ನಿಧನ

ಕೃಷ್ಣನಗರದ ಭರತ್ ನಿಧನ!

ಪುತ್ತೂರು: ಕೆಮ್ಮಾಯಿ ಕೃಷ್ಣನಗರ ಬಡಾವು ನಿವಾಸಿ ಇಲೆಕ್ಟ್ರಿಷಿಯನ್ ಭರತ್ (38) ಹೃದಯಾಘಾತದಿಂದ ನಿಧನರಾದರು. ಪುತ್ತೂರಿನ ಶಾಂತಿನಾಥ ಬಸದಿಯ ಬಳಿ ಇರುವ ಕವಿತಾ ಇಲೆಕ್ಟ್ರಿಕಲ್‌ನ ಮಾಲಕ ರುಕ್ಮಯ್ಯ ಎಂಬವರ ಪುತ್ರರಾಗಿದ್ದು, ಇಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುತ್ತಿದ್ದರು. ರಾತ್ರಿ ಮನೆಯಲ್ಲಿ ಮಲಗಿದ್ದ ಅವರು, ಆರೋಗ್ಯದಲ್ಲಿ ಏರುಪೇರಾಗಿ ಬೆಳಗ್ಗಿನ ಜಾವ ನಿಧನರಾದರು. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಕೃಷ್ಣನಗರದ ಭರತ್ ನಿಧನ! Read More »

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ

ಬೆಳ್ತಂಗಡಿ: ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಬಿ. ನಿರಂಜನ ಅವರು ತಣ್ಣೀರುಪಂಥ ಬಾವಂತಬೆಟ್ಟು ನಿವಾಸಿಯಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾದ ಆರಂಭದಲ್ಲಿ ಅಧ್ಯಕ್ಷರಾಗಿ ಸುದೀರ್ಘ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದ. ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ್ದರು.  ಮರಿಪಾದೆ ಬ್ರಹ್ಮ

ಸಹಕಾರ ರತ್ನ ಬಿ. ನಿರಂಜನ ಬಾವಂತಬೆಟ್ಟು ನಿಧನ Read More »

ದೈವಗಳ ಪರಿಚಾರಕ ಮೋoಟ ಗೌಡ ನಿಧನ

ರಾಮಕುಂಜ: ಶ್ರೀರಾಮಕುಂಜೇಶ್ವರ ದೇವಸ್ಥಾನದ ಪರಿವಾರ ದೈವಗಳ ಮುಕ್ಕಾಲ್ದಿ (ಪೂಜಾರಿ) ಮೋಂಟ  ಗೌಡ ಆನ (80) ಅಲ್ಪಕಾಲದ ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಆನ ಮನೆತನ ಶ್ರೀ ರಾಮಕುಂಜೇಶ್ವರ ದೇವಾಲಯದ ಜಾತ್ರೆ- ಉತ್ಸವ- ರಥ ಅಲಂಕಾರ -ದೈವಗಳ ಚಾಕರಿ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ನೇಮ ನಿಷ್ಠೆಗಳಿಂದ ಸೇವಾ ಕಾರ್ಯಗಳಲ್ಲಿ ಹಲವು ತಲೆಮಾರುಗಳಿಂದ ತೊಡಗಿಸಿಕೊಂಡು ಆದರ್ಶತೆ ಮೆರೆದ ಕುಟುಂಬ. ಕೆಲವು ವರ್ಷಗಳ ಹಿಂದಿನವರೆಗೂ ರಥ ಅಲಂಕರಿಸಲು ಬಿದಿರುಬೆತ್ತಗಳನ್ನು ಸಂಗ್ರಹಿಸಿ ರಥ ಸಿದ್ದಗೊಳಿಸುವುದೆಂದರೆ ಬಲು ಕಠಿಣವಾದ ಕೆಲಸವಾಗಿತ್ತು. ಅಂತಹ

ದೈವಗಳ ಪರಿಚಾರಕ ಮೋoಟ ಗೌಡ ನಿಧನ Read More »

ರೋಟರಿಪುರ ನಿವಾಸಿ ಚಂದ್ರಾವತಿ ನಿಧನ

ಪುತ್ತೂರು: ರೋಟರಿಪುರ ನಿವಾಸಿ, ವನಿತಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕಿ ವನಿತಾ ಅವರ ತಾಯಿ ಚಂದ್ರಾವತಿ (70) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದಿದ್ದ ಅವರು ಗುರುವಾರ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ರೋಟರಿಪುರ ನಿವಾಸಿ ಚಂದ್ರಾವತಿ ನಿಧನ Read More »

ಆಸ್ಪತ್ರೆ ಕಟ್ಟಡ ಮಹಡಿಯಿಂದ ಜಿಗಿದು ಆತ್ಮಹತ್ಯೆ !

