ತುಗಳನ್ನು ನಿಖರವಾಗಿ ಗುರುತಿಸುವ ಅತ್ಯಾಧುನಿಕ ರೇಡಾರ್‌ ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆ ಕಾರ್ಯಾಚರಣೆ ಮುಂದುವರಿಯುತ್ತಿದೆ. ಆದರೆ ಇಷ್ಟರತನಕ ನಿರ್ಣಾಯಕ ಎನ್ನಬಹುದಾದ ಯಾವುದೇ ಸಾಕ್ಷಿಗಳು ಸಿಗದಿರುವ ಹಿನ್ನೆಲೆಯಲ್ಲಿ ಗ್ರೌಂಡ್‌ ಪೆನೆಟ್ರೇಟಿಂಗ್‌ ರೇಡಾರ್‌ (ಜಿಪಿಆರ್) ಬಳಸಿ ಹೂತ ಹೆಣಗಳ ಶೋಧ ಕಾರ್ಯ ನಡೆಸಬೇಕೆಂಬ ಒತ್ತಾಯ ಬಲವಾಗುತ್ತಿದೆ. ಜಿಪಿಆರ್ ಬಳಸುವಂತೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಎಂಬವರ ತಾಯಿ ಸುಜಾತಾ

ಧರ್ಮಸ್ಥಳ ಪ್ರಕರಣ : ಕಳೇಬರಗಳ ಪತ್ತೆಗೆ ಜಿಪಿಆರ್‌ ಬಳಸಲು ಒತ್ತಾಯ Read More »

ಐದನೇ ಟೆಸ್ಟ್‌ : ಸೋಲಿನತ್ತ ಮುಖ ಮಾಡಿದ ಭಾರತ

ಗೆಲ್ಲಲು ಇಂಗ್ಲೆಂಡಿಗೆ 35 ರನ್‌, ಭಾರತಕ್ಕೆ 4 ವಿಕೆಟ್‌ ಬೇಕು ಓವಲ್: ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ನಿರ್ಣಾಯಕ ದಿನವಾದ 4ನೇ ದಿನ ಭಾರತ ಸೋಲಿನತ್ತ ಮುಖ ಮಾಡಿದೆ. ಇಂಗ್ಲೆಂಡ್‌ಗೆ ಗೆಲುವು ಸಾಧಿಸಲು 35 ರನ್ ಅಗತ್ಯವಿದ್ದರೆ, ಭಾರತದ ಗೆಲುವು 4 ವಿಕೆಟ್ ದೂರದಲ್ಲಿದೆ. ಇನ್ನು ಒಂದಿಡೀ ದಿನದ ಆಟ ಉಳಿದಿದ್ದು, ಪವಾಡವೇನಾದರೂ ಸಂಭವಿಸಿದರೆ ಮಾತ್ರ ಭಾರತ ಗೆಲ್ಲಬಹುದು ಎಂಬ ಸ್ಥಿತಿಯಿದೆ. ಭಾರತದ 396 ರನ್ ಗುರಿ ಬೆನ್ನಟ್ಟಿದ

ಐದನೇ ಟೆಸ್ಟ್‌ : ಸೋಲಿನತ್ತ ಮುಖ ಮಾಡಿದ ಭಾರತ Read More »

ಪುತ್ತೂರು : ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಪುತ್ತೂರು: ಪರ್ಲಡ್ಕ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ನಿವಾಸಿ ಸಯ್ಯದ್ ಆಲಂ ಎಂಬವರ ಪತ್ನಿ ಅಫ್ಸಾ (54) ಮೃತಪಟ್ಟ ಮಹಿಳೆ. ಶುಕ್ರವಾರ ರಾತ್ರಿ ಅಸ್ಲಾಂ ದಂಪತಿ ಪೇಟೆಯ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅವರ ಸ್ಕೂಟರ್ ಮತ್ತು ಮುಂಭಾಗದಿಂದ ಆಗಮಿಸುತ್ತಿದ್ದ ಇನ್ನೊಂದು ಸ್ಕೂಟರ್ ಪರ್ಲಡ್ಕ ಜಂಕ್ಷನ್‌ನಲ್ಲಿ ಪರಸ್ಪರ ಢಿಕ್ಕಿಯಾಗಿತ್ತು. ಢಿಕ್ಕಿಯ

