ನಿಧನ

ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು ನಿಧನ

ಪುತ್ತೂರು: ತಾಲೂಕಿನ ಪುರುಷರಕಟ್ಟೆಯಲ್ಲಿನ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು (72) ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಪುರುಷರಕಟ್ಟೆ ವೃತ್ತದ ಬಳಿ ಕಳೆದ ಹಲವು ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದ ಸುರೇಶ್ ಪ್ರಭು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ನಿಧನದ ಹಿನ್ನಲೆಯಲ್ಲಿ ಹೊಟೇ;ಲ್ ನಡೆಸುವ ಬಿಲ್ಡಿಂಗ್ ಇತರರು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂತಾಪ ಸೂಚಿಸಿದರು.

ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು ನಿಧನ Read More »

ಶತಾಯುಷಿ ಪೊಡಿ ನಿಧನ

ಕುಂಬ್ರ: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಶತಾಯುಷಿ ಪೊಡಿ (105) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

ಶತಾಯುಷಿ ಪೊಡಿ ನಿಧನ Read More »

ಹೃದಯ ಸಂಬಂಧಿ ಖಾಯಿಲೆಯಿಂದ ಬಾಲಕಿ ಜಮೀಲಾ ಸನಿಕ ಮೃತ್ಯು

ವಿಟ್ಲ : ಪುಟ್ಟ ಬಾಲಕಿಯೊಬ್ಬಳು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾಳೆ. ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ಅವರ ಪುತ್ರಿ ಜಮೀಲಾ ಸನಿಕ (4) ಮೃತಪಟ್ಟ ಬಾಲಕಿ. ಮುರದಲ್ಲಿ ಅಲ್ ಬಿರ್ ಸ್ಕೂಲ್ ನಲ್ಲಿ ಎಲ್‍ಕೆಜಿ ಕಲಿಯುತ್ತಿದ್ದ ಈಕೆ ಅನಾರೋಗ್ಯದಿಂದ ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಾಲಕಿ ಜಮೀಲಾ ಸನಿಕ ಮೃತ್ಯು Read More »

ಬೊಳಿಂಜಡ್ಕ ವೆಂಕಟ ಸುಬ್ಬರಾವ್ ನಿಧನ

ಮಾಣಿಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತ, ಮಾಣಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಮಾರ್ಗದರ್ಶಕರೂ, ಸಹಕಾರಿಯೂ ಆಗಿದ್ದ ಬೊಳಿಂಜಡ್ಕ ವೆಂಕಟ ಸುಬ್ಬರಾವ್ ಮಂಗಳವಾರ ನಿಧನರಾದರು. ದಿ। ಬೊಳಿಂಜಡ್ಕ ಕೃಷ್ಣಭಟ್ಟರ ಪುತ್ರರಾದ ಮೃತರು ಪತ್ನಿ, ಮಗ, ಸೊಸೆ, ಮಗಳು, ಅಳಿಯ, ಸಹೋದರರು, ಸಹೋದರಿ, ಮೊಮ್ಮಕ್ಕಳು, ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳು, ಬಂಧುಮಿತ್ರರನ್ನು ಅಗಲಿದ್ದಾರೆ.

ಬೊಳಿಂಜಡ್ಕ ವೆಂಕಟ ಸುಬ್ಬರಾವ್ ನಿಧನ Read More »

ಡೆಂಗ್ಯೂ ಜ್ವರಕ್ಕೆ ಪೆರುವಾಯಿಯ ಯುವತಿ ಆಶಾ ಬಲಿ

ವಿಟ್ಲ: ಡೆಂಗ್ಯೂ ಜ್ವರದಿಂದ  ಯುವತಿ ಮೃತಪಟ್ಟ ಘಟನೆ  ವಿಟ್ಲದ ಪೆರುವಾಯಿಯಲ್ಲಿ ನಡೆದಿದೆ. ಪೆರುವಾಯಿ ನಿವಾಸಿ ಆಶಾ (25 ) ಮೃತಪಟ್ಟ ಯುವತಿ. ಕಳೆದ ಎರಡು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸೆ. 12 ರಂದು ಮೃತಪಟ್ಟಿದ್ದಾರೆ.

