ನಿಧನ

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ದರ್ಖಾಸು ಎಂಬಲ್ಲಿ ಏ. 20 ರಂದು ಸಂಭವಿಸಿದೆ.ಸುಬ್ಬಪ್ಪ (60)ಎಂಬವರೇ ಮೃತ ವ್ಯಕ್ತಿ. ಪಡ್ಪಿನಂಗಡಿ ದರ್ಖಾಸು ಎಂಬಲ್ಲಿರುವ ವಿಮಲ ರವರ ವಾಸದ ಮನೆಯ ಜಗಲಿಯಲ್ಲಿ ಛಾವಣಿಯ ಪಕ್ಕಾಸಿಗೆ ಶಾಲನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಅಡಿಲು ಮೋನಪ್ಪ ಕರ್ಕೇರಾ ನಿಧನ

ಪುತ್ತೂರು: ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಅಡಿಲು ಮೋನಪ್ಪ ಕರ್ಕೇರಾ (75) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಗುರುವಾರ ರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಿಧನರಾದರು. ಅವರು ಪ್ರತಿಷ್ಠಿತ ಕೃಷಿ  ಪಂಡಿತ ಪ್ರಶಸ್ತಿ ಪಡೆದಿರುವುದಲ್ಲದೆ ಮೀನುಗಾರಿಕೆಯಲ್ಲಿ ನಿರ್ದೇಶಕರಾಗಿ ಸೇವಿಸಲ್ಲಿಸಿರುತ್ತಾರೆ. ಅವರು ಪತ್ನಿ, ಮಕ್ಕಳು  ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ

ಅಡಿಲು ಮೋನಪ್ಪ ಕರ್ಕೇರಾ ನಿಧನ Read More »

ಸುಳ್ಯ : ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

ಸುಳ್ಯ : ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅರಂತೋಡು ಗ್ರಾಮ ಉಳುವಾರು ಎಂಬಲ್ಲಿ ಏ. 18 ರಂದು ಸಂಭವಿಸಿದೆ. ಚಂದ್ರಕಾಂತ್‌ (34) ಎಂಬವರೇ ಮೃತ ವ್ಯಕ್ತಿ. ಇವರು ಸುಮಾರು 25 ವರ್ಷಗಳಿಂದ ಫಿಡ್ಸ್‌ ಖಾಯಿಲೆಯಿಂದ ಬಳಲುತ್ತಿದ್ದು, ಮರ್ಕಂಜ ಗ್ರಾಮದ ನಿವಾಸಿಯಾಗಿದ್ದ ಇವರು ಕೆಲವು ದಿನಗಳಿಂದ ಸುಳ್ಯ ತಾಲೂಕು ಅಂರತೋಡು ಗ್ರಾಮದ ಉಳುವಾರು ಹೆಂಡತಿ ಮನೆಯಲ್ಲಿ ವಾಸವಾಗಿದ್ದರು. ಏ. 18 ರಂದು ಖಾಯಿಲೆ ಉಲ್ಬಣಗೊಂಡ ಪರಿಣಾಮ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು

ಸುಳ್ಯ : ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು Read More »

ಸನಾದಲ್ಲಿ ಭೀಕರ ಕಾಲ್ತುಳಿತ : 85 ಸಾವು

ದಾನ ಪಡೆಯಲು ಸೇರಿದ ಜನಜಂಗುಳಿಯಿಂದಾಗಿ ನೂಕುನುಗ್ಗಲು ಸನಾ : ಯೆಮೆನ್‌ ದೇಶದ ರಾಜಧಾನಿ ಸನಾದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 85 ಜನರು ಸಾವಿಗೀಡಾಗಿದ್ದಾರೆ. ಶಾಲೆಯಲ್ಲಿ ಏರ್ಪಡಿಸಿದ್ದ ಜಕಾತ್‌ ಕಾರ್ಯಕ್ರಮದಲ್ಲಿ ದಾನ ಪಡೆಯಲು ಸೇರಿದ್ದ ಜನಜಂಗುಳಿಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.85 ಮಂದಿ ಸಾವಿಗೀಡಾಗಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರ್ಘಟನೆ ಅಲ್ಲಿನ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ಸಂಭವಿಸಿದೆ.

ಸನಾದಲ್ಲಿ ಭೀಕರ ಕಾಲ್ತುಳಿತ : 85 ಸಾವು Read More »

ಗೋಪಾಲಕೃಷ್ಣ ಭಟ್ ಕಾನಾವು ನಿಧನ

ಪುತ್ತೂರು: ಮುಕ್ಕೂರು ಹಾಲುತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕ ಗೋಪಾಲಕೃಷ್ಣ ಭಟ್ ಕಾನಾವು (79) ಮಂಗಳವಾರ ರಾತ್ರಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಗೋಪಾಲಕೃಷ್ಣ ಭಟ್ ಕಾನಾವು ನಿಧನ Read More »

ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆ

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾದ ಘಟನೆ ಏ. 16 ರಂದು ಕೌಳಿಗೆ ಮನೆ ಸಜಿಪ ಮುನ್ನೂರು ಗ್ರಾಮದಲ್ಲಿ ಸಂಭವಿಸಿದೆ. ಪರಮೇಶ್ವರ ಎನ್ ಕೆ(75) ಎಂಬವರೇ ಮೃತ ವ್ಯಕ್ತಿ. ಏ. 14 ರಂದು ರಾತ್ರಿ 10.00 ಗಂಟೆಗೆ ಟಾರ್ಚ ಹಿಡಿದುಕೊಂಡು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೇ ಇದ್ದಾಗ ಮನೆಯ ಸುತ್ತ ಮುತ್ತ ಪರಿಸರದಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಯಾವುದೇ ಮಾಹಿತಿ ಸಿಗದ ಕಾರಣ ಮಗನಾದ ಶಿವಾನಂದ ರ ಹೇಳಿಕೆಯಂತೆ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ

ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆ Read More »

ಅಮಿತ್‌ ಶಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ದುರಂತ : ಬಿಸಿಲಿನ ಝಳದಿಂದ 8 ಮಂದಿ ಸಾವು

ಮುಂಬಯಿ : ಮಹಾರಾಷ್ಟ್ರ ಭೂಷಣ-2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 8 ಮಂದಿ ಬಿಸಿಲಿನ ಝಳದಿಂದ ಮೃತಪಟ್ಟಿದ್ದಾರೆ. ಅಲ್ಲದೆ 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯ ಸರ್ಕಾರ ಕಾರ್ಯಕ್ರಮ ಆಯೋಜಿಸಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾಜ ಸುಧಾರಕ ಅಪ್ಪಾ ಸಾಹೇಬ್‌ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ದುರಂತದ ಸುದ್ದಿ ತಿಳಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನವಿ ಮುಂಬಯಿಯ ಎಂಜಿಎಂ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದರು. ಬಿಸಿಲಿನ ಝಳದಿಂದ

ಅಮಿತ್‌ ಶಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ದುರಂತ : ಬಿಸಿಲಿನ ಝಳದಿಂದ 8 ಮಂದಿ ಸಾವು Read More »

ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಸಾವು

ಸುಳ್ಯ : ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಏ.13 ರಂದು ಸಂಭವಿಸಿದೆ. ವಸಂತ್‌ ಕುಮಾರ್‌ ಎಂಬವರೇ ಮೃತಪಟ್ಟ ವ್ಯಕ್ತಿ. ಮದ್ಯಪಾನ ದುಶ್ಚಟ ಹೊಂದಿದ್ದ ಇವರು ಏ.13 ರಂದು ಕ್ರಿಮಿನಾಶಕ ಸೇವಿಸಿದ್ದು, ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿರುತ್ತಾರೆ. ಈ ಕುರಿತು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಸಾವು Read More »

ಕಂದಕಕ್ಕೆ ಉರುಳಿ ಬಿದ್ದ ಬಸ್‌ : 12 ಮಂದಿ ಸಾವು, 25 ಮಂದಿ ಗಾಯ

ಮಹಾರಾಷ್ಟ್ರ : ಮಹಾರಾಷ್ಟ್ರ ರಾಜ್ಯದಲ್ಲಿ ಜವರಾಯ ಅಟ್ಟಹಾಸ ಮೆರದಿದ್ದು, ಖಾಸಗಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು, 12 ಮಂದಿ ದುರ್ಮರಣವನ್ನಪ್ಪಿರುವ ಘಟನೆ ರಾಯಗಢದ ಪುಣೆ- ಮುಂಬೈ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ 4 ಗಂಟೆಗೆ ಸಂಭವಿಸಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. 40 ಜನರಿದ್ದ ಖಾಸಗಿ ಬಸ್​ ಪುಣೆಯಿಂದ ಮುಂಬೈ ಕಡೆಗೆ ಹೋಗುತ್ತಿದ್ದು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರಯಾಣಿಕರು ನಿದ್ರೆಯಲ್ಲಿದ್ದಾಗ

ಕಂದಕಕ್ಕೆ ಉರುಳಿ ಬಿದ್ದ ಬಸ್‌ : 12 ಮಂದಿ ಸಾವು, 25 ಮಂದಿ ಗಾಯ Read More »

ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ಸ್‌ ಮಧ್ಯೆ ಭೀಕರ ಅಪಘಾತ : 6 ಮಂದಿ ಸಾವು

ಸಂಪಾಜೆ : ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ಸ್‌ ನಡುವೆ ಭೀಕರ ಅಪಘಾತವು ಮಾಣಿ-ಮೈಸೂರು ರಾ.ಹೆದ್ದಾರಿಯ ಸಂಪಾಜೆ ಎಂಬಲ್ಲಿ ಸಂಭವಿಸಿದೆ. ರಾಜ್ಯ ರಸ್ತೆ ಸಾರಿಗೆ ಬಸ್ಸು ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು, ಓರ್ವ ಗಂಡಸು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿದ್ದು, ಮೃತದೇಹವನ್ನು ಸುಳ್ಯದ ಖಾಸಗಿ ಆಸ್ಪತ್ರೆ

ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ಸ್‌ ಮಧ್ಯೆ ಭೀಕರ ಅಪಘಾತ : 6 ಮಂದಿ ಸಾವು Read More »

error: Content is protected !!
Scroll to Top