ಸುದ್ದಿ

ಧರ್ಮಸ್ಥಳ ಪ್ರಕರಣ : ಇಂದು ಮತ್ತೆ ನ್ಯಾಯಾಲಯಕ್ಕೆ ಚಿನ್ನಯ್ಯ ಹಾಜರು

ತಲೆ ಬುರುಡೆ ಕೇಸ್‌ ಸಿಐಡಿಗೆ ಹಸ್ತಾಂತರ ಸಾಧ್ಯತೆ ಧರ್ಮಸ್ಥಳ : ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನನ್ನು ಎಸ್‌ಐಟಿ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಈ ನಡುವೆ ಚಿನ್ನಯ್ಯ ಮತ್ತು ಮಹೇಶ್‌ ಶೆಟ್ಟಿ ತಿಮರೋಡಿ ನಡುವೆ ತಿಮರೋಡಿ ಮನೆಯಲ್ಲೇ ನಡೆದಿದೆ ಎನ್ನಲಾದ ಮಾತುಕತೆಯ ವಿಡಿಯೋಗಳನ್ನು ಸರಣಿಯಾಗಿ ಬುರುಡೆ ಗ್ಯಾಂಗ್‌ ಬಿಡುಗಡೆ ಮಾಡಿ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸುತ್ತಿದೆ. ಈ ವಿಡಿಯೋಗಳ ಸಂಖ್ಯೆ ಎಂಟಕ್ಕೆ ತಲುಪಿದ್ದು, ಇದರ ನಡುವೆ ಇಂದು ನ್ಯಾಯಾಲಯಕ್ಕೆ ಚಿನ್ನಯ್ಯನನ್ನು ಕರೆತರಲಾಗುತ್ತಿದೆ. ಈ ನಡುವೆ ಮಹೇಶ್ […]

ಧರ್ಮಸ್ಥಳ ಪ್ರಕರಣ : ಇಂದು ಮತ್ತೆ ನ್ಯಾಯಾಲಯಕ್ಕೆ ಚಿನ್ನಯ್ಯ ಹಾಜರು Read More »

ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ

13 ವರ್ಷದ ಬಾಲಕನ ಅಪಾಯಕಾರಿ ಸಾಹಸ ನೋಡಿ ಜಗತ್ತು ನಿಬ್ಬೆರಗು ನವದೆಹಲಿ : 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿ ತನಕ ವಿಮಾನದ ಚಕ್ರದ ಎಡೆಯಲ್ಲಿ ಕುಳಿತು ಬಂದಿರುವುದು ಅಚ್ಚರಿ ಹುಟ್ಟಿಸಿದೆ. ಬಾಲಕ ತನ್ನ ಜೀವವನ್ನೇ ಪಣಕ್ಕೊಡ್ಡಿ ವಿಮಾನದ ಹಿಂಬದಿ ಚಕ್ರದ ಭಾಗದಲ್ಲಿ 94 ನಿಮಿಷಗಳ ಕಾಲ ಪ್ರಯಾಣ ಮಾಡಿ ದಿಲ್ಲಿ ತಲುಪಿದ್ದಾನೆ. ಅಷ್ಟು ಎತ್ತರದಲ್ಲಿ ವಿಮಾನ ಹಾರುತ್ತಿರುವಾಗಲೂ ಈ ಬಾಲಕ ಯಾವುದೇ ಹಾನಿಯಾಗದೆ ಸುರಕ್ಷಿತವಾಗಿ ತಲುಪಿರುವುದು ಹೇಗೆ ಎಂಬುದು ಅಚ್ಚರಿ ಹುಟ್ಟಿಸಿದೆ. ಬಾಲಕ ಇರಾನ್‌ಗೆ

ವಿಮಾನದ ಚಕ್ರದ ನಡುವೆ ಅಡಗಿಕೊಂಡು ಅಫಘಾನಿಸ್ತಾನದಿಂದ ದಿಲ್ಲಿ ಗೆ ಬಂದ ಬಾಲಕ Read More »

ದ.ಕ.ಜಿ.ಪ.ಹಿ.ಪ್ರಾ. ಶಾಲೆ ಗೋಳಿಯಡ್ಕ ರೆಂಜಿಲಾಡಿಯಲ್ಲಿ ಬಿಜಿಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ NSS ಶಿಬಿರ

ಮಂಗಳೂರು: ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ವಿಭಾಗವು 2025 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಕಡಬ ತಾಲೂಕಿನ ದ.ಕ.ಜಿ. ಪಂ.ಹಿ ಪ್ರಾ. ಶಾಲೆ ಗೋಳಿಯಡ್ಕ, ರಂಜಿಲಾಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದ ಉದ್ಘಾಟನೆ ಸೆ. 23 ರಂದು ಅಪರಾಹ್ನ 2.30ಕ್ಕೆ ನಡೆಯಲಿದ್ದು, ಸಂಸ್ಥೆ ಮುಖ್ಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆಯನ್ನು

