ಸುದ್ದಿ

ಎಸ್‌ಐಟಿ ಮುಂದೆ ಬುರುಡೆ ರಹಸ್ಯ ಬಿಚ್ಚಿಟ್ಟ ಮುಸುಕುಧಾರಿ

ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರು ಧರ್ಮಸ್ಥಳ: ಇಷ್ಟರ ತನಕ ಮುಸುಕು ಹಾಕಿ ಎಸ್‌ಐಟಿ ಎದುರು ಹಾಜರಾಗುತ್ತಿದ್ದ ವ್ಯಕ್ತಿಯನ್ನು ಇದೇ ಮೊದಲ ಸಲ ಅಧಿಕೃತವಾಗಿ ಗುರುತಿಸಲಾಗಿದ್ದು, ಆತನ ಹೆಸರು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ತಿಳಿದುಬಂದಿದೆ. ಎಸ್‌ಐಟಿ ವಿಚಾರಣೆ ವೇಳೆ ಅವನು ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ. ಧರ್ಮಸ್ಥಳದಲ್ಲಿ ಉತ್ಖನನ ನಿಲ್ಲಿಸಿದ ಬಳಿಕ ಕಳೆದ ಕೆಲವು ದಿನಗಳಿಂದ ಎಸ್‌ಐಟಿ ಅಧಿಕಾರಿಗಳು ಮುಸುಕುಧಾರಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ […]

ಎಸ್‌ಐಟಿ ಮುಂದೆ ಬುರುಡೆ ರಹಸ್ಯ ಬಿಚ್ಚಿಟ್ಟ ಮುಸುಕುಧಾರಿ Read More »

ನಾಳೆ ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ಯೂಟ್ಯೂಬರ್‌ ಸಮೀರ್‌ಗೆ ಸೂಚನೆ

ಬಳ್ಳಾರಿಯಲ್ಲಿರುವ ಮನೆಗೆ ನೋಟಿಸ್‌ ಅಂಟಿಸಿ ಬಂದ ಪೊಲೀಸರು ಧರ್ಮಸ್ಥಳ : ಧರ್ಮಸ್ಥಳ ಕೇತ್ರದ ಕುರಿತು ಅಪಪ್ರಚಾರ ಮಾಡಿರುವ ಕುರಿತು ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್‌ ಮೊಹಮ್ಮದ್‌ ಸಮೀರ್‌ನ ಬಳ್ಳಾರಿ ನಿವಾಸಕ್ಕೆ ಧರ್ಮಸ್ಥಳದ ಪೊಲೀಸರು ನೋಟಿಸ್‌ ಅಂಟಿಸಿದ್ದಾರೆ. ಮನೆಗೆ ಬೀಗ ಜಡಿದಿದ್ದ ಹಿನ್ನೆಲೆ ಬಳ್ಳಾರಿಯ ಬಂಡಿಹಟ್ಟಿ ಏರಿಯಾದಲ್ಲಿರುವ ಸಮೀರ್‌ ಮನೆ ಗೋಡೆಗೆ ನೋಟಿಸ್‌ ಅಂಟಿಸಿದ್ದು, ಭಾನುವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಿನ್ನೆ ಸಂಜೆಯೇ ಧರ್ಮಸ್ಥಳ ಠಾಣೆ ಪೊಲೀಸರು ಮನೆಗೆ ನೋಟಿಸ್‌

ನಾಳೆ ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ಯೂಟ್ಯೂಬರ್‌ ಸಮೀರ್‌ಗೆ ಸೂಚನೆ Read More »

ಧರ್ಮಸ್ಥಳ ಪ್ರಕರಣ : ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಿದ ಎಸ್‌ಐಟಿ

