ನಿಧನ

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಹೆಗ್ಡೆ ನಿಧನ

ಉಪ್ಪಿನಂಗಡಿ: ರಾಮನಗರ ನಿವಾಸಿ ರಾಮಚಂದ್ರ ಹೆಗ್ಡೆ (89) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ವಯೋ ಸಹಜದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಹೆಗ್ಡೆ ನಿಧನ Read More »

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ಮೃತ್ಯು

ಉಪ್ಪಿನಂಗಡಿ: ತಾಲೂಕಿನ ಉಪ್ಪಿನಂಗಡಿಯ ಯುವಕನೋರ್ವ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿ ಮಠ ನಿವಾಸಿ ಹಂಝ ಎಂಬವರ ಪುತ್ರ ಅಜ್ಜದ್ (18) ಮೃತಪಟ್ಟ ಯುವಕ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅಜ್ಜದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ಮೃತ್ಯು Read More »

ಪುತ್ತೂರು ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ನೌಕರ ರಮೇಶ್ ನಿಧನ

ಪುತ್ತೂರು: ಇಲ್ಲಿನ ಅರಣ್ಯ ಇಲಾಖೆಯ ಕ್ಷೇಮಾಭಿವೃದ್ಧಿ ವಿಭಾಗದ ನೌಕರ ರಮೇಶ್ (54 ವ.) ಅ. 14ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕಳೆದ 10 ವರ್ಷಗಳಿಂದ ಪುತ್ತೂರು ಅರಣ್ಯ ಇಲಾಖೆಯ ಕ್ಷೇಮಾಭಿವೃದ್ದಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಮೂಲತಃ ಮಡಿಕೇರಿ ನಿವಾಸಿ. ಪುತ್ತೂರು ಅರಣ್ಯ ಇಲಾಖೆಯ ವಸತಿಗೃಹದಲ್ಲೇ ವಾಸ್ತವ್ಯ ಹೊಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಪುತ್ತೂರು ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ನೌಕರ ರಮೇಶ್ ನಿಧನ Read More »

ನಂದಿನಿ ಹಾಲು ವಿತರಕ ಉದಯ ನಿಧನ

ಪುತ್ತೂರು: ನಂದಿನಿ ಹಾಲು ವಿತರಕ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ವ್ಯಾಪಾರ ಮಳಿಗೆಯ ಸಿಬ್ಬಂದಿ ಉದಯ (51 ವ.) ಎಂಬವರು ಅ. 13ರಂದು ರಾತ್ರಿ ನಿಧನರಾದರು. ಕೊಡಿಪ್ಪಾಡಿಯಲ್ಲಿ ವಾಸ್ತವ್ಯ ಹೊಂದಿರುವ ಉದಯ ಅವರು ಮೂಲತಃ ಅಡೂರಿನವರು. ಪುತ್ತೂರು ಜೇನು ವ್ಯವಸಾಯ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ನಂದಿನಿ ಹಾಲು ವಿತರಣೆ ಅಂಗಡಿ ಹೊಂದಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್’ಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ನಿಧನರಾದರು.

ನಂದಿನಿ ಹಾಲು ವಿತರಕ ಉದಯ ನಿಧನ Read More »