ದ.ಕ.ಜಿ.ಪ.ಹಿ.ಪ್ರಾ. ಶಾಲೆ ಗೋಳಿಯಡ್ಕ ರೆಂಜಿಲಾಡಿಯಲ್ಲಿ ಬಿಜಿಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ NSS ಶಿಬಿರ Read More »

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ತನದಲ್ಲಿ ನವರಾತ್ರಿ ಉತ್ಸವ ಮತ್ತು ಚಂಡಿಕಾಯಾಗದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರನ್ನ ಉದ್ಘಾಟಿಸಿದರು. ಕ್ಷೇತ್ರದ ಪರಂಪರೆಯಿಂದ ಬೆಳೆದು ಬಂದಿರುವ ಯಕ್ಷಗಾನ ಸೇವೆ ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹದಿಂದ ನಿರಂತರವಾಗಿ ಈ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ವಹಿಸಿದ್ದು ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ದುರ್ಗಾ ಮಾತೆಯ ಅನುಗ್ರಹ ಪಡೆಯುವಂತಾಗಲಿಯೆಂದರು.

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ Read More »

ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ

ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಕರ್ಣಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಅನುರಾಗ ವಠಾರ ಪುತ್ತೂರು ಇದರ ವತಿಯಿಂದ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಸ್ವಚ್ಚತಾ ಶ್ರಮಸೇವೆ ನಡೆಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಶ್ರಮದಾನ ಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರ ಪರವಾಗಿ ಸಂಘದ ಅಧ್ಯಕ್ಷರಿಗೆ ಹಾಗೂ ಕಾಯಾದ್ಯಕ್ಷರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರಮದಾನ ಸೇವೆಯಲ್ಲಿ

ಕಟ್ಟಡ ಕಾರ್ಮಿಕ ಸಂಘದಿಂದ ಕುಂಜೂರು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ್ನ Read More »

ಕೆಎಸ್ ಆರ್ ಟಿಸಿ ಬಸ್ – ಕಾರು ಡಿಕ್ಕಿ : ಪ್ರಯಾಣಿಕರು ಪವಾಡ ಸದೃಶ ಪಾರು

ಪುತ್ತೂರು: ಆರ್ಯಾಪು ಗ್ರಾಮದ ಸಂಸ್ಕಾರು ಪರ್ಪುಂಜ ನಡುವೆ ಇಂದು ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಹಾಗೂ ಟೂರಿಸ್ಟ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಬಸ್ಗೆ, ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಕಾರು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಪ್ಪು ದಿಕ್ಕಿನಲ್ಲಿ ಹೋಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಕಾರು ತಿರುಗಿ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಕಾರಿನಲ್ಲಿ ಇದ್ದ

ಕೆಎಸ್ ಆರ್ ಟಿಸಿ ಬಸ್ – ಕಾರು ಡಿಕ್ಕಿ : ಪ್ರಯಾಣಿಕರು ಪವಾಡ ಸದೃಶ ಪಾರು Read More »

ಜನರ ಬೇಡಿಕೆ ಮನ್ನಿಸಿ ನಾಟಿ ಕೋಳಿಯನ್ನು ನೀಡುತ್ತಿದ್ದೇವೆ: ಶಾಸಕ ಅಶೋಕ್ ರೈ

ಪುತ್ತೂರು: ಇಷ್ಟು ವರ್ಷ ಪಶು ಸಂಗೋಪನಾ ಇಲಾಖೆಯಿಂದ ಗಿರಿರಾಜ ಕೋಳಿ ಮರಿಗಳನ್ನು ನೀಡಲಾಗುತ್ತಿತ್ತು ಆದರೆ ಈ ಬಾರಿ ಜಿಲ್ಲೆಯ ಜನರ ಬೇಡಿಕೆಯಂತೆ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡುತ್ತಿದ್ದೇವೆ, ಮಹಿಳೆಯರ ಸ್ವ ಉದ್ಯೋಗಕ್ಕೂ ಇದು ಪ್ರೇರಣೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪಶು ಸಂಗೋಪನಾ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅರ್ಹ 46 ಮಹಿಳೆಯರಿಗೆ ವಾರದ ಕೋಳಿ ಮರಿಗಳನ್ನು ವಿತರಿ ಮಾತನಾಡಿದರು.ಪ.ಪಂಗಡದ 40 ,ಸಾಮಾನ್ಯ 4 ಹಾಗೂ ಪಜಾತಿ ಕುಟುಂಬದ ಒಟ್ಟು 46 ಮಂದಿಗೆ ಮರಿಗಳನ್ನು