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮುಸುಕುಧಾರಿ ವ್ಯಕ್ತಿಯನ್ನು ಎಸ್‌ಐಟಿ ಇಂದು ಬೆಳಗ್ಗೆ ಬಂಧಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದ ಮುಸುಕುಧಾರಿ ವ್ಯಕ್ತಿಯ ನಂಬಿ ಸರ್ಕಾರ ವಿಶೇಷ ತನಿಖಾ ತಂಡ ರಕ್ಷಿಸಿತ್ತು. ಈ ತಂಡ ಆತ ತೋರಿಸಿದ 17 ಜಾಗಗಳಲ್ಲಿ ಅಗೆದರೂ ಶವದ ಕುರುಹುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಡೀ ಮುಸುಕುಧಾರಿಯನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಸ್ವತಹ ವಿಚಾರಣೆ ನಡೆಸಿದ್ದಾರೆ . ಬಳಿಕ ಎಸ್‌ಐಟಿ ಹೆಚ್ಚಿನ

ಧರ್ಮಸ್ಥಳ ಪ್ರಕರಣ : ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಿದ ಎಸ್‌ಐಟಿ Read More »

ಕಾಪು : ಕಾರು ಅಪಘಾತದಲ್ಲಿ ಯುವ ಡಿಜೆ ಮರ್ವಿನ್‌ ಸಾವು

ಅಡ್ಡ ಬಂದ ನಾಯಿಯನ್ನು ರಕ್ಷಿಸಲು ಯತ್ನಿಸಿದಾಗ ಪಲ್ಟಿಯಾದ ಕಾರು ಕಾಪು: ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಕಾರು ಕಾಪು ಸಮೀಪ ಮೂಳೂರಿನಲ್ಲಿ ಪಲ್ಟಿಯಾಗಿ ಯುವ ಡಿಜೆ ಮತ್ತು ಸಿನೆಮಾಗಳ ಛಾಯಾಗ್ರಾಹಕ ಮೃತಪಟ್ಟಿದ್ದು, ಅವರ ಇಬ್ಬರು ಗಾಯಗೊಂಡಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ 28 ವರ್ಷದ ಮೃತ ಯುವಕನನ್ನು ಛಾಯಾಗ್ರಾಹಕ ಹಾಗೂ ಡಿಜೆ ಬೆಳ್ಮಣ್‌ನ ಮರ್ವಿನ್ ಮೆಂಡೊನ್ಸ (28) ಎಂದು ಗುರುತಿಸಲಾಗಿದೆ. ಪ್ರಜ್ವಲ್ ಸುವರ್ಣ ಮತ್ತು ಪ್ರಸಾದ್ ಎಂಬಿಬ್ಬರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಯಿಂದ ಕಾರು ಪೂರ್ತಿಯಾಗಿ

ಕಾಪು : ಕಾರು ಅಪಘಾತದಲ್ಲಿ ಯುವ ಡಿಜೆ ಮರ್ವಿನ್‌ ಸಾವು Read More »

ಮಂಗಳೂರು : ಕ್ರೀಡಾಪಟುಗಳ ಹಾಸ್ಟೆಲ್‌ನ ಅಕ್ಕಿಯಲ್ಲಿ ಹುಳು ಪತ್ತೆ

ಲೋಕಾಯುಕ್ತ ದಾಳಿಯಿಂದ ಬಯಲಾದ ಹಾಸ್ಟೆಲ್‌ನ ಅವ್ಯವಸ್ಥೆ ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ದ.ಕ. ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿ ಗೃಹಕ್ಕೆ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್ ಹಾಗೂ ಪೊಲೀಸ್ ನಿರೀಕ್ಷಕಿಯರಾದ ಭಾರತಿ ಜಿ, ರವಿ ಪವಾರ್ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿದಾಗ ಅನೇಕ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ವಸತಿಗೃಹದ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇರಲಿಲ್ಲ. ಧವಸ ಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿವೆ. ಸ್ಟಾಕ್ ರಿಜಿಸ್ಟ್ರರ್ ಕೂಡ

