ಸುದ್ದಿ

ರೈಲು ಹಳಿಯಲ್ಲಿ ವೃದ್ಧ ದಂಪತಿ ಶವ ತುಂಡಾದ ಸ್ಥಿತಿಯಲ್ಲಿ ಪತ್ತೆ

ರೈಲು ಹಳಿಯಲ್ಲಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಬೆಂಗಳೂರು: ಹಾಸನ ನಗರದ ಕರೀಗೌಡ ಕಾಲೋನಿಯಲ್ಲಿ ವೃದ್ಧರಿಬ್ಬರ ಶವ ರೈಲು ಹಳಿಯಲ್ಲಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ವೃದ್ಧ ಮಹಿಳೆ ಮತ್ತು ಪುರುಷನ ಮೃತದೇಹ ರೈಲು ಹಳಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಅವರ ಮೇಲೆ ರೈಲು ಹರಿದು ಹೋಗಿದೆ. ಇವರು ವೃದ್ಧ ದಂಪತಿ ಆಗಿರಬೇಕೆಂದು ಶಂಕಿಸಲಾಗಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕತ್ತಲಿನ ವೇಳೆ ಘಟನೆ ನಡೆದಿರಬಹುದೆಂದು ತಿಳಿದುಬಂದಿದೆ. ರೈಲು ಹರಿದ ರಭಸಕ್ಕೆ ದಂಪತಿಯ […]

ರೈಲು ಹಳಿಯಲ್ಲಿ ವೃದ್ಧ ದಂಪತಿ ಶವ ತುಂಡಾದ ಸ್ಥಿತಿಯಲ್ಲಿ ಪತ್ತೆ Read More »

ಶಾಲಾ-ಕಾಲೇಜುಗಳಲ್ಲಿ ಮೊಬೈಲ್‌ ಬ್ಯಾನ್‌?

ಮಕ್ಕಳನ್ನು ಸೋಷಿಯಲ್‌ ಮೀಡಿಯಾ, ಡ್ರಗ್ಸ್‌ನಿಂದ ದೂರವಿಡಲು ಮೊಬೈಲ್‌ ನಿಷೇಧಕ್ಕೆ ಚಿಂತನೆ ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ವಿವಿಗಳ ಕುಲಪತಿಯಾಗಿರುವ ರಾಜ್ಯಪಾಲರ ಅಭಿಪ್ರಾಯ ಕೇಳಿದ್ದಾರೆ. ಸಿಎಂ ಪ್ರಸ್ತಾಪಕ್ಕೆ ರಾಜ್ಯಪಾಲರೂ ಒಪ್ಪಿಗೆ ಸೂಚಿಸಿದ್ದಾರೆ. ಇಂದಿನ ದಿನಗಳಲ್ಲಿ ಯುವಜನರು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಚಿಂತನೆ ಇದೆ. ಈ ಬಗ್ಗೆ ನಮಗೆ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್‌ ಬ್ಯಾನ್‌? Read More »

ಟಿ20 ವಿಶ್ವಕಪ್‌ : ಇಂದು ಭಾರತ-ದಕ್ಷಿಣ ಆಫ್ರಿಕ ಸೂಪರ್‌ 8 ಮುಖಾಮುಖಿ

ಕುತೂಹಲ ಕೆರಳಿಸಿರುವ ಎರಡು ಅಜೇಯ ತಂಡಗಳ ನಡುವಿನ ಹೋರಾಟ ಅಹಮದಾಬಾದ್‌: ಟಿ20 ವಿಶ್ವಕಪ್‌ ಕೂಟದ ಗುಂಪು ಹಂತದಲ್ಲಿ ಅಜೇಯವಾಗಿ ಉಳೀದು ಸೂಪರ್‌ 8 ಸುತ್ತಿಗೆ ಬಂದಿರುವ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೂಒರ್‌ 8 ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಭಾರತ ಗುಂಪು ಹಂತದಲ್ಲಿ ಯುಎಸ್ಎ, ನಮೀಬಿಯಾ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಸೋಲಿಸುವ ಮೂಲಕ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಇಂದಿನಿಂದ ಭಾರತಕ್ಕೆ ನಿಜವಾದ ಸವಾಲು ಎದುರಾಗಲಿದೆ. ಭಾರತದ

ಟಿ20 ವಿಶ್ವಕಪ್‌ : ಇಂದು ಭಾರತ-ದಕ್ಷಿಣ ಆಫ್ರಿಕ ಸೂಪರ್‌ 8 ಮುಖಾಮುಖಿ Read More »

ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವವರೆಗೆ ಹೋರಾಡುತ್ತೇನೆ: ಸಿ ಎಂ ಸಿದ್ದರಾಮಯ್ಯ

