ಸುದ್ದಿ

ಪವಿತ್ರ ಸ್ನಾನ ರದ್ದಾಗಿಲ್ಲ : ಯೋಗಿ ಆದಿತ್ಯನಾಥ್‌ ಸ್ಪಷ್ಟನೆ

ಎಲ್ಲ ಘಾಟ್‌ಗಳಲ್ಲಿ ಮಾಮೂಲಿಯಂತೆ ಜನರು ಮಿಂದೇಳುತ್ತಿದ್ದಾರೆ; ವದಂತಿ ನಂಬಬೇಡಿ ಎಂದು ಮನವಿ ಪ್ರಯಾಗ್‌ರಾಜ್‌: ಕಾಲ್ತುಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಇಂದಿನ ಪವಿತ್ರ ಸ್ನಾನವನ್ನು ರದ್ದು ಮಾಡಿಲ್ಲ, ಘಟನೆ ಸಂಭವಿಸಿದ ಬಳಿಕ ತುಸುಹೊತ್ತು ಸ್ಥಗಿತವಾಗಿತ್ತು, ಈಗ ಎಂದಿನಂತೆ ಮಹಾಕುಂಭಮೇಳೆ ನಡೆಯುತ್ತಿದೆ. ಕುಂಭಮೇಳದಲ್ಲಿ ಅವಘಡಕ ಸಂಭವಿಸಿದ ವದಂತಿಗಳನ್ನು ನಂಬಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.ಸಂಗಮದ ಎಲ್ಲ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ. ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ, ಜನರು ಅವಸರ ಮಾಡಲು ಹೋಗಿ […]

ಪವಿತ್ರ ಸ್ನಾನ ರದ್ದಾಗಿಲ್ಲ : ಯೋಗಿ ಆದಿತ್ಯನಾಥ್‌ ಸ್ಪಷ್ಟನೆ Read More »

ಟೇಕಾಫ್‌ಗೆ ರೆಡಿಯಾಗಿದ್ದ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದ ಪ್ರಯಾಣಿಕ

ಬೆಂಗಳೂರು : ಜೋಧ್‌ಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನ ಟೇಕಾಫ್‌ ಆಗಲು ತಯಾರಾಗುತ್ತಿದ್ದಂತೆ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ಬಾಗಿಲು ತೆರೆದ ಘಟನೆ ಇಂದು ಬೆಳಗ್ಗೆ ಸಂಭವಿಸದೆ. ವಿಮಾನ ಇನ್ನೇನು ಟೇಕ್​ ಆಫ್​ ಆಗಬೇಕು ಎನ್ನುವ ಹೊತ್ತಲ್ಲಿ ಪ್ರಯಾಣಿಕ ಎಮರ್ಜೆನ್ಸಿ ಎಕ್ಸಿಟ್ ತೆರೆದಿದ್ದಾರೆ.ವಿಮಾನ ಬೆಳಗ್ಗೆ 10.10ಕ್ಕೆ ಹೊರಡಬೇಕಿತ್ತು, ಇದ್ದಕ್ಕಿದ್ದಂತೆ ಪ್ರಯಾಣಿಕರೊಬ್ಬರು ಫ್ಲಾಪ್ ಎಳೆದು ತುರ್ತು ನಿರ್ಗಮನ ದ್ವಾರವನ್ನು ತೆರೆದರು. ವಿಮಾನದಲ್ಲಿ ಗೊಂದಲ, ಭಯ ಸೃಷ್ಟಿಯಾಗಿದ್ದು, ಪ್ರಯಾಣಿಕನನ್ನು ಬಂಧಿಸಿ ಸಿಐಎಸ್‌ಎಫ್‌ಗೆ ಒಪ್ಪಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ ಉದ್ಯೋಗಿಯಾಗಿರುವ ಸಿರಾಜ್ ಕಿದ್ವಾಯಿ ತಪ್ಪಾಗಿ

ಟೇಕಾಫ್‌ಗೆ ರೆಡಿಯಾಗಿದ್ದ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದ ಪ್ರಯಾಣಿಕ Read More »

ಭೀಕರ ಅಗ್ನಿ ಅವಘಡ : 50ಕ್ಕೂ ಹೆಚ್ಚು ವಾಹನಗಳು ನಾಶ

ಪೊಲೀಸರು ಜಪ್ತಿ ಮಾಡಿ ಮೈದಾನದಲ್ಲಿಟ್ಟಿದ್ದ ವಾಹನಗಳಿಗೆ ಹತ್ತಿಕೊಂಡ ಬೆಂಕಿ ಬೆಂಗಳೂರು: ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ 50ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿವೆ.ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಗ್ರೌಂಡ್‌ನಲ್ಲಿ ಪಾರ್ಕ್ ಮಾಡಿದ್ದರು. ಈ ಜಾಗಕ್ಕೆ ಇಂದು ಬೆಳಗ್ಗೆ ಬೆಂಕಿ ಬಿದ್ದಿದೆ. ಐದು ಕಾರು, ಐದು ಆಟೋ, 50 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿವೆ. ಮತ್ತಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ

ಭೀಕರ ಅಗ್ನಿ ಅವಘಡ : 50ಕ್ಕೂ ಹೆಚ್ಚು ವಾಹನಗಳು ನಾಶ Read More »

ಮಹಾಕುಂಭಮೇಳದಲ್ಲಿ ಕಾಲ್ತುಳಿತ : ಹಲವರು ಸಾವಿಗೀಡಾಗಿರುವ ಶಂಕೆ

ಇಂದಿನ ಪವಿತ್ರ ಸ್ನಾನ ರದ್ದು; ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ಪ್ರಯಾಗ್‌ರಾಜ್‌: ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10ರಿಂದ 15 ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆಸ್ಪತ್ರೆಗೆ 15ಕ್ಕೂ ಹೆಚ್ಚು ಮೃತದೇಹಗಳನ್ನು ತರಲಾಗಿದೆ ಎಂದು ವಿದೇಶ ಮಾಧ್ಯಮವೊಂದು ವರದಿ ಮಾಡಿದೆ.ಇಂದು ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ಕೋಟಿಗಟ್ಟಲೆ ಜನರು ಸೇರಿದ್ದರು. ಈ ಸಂದರ್ಭದಲ್ಲಿ ತಡೆಬೇಲಿ ಮುರಿದು ಸ್ನಾನಕ್ಕೆ ಧಾವಿಸಿದವರು ಜನರನ್ನು ತುಳಿದುಕೊಂಡು ಹೋದ ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿದೆ

ಮಹಾಕುಂಭಮೇಳದಲ್ಲಿ ಕಾಲ್ತುಳಿತ : ಹಲವರು ಸಾವಿಗೀಡಾಗಿರುವ ಶಂಕೆ Read More »

ಮೂರು ಅಂತಸ್ತಿನ ಹೋಟೆಲ್‌ ಕಟ್ಟಡವೇ ಸ್ಥಳಾಂತರ

ಹೈಡ್ರಾಲಿಕ್‌ ಜಾಕ್‌ ಬಳಸಿ ಇಡೀ ಕಟ್ಟಡವನ್ನೇ ಹಿಂದಕ್ಕೆ ತಳ್ಳುವ ಸಾಹಸ ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರಂತಸ್ತಿನ ಕಟ್ಟಡವೊಂದನ್ನು ಸುಮಾರು 20 ಅಡಿಗಳಷ್ಟು ಹಿಂದಕ್ಕೆ ತಳ್ಳುವ ಸಾಹಸ ನಡೆಯುತ್ತಿದೆ. ಹಿರಿಯೂರು ನಗರದ ಅವಧಾನಿ ಬಡಾವಣೆ ಮುಂಭಾಗದ ಹೋಟೆಲ್ ಕಟ್ಟಡವನ್ನು ಹಿಂದಕ್ಕೆ ತಳ್ಳಿ ಯಥಾಸ್ಥಿತಿಯಲ್ಲಿಯೇ ಕೂರಿಸುವ ಕಾಮಗಾರಿಯ ಮೊದಲ ಭಾಗವಾಗಿ ಸೋಮವಾರ ಸುಮಾರು 5 ಅಡಿಯಷ್ಟು ಹಿಂದಕ್ಕೆ ಜರುಗಿಸಲಾಗಿದೆ. ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಂಚಿನಲ್ಲಿದ್ದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲು

ಮೂರು ಅಂತಸ್ತಿನ ಹೋಟೆಲ್‌ ಕಟ್ಟಡವೇ ಸ್ಥಳಾಂತರ Read More »

ಕಾರು, ಬೈಕ್‌ ಖರೀದಿಸುವವರಿಗೆ ಸೆಸ್‌ ಬರೆ

ಫೆ.1ರಿಂದಲೇ ಜಾರಿಗೆ ಬರಲಿದೆ ಹೊಸ ಮೇಲ್ತೆರಿಗೆ ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿಯಾಗಿ ಪರದಾಡುತ್ತಿರುವ ಕಾಂಗ್ರೆಸ್‌ ಸರಕಾರ ಈಗ ಸಂಪನ್ಮೂಲ ಕ್ರೋಡೀಕರಣಕ್ಕೆ ವಾಹನ ಖರೀದಿಸುವವರಿಗೆ ಬರೆ ಹಾಕಲು ಮುಂದಾಗಿದೆ. ಫೆಬ್ರವರಿ 1ರಿಂದಲೇ ಹೊಸದಾಗಿ ಕಾರು ಮತ್ತು ಬೈಕ್ ಖರೀದಿ ಮಾಡುವವರಿಗೆ ಕರ್ನಾಟಕ ಸರ್ಕಾರ ಸೆಸ್‌ ಹಾಕಲಿದೆ. ಕಾರು, ಬೈಕ್ ಖರೀದಿ ಮಾಡುವವರಿಂದ ಹೆಚ್ಚುವರಿ ಸೆಸ್ ಸಂಗ್ರಹಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿದ್ದು, ಅಧಿಕೃತ ಆದೇಶ ಹೊರಡಿಸಿದೆ. ಹೊಸ ಕಾರು ಖರೀದಿ ಮಾಡುವವರು ಒಂದು ಸಾವಿರ ರೂಪಾಯಿ, ಹೊಸದಾಗಿ

