ಸುದ್ದಿ

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ : ಮಹಿಳೆ ಸಹಿತ ನಾಲ್ವರು ವಶ

ಆಡಿಯೋ ಬಹಿರಂಗವಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಬೆಂಗಳೂರು: ಸಚಿವ ಕೆ.ಎನ್‌. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ತುಣುಕೊಂದು ಬಹಿರಂಗವಾದ ಬೆನ್ನಿಗೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆಡಿಯೋದಲ್ಲಿದ್ದ ಪುಷ್ಪಾ ಎಂಬ ಮಹಿಳೆಯ ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ಎನ್ನಲಾದ ರೌಡಿಶೀಟರ್‌ ಸೋಮು ಎಂಬಾತನ ಕುರಿತು ರಾಕಿ ಹಾಗೂ ಪುಷ್ಪಾ ಎಂಬವರು ಮಾತುಕತೆ ನಡೆಸಿದ್ದ 18 ನಿಮಿಷದ […]

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ : ಮಹಿಳೆ ಸಹಿತ ನಾಲ್ವರು ವಶ Read More »

ಬೆಲೆ ಏರಿಕೆ ವಿರುದ್ಧ ಬಿಜೆಪಿ ರಣಕಹಳೆ : ನಾಳೆ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ

ಏ.9ರಂದು ಮಂಗಳೂರು, 10ರಂದು ಉಡುಪಿಯಲ್ಲಿ ಜನಾಕ್ರೋಶ ಹೋರಾಟ ಬೆಂಗಳೂರು : ಬೆಲೆಯೇರಿಕೆ ಖಂಡಿಸಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ಮುಂದಾಗಿದ್ದು, ಏಪ್ರಿಲ್‌ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುವುದರೊಂದಿಗೆ ಬಿಜೆಪಿಯ ಹೋರಾಟ ಪ್ರಾರಂಭವಾಗಲಿದೆ.ಏಪ್ರಿಲ್​ 2ರಿಂದ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತಾರೆ. ಏಪ್ರಿಲ್​ 5ರಂದು ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಧರಣಿ ಮಾಡುತ್ತೇವೆ

ಬೆಲೆ ಏರಿಕೆ ವಿರುದ್ಧ ಬಿಜೆಪಿ ರಣಕಹಳೆ : ನಾಳೆ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ Read More »

ಗ್ಯಾಸ್‌ ಸಿಲಿಂಡರ್‌ ಬೆಲೆ 41 ರೂ. ಇಳಿಕೆ

ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಸಿಲಿಂಡರ್ ಬೆಲೆಯಲ್ಲಿ 41 ರೂ. ಇಳಿಕೆ ಮಾಡಿವೆ. ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತ ಘೋಷಿಸಿದ್ದು, ಅಡುಗೆ ಇಂಧನವನ್ನು ಅವಲಂಬಿಸಿರುವ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ. ತಕ್ಷಣದಿಂದ ಜಾರಿಗೆ ಬರುವಂತೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ. ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ ಪರಿಷ್ಕೃತ ಚಿಲ್ಲರೆ ಮಾರಾಟ ಬೆಲೆ ಈಗ ಪ್ರತಿ ಸಿಲಿಂಡರ್‌ಗೆ 1,762 ರೂ. ಆಗಿದೆ.

ಗ್ಯಾಸ್‌ ಸಿಲಿಂಡರ್‌ ಬೆಲೆ 41 ರೂ. ಇಳಿಕೆ Read More »

ತಾಯಿಯನ್ನು ನೆನೆದು ಯುವಕನೋರ್ವ ಆತ್ಮಹತ್ಯೆಗೆ ಶರಣು

ಬೆಂಗಳೂರು:  ತಾಯಿ ಸಾವನ್ನಪ್ಪಿದ್ದರಿಂದ ಮಗ ಮನನೊಂದು  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಂದಿ ಮೋರಿ ಬಳಿ ನಡೆದಿದೆ. ನೇಣಿಗೆ ಶರಣಾದ ಯುವಕನನ್ನು ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು (24) ಎಂದು ಪತ್ತೆಹಚ್ಚಲಾಗಿದೆ. ಮೃತರ ತಾಯಿ ಚಂದ್ರಿಕಾ ಸಹ ಕಳೆದ ಒಂದೂವರೆ ತಿಂಗಳ ಹಿಂದೆ ಸಾಲಭಾದೆಯಿಂದ ಮನೆಯಲ್ಲಿಯೇ ನೇ‌ಣಿಗೆ ಶರಣಾಗಿದ್ದರು. ಈತ ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಕುರಿತಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್

ತಾಯಿಯನ್ನು ನೆನೆದು ಯುವಕನೋರ್ವ ಆತ್ಮಹತ್ಯೆಗೆ ಶರಣು Read More »

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.1 ಮಂಗಳವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಆರನೇ ವಾರಕ್ಕೆ ಕಾಲಿಟ್ಟ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

ನಿಯಂತ್ರಣ ತಪ್ಪಿ ಮಹಡಿಯ ಮೇಲೆ ಬಿದ್ದ ಕಾರು | ಕಾರು ಮತ್ತು ಮನೆ ಜಖಂ

ಸುಳ್ಯ: ನಿಯಂತ್ರಣ ತಪ್ಪಿ ಕಾರೊಂದು ಮನೆಯ ಮಹಡಿಯ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿಯವರ ಸೊಸೆ, ಮಾವನ ಕಾರನ್ನು ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಚಿರೆಕಲ್ ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್ ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮಹಡಿಯ ಮೇಲೆ ಕಾರು ಬಿದ್ದಿದೆ ಎನ್ನಲಾಗಿದೆ.