ಜನರ ಬೇಡಿಕೆ ಮನ್ನಿಸಿ ನಾಟಿ ಕೋಳಿಯನ್ನು ನೀಡುತ್ತಿದ್ದೇವೆ: ಶಾಸಕ ಅಶೋಕ್ ರೈ Read More »

ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲು ಡಿಸಿಗೆ ಮನವಿ

ಹಬ್ಬಗಳ ಸಂದರ್ಭದಲ್ಲಿ ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ಮಾಡಿ ಕಲೆಗೆ ಅಪಚಾರ ಮಂಗಳೂರು : ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಮತ್ತಿತರ ಹಬ್ಬಗಳ ಸಂದರ್ಭಗಳಲ್ಲಿ ಯಕ್ಷಗಾನದ ವೇಷ ಹಾಕಿ ಭಿಕ್ಷಾಟನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ನಿಷೇಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ದ.ಕ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗೆ ಯಕ್ಷಗಾನದ ವೇಷ ಧರಿಸಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಬೇಕೆಂದು ಮನವಿ ಮಾಡಿದೆ. ವೇದಿಕೆಗಳಲ್ಲಿ ಮಾತ್ರ ಈ ಧಾರ್ಮಿಕ ಶ್ರೇಷ್ಠ

ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲು ಡಿಸಿಗೆ ಮನವಿ Read More »

ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ಆಗಮಿಸಿ ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್‌

ಚಾಮುಂಡಿ ತಾಯಿಯ ದರ್ಶನ ಪಡೆದು ಮಂಗಳಾರತಿ ಸ್ವೀಕಾರ ಮೈಸೂರು: ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ತಲೆಗೆ ಮೈಸೂರು ಮಲ್ಲಿಗೆ ಮುಡಿದು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಉದ್ಘಾಟಿಸಿದರು. ಈ ಮೂಲಕ ಮಲ್ಲಿಗೆ ಮುಡಿದು ಹಿಂದು ಸಂಪ್ರದಾಯದಂತೆ ದಸರಾ ಉದ್ಘಾಟಿಸುತ್ತೀರಾ ಎಂದು ತನಗೆ ಸವಾಲು ಹಾಕಿದವರಿಗೆ ದಿಟ್ಟ ಉತ್ತರ ನೀಡಿದರು. ದಸರಾ ಉದ್ಘಾಟನೆಗೆ ಆಗಮಿಸಿದ ಬಾನು ಮುಷ್ತಾಕ್‌ ಆರಂಭದಲ್ಲಿ

ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ಆಗಮಿಸಿ ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್‌ Read More »

ಇಂದಿನಿಂದ ಮನೆಮನೆಗೆ ಬರಲಿದ್ದಾರೆ ಜಾತಿ ಗಣತಿ ಸಮೀಕ್ಷೆದಾರರು

60 ಪ್ರಶ್ನಾವಳಿಗಳ ಮೂಲಕ 7 ಕೋಟಿ ಕನ್ನಡಿಗರ ಸಮಗ್ರ ಮಾಹಿತಿ ಸಂಗ್ರಹ ಬೆಂಗಳೂರು: ಭಾರಿ ವಿವಾದಕ್ಕೆ ಗುರಿಯಾಗಿರುವ ಸರ್ಕಾರದ ಜಾತಿ ಗಣತಿ (ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ) ಇಂದಿನಿಂದ ಪ್ರಾರಂಭವಾಗಲಿದೆ. ಹಲವು ಸಮುದಾಯಗಳ ವಿರೋಧ, ಅಸಮಾಧಾನ, ಆಕ್ಷೇಪ, ಆತಂಕ, ಗೊಂದಲದ ನಡುವೆಯೇ ಜಾತಿ ಗಣತಿ ರಾಜ್ಯಾದ್ಯಂತ ನಡೆಯಲಿದೆ. ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಾಡಿನ 7 ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದಿನಿಂದ ಅಕ್ಟೋಬರ್ 7ರವರೆಗೆ ಗಣತಿ ಮಾಡುವ ಶಿಕ್ಷಕರು

ಇಂದಿನಿಂದ ಮನೆಮನೆಗೆ ಬರಲಿದ್ದಾರೆ ಜಾತಿ ಗಣತಿ ಸಮೀಕ್ಷೆದಾರರು Read More »

error: Content is protected !!
Scroll to Top