ಡೆಂಗ್ಯೂ ಜ್ವರಕ್ಕೆ ಪೆರುವಾಯಿಯ ಯುವತಿ ಆಶಾ ಬಲಿ Read More »

ಎನ್.‌ಸುಧಾಕರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಪಿಐ(ಎಂ)

ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ, ಹಿರಿಯ ಜಾತ್ಯಾತೀತ ಪ್ರಗತಿಪರ ಚಿಂತಕರೂ ಆಗಿದ್ದ ಎನ್. ಸುಧಾಕರ ಶೆಟ್ಟಿ ಅವರ ನಿಧನಕ್ಕೆ ಸಿಪಿಐ(ಎಂ) ಪುತ್ತೂರು ತಾಲೂಕು ಸಮಿತಿ ಸಂತಾಪ ಸೂಚಿಸಿ ಶ್ರದ್ದಾಂಜಲಿ ಅರ್ಪಿಸಿದೆ. ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್ ಮಾತನಾಡಿ, ಸುಧಾಕರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಮುಖಂಡ ಎನ್ನುವುದಕ್ಕಿಂತ ಹೆಚ್ಚು, ಪ್ರಗತಿಪರ ಪ್ರಜಾಪ್ರಭುತ್ವ, ಜಾತ್ಯಾತೀತ ನಾಯಕರಾಗಿದ್ದರು. ಅವರ ಅಗಲಿಕೆ ಜಾತ್ಯಾತೀತ ಶಕ್ತಿಗೆ ಅಪಾರ ನಷ್ಟ ಉಂಟು ಮಾಡಿದೆ ಎಂದು ಹೇಳಿದರು.

ಎನ್.‌ಸುಧಾಕರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಪಿಐ(ಎಂ) Read More »

ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ ನಿಧನ

ಪುತ್ತೂರು: ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ (95 ವರ್ಷ) ಅವರು ಸೆ. 10ರಂದು ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು. ಹಲವಾರು ಖಾಯಿಲೆಗಳಿಗೆ ನಾಟಿ ಚಿಕಿತ್ಸೆ ನೀಡುತ್ತಿದ್ದರು. ಮೃತರು ನಾಲ್ಕು ಹೆಣ್ಣು ಮಕ್ಕಳು, ನಾಲ್ಕು ಗಂಡು ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ ನಿಧನ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸುಧಾಕರ್ ಶೆಟ್ಟಿ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಕಿಲ್ಲೆ ಮೈದಾನ ದೇವತಾ ಸಮಿತಿ ಅಧ್ಯಕ್ಷ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಧಾಕರ್ ಶೆಟ್ಟಿ (82) ಭಾನುವಾರ ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪುರಸಭೆ ಸದಸ್ಯರಾಗಿ, ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಕ್ರೀಡಾಪಟುವೂ ಆಗಿದ್ದ ಇವರು, ಕ್ರೀಡಾ ಪ್ರೋತ್ಸಾಹಕನೂ ಹೌದು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅವಿಸ್ಮರಣೀಯ ಕಾರ್ಯ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸುಧಾಕರ್ ಶೆಟ್ಟಿ ನಿಧನ Read More »

ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ – ನಿಧನ

ಪುತ್ತೂರು: ತಾಲೂಕಿನ ತಿಂಗಳಾಡಿ ಕನ್ನಡಮೂಲೆಯ ದಿ. ಬಾಳಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ  ಬಾಳಪ್ಪ ಪೂಜಾರಿ (76) ಅವರು ಸೆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮನೆಯಲ್ಲಿದ್ದ ಸಂದರ್ಭ ಹೃದಯಾಘಾತ ಉಂಟಾಗಿ ಅವರು ನಿಧನರಾದರು. ಮೃತರು ನಾಲ್ವರು ಪುತ್ರರು, ಒಬ್ಬರು ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ – ನಿಧನ Read More »

ಹಿರಿಯ ರಂಗಕರ್ಮಿ ಮಂಜು ವಿಟ್ಲ ನಿಧನ

ವಿಟ್ಲ : ಹಿರಿಯ ರಂಗಕರ್ಮಿ ಮಂಜು ವಿಟ್ಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ಸೆ.6 ರಂದು ನಿಧನರಾಗಿದ್ದಾರೆ. ಮಂಜು ವಿಟ್ಲರವರು ಧಾರ್ಮಿಕ,ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹಿರಿಯ ತರಬೇತುದಾರರಾಗಿ, ಚಿತ್ರಕಲಾವಿದರಾಗಿ, ಕಾರ್ಯಕ್ರಮ ನಿರೂಪಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಮೃತರು ಪುತ್ರಿ, ಸಹೋದರ, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಹಿರಿಯ ರಂಗಕರ್ಮಿ ಮಂಜು ವಿಟ್ಲ ನಿಧನ Read More »

error: Content is protected !!
Scroll to Top