ಸುದ್ದಿ

ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ

ಬೆಳ್ತಂಗಡಿ : ಉಜಿರೆಯ ಎಸ್.ಡಿ.ಯಂ ಮಹಾವಿದ್ಯಾಲಯದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ| ಹಾಮಾನಾ ಸಂಶೋಧನಾ ಕೇಂದ್ರದ ಅಭ್ಯರ್ಥಿ ಸುವೀರ್ ಜೈನ್ ಅವರಿಗೆ ಪಿಎಚ್.ಡಿ ಪದವಿ ದೊರೆತಿದೆ. ಇವರು ಡಾ.ಎ.ಜಯಕುಮಾರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಮತ್ತು ಅಭಿವೃದ್ಧಿ- ರುಡ್‍ ಸೆಟ್‍ ನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಮಹಾಪ್ರಬಂಧ ರಚಿಸಿ ವಿಶ್ವವಿದ್ಯಾಲಯಕ್ಕೆ ಮಂಡನೆ ಮಾಡಿದ್ದರು. ಪ್ರಸ್ತುತ ಇವರು ಎಸ್.ಡಿ.ಯಂ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ B.voc ವಿಭಾಗದ […]

ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ Read More »

ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ : ಇಂಡಿ ಮೈತ್ರಿಕೂಟಕ್ಕೆ ಓಮರ್‌ ಅಬ್ದುಲ್ಲ ಲೇವಡಿ

ಸೋಲು-ಗೆಲುವಿನ ನಡುವೆ ಹೊಯ್ದಾಡುತ್ತಿರುವ ಅರವಿಂದ ಕೇಜ್ರಿವಾಲ್‌ ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಪರಾಭವ ಬಹುತೇಕ ನಿಶ್ಚಿತಗೊಂಡಿರುವಂತೆ ಕಾಂಗ್ರೆಸ್‌ ಮತ್ತು ಆಪ್‌ ವಿರುದ್ಧ ಇಂಡಿ ಮೈತ್ರಿಕೂಟದ ಮಿತ್ರಪಕ್ಷಗಳು ಕೆಂಡ ಕಾರತೊಡಗಿವೆ. ಇಂಡಿ ಭಾಗವಾಗಿರುವ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲ ಆಪ್‌ ಮೇಲೆ ಸೋಲಿನ ಕರಿಮೋಡ ಕವಿಯುತ್ತಿರುವಂತೆಯೇ ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ ಎಂದು ಲೇವಡಿ ಮಾಡಿದ್ದಾರೆ.ದಿಲ್ಲಿ ಚುನಾವಣೆಯಲ್ಲಿ ಇಂಡಿ ಮಿತ್ರಪಕ್ಷಗಳಾದ ಕಾಂಗ್ರೆಸ್‌ ಮತ್ತು ಆಪ್‌ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮಾತ್ರವಲ್ಲದೆ ಪ್ರಚಾರದ ವೇಳೆ ಸಾಕಷ್ಟು ಕಿತ್ತಾಡಿಕೊಂಡಿದ್ದವು. ಈ

ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ : ಇಂಡಿ ಮೈತ್ರಿಕೂಟಕ್ಕೆ ಓಮರ್‌ ಅಬ್ದುಲ್ಲ ಲೇವಡಿ Read More »

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ

ಸುಳ್ಯ : ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರು, ಹಾಗೂ ಎನ್ನೆಂಸಿಯ ಉಪನ್ಯಾಸಕರೂ  ಆದ  ಡಾ. ಅನುರಾಧಾ ಕುರುಂಜಿ ಯವರು ಕರ್ನಾಟಕ‌ ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಎನ್ ಎಸ್ ಎಸ್ ಕೋಶ ಮತ್ತು ಮಂಗಳೂರಿನ ಯೇನೆಪೋಯ ಡೀಮ್ಡ್ ವಿಶ್ವ‌ವಿದ್ಯಾಲಯದ ಸಹಯೋಗದಲ್ಲಿ  ಫೆ 3 ರಿಂದ 7 ರವರೆಗೆ ಏನೇಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ  ರಾಜ್ಯದ  ವಿವಿಧ ಪದವಿ, ಮೆಡಿಕಲ್ , ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಪದವಿ

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ Read More »

ನಾಳೆ (ಫೆ.9) : ಬಾಂಧವ್ಯ ಫ್ರೆಂಡ್ಸ್, ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ

ಪುತ್ತೂರು : ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 8ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಫೆ. 9ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪುತ್ತೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಂದ ಅಂಡರ್ ಆರ್ಮ್ ಕ್ರಿಕೆಟ್ ಆಡಿಸಿರುವ ಹೆಗ್ಗಳಿಕೆ ಹೊಂದಿರುವ ಬಾಂಧವ್ಯ ಫ್ರೆಂಡ್ಸ್ ಈ ಬಾರಿ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ ಏರ್ಪಡಿಸಿದೆ. ಇದರೊಂದಿಗೆ ಕ್ರೀಡಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸ್ಕರಿಯ ಎಂ.ಎ., ಫಾರೂಕ್ ಶೇಖ್