ಮಂಗಳೂರು : ಕ್ರೀಡಾಪಟುಗಳ ಹಾಸ್ಟೆಲ್‌ನ ಅಕ್ಕಿಯಲ್ಲಿ ಹುಳು ಪತ್ತೆ Read More »

ಮಗಳೇ ಇಲ್ಲ ಎಂದು ಹೇಳಿ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದ ಸುಜಾತ ಭಟ್‌

ಕ್ಷಣಕ್ಕೊಂದು ಹೇಳಿಕೆ ನೀಡಿ ಪ್ರಕರಣವನ್ನು ಗೊಂದಲಮಯಗೊಳಿಸಿದ ವೃದ್ಧೆ ಮಂಗಳೂರು: ನನಗೆ ಅನನ್ಯಾ ಭಟ್‌ ಎಂಬ ಮಗಳೇ ಇಲ್ಲ. ನನಗೆ ಸುಳ್ಳು ದೂರು ನೀಡಲು ಹೇಳಿದ್ದರು. ಅವರು ಹೇಳಿದಂತೆ ದೂರು ನೀಡಿದ್ದೇನೆ ಎಂದು ನಿನ್ನೆ ಹೇಳಿದ್ದ ಸುಜಾತ ಭಟ್‌ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದು ನನಗೆ ಅನನ್ಯಾ ಭಟ್ ಅಂತ ಮಗಳಿರೋದು ಸತ್ಯ ಎಂದು ಹೇಳಿ ಇಡೀ ಪ್ರಕರಣವನ್ನು ಗೊಂದಲಮಯಗೊಳಿಸಿದ್ದಾರೆ. ಶುಕ್ರವಾರ ಖಾಸಗಿ ವಾಹಿನಿಯೊಂದರ ಜೊತೆ ಕಾರಿನಲ್ಲಿ ಕುಳಿತು ಮಾತನಾಡಿದ್ದ ನಾನು ಹೇಳಿದ್ದೆಲ್ಲ ಕಟ್ಟುಕಥೆ. ಗಿರೀಶ್‌ ಮಟ್ಟಣ್ಣ, ಜಯಂಟ್‌

ಮಗಳೇ ಇಲ್ಲ ಎಂದು ಹೇಳಿ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದ ಸುಜಾತ ಭಟ್‌ Read More »

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಇಂದು

ಬಿಜೆಪಿ ಮುಖಂಡ ಬಿ.ಎಲ್‌.ಸಂತೋಷ್‌ ನಿಂದನೆ ಪ್ರಕರಣದಲ್ಲಿ ಸೆರೆಯಾಗಿರುವ ತಿಮರೋಡಿ ಉಡುಪಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಜೈಲು ಸೇರಿರುವ ಮಹೇಶ್ ಶೆಟ್ಟಿ ತಿಮರೋಡಿಯ ಜಾಮೀನಿ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಗುರುವಾರ ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು ಬಳಿಕ ಅರೆಸ್ಟ್ ಮಾಡಿದ್ದರು. ನಂತರ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ತಿಮರೋಡಿ ಹಿರಿಯಡ್ಕ ಸಬ್ ಜೈಲಿನಲ್ಲಿದ್ದಾರೆ. ಬಂಧಿಸುವ ವೇಳೆ ಉಜಿರೆಯಲ್ಲಿರುವ ತಿಮರೋಡಿ ಮನೆಯಲ್ಲಿ ಹೈಡ್ರಾಮಾ ನಡೆದಿತ್ತು. ಪೊಲೀಸರ

ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಇಂದು Read More »

