ಸುದ್ದಿ

ಹೃದಯಾಘಾತದಿಂದ ಯುವಕ ಮೃತ್ಯು

ಕಡಬ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತಪಟ್ಟ ಯುವಕ ಕಡಬ ತಾಲೂಕಿನ ಕಡಬ ಗ್ರಾಮದ ಪಿಜಕಳ ಪರಪ್ಪು ನಿವಾಸಿ ಜನಾರ್ದನ ನಾಯ್ಕ ಅವರ ಪುತ್ರ ವಿನೋದ್ ಪಿ.ಜೆ.(23) ಎಂದು ಗುರುತಿಸಲಾಗಿದೆ.ಮೈಸೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿನೋದ್ ಅವರಿಗೆ ಎರಡು ದಿನಗಳ ಹಿಂದೆ ಜ್ವರ ಬಂದು ಕಡಿಮೆಯಾಗಿತ್ತು. ಭಾನುವಾರ ರಾತ್ರಿ ತನ್ನ ರೂಂನಲ್ಲಿ ಊಟ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು […]

ಹೃದಯಾಘಾತದಿಂದ ಯುವಕ ಮೃತ್ಯು Read More »

ಚರ್ಮ ಹಾಗೂ ಮಕ್ಕಳ ತಪಸಣಾ ಕ್ಲಿನಿಕ್ ಬೆಂಕಿಗಾಹುತಿ

ಕಾಸರಗೋಡು: ಇಲ್ಲಿನ ಅಶ್ವಿನಿ ನಗರದಲ್ಲಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 25 ಲಕ್ಷ ರೂ. ನಷ್ಟವಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ನಾಲ್ಕು ಕೋಣೆಗಳನ್ನು ಹೊಂದಿರುವ ಕ್ಲಿನಿಕ್ ನೊಳಗೆ ದಟ್ಟ ಹೊಗೆಯು ಕಾರ್ಯಾಚರಣೆಗೆ ಅಡಚಣೆಯಾದರೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಲಿನಿಕ್ ನಲ್ಲಿದ್ದ ಫ್ಯಾನ್, ಕಂಪ್ಯೂಟರ್ ಗಳು, ಫರ್ನಿಚರ್, ಫ್ರಿಡ್ಜ್, ಕ್ಲಿನಿಕ್ ಉಪಕರಣಗಳು, ಔಷಧಿಗಳು, ಎ.ಸಿ ಮೊದಲಾದವು ಬೆಂಕಿಗಾಹುತಿಯಾಗಿದೆ. ಈ ಕಟ್ಟಡದಲ್ಲಿ ಹೊಟೇಲ್, ಕಂಪ್ಯೂಟರ್ ಸಂಸ್ಥೆ,

ಚರ್ಮ ಹಾಗೂ ಮಕ್ಕಳ ತಪಸಣಾ ಕ್ಲಿನಿಕ್ ಬೆಂಕಿಗಾಹುತಿ Read More »

ಗೋ ಮಾಂಸ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಹಚ್ಚಿದ ಬಜರಂಗ ದಳ ಕಾರ್ಯಕರ್ತರು

ಟ್ರಕ್‌ಗಳಲ್ಲಿ ಪಕ್ಕದ ರಾಜ್ಯಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಟ ಬೆಂಗಳೂರು: ಗೋ ಮಾಂಸ ಸಾಗಿಸುತ್ತಿದ್ದ ಲಾರಿಗೆ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಬೆಂಕಿ‌ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಐನಾಪುರ ಗ್ರಾಮದ ಬಳಿ ಕುಡಚಿ ಪಟ್ಟಣದಿಂದ ಹೈದರಾಬಾದ್ ಕಡೆಗೆ ಸಾಗುತ್ತಿದ್ದ ನಾಲ್ಕು ಲಾರಿಗಳಲ್ಲಿ ಗೋ ಮಾಂಸ ಸಾಗಾಟ ನಡೆಯುತ್ತಿರುವ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ದೊರಕಿದೆ. ಸೋಮವಾರ ರಾತ್ರಿ ಮಾರ್ಗಮಧ್ಯ ಲಾರಿ ತಡೆದು ಪರಿಶೀಲಿಸಿದಾಗ KA71

ಗೋ ಮಾಂಸ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ ಹಚ್ಚಿದ ಬಜರಂಗ ದಳ ಕಾರ್ಯಕರ್ತರು Read More »

