ಮಂಗಳೂರಿನ ಜುಗಾರಿ ಅಡ್ಡೆಯಲ್ಲಿ ಪೋಲಿಸರ ದಿಢೀರ್ ದಾಳಿ | ಇಸ್ಪೀಟ್ ಆಟವಾಡುತ್ತಿದ್ದ 12 ಮಂದಿಯ ಬಂಧನ
ಮಂಗಳೂರು : ಮಂಗಳೂರಿನ ಕಾರ್‌ಸ್ಟ್ರೀಟ್ ಬಳಿ ಕಾರ್ಯಾಚರಿಸುತ್ತಿದ್ದ ಜುಗಾರಿ ಅಡ್ಡೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ 12 ಮಂದಿಯನ್ನು ಬಂಧಿಸಿರುವ ಘಟನೆ ನಿನ್ನೆ ನಡೆದಿದೆ. ಆರೋಪಿಗಳನ್ನು ವಿಠೋಭ ದೇವಸ್ಥಾನದ ಬಳಿಯ ನಾಗರಾಜ್ ಭಂಡಾರಿ ಹಾಗೂ ಆತನ ನಿಕಟವರ್ತಿಗಳು ಎಂದು ಎನ್ನಲಾಗಿದೆ. ಜೂಜಾಟದಲ್ಲಿ ಸುಮಾರು 10ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯಿಂದ ಪೊಲೀಸರು ದಿಢೀರ್ ದಾಳಿ ನಡೆಸಿ, ಆರೋಪಿಗಳಿಂದ ನಗದು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನ ಜುಗಾರಿ ಅಡ್ಡೆಯಲ್ಲಿ ಪೋಲಿಸರ ದಿಢೀರ್ ದಾಳಿ | ಇಸ್ಪೀಟ್ ಆಟವಾಡುತ್ತಿದ್ದ 12 ಮಂದಿಯ ಬಂಧನ Read More »