ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್ ನಿಧನ
ಪುತ್ತೂರು: ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರ ತಂದೆ ಹಸಂತಡ್ಕ ರಾಮ ಭಟ್ ಜ.21 ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿದ್ದ ಅವರು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದರು. ಅವರು ಈ ಹಿಂದೆ ಪುತ್ರನ ವಿವಾಹ ಸಂದರ್ಭದಲ್ಲಿ ನೇತ್ರದಾನ ಮಾಡುವ ಕುರಿತು ನೋಂದಾವಣೆ ಮಾಡಿದ್ದರು. ಅದರಂತೆ ಭಾನುವಾರ ರಾತ್ರಿ ಮಂಗಳೂರಿನಿಂದ ನೇತ್ರ ತಜ್ಞರು ಆಗಮಿಸಿದ್ದರು. ಮೃತರರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್ ನಿಧನ Read More »










