ಸುದ್ದಿ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಮ್ರಧ್ವಜ ಕಾಳಗ ತಾಳಮದ್ದಳೆ

ಗುರುವಾಯನ ಕೆರೆ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಶ್ರೀ ಮಹಾಭಾರತ ಸರಣಿಯ 63ನೇ ಕಾರ್ಯಕ್ರಮವಾಗಿ ತಾಮ್ರಧ್ವಜ ಕಾಳಗ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ,  ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ಮಯೂರಧ್ವಜ),ಶಿವಾನಂದ ಭಂಡಾರಿ (ನಾರದ ),ಹರೀಶ ಆಚಾರ್ಯ ಬಾರ್ಯ (ತಾಮ್ರಧ್ವಜ ), ದಿವಾಕರ ಆಚಾರ್ಯ ಗೇರುಕಟ್ಟೆ (ನಕುಲ ಧ್ವಜ ), ರಾಘವ ಮೆದಿನ (ಶ್ರೀಕೃಷ್ಣ ), ರಾಘವ. ಯಚ್ (ಅರ್ಜುನ ) […]

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಮ್ರಧ್ವಜ ಕಾಳಗ ತಾಳಮದ್ದಳೆ Read More »

ಪುತ್ತೂರಿನ ಉದ್ಯಮಿಯನ್ನು ಅಪಹರಿಸಿ 28 ಲ.ರೂ. ದರೋಡೆ

ಕಾರು ಅಡ್ಡಗಟ್ಟಿ ಅಜ್ಞಾತ ಸ್ಥಳಕ್ಕೆ ಒಯ್ದು ಚಿತ್ರಹಿಂಸೆ ಬೆಂಗಳೂರು: ಪುತ್ತೂರಿನ ಉದ್ಯಮಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಚಿತ್ರಹಿಂಸೆ ನೀಡಿ, 28 ಲಕ್ಷ ರೂ. ದೋಚಿರುವ ಘಟನೆ ಬೆಂಗಳೂರಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕೊಲ್ಪೆ ಗ್ರಾಮದ ನಿವಾಸಿ ಇಕ್ಬಾಲ್ ಅಪಹರಣಕ್ಕೆ ಒಳಗಾದವರಾಗಿದ್ದು, ಇವರು ಪೆಟ್ರೋಲ್‌ ಬಂಕ್ ಹಾಗೂ ಟ್ರಾನ್ಸ್‌ಪೋರ್ಟ್ ವ್ಯವಹಾರ ಹೊಂದಿದ್ದಾರೆ. ಜ.24ರಂದು ಇಕ್ಬಾಲ್‌ ದೇವನಹಳ್ಳಿಯ ಹೋಟೆಲ್‌ಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಬೆಂಗಳೂರಿನಲ್ಲಿರುವ ಸ್ನೇಹಿತ ಕರೀಂ ಮನೆಯಲ್ಲಿ ಉಳಿದುಕೊಂಡು ಮರುದಿನ

ಪುತ್ತೂರಿನ ಉದ್ಯಮಿಯನ್ನು ಅಪಹರಿಸಿ 28 ಲ.ರೂ. ದರೋಡೆ Read More »

ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ

ಪುತ್ತೂರು  : ಅಖಿಲ ಕರ್ನಾಟಕ ಹಿರಿಯರ ಸೇವಾಪ್ರತಿಷ್ಠಾನ( ರಿ ) ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಪುತ್ತೂರು ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಹಿರಿಯರ ಸೇವಾ ಸಂಘಟನೆಯನ್ನು ಸದಸ್ಯರ ಸೇರ್ಪಡೆ ಮಾಡುವ ಮೂಲಕ ಬಲಪಡಿಸಬೇಕೆಂದು  ತಿಳಿಸಿದರು. ಪ್ರತೀ ತಿಂಗಳ ಕೊನೆಯ  ಗುರುವಾರ ಸಭೆ ನಡೆಸುವ  ಮತ್ತು ಸಮಾಜದ ವಿವಿದ ರಂಗಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೇಂದ್ರ

ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ Read More »