ಕಾರು, ಬೈಕ್‌ ಖರೀದಿಸುವವರಿಗೆ ಸೆಸ್‌ ಬರೆ Read More »

ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು

ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋದ ಕಾರಿನ ನಂಬರ್‌ ಪ್ಲೇಟ್‌ ನಕಲಿ ಕಾರವಾರ: ಅಂಕೋಲಾ ಸಮೀಪ ರಾಮನಗುಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಜನ ಪ್ರದೇಶದಲ್ಲಿ ಉಪೇಕ್ಷಿಸಿ ಹೋಗಿದ್ದ ಕ್ರೆಟಾ ಕಾರಿನೊಳಗೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಕಾರನ್ನು ಪೊಲೀಸ್‌ ಠಾಣೆಗೆ ಒಯ್ದಿದ್ದಾರೆ. ಕಾರು ಮಂಗಳೂರು ಮೂಲದ್ದು ಎಂಬ ಸಂಶಯ ವ್ಯಕ್ತವಾಗಿದೆ.ಕಾರಿನ ನಂಬರ್‌ ಪ್ಲೇಟ್‌ ನಕಲಿಯಾಗಿದ್ದು, ಹೀಗಾಗಿ ಈ ಕಾರು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾರಿನೊಳಗಿದ್ದ ಬ್ಯಾಗಿನಲ್ಲಿ 1,14,99,500 ರೂಪಾಯಿ

ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರಿನಲ್ಲಿತ್ತು ಕಂತೆ ಕಂತೆ ನೋಟು Read More »

ಕಾಂಗ್ರೆಸಿಗೂ ನರಕಕ್ಕೂ ವ್ಯತ್ಯಾಸ ಇಲ್ಲ : ಯಶ್‌ಪಾಲ್‌ ಸುವರ್ಣ

ಮಹಾಕುಂಭಮೇಳದ ಕುರಿತು ಖರ್ಗೆ ಹೇಳಿಕೆಗೆ ತಿರುಗೇಟು ಉಡುಪಿ: ಕಾಂಗ್ರೆಸ್ಸಿಗೂ ನರಕಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ದೇಶ ವಿರೋಧಿ ಹಾಗೂ ಹಿಂದೂ ವಿರೋಧಿಗಳಿಗೆ ಸ್ವರ್ಗ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.ಕುಂಭಮೇಳದಲ್ಲಿ ಸ್ನಾನ ಮಾಡಿದರೆ ದೇಶದ ಬಡತನ ನೀಗುವುದಿಲ್ಲ ಎಂಬ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ, ಕಾಂಗ್ರೆಸ್ ಈಗಾಗಲೇ ನರಕದಲ್ಲಿ ಇದೆ. ಸ್ವರ್ಗಕ್ಕೆ ಹೋಗುವಂತಹ ಅವಕಾಶವನ್ನು ದೇವರು ಅವರಿಗೆ ಕಲ್ಪಿಸುವುದಿಲ್ಲ. ದೇಶ ವಿರೋಧಿ, ಹಿಂದೂ ವಿರೋಧಿಗಳಿಗೆ ಸ್ವರ್ಗ

ಕಾಂಗ್ರೆಸಿಗೂ ನರಕಕ್ಕೂ ವ್ಯತ್ಯಾಸ ಇಲ್ಲ : ಯಶ್‌ಪಾಲ್‌ ಸುವರ್ಣ Read More »

ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ

ಮೌನಿ ಅಮವಾಸ್ಯೆ ಸ್ನಾನಕ್ಕೆ ಸೇರಿರುವ ಕೋಟಿಗಟ್ಟಲೆ ಜನ ಪ್ರಯಾಗ್‌ರಾಜ್‌ : ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ನಸುಕಿನ ಹೊತ್ತು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ. ಕೆಲವ ಸ್ಥಿತಿ ಚಿಂತಾಜನಕವಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹಲವು ಮಂದಿ ಕಾಲಿನಡಿಗೆ ಬಿದ್ದು,

ಮಹಾಕುಂಭಮೇಳದಲ್ಲಿ ನೂಕುನುಗ್ಗಲು : ಹಲವು ಮಂದಿಗೆ ಗಾಯ Read More »

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು

ಪುತ್ತೂರು : ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಅಗ್ನಿಶಾಮಕ ದಳದ ಸಿದ್ಧರೂಢ ಮತ್ತು ಮೌನೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸೋಮವಾರ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಮಂಗಳವಾರ ಬೆಕ್ಕಿನ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದರು. ಬೆಕ್ಕನ್ನ ಹಿಡಿಯಲು ಬಾವಿಯೊಳಗಡೆ ಸಿದ್ಧರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು Read More »

error: Content is protected !!
Scroll to Top