ಬೆಂಗಳೂರು: ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವರೆಗೂ ಹೋರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಾಮಾಜಿಕ ದಿನದ ಹಿನ್ನೆಲೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ವಿರೋಧಿಗಳಿಗೆ ಹೆದರಿ ರಣರಂಗ ಬಿಟ್ಟು ಓಡಿ ಹೋಗುವ ಹೇಡಿ ತಾನಲ್ಲ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಪೋಸ್ಟ್‌:ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವವರೆಗೆ ಹೋರಾಡುತ್ತೇನೆ ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು – ಮುಳ್ಳುಗಳ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು

ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವವರೆಗೆ ಹೋರಾಡುತ್ತೇನೆ: ಸಿ ಎಂ ಸಿದ್ದರಾಮಯ್ಯ Read More »

ಅನೈತಿಕ ಸಂಬಂಧದ ಶಂಕೆಯಲ್ಲಿ ಪತ್ನಿಯನ್ನು ಭೀಕರವಾಗಿ ಕೊಂದ ಗಂಡ

ರಾಮನಗರ: ಪತ್ನಿಯ ಮೇಲಿನ ಸಂದೇಹದಿಂದ ಆಕೆಯನ್ನು ಪತಿಯೇ ಹತ್ಯೆಗೈದಿರುವ ಘಟನೆ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳೇಗೌಡನಪಾಳ್ಯದಲ್ಲಿ ನಡೆದಿದೆ. ಸಿಂಚನಾ (21) ಎಂಬ ಮಹಿಳೆ ಮೃತ ದುರ್ದೈವಿ. ಆಕೆಯ ಗಂಡ ರೇಣುಕಯ್ಯ ಎಂಬಾತನೇ ಆರೋಪಿ. ಕೌಟುಂಬಿಕ ಕಲಹ, ಪತ್ನಿಯ ಮೇಲಿನ ಅನೈತಿಕ ಸಂಬಂಧದ ಸಂಶಯದಿಂದ ರೇಣುಕಯ್ಯ ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ‌ಕೊಂದಿದ್ದಾನೆ. ಪ್ರತಿ ನಿತ್ಯ ಪತ್ನಿಯ ಜೊತೆ ಜಗಳವಾಡುತ್ತಿದ್ದ ರೇಣುಕಯ್ಯ ಕೊಲೆ ಮಾಡಿದ ದಿನವೂ ಆಕೆಯ ಜೊತೆ ಜಗಳವಾಡಿದ್ದು, ಬಳಿಕ ಹತ್ಯೆ

ಅನೈತಿಕ ಸಂಬಂಧದ ಶಂಕೆಯಲ್ಲಿ ಪತ್ನಿಯನ್ನು ಭೀಕರವಾಗಿ ಕೊಂದ ಗಂಡ Read More »

ಆಸ್ತಿ ವಿವಾದ: ನ್ಯಾಯಕ್ಕಾಗಿ ಪೊಲೀಸರು ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಚಿಕ್ಕಮಗಳೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿ ಹೆತ್ತವರು, ಸಹೋದರಿಯನ್ನು ಕಳೆದುಕೊಂಡಿದ್ದ ಯುವಕನೊಬ್ಬ ಪೊಲೀಸ್ ಸ್ಟೇಷನ್ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ. ಯುವಕನನ್ನು ‌ಪುನೀತ್ ಎಂದು ಗುರುತಿಸಲಾಗಿದೆ. ಈತ ತನ್ನ ಹೆತ್ತವರು ಬಿಟ್ಟು ಹೋಗಿದ್ದ ಎರಡು ಸಣ್ಣ ಮನೆಗಳ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದನು. ಆತನ ಅತ್ತೆಯೇ ಆತನ ಹಾದಿಗೆ ಅಡ್ಡಗಾಲು ಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಪುನೀತ್ ಪೋಷಕರು ತನ್ನ ಬಳಿ ಹಣ ಪಡೆದಿದ್ದಾಗಿ ಹೇಳಿ ಮನೆಯ ಹಕ್ಕನ್ನು ಆತನಿಗೆ ನೀಡಲು ನಿರಾಕರಿಸಿದ್ದರು. ಈ ಸಂಬಂಧ ಚಿಕ್ಕಮಗಳೂರು ಪೊಲೀಸ್

ಆಸ್ತಿ ವಿವಾದ: ನ್ಯಾಯಕ್ಕಾಗಿ ಪೊಲೀಸರು ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವಕ Read More »