ನಾಳೆ (ಫೆ.9) : ಬಾಂಧವ್ಯ ಫ್ರೆಂಡ್ಸ್, ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ Read More »

ದಿಲ್ಲಿ ಫಲಿತಾಂಶ : ಆರಂಭಿಕ ಹಂತದಲ್ಲಿ ಬಿಜೆಪಿಗೆ ಮುನ್ನಡೆ

ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಾರಂಭವಾಗಿದ್ದು, ಆರಂಭಿಕ ಹಂತದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಆರಂಭದ ಕೆಲವು ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ 40, ಆಪ್‌ 29 ಮತ್ತು ಕಾಂಗ್ರೆಸ್‌ ಬರೀ 1 ಸ್ಥಾನದಲ್ಲಿ ಮುಂದಿರುವುದು ಕಂಡುಬಂದಿದೆ. ಮುಖ್ಯಮಂತ್ರಿ ಆತಿಶಿ ಮರ್ಲೆನಾ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಂಜ್ರಿವಾಲ್‌, ಮಾಜಿ ಸಚಿವ ಮನೀಷ್‌ ಸಿಸೋದಿಯ ಅವರಂಥ ದಿಗ್ಗಜರೇ ಆರಂಭದ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ದಿಲ್ಲಿ ಫಲಿತಾಂಶ : ಆರಂಭಿಕ ಹಂತದಲ್ಲಿ ಬಿಜೆಪಿಗೆ ಮುನ್ನಡೆ Read More »

ತಂದೆಯ ಶವವನ್ನೇ ಠಾಣೆ ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ ಇನ್‌ಸ್ಪೆಕ್ಟರ್‌

ದೌರ್ಜನ್ಯದ ದೂರು ಕೊಟ್ಟವರ ವಿರುದ್ಧವೇ ಕಿರುಕುಳ ನೀಡಿ ಸಾವಿಗೆ ಕಾರಣರಾದದ್ದಕ್ಕೆ ಆಕ್ರೋಶ ಬೆಂಗಳೂರು: ಪೊಲೀಸ್​ ಇನ್‌ಸ್ಪೆಕ್ಟರ್‌ ಒಬ್ಬರು ತನ್ನ ತಂದೆಯ ಶವವನ್ನೇ ಪೊಲೀಸ್‌ ಠಾಣೆ ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗದ ಹಾರುಗೇರಿಯಲ್ಲಿ ಇಂದು ಮುಂಜಾನೆ ಹೊತ್ತು ನಡೆದಿದೆ. ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​​ ಅಶೋಕ ಸದಲಗಿ ಹಾರುಗೇರಿ ಪೊಲೀಸ್​ ಠಾಣೆ ಪಿಎಸ್​ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಿದವರು. ಜನವರಿ10ರಂದು ಇನ್​ಸ್ಪೆಕ್ಟರ್​​ ಅಶೋಕ ಸದಲಗಿ ತಂದೆ

ತಂದೆಯ ಶವವನ್ನೇ ಠಾಣೆ ಮುಂದಿಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ ಇನ್‌ಸ್ಪೆಕ್ಟರ್‌ Read More »

ಬಾಲಿವುಡ್‌ ನಟ ಸೋನು ಸೂದ್‌ ವಿರುದ್ಧ ಬಂಧನ ವಾರಂಟ್‌

ಕೋವಿಡ್‌ ಕಾಲದ ಆಪತ್ಬಾಂಧವ ಮಾಡಿದ ಅಪರಾಧ ಏನು ಗೊತ್ತೆ? ಮುಂಬಯಿ: ಬಾಲಿವುಡ್‌ನ ಜನಪ್ರಿಯ ವಿಲನ್‌ ಸೋನು ಸೂದ್‌ ವಿರುದ್ಧ ಪಂಜಾಬಿನ ನ್ಯಾಯಾಲಯ ಬಂಧನ ವಾರಂಟ್‌ ಜಾರಿಗೊಳಿಸಿದೆ. ಲೂಧಿಯಾನ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ಈ ವಾರಂಟ್ ಹೊರಡಿಸಿದ್ದಾರೆ. ಲೂಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ ವಂಚಿಸಿದ ಆರೋಪ ಮೋಹಿಲ್‌ ಶುಕ್ಲಾ ವಿರುದ್ಧ

ಬಾಲಿವುಡ್‌ ನಟ ಸೋನು ಸೂದ್‌ ವಿರುದ್ಧ ಬಂಧನ ವಾರಂಟ್‌ Read More »