ಬೈಕ್ ಡಿಕ್ಕಿ ; ಮಹಿಳೆ ಮೃತ್ಯು

ಬಿ.ಸಿ.ರೋಡ್ : ರಸ್ತೆ ದಾಟಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತುಕೊಂಡಿದ್ದ ವಯಸ್ಸಾದ  ಮಹಿಳೆಯೋರ್ವರಿಗೆ ದ್ವಿಚಕ್ರ ವಾಹನ‌ ಡಿಕ್ಕಿಯಾಗಿ ಮೃತಪಟ್ಟ ಘಟನೆ ಬಿಸಿರೋಡಿನ ಕೈಕಂಬದ ಮಿತ್ತಬೈಲು ಎಂಬಲ್ಲಿ ಜ.30 ರಂದು ಗುರುವಾರ ಸಂಜೆ ವೇಳೆ ನಡೆದಿದೆ. ಪುದು ಸಮೀಪದ ‌ಸುಜೀರು ನಿವಾಸಿ ಬೀಪಾತುಮ್ಮ ( 68) ಮೃತಪಟ್ಟ ಮಹಿಳೆ.  ಮಿತ್ತಬೈಲು ಮೊಹಿದ್ದೀನ್ ಜುಮಾಮಸೀದಿ ಹಾಲ್ ನಲ್ಲಿ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮ ಮುಗಿಸಿ ,ವಾಪಸು ಮನೆ ಕಡೆಗೆ ಹೋಗುವುದಕ್ಕೆ ಹೆದ್ದಾರಿಯನ್ನು ದಾಟಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಅತೀವೇಗ

ಬೈಕ್ ಡಿಕ್ಕಿ ; ಮಹಿಳೆ ಮೃತ್ಯು Read More »

ಮುಕ್ರಂಪಾಡಿ ಬೊಮ್ಮಣ್ಣ ಗೌಡ ನಿಧನ

ಪುತ್ತೂರು : ಪುತ್ತೂರಿನ ದರ್ಬೆಯ ಮುಕ್ರಂಪಾಡಿ ನಿವಾಸಿ ಬೊಮ್ಮಣ್ಣ ಗೌಡ ನಿಧನರಾಗಿದ್ದಾರೆ. ಮೃತರು ಪತ್ನಿ ಪ್ರೇಮಾ, ಶೋಭಾ .ಕೆ, ಸತೀಶ್ ಗೌಡ, ವಿದ್ಯಾ .ಕೆ, ಹರೀಶ್.ಕೆ, ಶಿವಪ್ರಸಾದ್, ಪವಿತ್ರ, ಕುಟುಂಬಸ್ಥರನ್ನು ಅಗಲಿದ್ದಾರೆ.

ಮುಕ್ರಂಪಾಡಿ ಬೊಮ್ಮಣ್ಣ ಗೌಡ ನಿಧನ Read More »

ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆ : ವಿವಿಧೆಡೆ ಲೋಕಾಯುಕ್ತ ದಾಳಿ

ಪಿಡಿಒ ಮನೆಯಲ್ಲಿ ಮಷಿನ್‌ ಬಳಸಿ ನೋಟು ಎಣಿಕೆ ಬೆಂಗಳೂರು: ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಇನ್ನೊಂದು ಸುತ್ತಿನ ಭ್ರಷ್ಟರ ಬೇಟೆ ಆರಂಭಿಸಿದ್ದು, ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ್ದ ಬೆಳಗಾವಿ, ಬಾಗಲಕೋಟೆ ಹಾಗೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನ ಎರಡು ಸ್ಥಳಗಳಲ್ಲಿ ದಾಳಿ ನಡೆಸಿರುವ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಹೊಲಗೇರಿ ಪಿಡಿಒ ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್

ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆ : ವಿವಿಧೆಡೆ ಲೋಕಾಯುಕ್ತ ದಾಳಿ Read More »

ಕರುವಿನ ಬಾಲ ಕತ್ತರಿಸಿದ ಸುಳ್ಳು ಸುದ್ದಿ ಹರಡಿದ ವ್ಯಕ್ತಿ ವಿರುದ್ಧ ಕೇಸ್‌

ಉಡುಪಿ: ಮನೆಗೆ ಬಂದ ಸೇಲ್ಸ್‌ಮ್ಯಾನ್‌ ಕರುವಿನ ಬಾಲ ಕತ್ತರಿಸಿದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ್ದ ವ್ಯಕ್ತಿಯ ವಿರುದ್ಧ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ಅನಿಲ್‌ ಮಯ್ಯ ಎಂಬವರ ಮನೆಗೆ ವಸ್ತುಗಳನ್ನು ಮಾರಾಟ ಮಾಡಲು ಬಂದ ಮತಾಂಧ ವ್ಯಕ್ತಿಯೊಬ್ಬ ಮನೆಯವರು ವಸ್ತುಗಳನ್ನು ನಿರಾಕರಿಸಿದಾಗ ಮನೆಯ ಆವರಣದೊಳಗೆ ಮೇಯಲು ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾನೆ ಎಂಬ ಸುದ್ದಿಯನ್ನು ಬುಧವಾರ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಡಲಾಗಿತ್ತು. ಈ ಕುರಿತು ಯಾವುದೇ ಎಫ್‌ಐಆರ್‌