ಧರ್ಮಸ್ಥಳ ಪ್ರಕರಣ : ಇಂದು ಮತ್ತೆ ನ್ಯಾಯಾಲಯಕ್ಕೆ ಚಿನ್ನಯ್ಯ ಹಾಜರು

ತಲೆ ಬುರುಡೆ ಕೇಸ್‌ ಸಿಐಡಿಗೆ ಹಸ್ತಾಂತರ ಸಾಧ್ಯತೆ ಧರ್ಮಸ್ಥಳ : ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಎಸ್‌ಐಟಿ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಈ ನಡುವೆ ಚಿನ್ನಯ್ಯ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿ ನಡುವೆ ತಿಮರೋಡಿ ಮನೆಯಲ್ಲೇ ನಡೆದಿದೆ ಎನ್ನಲಾದ ಮಾತುಕತೆಯ ವಿಡಿಯೋಗಳನ್ನು ಸರಣಿಯಾಗಿ ಬುರುಡೆ ಗ್ಯಾಂಗ್‌ ಬಿಡುಗಡೆ ಮಾಡಿ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸುತ್ತಿದೆ. ಈ ವಿಡಿಯೋಗಳ ಸಂಖ್ಯೆ ಎಂಟಕ್ಕೆ ತಲುಪಿದ್ದು, ಇದರ ನಡುವೆ ಇಂದು ನ್ಯಾಯಾಲಯಕ್ಕೆ ಚಿನ್ನಯ್ಯನನ್ನು ಕರೆತರಲಾಗುತ್ತಿದೆ. ಈ ನಡುವೆ ಮಹೇಶ್

ಧರ್ಮಸ್ಥಳ ಪ್ರಕರಣ : ಇಂದು ಮತ್ತೆ ನ್ಯಾಯಾಲಯಕ್ಕೆ ಚಿನ್ನಯ್ಯ ಹಾಜರು Read More »

ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ

13 ವರ್ಷದ ಬಾಲಕನ ಅಪಾಯಕಾರಿ ಸಾಹಸ ನೋಡಿ ಜಗತ್ತು ನಿಬ್ಬೆರಗು ನವದೆಹಲಿ : 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿ ತನಕ ವಿಮಾನದ ಚಕ್ರದ ಎಡೆಯಲ್ಲಿ ಕುಳಿತು ಬಂದಿರುವುದು ಅಚ್ಚರಿ ಹುಟ್ಟಿಸಿದೆ. ಬಾಲಕ ತನ್ನ ಜೀವವನ್ನೇ ಪಣಕ್ಕೊಡ್ಡಿ ವಿಮಾನದ ಹಿಂಬದಿ ಚಕ್ರದ ಭಾಗದಲ್ಲಿ 94 ನಿಮಿಷಗಳ ಕಾಲ ಪ್ರಯಾಣ ಮಾಡಿ ದಿಲ್ಲಿ ತಲುಪಿದ್ದಾನೆ. ಅಷ್ಟು ಎತ್ತರದಲ್ಲಿ ವಿಮಾನ ಹಾರುತ್ತಿರುವಾಗಲೂ ಈ ಬಾಲಕ ಯಾವುದೇ ಹಾನಿಯಾಗದೆ ಸುರಕ್ಷಿತವಾಗಿ ತಲುಪಿರುವುದು ಹೇಗೆ ಎಂಬುದು ಅಚ್ಚರಿ ಹುಟ್ಟಿಸಿದೆ. ಬಾಲಕ ಇರಾನ್‌ಗೆ

ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ Read More »

ದ.ಕ.ಜಿ.ಪ.ಹಿ.ಪ್ರಾ. ಶಾಲೆ ಗೋಳಿಯಡ್ಕ ರೆಂಜಿಲಾಡಿಯಲ್ಲಿ ಬಿಜಿಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ NSS ಶಿಬಿರ

ಮಂಗಳೂರು: ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ವಿಭಾಗವು 2025 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಕಡಬ ತಾಲೂಕಿನ ದ.ಕ.ಜಿ. ಪಂ.ಹಿ ಪ್ರಾ. ಶಾಲೆ ಗೋಳಿಯಡ್ಕ, ರಂಜಿಲಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದ ಉದ್ಘಾಟನೆ ಸೆ. 23 ರಂದು ಅಪರಾಹ್ನ 2.30ಕ್ಕೆ ನಡೆಯಲಿದ್ದು, ಸಂಸ್ಥೆ ಮುಖ್ಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆಯನ್ನು

ದ.ಕ.ಜಿ.ಪ.ಹಿ.ಪ್ರಾ. ಶಾಲೆ ಗೋಳಿಯಡ್ಕ ರೆಂಜಿಲಾಡಿಯಲ್ಲಿ ಬಿಜಿಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ NSS ಶಿಬಿರ Read More »