ಪುತ್ತೂರು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ತಿಂಗಳಾಡಿ ಮೂಲದ ಕೂಲಿ ಕಾರ್ಮಿಕ ವಸಂತ ಆತ್ಮಹತ್ಯೆ ಮಾಡಿಕೊಂಡವರು. ವಸಂತ ಅವರು ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಯುರ್ವೇದಿಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ. ಸುಳ್ಯ ಸರ್ಕಾರಿ

ಆಸ್ಪತ್ರೆ ಕಟ್ಟಡ ಮಹಡಿಯಿಂದ ಜಿಗಿದು ಆತ್ಮಹತ್ಯೆ ! Read More »

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ ನಿಧನ

ಪೆರ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಕಾರ್ಯಕರ್ತ  ಪೆರ್ಲದ ಗೋಪಾಲ ಚೆಟ್ಟಿಯಾರ್ ( 78) ಇಂದು ನಿಧನ ಹೊಂದಿದ್ದಾರೆ. ಕಳೆದ ಐದು ದಶಕಗಳಿಂದ ವಿಭಾಗ, ಪ್ರಾಂತ, ಕ್ಷೇತ್ರೀಯ ಸ್ಥರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮುನ್ನಡೆಸಿದ್ದಾರೆ. ಮೂಲತಃ ಕೇರಳದ ಪೆರ್ಲದವರಾಗಿದ್ದ ಅವರು ವಿದ್ಯಾರ್ಥಿ ಜೀವನದಲ್ಲೇ  ಸಂಘದ ಸ್ವಯಂ ಸೇವಕರಾಗಿ, ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ತಹಸೀಲ್ದಾರರಾಗಿದ್ದ ಅವರು ನಿವೃತ್ತಿ ಬಳಿಕ ಪೂರ್ಣ ಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಕಾರ್ಯಕರ್ತ ಗೋಪಾಲ ಚೆಟ್ಟಿಯಾರ್ ನಿಧನ Read More »

ನವೀನ್ ಕಿಶೋರ್ ಹೃದಯಾಘಾತದಿಂದ ನಿಧನ

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿ ಕುದ್ದುಪದವು ನಿವಾಸಿ ನವೀನ್ ಕಿಶೋರ್ ಎಂಬವರು ಜ.30 ರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು. ಜ.29ರ ಸಂಜೆ ಮನೆಗೆ ಹೋದವರು ರಾತ್ರಿ ಹೃದಯಾಘಾತಕ್ಕೀಡಾಗಿದ್ದಾರೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಅವರ ಸಹೋದರ ಎಚ್ಚರಗೊಂಡಾಗ ನವೀನ್ ಕಿಶೋ‌ರ್ ಅವರು  ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಂದಿ ಮತ್ತು ಸ್ಥಳೀಯರು ಸೇರಿ ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನವೀನ್ ಕಿಶೋ‌ರ್ ಆಗಲೇ ಮೃತಪಟ್ಟಿದ್ದರು.  ಮೃತರು ತಾಯಿ ಪದ್ಮನಿ, ಸಹೋದರ

ನವೀನ್ ಕಿಶೋರ್ ಹೃದಯಾಘಾತದಿಂದ ನಿಧನ Read More »

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ತಾಯಿ ಅಮಣಿ ಶೆಟ್ಟಿ ನಿಧನರಾಗಿದ್ದಾರೆ. 85 ವರ್ಷ ಪ್ರಾಯದ ಅಮಣಿ ಶೆಟ್ಟಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪುತ್ರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ Read More »

ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ನಿಧನ

ಪುತ್ತೂರು: ನಿವೃತ್ತ ಪ್ರಾಂಶುಪಾಲ ಕಲ್ಲಾರೆ ನಿವಾಸಿ ವಿಶ್ವನಾಥ ಶೆಟ್ಟಿ (78) ಇಂದು ನಿಧನರಾದರು. ವಿಶ್ವನಾಥ ಶೆಟ್ಟಿಯವರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ ಬಳಿಕ ಬಂಟ್ವಾಳ ತಾಲೂಕಿನ ವಾಮದಪದವು ಜೂನಿಯ‌ರ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಿಶ್ವನಾಥ ಶೆಟ್ಟಿಯವರ ಪುತ್ರ ಕಳೆದ ಒಂದು ವರ್ಷಗಳ ಹಿಂದೆ ಹೃದಯಾಘಾತದಿಂದ  ನಿಧನರಾಗಿದ್ದರು.

ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ನಿಧನ Read More »

ಅನಾರೋಗ್ಯದಿಂದಿದ್ದ ಯುವತಿ ಐಶ್ವರ್ಯ ನಿಧನ

ಪುತ್ತೂರು: ಕಲ್ಲೇಗ ರಕ್ತೇಶ್ವರಿ ವಠಾರ ನಿವಾಸಿ ಐಶ್ವರ್ಯ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಂಜಿನಿಯರಿಂಗ್‍ ಪದವೀಧರೆಯಾಗಿರುವ ಐಶ್ವರ್ಯ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯತ್ತಿದ್ದರು ಎನ್ನಲಾಗಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮನೆಯವರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದಿದ್ದ ಯುವತಿ ಐಶ್ವರ್ಯ ನಿಧನ Read More »

error: Content is protected !!
Scroll to Top