ಮೂವರು ಅಪ್ರಾಪ್ತ ಬಾಲಕಿಯರಿಗೆ ‌ಲೈಂಗಿಕ ಕಿರುಕುಳ ನೀಡಿದ ಕಾಮುಕ ವೃದ್ಧ ಅರೆಸ್ಟ್

ಬೆಂಗಳೂರು: ಮೂವರು ಅಪ್ರಾಪ್ತೆಯರಿಗೆ ಸಿಹಿ ತಿನಿಸಿನ ಆಸೆ ಹುಟ್ಟಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿ 64 ವರ್ಷದ ವೃದ್ಧನನ್ನು ಅನೇಕಲ್ ಪೊಲೀಸರು ಬಂಧಿಸಿದ್ದಾರೆ. ಮಕ್ಕಳನ್ನು ಬೆಳಗ್ಗೆ ಸುಮಾರು 8.30 ರ ಹೊತ್ತಿಗೆ ಪೋಷಕರು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಾಲೆ ಆರಂಭ ಹತ್ತು ಗಂಟೆಗೆ ಆಗುತ್ತಿದ್ದರೂ ಸುಮಾರು ಎರಡು ಗಂಟೆಗಳಿಗೂ ಮೊದಲೇ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಕಾಮುಕ ‌ವೃದ್ಧ ಗಮನಿಸಿದ್ದ. ಆ ಬಳಿಕ ಮಕ್ಕಳಿಗೆ ಚಾಕಲೇಟ್ ನೀಡುವುದಾಗಿ ಆಸೆ ಹುಟ್ಟಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು

ಮೂವರು ಅಪ್ರಾಪ್ತ ಬಾಲಕಿಯರಿಗೆ ‌ಲೈಂಗಿಕ ಕಿರುಕುಳ ನೀಡಿದ ಕಾಮುಕ ವೃದ್ಧ ಅರೆಸ್ಟ್ Read More »

ದುಬೈನಲ್ಲಿ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’, ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ

ದುಬೈ: ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷ ಸುರೇಶ್ ಕುಂಪಲ ಅವರು ತಮ್ಮ ತಾಯಿ ದಿ. ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್ ಕುಂಪಲ ಹಾಗೂ ಸಲಹೆಗಾರರಾದ

ದುಬೈನಲ್ಲಿ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’, ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ Read More »

ಅತಿವೇಗದಿಂದ ಬಂದ ಕಾರು ಸರ್ಕಾರಿ ಬಸ್ಸಿಗೆ ಢಿಕ್ಕಿ

ಕಾಸರಗೋಡು: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ. ಬಸ್‌ಗೆ ಗುದ್ದಿರುವ‌ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ. ಕರ್ನಾಟಕದ ಪುತ್ತೂರು ವಿಭಾಗದ ಬಸ್ಸು ಇದಾಗಿದ್ದು ಕಾಸರಗೋಡಿನಿಂದ ಪ್ರಯಾಣಿಕರನ್ನು ಹೊತ್ತು ಪುತ್ತೂರಿನ ಕಡೆಗೆ ಬರುತ್ತಿತ್ತು. ಈ ವೇಳೆ ಅತಿ ವೇಗದಿಂದ ಬಂದ ಸ್ವಿಫ್ಟ್ ಕಾರು ಬಸ್‌ಗೆ ಗುದ್ದಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ‌ಇಬ್ಬರಿಗೆ ಗಾಯಗಳಾಗಿರುವುದಾಗಿಯೂ ವರದಿಯಾಗಿದೆ.

ಅತಿವೇಗದಿಂದ ಬಂದ ಕಾರು ಸರ್ಕಾರಿ ಬಸ್ಸಿಗೆ ಢಿಕ್ಕಿ Read More »

ಕುರ್ಚಿಯಿಂದ ಕುಸಿದು ಬಿದ್ದು ಯುವಕ ಸಾವು

ಕಾರ್ಕಳ: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಯರ್ಲಪ್ಪಾಡಿಯಲ್ಲಿ ನಡೆದಿದೆ. ಸುಹೇಶ್ (22) ಎಂಬವರೇ ‌ಮೃತ ದುರ್ದೈವಿ. ಮಧ್ಯಾಹ್ನ ವೇಳೆ ಮನೆಯ ಊಟದ ಕೋಣೆಯಲ್ಲಿ ಕುಳಿತಿದ್ದ ಅವರು ಏಕಾಏಕಿ ಬೊಬ್ಬೆ ಹೊಡೆಯುತ್ತಾ ಕೆಳಕ್ಕೆ ಬಿದ್ದಿದ್ದಾಗಿ ತಿಳಿದು ಬಂದಿದೆ. ಆ ಬಳಿಕ ಅಸ್ವಸ್ಥರಾಗಿ ನರಳಾಡುತ್ತಿದ್ದ ಅವರನ್ನು ಕಾರ್ಕಳದ ‌ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಸುಹೇಶ್ ಅವರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕುರ್ಚಿಯಿಂದ ಕುಸಿದು ಬಿದ್ದು ಯುವಕ ಸಾವು Read More »

error: Content is protected !!
Scroll to Top