ಕರುವಿನ ಬಾಲ ಕತ್ತರಿಸಿದ ಸುಳ್ಳು ಸುದ್ದಿ ಹರಡಿದ ವ್ಯಕ್ತಿ ವಿರುದ್ಧ ಕೇಸ್‌ Read More »

ಕಾಡಿನಲ್ಲಿರುವ ಐರೋಳ್ ಹಣ್ಣು ತಿಂದು  ಮೃತಪಟ್ಟ ವ್ಯಕ್ತಿ

ಸುಳ್ಯ : ಕಾಡಿನಲ್ಲಿರುವ ಐರೋಳ್ ಹಣ್ಣನ್ನು ತಿಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಅಮರ ಪಟ್ಟೂರು ಗ್ರಾಮದ ಕುಳ್ಳಾಜೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಲೋಕಯ್ಯ ಹಾಗೂ ಅವರ ಮಗಳು ಲೀಲಾವತಿಯವರು ಐರೋಳ್ ಹಣ್ಣನ್ನು ತಿಂದಿದ್ದು, ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದರು. ಬಳಿಕ ಔಷಧ ಪಡೆದುಕೊಂಡಿದ್ದ ಲೋಕಯ್ಯ ಅವರು ಗುಣಮುಖರಾಗಿದ್ದರು. ಲೀಲಾವತಿ ಕೆಲವು ದಿನಗಳ ಬಳಿಕ ಮೃತರಾಗಿದ್ದರು ಆದರೀಗ ಲೋಕಯ್ಯ ಗುಣಮುಖರಾಗಿದ್ದರೂ, ಕೆಲವು ದಿನಗಳಿಂದ ಅಸೌಖ್ಯಗೊಂಡಿದ್ದು, ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಾಡಿನಲ್ಲಿರುವ ಐರೋಳ್ ಹಣ್ಣು ತಿಂದು  ಮೃತಪಟ್ಟ ವ್ಯಕ್ತಿ Read More »

ದಾವಣಗೆರೆಯಲ್ಲಿ ಕಲಾ ನಿರ್ದೇಶಕರಾದ ಕುಮಾರ್ ಪೆರ್ನಾಜೆ  “ಸ್ವರ ಸಿಂಚನ”, ಕಲಾ ತಂಡದ ವಿಶೇಷ ಬರಹಗಾರಕ್ಕೆ ಸೌಮ್ಯ ಪೆರ್ನಾಜೆ, ಸಂಗೀತಕ್ಕೆ ಸವಿತಾ ಕೊಡಂದೂರು  ಅವರಿಗೆ “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆ.

ಪೆರ್ನಾಜೆ: ದಾವಣಗೆರೆಯ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ದಾವಣಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಯ ಸಹಯೋಗದಲ್ಲಿ  70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ದಾವಣಗೆರೆಯಲ್ಲಿ ಕಲಾ ನಿರ್ದೇಶಕರಾದ ಕುಮಾರ್ ಪೆರ್ನಾಜೆ  “ಸ್ವರ ಸಿಂಚನ”, ಕಲಾ ತಂಡದ ವಿಶೇಷ ಬರಹಗಾರಕ್ಕೆ ಸೌಮ್ಯ ಪೆರ್ನಾಜೆ, ಸಂಗೀತಕ್ಕೆ ಸವಿತಾ ಕೊಡಂದೂರು  ಅವರಿಗೆ “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ನಾಡು ನುಡಿ ಕಲೆ ಸಾಹಿತ್ಯ

ದಾವಣಗೆರೆಯಲ್ಲಿ ಕಲಾ ನಿರ್ದೇಶಕರಾದ ಕುಮಾರ್ ಪೆರ್ನಾಜೆ  “ಸ್ವರ ಸಿಂಚನ”, ಕಲಾ ತಂಡದ ವಿಶೇಷ ಬರಹಗಾರಕ್ಕೆ ಸೌಮ್ಯ ಪೆರ್ನಾಜೆ, ಸಂಗೀತಕ್ಕೆ ಸವಿತಾ ಕೊಡಂದೂರು  ಅವರಿಗೆ “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆ. Read More »

ತುಳು ಸಿನಿಮಾ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’  ನಾಳೆ ತೆರೆಗೆ

ಪುತ್ತೂರು: ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್‌.ಪಿ.ಆರ್. ಫಿಲ್ಡ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಎನ್. ಕುಂಚಲ ಅವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್  ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜ. 31ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಭಾರತ್ ಮಾಲ್, ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್’ನಲ್ಲಿ

ತುಳು ಸಿನಿಮಾ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’  ನಾಳೆ ತೆರೆಗೆ Read More »

error: Content is protected !!
Scroll to Top