ನಿಯಂತ್ರಣ ತಪ್ಪಿ ಮಹಡಿಯ ಮೇಲೆ ಬಿದ್ದ ಕಾರು | ಕಾರು ಮತ್ತು ಮನೆ ಜಖಂ Read More »

ವಕ್ಫ್‌ ಮಸೂದೆಗೆ ವಿರೋಧ : ಮುಸ್ಲಿಮರಿಂದ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ

ದೇಶಾದ್ಯಂತ ಮಸೀದಿಗಳಲ್ಲಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಈದ್‌ ನಮಾಜು ಮಾಡಿದ ಮುಸ್ಲಿಮರು ಬೆಂಗಳೂರು : ದೇಶಾದ್ಯಂತ ಮುಸ್ಲಿಮರು ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಈದ್-ಉಲ್-ಫಿತ್ ವಿಶೇಷ ಪ್ರಾರ್ಥನೆ ಸಂದರ್ಭ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡಿದ್ದಾರೆ. ಕೈಗೆ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಮಾಡುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಮರು ಪ್ರಾರ್ಥನೆ ವೇಳೆ ಕೈಗೆ

ವಕ್ಫ್‌ ಮಸೂದೆಗೆ ವಿರೋಧ : ಮುಸ್ಲಿಮರಿಂದ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ Read More »

ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ

ಸುಳ್ಯ ನಗರ ಪಂಚಾಯ್ ವ್ಯಾಪ್ತಿಯ  ಬಹುಬೇಡಿಕೆಯ ರಸ್ತೆ  ಕೊಡಿಯಾಲಬೈಲು- ನೀರಬಿದಿರೆ- ದುಗಲಡ್ಕ- ರಸ್ತೆಯು  45ಲಕ್ಷದ  ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು ಇದರ ಗುದ್ದಲಿಪೂಜೆ ನಡೆಯಿತು.  ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆಯನ್ನು ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ನೆರವೆರಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದನಾಯ್ಕ, ಸದಸ್ಯರಾದ ಕಿಶೋರಿ ಶೇಟ್, ಬಾಲಕೃಷ್ಣ ರೈ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಭಾಜಪ ಮಂಡಲ ಅಧ್ಯಕ್ಷ  ವೆಂಕಟ ವಳಲಂಬೆ, ನಗರ ಮಹಾಶಕ್ತಿ ಕೇಂದ್ರ ಪ್ರಮುಖರಾದ A.T ಕುಸುಮಾಧರ

ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ Read More »

ಮನೆಯ ಆವರಣದೊಳಗೆ ಲಕೋಟೆಯಲ್ಲಿತ್ತು ಮಾನವನ ಅಸ್ಥಿ

ಪೊಲೀಸರ ತನಿಖೆಯಿಂದ ಬಯಲಾಯಿತು ಅಸಲಿ ವಿಷಯ ಮಂಗಳೂರು: ಉಳ್ಳಾಲದ ಮನೆಯ ಆವರಣವೊಂದರಲ್ಲಿ ಲಕೋಟೆಯಲ್ಲಿ ರಕ್ಷಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಪೊಲೀಸರ ತನಿಖೆ ಬಳಿಕ ಇದು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಅಸ್ಥಿ ಅಲ್ಲ ಎಂದು ತಿಳಿದುಬಂದಿದೆ.ಕುಂಪಲದ ಚಿತ್ರಾಂಜಲಿ ನಗರದ ಮನೆಯೊಂದರ ಆವರಣದಲ್ಲಿ ಶನಿವಾರ ರಾತ್ರಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಅಸ್ಥಿಗಳ ಹಿಂದಿನ ಅಸಲಿಯತ್ತನ್ನು ಪತ್ತೆ

ಮನೆಯ ಆವರಣದೊಳಗೆ ಲಕೋಟೆಯಲ್ಲಿತ್ತು ಮಾನವನ ಅಸ್ಥಿ Read More »

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌

ಆಡಿಯೊ ಕ್ಲಿಪ್ಪಿಂಗ್‌ನಿಂದ ಬಯಲಾಯಿತು ಸುಪಾರಿ ಹಿಂದಿನ ಮರ್ಮ ಬೆಂಗಳೂರು: ಸಚಿವ ಕೆ.ಎನ್‌ ರಾಜಣ್ಣ ಅವರ ಪುತ್ರ, ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಅವರ ಮಗಳ ಬರ್ತ್‌ಡೇ ದಿನವೇ ಯತ್ನಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನ್ನ ಹತ್ಯಾಯತ್ನದ ಬಗ್ಗೆ ರಾಜೇಂದ್ರ ಅವರೇ ದೂರಿನ ಜೊತೆಗೆ ನೀಡಿದ್ದ ಆಡಿಯೊ ಕ್ಲಿಪ್ಪಿಂಗ್‌ ಈಗ ಬಯಲಾಗಿದ್ದು, ಇದರಲ್ಲಿ ಪುಷ್ಪಾ ಎಂದು ಹೇಳಿಕೊಂಡಿರುವ ಮಹಿಳೆ ರಾಕಿ ಎಂಬಾತನಿಗೆ ರಾಜೇಂದ್ರ ಅವರ ಹತ್ಯೆಯ ಪ್ಲ್ಯಾನ್‌ ವಿವರಿಸಿದ ಸಂಭಾಷಣೆಯಿದೆ. ರಾಜೇಂದ್ರ ತುಮಕೂರು ಎಸ್ಪಿಗೆ ನೀಡಿದ ಆಡಿಯೋದಲ್ಲಿ ಸುಪಾರಿ

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌ Read More »

error: Content is protected !!
Scroll to Top