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ತನದಲ್ಲಿ ನವರಾತ್ರಿ ಉತ್ಸವ ಮತ್ತು ಚಂಡಿಕಾಯಾಗದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರನ್ನ ಉದ್ಘಾಟಿಸಿದರು. ಕ್ಷೇತ್ರದ ಪರಂಪರೆಯಿಂದ ಬೆಳೆದು ಬಂದಿರುವ ಯಕ್ಷಗಾನ ಸೇವೆ ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹದಿಂದ ನಿರಂತರವಾಗಿ ಈ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ವಹಿಸಿದ್ದು ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ದುರ್ಗಾ ಮಾತೆಯ ಅನುಗ್ರಹ ಪಡೆಯುವಂತಾಗಲಿಯೆಂದರು.

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ Read More »

ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ

ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಕರ್ಣಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಅನುರಾಗ ವಠಾರ ಪುತ್ತೂರು ಇದರ ವತಿಯಿಂದ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸ್ವಚ್ಚತಾ ಶ್ರಮಸೇವೆ ನಡೆಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಶ್ರಮದಾನ ಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರ ಪರವಾಗಿ ಸಂಘದ ಅಧ್ಯಕ್ಷರಿಗೆ ಹಾಗೂ ಕಾಯಾದ್ಯಕ್ಷರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರಮದಾನ ಸೇವೆಯಲ್ಲಿ

ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ Read More »

ಕೆಎಸ್ ಆರ್ ಟಿಸಿ ಬಸ್ – ಕಾರು ಡಿಕ್ಕಿ : ಪ್ರಯಾಣಿಕರು ಪವಾಡ ಸದೃಶ ಪಾರು

ಪುತ್ತೂರು: ಆರ್ಯಾಪು ಗ್ರಾಮದ ಸಂಸ್ಕಾರು ಪರ್ಪುಂಜ ನಡುವೆ ಇಂದು ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಹಾಗೂ ಟೂರಿಸ್ಟ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಬಸ್ಗೆ, ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಕಾರು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಪ್ಪು ದಿಕ್ಕಿನಲ್ಲಿ ಹೋಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಕಾರು ತಿರುಗಿ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಕಾರಿನಲ್ಲಿ ಇದ್ದ

ಕೆಎಸ್ ಆರ್ ಟಿಸಿ ಬಸ್ – ಕಾರು ಡಿಕ್ಕಿ : ಪ್ರಯಾಣಿಕರು ಪವಾಡ ಸದೃಶ ಪಾರು Read More »

ಜನರ ಬೇಡಿಕೆ ಮನ್ನಿಸಿ ನಾಟಿ ಕೋಳಿಯನ್ನು ನೀಡುತ್ತಿದ್ದೇವೆ: ಶಾಸಕ ಅಶೋಕ್ ರೈ

ಪುತ್ತೂರು: ಇಷ್ಟು ವರ್ಷ ಪಶು ಸಂಗೋಪನಾ ಇಲಾಖೆಯಿಂದ ಗಿರಿರಾಜ ಕೋಳಿ ಮರಿಗಳನ್ನು ನೀಡಲಾಗುತ್ತಿತ್ತು ಆದರೆ ಈ ಬಾರಿ ಜಿಲ್ಲೆಯ ಜನರ ಬೇಡಿಕೆಯಂತೆ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡುತ್ತಿದ್ದೇವೆ, ಮಹಿಳೆಯರ ಸ್ವ ಉದ್ಯೋಗಕ್ಕೂ ಇದು ಪ್ರೇರಣೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪಶು ಸಂಗೋಪನಾ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅರ್ಹ 46 ಮಹಿಳೆಯರಿಗೆ ವಾರದ ಕೋಳಿ ಮರಿಗಳನ್ನು ವಿತರಿ ಮಾತನಾಡಿದರು.ಪ.ಪಂಗಡದ 40 ,ಸಾಮಾನ್ಯ 4 ಹಾಗೂ ಪಜಾತಿ ಕುಟುಂಬದ ಒಟ್ಟು 46 ಮಂದಿಗೆ ಮರಿಗಳನ್ನು

ಜನರ ಬೇಡಿಕೆ ಮನ್ನಿಸಿ ನಾಟಿ ಕೋಳಿಯನ್ನು ನೀಡುತ್ತಿದ್ದೇವೆ: ಶಾಸಕ ಅಶೋಕ್ ರೈ Read More »

error: Content is protected !!
Scroll to Top