ಪುತ್ತೂರು : ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು Read More »

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಈ ಬಾರಿ ಸಂಘದ ಸದಸ್ಯರಿಗೆ ಶೇ. 15 ಡಿಬಿಡೆಂಡ್ ಘೋಷಣೆ  ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ ಧುರೀಣರ ದೂರದೃಷ್ಟಿಯಿಂದ ಪುತ್ತೂರಿನಲ್ಲಿ ಇಂದು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿವೆ. ಈ ಬಾರಿ ಸಂಘದ ಸದಸ್ಯರಿಗೆ ಶೇ. 15 ಡಿಬಿಡೆಂಡ್ ಘೋಷಣೆ ಮಾಡಿದರು. ಡಿ.ವಿ ಸದಾನಂದ ಗೌಡ

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ Read More »

ಕಾಶ್ಮೀರದ ಕಾಡಿನಲ್ಲಿ ಉಗ್ರರ ನಾಮಾವಶೇಷಕ್ಕೆ ನಡೆಯುತ್ತಿದೆ ಅತಿ ಭೀಕರ ಆಪರೇಷನ್‌ ಅಖಾಲ್‌

ಇಷ್ಟರ ತನಕ ಆರು ಭಯೋತ್ಪಾದಕರು ಫಿನಿಷ್‌ – ಓರ್ವ ಯೋಧನಿಗೆ ತೀವ್ರ ಗಾಯ ಶ್ರೀನಗರ: ಉಗ್ರರ ವಿರುದ್ಧ ಗಡಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ಕಾರ್ಯಾಚರಣೆ ಆಪರೇಷನ್‌ ಅಖಾಲ್‌ ಮೂರನೇ ದಿನಕ್ಕೆ ಪ್ರವೇಶಿಸಿದ್ದು, ಮೂವರು ಉಗ್ರರನ್ನು ಭದ್ರತಾ ಪಡೆ ಸದೆ ಬಡಿದಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ. ನಿನ್ನೆ ಮೂವರು ಉಗ್ರರನ್ನು ಸೇನೆ ಸಾಯಿಸಿತ್ತು. ಇದರೊಂದಿಗೆ ಆಪರೇಷನ್‌ ಅಖಾಲ್‌ನಲ್ಲಿ ಆರು ಉಗ್ರರನ್ನು ಮುಗಿಸಿದಂತಾಗಿದೆ. ಕಾಶ್ಮೀರದ ದಕ್ಷಿಣಕ್ಕಿರುವ ಕುಲ್‌ಗಾಂವ್‌ ಜಿಲ್ಲೆಯ ಅಖಾಲ್‌ ಕಾಡಿನಲ್ಲಿ ಕಳೆದ ಮೂರು ದಿನಗಳಿಂದ ಉಗ್ರರನ್ನು ಮುಗಿಸುವ

ಕಾಶ್ಮೀರದ ಕಾಡಿನಲ್ಲಿ ಉಗ್ರರ ನಾಮಾವಶೇಷಕ್ಕೆ ನಡೆಯುತ್ತಿದೆ ಅತಿ ಭೀಕರ ಆಪರೇಷನ್‌ ಅಖಾಲ್‌ Read More »