ಬೀದಿನಾಯಿಗಳ ಸ್ಥಳಾಂತರ : ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡಬಾರದೆಂದು ಆದೇಶ ನವದೆಹಲಿ : ಬೀದಿನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಬಿಡುವಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತುಸು ಮಾರ್ಪಾಡು ಮಾಡಿ ರೇಬೀಸ್ ಇರುವ ನಾಯಿಗಳನ್ನು ಹೊರತುಪಡಿಸಿ ಎಲ್ಲ ಬೀದಿನಾಯಿಗಳನ್ನು ಸ್ಥಳಾಂತರಿಸುವಂತೆ ಆದೇಶಿಸಿದೆ. ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಆಹಾರ ನೀಡುವ ಪ್ರದೇಶಗಳನ್ನು ಗುರುತಿಸಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಇತರ ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ. ಸಾಮಾನ್ಯ

ಬೀದಿನಾಯಿಗಳ ಸ್ಥಳಾಂತರ : ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ Read More »

ಸಂಸತ್ತಿನಲ್ಲಿ ಮತ್ತೆ ಭದ್ರತಾ ಲೋಪ : ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ

ಮರ ಏರಿ ಆವರಣದೊಳಗೆ ಜಿಗಿದು ಒಳ ನುಗ್ಗಿದ್ದ ಆಗಂತುಕನ ತೀವ್ರ ವಿಚಾರಣೆ ನವದೆಹಲಿ : ಹೊಸ ಸಂಸತ್ ಭವನದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ ಸಂಭವಿಸಿದೆ. ವ್ಯಕ್ತಿಯೊಬ್ಬ ಮರವನ್ನು ಬಳಸಿ ಗೋಡೆ ದಾಟಿ ಸಂಸತ್ತಿನ ಆವರಣ ಪ್ರವೇಶಿಸಿದ್ದಾನೆ. ಈ ಘಟನೆ ಬೆಳಗ್ಗೆ 6.30ಕ್ಕೆ ನಡೆದಿದ್ದು, ಆತ ರೈಲು ಭವನ ಮೂಲಕವಾಗಿ ಗರುಡ ದ್ವಾರದ ತನಕ ತಲುಪಿದ್ದಾನೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವನನ್ನು ಹಿಡಿದು ಪ್ರಶ್ನಿಸಿ ಬಳಿಕ ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್ತಿನ ಮುಂಗಾರು

ಸಂಸತ್ತಿನಲ್ಲಿ ಮತ್ತೆ ಭದ್ರತಾ ಲೋಪ : ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ Read More »

ಮಗಳು ನಾಪತ್ತೆ ಪ್ರಕರಣ ವಾಪಸ್‌ ಪಡೆಯಲು ಮುಂದಾದರಾ ಸುಜಾತ ಭಟ್‌?

ಆಡಿಯೋ ಹರಿಬಿಟ್ಟು ಪ್ರಕರಣ ಬಗ್ಗೆ ಮಾತನಾಡಿದ ವೃದ್ಧೆ ಧರ್ಮಸ್ಥಳ: ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ಹೇಳಿಕೊಂಡಿದ್ದ ಸುಜಾತ ಭಟ್‌ ಈಗ ದಿಢೀರ್‌ ಎಂದು ಕೇಸನ್ನು ವಾಪಸು ಪಡೆದುಕೊಳ್ಳುವುದಾಗಿ ಹೇಳಿದ್ದು, ಅವರ ಬಗ್ಗೆ ಇರುವ ಅನುಮಾನ ಇನ್ನಷ್ಟು ಹೆಚ್ಚವಾಗುವಂತೆ ಮಾಡಿದೆ. ಇತ್ತೀಚೆಗೆ ಸುಜಾತಾ ಭಟ್ ತಮ್ಮ ಮಗಳೆಂದು ಫೋಟೋವೊಂದನ್ನು​ ತೋರಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಸತ್ಯ ಹೊರಬಂದಿತ್ತು. ಹೀಗಿರುವಾಗ ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್

ಮಗಳು ನಾಪತ್ತೆ ಪ್ರಕರಣ ವಾಪಸ್‌ ಪಡೆಯಲು ಮುಂದಾದರಾ ಸುಜಾತ ಭಟ್‌? Read More »

error: Content is protected !!
Scroll to Top