ನಿಧನ

ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರು: ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪುಟಾಣಿಗಳಿಗೆ ಕೃಷ್ಣ-ರಾಧೆಯರ ವೇಷ ಸ್ಪರ್ಧೆ ನಡೆದು ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕುಂಬ್ರ ರಾಮಗಿರಿ ಶ್ರೀರಾಮ ಭಜನಾ ಮಂದಿರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ Read More »

ನಾಟಕಕಾರ, ಧಾರವಾಹಿ ನಟ, ನಿರ್ದೇಶಕ ಅಶೋಕ್ ಶೆಟ್ಟಿ ಅಂಬ್ಲಮೊಗರು ನಿಧನ

ಯಕ್ಷಗಾನ, ಸಿನಿಮಾ, ಟೆಲಿಫಿಲ್ಕ್ ಧಾರವಾಹಿ, ನಾಟಕಗಳನ್ನು ರಚಿಸಿ ನಿರ್ದೇಶಿಸಿ ನಟಿಸಿದಂತಹ ಅಶೋಕ್ ಶೆಟ್ಟಿ ಅಂಬ್ಲಮೊಗರು ನಿಧನರಾದರು. ಬಾಲ್ಯದಲ್ಲಿಯೇ ಬಾಲ ಪ್ರತಿಭೆಯಾಗಿ ಅವರು ರಚಿಸಿ ನಿರ್ದೇಶಿಸಿ ನಟಿಸಿದ ನಾಟಕ, ಕಾಲಚಕ್ರ, ಮಾರಿಮುನಿಂಡು, ಮಸಣದ ಸುಮ, ಏಯ್, ಗುವೆಲ್, ಕಟ್ಟೆದ ಗುಳಿಗೆ, ಕಪ್ಪಲೆ, ಏರ್ ?, ಗಂಗರಾಮ, ಅಜನೆ ಆಪುಂಡು, ಏರ್ನ ಕಸರತ್ತು, ತಿರ್ಲ್, ಇನ್ನು ಅನೇಕ ನಾಟಕಕ್ಕೆ ಜೀವ ತುಂಬಿದ್ದರು. ಅವರು ನಟಿಸಿದ ಸಿನಿಮಾ ಒರಿಯರ್ದೊರಿ ಅಸಲ್‌ ಸಿನಿಮಾದಲ್ಲಿ ನಾತು”ನ ಪಾತ್ರದಲ್ಲಿ ಜನಪ್ರಿಯತೆ ಪಡೆದಿದ್ದರು. ರಂಗ್, ರಿಪ್ಪಾನ್ ಸಾಂಗ್,

ನಾಟಕಕಾರ, ಧಾರವಾಹಿ ನಟ, ನಿರ್ದೇಶಕ ಅಶೋಕ್ ಶೆಟ್ಟಿ ಅಂಬ್ಲಮೊಗರು ನಿಧನ Read More »

ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರ ಸಹೋದರ ಆನಂದ್ ಪೂಜಾರಿ ನಿಧನ

ಪುತ್ತೂರು : ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರ ಸಹೋದರ, ನಡುಬೈಲು ನಿವಾಸಿ ಆನಂದ್ ಪೂಜಾರಿ (49) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಂಡೂರು ನಡುಬೈಲುಗುತ್ತು ನಾರಾಯಣ ಸಾಲಿಯಾನ್ ಮತ್ತು ದಿ.ಅಪ್ಪಿ ನಡುಬೈಲು ರವರ ಪುತ್ರ,ರಾಗಿರುವ ಆನಂದ್ ಪೂಜಾರಿ ಪ್ರಗತಿಪರ ಕೃಷಿಕರಾಗಿದ್ದು, ಕೊಡ್ತೀರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸೊಸೈಟಿ ನಿರ್ದೇಶಕರಾಗಿದ್ದು, ಪುರುಷರಕಟ್ಟೆಯಲ್ಲಿ ಚಿಕನ್ ಸೆಂಟ‌ರ್ ನಡೆಸುತ್ತಿದ್ದರು. ಮೃತರು ತಂದೆ, ಪತ್ನಿ, ಮೂವರು ಮಕ್ಕಳು, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ಅವರ ಸಹೋದರ ಆನಂದ್ ಪೂಜಾರಿ ನಿಧನ Read More »

ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿ ಮೃತ್ಯು

ಉಪ್ಪಿನಂಗಡಿ: ಅನಾರೋಗ್ಯಕ್ಕೀಡಾಗಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ (17) ಮೃತಪಟ್ಟ ವಿದ್ಯಾರ್ಥಿ. ಕೊಯಿಲದ ಗಂಡಿಬಾಗಿಲು ನಿವಾಸಿ ಸಿರಾಜುದ್ದೀನ್ ಕಾಲೇಜಿಗೆಂದು ಬೆಳಗ್ಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಜೊತೆಗಿದ್ದವರು ಸಿರಾಜುದ್ದೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿರಾಜುದ್ದೀನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಅನಾರೋಗ್ಯದಿಂದ ಕಾಲೇಜು ವಿದ್ಯಾರ್ಥಿ ಮೃತ್ಯು Read More »

ಅನಾರೋಗ್ಯದಿಂದ ಶಿವಪ್ರಕಾಶ್ ನಿಧನ

ಸುಳ್ಯ: ಕುರುಂಜಿಭಾಗ್ ನಲ್ಲಿರುವ ಮಧುವನ ಹೋಟೇಲ್ ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಯುವಕನೋರ್ವ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದಿ.ರಾಮಣ್ಣ ಗೌಡರ ಪುತ್ರ ಶಿವಪ್ರಕಾಶ್ (32) ಮೃತಪಟ್ಟ ದುರ್ದೈವಿ. ಮೃತರು ಸಹೋದರರಾದ ಪದ್ಮನಾಭ, ಸುಳ್ಯದಲ್ಲಿ ಹೋಟೆಲ್ ಉದ್ಯಮಿಗಳಾಗಿರುವ ಚಿದಾನಂದ, ಲವಕುಮಾರ್, ಕುಶಾಲಪ್ಪ ಹಾಗೂ ಸಹೋದರಿ ರಜನಿಯವರನ್ನು ಅಗಲಿದ್ದಾರೆ.

ಅನಾರೋಗ್ಯದಿಂದ ಶಿವಪ್ರಕಾಶ್ ನಿಧನ Read More »

ಮಲ್ಲವ ಸಮಾಜಾಭ್ಯುದಯ ಸಂಘದ ಸಲಹೆಗಾರ ಅಶೋಕ್ ಎಲ್‍. ರಾವ್ ನಿಧನ

ಬೆಳ್ತಂಗಡಿ: ಬೆಳ್ತಂಗಡಿ ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್‍. ರಾವ್ ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಅಶೋಕ್ ರಾವ್ ಅವರು ಮಲ್ಲವ ಸಮಾಜಾಭ್ಯುದಯ ಸಂಘದ ಸಲಹೆಗಾರರಾಗಿದ್ದರು. ಮೃತರು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮಲ್ಲವ ಸಮಾಜಾಭ್ಯುದಯ ಸಂಘದ ಸಲಹೆಗಾರ ಅಶೋಕ್ ಎಲ್‍. ರಾವ್ ನಿಧನ Read More »

ಪೆಟ್ರೋಲ್ ಬಂಕ್ ಉದ್ಯೋಗಿ ಹರೀಶ್ ನಾಯ್ಕ ನಿಧನ

ಪುತ್ತೂರು: ಪೆಟ್ರೋಲ್ ಬಂಕ್‍ ಉದ್ಯೋಗಿ ಹರೀಶ್ ನಾಯ್ಕ (67) ಹೃದಯಾಘಾತದಿಂದ ಶನಿವಾರ ನಿಧನರಾದರು. ಏಳ್ಳುಡಿಯಲ್ಲಿ ಕಾರ್ಯಾಚರಿಸುತ್ತಿರುವ ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ನಲ್ಲಿ 40 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹರೀಶ್ ನಾಯ್ಕ ಅವರು ಜು.27ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ,  ಪುತ್ರ, ಪುತ್ರಿ ಹಾಗೂ ಸಹೋದರರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

ಪೆಟ್ರೋಲ್ ಬಂಕ್ ಉದ್ಯೋಗಿ ಹರೀಶ್ ನಾಯ್ಕ ನಿಧನ Read More »