ಖ್ಯಾತ ಹಾಸ್ಯನಟ ಮದನ್‌ ಬಾಬು ನಿಧನ

ಕಮಲಹಾಸನ್‌, ರಜನಿಕಾಂತ್‌ರಂಥ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದ ಕಲಾವಿದ ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ಮದನ್ ಬಾಬ್ (71) ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಮದನ್‌ ಬಾಬ್‌, ಕಮಲಹಾಸನ್, ರಜನಿಕಾಂತ್, ಅಜಿತ್ ಕುಮಾರ್‌, ಸೂರ್ಯ ಮತ್ತು ವಿಜಯ್ ಅವರಂತಹ ಸ್ಟಾರ್‌ ನಟರೊಂದಿಗೆ ಅಭಿನಯಿಸಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ರಂಜಿಸಿದ್ದರು. ಸುದೀರ್ಘ ವೃತ್ತಿಜೀವನದಲ್ಲಿ, ಅವರು 150ಕ್ಕೂ ಹೆಚ್ಚು

ಖ್ಯಾತ ಹಾಸ್ಯನಟ ಮದನ್‌ ಬಾಬು ನಿಧನ Read More »

ಮುಖ್ಯ ಶಿಕ್ಷಕನನ್ನು ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಪಾತಕಿಗಳು ಸೆರೆ

13 ವರ್ಷಗಳಿಂದ ಇದ್ದ ಮುಖ್ಯ ಶಿಕ್ಷಕರ ವಿರುದ್ಧ ಖತರ್‌ನಾಕ್‌ ಐಡಿಯಾ ಮಾಡಿದ್ದ ಆರೋಪಿಗಳು ಬೆಂಗಳೂರು: ಹಳ್ಳಿಯ ಶಾಲೆಯ ಮುಖ್ಯ ಶಿಕ್ಷಕನನ್ನು ಅಲ್ಲಿಂದ ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಮೂವರು ಪಾತಕಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳಿರುವ ಶಾಲೆಯ ಕುಡಿಯುವ ನೀರಿನ ಟಾಂಕಿಗೆ ವಿಷ ಬೆರೆಸಿದ ಘಟನೆ ರಾಜ್ಯಾದ್ಯಾಂತ ಸುದ್ದಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಪರಾಧವನ್ನು ಭಯೋತ್ಪಾದನೆಗೆ ಸಮವಾದ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿ ಆರೋಪಿಗಳನ್ನು ಕೂಡಲೇ ಬಂಧಿಸಲು ಸೂಚಿಸಿದ್ದರು. ಮುಖ್ಯಶಿಕ್ಷಕ

ಮುಖ್ಯ ಶಿಕ್ಷಕನನ್ನು ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಪಾತಕಿಗಳು ಸೆರೆ Read More »

ಧರ್ಮಸ್ಥಳ ಪ್ರಕರಣಕ್ಕೆ ಇನ್ನೋರ್ವ ದೂರುದಾರ ಎಂಟ್ರಿ

ಯುವತಿಯ ಶವ ಹೂತು ಹಾಕಿದ್ದನ್ನು ನೋಡಿದ್ದೇನೆ ಎಂದ ಸ್ಥಳೀಯ ಹೋರಾಟಗಾರ ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಮೃತದೇಹಗಳನ್ನು ಹೂತು ಹಾಕಿರುವ ಘಟನೆಗೆ ತನಿಖೆ ಮುಂದುವರಿದಿರುವಂತೆ ಇನ್ನೋರ್ವ ವ್ಯಕ್ತಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರಾದ ಸಾಮಾಜಿಕ ಹೋರಾಟಗಾರ ಜಯಂತ್ ಟಿ ಎಂಬವರು ತಾನು ನೋಡಿದ್ದೇನೆ ಎಂದು ಹೇಳಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಸ್ಥಳೀಯ ನಿವಾಸಿ ಜಯಂತ್ ಟಿ. ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಶನಿವಾರ ಹಾಜರಾಗಿ, ದಶಕದ ಹಿಂದೆ ನಡೆದ ಅನುಮಾನಾಸ್ಪದ

ಧರ್ಮಸ್ಥಳ ಪ್ರಕರಣಕ್ಕೆ ಇನ್ನೋರ್ವ ದೂರುದಾರ ಎಂಟ್ರಿ Read More »

error: Content is protected !!
Scroll to Top