ಮಲ್ಪೆಯ ಮೀನುಗಾರಿಕೆ ದೋಣಿ ಭಟ್ಕಳದಲ್ಲಿ ಮುಳುಗಡೆ

ಬಂಡೆಗೆ ಬಡಿದು ಮುಳುಗಿ 50 ಲ.ರೂ. ನಷ್ಟ ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ಹೋಗಿದ್ದ ದೋಣಿಯೊಂದು ಕಾರವಾರ ಸಮೀಪ ಅವಘಡಕ್ಕೀಡಾಗಿ ಮುಳುಗಿದೆ. ದೋಣಿಯಲ್ಲಿದ್ದ ಆರು ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿ ದಡಕ್ಕೆ ಸುರಕ್ಷಿತವಾಗಿ ಕರೆತಂದಿದ್ದಾರೆ. ಭಟ್ಕಳದ ಬಂದರು ಬಳಿ ಬೋಟ್ ಕಲ್ಲಿಗೆ ತಾಗಿ ಮುಳುಗಡೆಯಾಗಿದೆ ಎನ್ನಲಾಗಿದೆ. ಉಡುಪಿ ಸಮೀಪದ ಬ್ರಹ್ಮಾವರದ ಸುರೇಶ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಕುಮಟಾ ಭಾಗದಲ್ಲಿ ಮೀನುಗಾರಿಕೆ ನಡೆಸಿ ಭಟ್ಕಳ ಬಂದರಿಗೆ ಬರುವಾಗ ಅವಘಡ ಸಂಭವಿಸಿದೆ. ಮೀನು ಇಳಿಸಲು ಬರುತ್ತಿದ್ದಾಗ ಭಟ್ಕಳ ಬಂದರು ಭಾಗದ

ಮಲ್ಪೆಯ ಮೀನುಗಾರಿಕೆ ದೋಣಿ ಭಟ್ಕಳದಲ್ಲಿ ಮುಳುಗಡೆ Read More »

ಇಂದು ದಿಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗಾಗಿ ವ್ಯಾಪಕ ತಯಾರಿ ಮಾಡಿಕೊಳ್ಳಲಾಗಿದ್ದು, 8 ಗಂಟೆ ಎಣಿಕೆ ಶುರುವಾಗಲಿದೆ. ಮೊದಲು ಅಂಚೆ ಮತಗಳನ್ನು ಎಣಿಸಿ ಬಳಿಕ ಮತಯಂತ್ರಗಳ ಮತಗಳನ್ನು ಎಣಿಸುವುದು ಸಂಪ್ರದಾಯ. ಫೆಬ್ರವರಿ 5ರಂದು ದಿಲ್ಲಿ ವಿಧಾನಸಭೆಯ 3ಲ್ಲ 70 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಶೇ. 60.54 ಮತದಾನವಾಗಿದೆ. ದಿಲ್ಲಿ ಮಟ್ಟಿಗೆ ಇದು ಉತ್ತಮ ಮತದಾನ ಪ್ರಮಾಣವಾಗಿರುವುದರಿಂದ ಫಲಿತಾಂಶ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಮತದಾನ ಮುಕ್ತಾಯವಾದ ಬೆನ್ನಿಗೆ ಪ್ರಕಟವಾದ ಬಹುತೇಕ

ಇಂದು ದಿಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ Read More »

ಹಠಾತ್‌ ಸಾವುಗಳ ಸಂಶೋಧನೆಗೆ ತಜ್ಞರ ಸಮಿತಿ ರಚನೆ : ಸಿದ್ದರಾಮಯ್ಯ ಆದೇಶ

ಪತ್ರಕರ್ತನ ಪತ್ರಕ್ಕೆ ಸ್ಪಂದಿಸಿ ಸೂಚನೆ ನೀಡಿದ ಸಿಎಂ ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯದಿಂದಿರುವವರು ದಿಢೀರ್‌ ಎಂದು ಹೃದಯಾಘಾತವಾಗಿ ಸಾವನ್ನಪ್ಪುತ್ತಿದ್ದಾರೆ, ಅದರಲ್ಲೂ ಯುವಕರು ಮತ್ತು ಮಕ್ಕಳು ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಾವಿಗೀಡಾಗುತ್ತಿರುವುದು ಕಳವಳಕಾರಿಯಾಗಿ ಸಂಭವಿಸುತ್ತಿದೆ. ಈ ಕುರಿತು ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಪತ್ರಕರ್ತರೊಬ್ಬರು ಇ.-ಮೈಲ್‌ನಲ್ಲಿ ಬರೆದ ಪತ್ರವನ್ನು ಪರಿಗಣಿಸಿ ಸಾವುಗಳ ಬಗ್ಗೆ ಸಂಶೋಧನೆ ನಡೆಸಿ ಮುಂದೆ ಈ ರೀತಿ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ

ಹಠಾತ್‌ ಸಾವುಗಳ ಸಂಶೋಧನೆಗೆ ತಜ್ಞರ ಸಮಿತಿ ರಚನೆ : ಸಿದ್ದರಾಮಯ್ಯ ಆದೇಶ Read More »

error: Content is protected !!
Scroll to Top