ಶೇಖರ್ ರಾವ್ ನಿಧನ

ಪುತ್ತೂರು: ಬಪ್ಪಳಿಗೆ ರಾಗಿಕುಮೇರಿ ನಿವಾಸಿ ಶೇಖರ್ ರಾವ್ (74) ಹೃದಯಘಾತದಿಂದ ಮಂಗಳವಾರ ನಿಧನರಾದರು. ಪುತ್ತೂರಿನ ಭಾರತ್ ಶೋ ರೂಮ್ ನಲ್ಲಿ ಸೆಕ್ಯೂರಿಟಿ ಆಗಿ ಹಲವು ವರ್ಷದಿಂದ ಕೆಲಸ ಮಾಡುತಿದ್ದರು. ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ,ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ಶೇಖರ್ ರಾವ್ ನಿಧನ Read More »

ರಿಕ್ಷಾ ಚಾಲಕ ವಿಶ್ವನಾಥ ಗೌಡ ನಿಧನ

ಪುತ್ತೂರು: ಮಾಡ್ನೂರು ಗ್ರಾಮದ ಕಾವು – ಕಮಲಡ್ಕ ನಿವಾಸಿ, ಹಿರಿಯ ರಿಕ್ಷಾ ಚಾಲಕ ವಿಶ್ವನಾಥ ಗೌಡ (55) ಅಸ್ವಸ್ಥಗೊಂಡು ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೇ ನೂತನ ಗೃಹ ಪ್ರವೇಶ ಮಾಡಿಕೊ೦ಡಿದ್ದ ಸರಳ ವ್ಯಕ್ತಿತ್ವದಿಂದ ಕೂಡಿದ ವಿಶ್ವನಾಥ ಅವರಿಗೆ ಅನಾರೋಗ್ಯದಲ್ಲಿ ಹಠಾತ್ತನೇ ಏರಿಳಿತ ಉಂಟಾಗಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಪುತ್ರಿ, ಸಹೋದರರು ಮತ್ತು ಸಹೋದರಿ .ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ವಿಶ್ವನಾಥ ಗೌಡ ನಿಧನ Read More »

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು !

ಪುತ್ತೂರು : ಆರ್ ಸಿಸಿ ಮನೆಯೊಂದರ ಮೇಲೆ ಶೀಟ್ ಅಳವಡಿಸುವ ಸಂದರ್ಭ ಯುವಕನೋರ್ವ ಮೃತಪಟ್ಟ ಘಟನೆ ಬೆದ್ರಾಳದಲ್ಲಿ ನಡೆದಿದೆ. ವೆಲ್ಡಿಂಗ್ ಕೆಲಸದ ಸಹಾಯಕನಾಗಿದ್ದ, ಕಾಸರಗೋಡು ಮೂಲದ ವೆಳ್ಳರಿಕುಂಡು ಕಲ್ಲಹಳ್ಳಿ ನಿವಾಸಿ ಸೋಮಯ್ಯ ಎಂಬವರ ಪುತ್ರ ದೀಕ್ಷಿತ್ ಎಸ್.ಎಂ.(26) ಮೃತಪಟ್ಟ ಯುವಕ. ದೀಕ್ಷಿತ್, ಸೋಮಯ್ಯ ಗೌಡ ಅವರ ಹೆಂಡತಿಯ ಅಣ್ಣನ ಮಗ ಪ್ರಜ್ವಲ್‌ರೊಂದಿಗೆ ವೆಲ್ಡಿಂಗ್ ಕೆಲಸಕ್ಕೆ ಸಹಾಯಕನಾಗಿ ಹೋಗುತ್ತಿದ್ದು, ಜು.11ರಂದು ಕೆಮ್ಮಿಂಜೆ ಗ್ರಾಮದ ಬೆದ್ರಾಳದ ಆರ್‌ಸಿಸಿ ಮನೆಯೊಂದರಲ್ಲಿ ಶೀಟ್ ಹಾಕುವ ಕೆಲಸ ಮಾಡುತ್ತಿದ್ದ ಸಂದರ್ಭ ದೀಕ್ಷಿತ್ ಬೊಬ್ಬೆ ಹೊಡೆದು

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು ! Read More »

error: Content is protected !!
Scroll to Top