ಕೊಂಬೆಟ್ಟು ನಿವಾಸಿ, ಎನ್.ಐ.ಟಿ.ಕೆ. ನಿವೃತ್ತ ರಿಜಿಸ್ಟ್ರಾರ್ ಬಿ.ಆರ್. ಕಡಂಬಳಿತ್ತಾಯ ನಿಧನ

ಮಂಗಳೂರು: ಕೊಂಬೆಟ್ಟು ವಿಷ್ಣು ನಿಲಯದ ನಿವಾಸಿ ಸುರತ್ಕಲ್ ಎನ್‍ಐಟಿಕೆಯ ನಿವೃತ್ತ ಆಡಳಿತಾಧಿಕಾರಿ, ರಿಜಿಸ್ಟಾರ್ ಬಿ.ರಾಧಾಕೃಷ್ಣ ಕಡಂಬಳಿತ್ತಾಯ (94 ವ.) ಗುರುವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಬಿ.ರಾಧಾಕೃಷ್ಣ ಕಡಂಬಳಿತ್ತಾಯ ಅವರು ಕೊಂಬೆಟ್ಟು ಸರಕಾರಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು. ಕಳೆದ ವರ್ಷ ಹಿರಿಯ ವಿದ್ಯಾರ್ಥಿಗಳಿಂದ ಜೀರ್ಣೋದ್ಧಾರವಾಗುವ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪಾಲ್ಗೊಂಡಿದ್ದರು. ಮೃತರು ಪುತ್ರರಾದ ಬಿ.ಹರೇಕೃಷ್ಣ, ಬಿ.ರಾಜೇಶ್ವರ, ಬಿ.ಪುಂಡರೀಕಾಕ್ಷ, ಬಿ.ವೆಂಕಟಕೃಷ್ಣ, ಮಗಳು ಕಮಲಾಕ್ಷಿ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೊಂಬೆಟ್ಟು ನಿವಾಸಿ, ಎನ್.ಐ.ಟಿ.ಕೆ. ನಿವೃತ್ತ ರಿಜಿಸ್ಟ್ರಾರ್ ಬಿ.ಆರ್. ಕಡಂಬಳಿತ್ತಾಯ ನಿಧನ Read More »

ನಿವೃತ್ತ ಎಸ್‍.ಐ. ಗೋಪಾಲ್ ಎಂ. ನಿಧನ

ಪುತ್ತೂರು: ನಿವೃತ್ತ ಎಸ್‍.ಐ. ಕೊಡಿಪ್ಪಾಡಿ ನಿವಾಸಿ ಗೋಪಾಲ್ ಎಂ. (64) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಚಿಕ್ಕಮಗಳೂರು ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು 35 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಎಸ್‍.ಐ. ಗೋಪಾಲ್ ಎಂ. ನಿಧನ Read More »

ಜ್ವರದಿಂದ ಬಳಲುತ್ತಿದ್ದ ಮಗು ಸಾನಿಧ್ಯ ಮೃತ್ಯು!

ಪುತ್ತೂರು: ಜ್ವರದಿಂದ ಬಳಲುತ್ತಿದ್ದ ಸುಮಾರು 8 ವರ್ಷದ ಮಗು ಸಾನಿಧ್ಯ ಸೋಮವಾರ ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರಿನ ಬೊಳುವಾರಿನಲ್ಲಿ ವಾಸ್ತವ್ಯ ಹೊಂದಿರುವ, ಮೂಲತಃ ಸುರತ್ಕಲ್ ಕೃಷ್ಣಾಪುರ ನಿವಾಸಿ ನಾಮ್’ದೇವ್ ಆಚಾರ್ಯ ಅವರ ಪುತ್ರಿ ಸಾನಿಧ್ಯ. ಜ್ವರದಿಂದ ಬಳಲುತ್ತಿದ್ದ ಮಗುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಮಗುವಿಗೆ ಡೆಂಗ್ಯೂ ಹಾಗೂ ನ್ಯೂಮೋನಿಯಾ ಆಗಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಸಾನಿಧ್ಯ ಅವರು ತಂದೆ, ತಾಯಿಯನ್ನು ಅಗಲಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಮಗು ಸಾನಿಧ್ಯ ಮೃತ್ಯು! Read More »

ಮುರ ನಿವಾಸಿ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ನಿಧನ

ಪುತ್ತೂರು: ಮುರ ನಿವಾಸಿ, ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಮಹಮ್ಮದ್ ಶರೀಫ್ (42) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಹಸಿಮೀನು ವ್ಯಾಪಾರ ಮಾಡುತ್ತಿದ್ದ ದಿ.ಖಾದರ್ ಅವರ ಮೂವರು ಪುತ್ರರಲ್ಲಿ ಕಿರಿಯ ಪುತ್ರರಾಗಿರುವ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಕಂಪೆನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೊಮ್ಮೆ ಊರಿಗೆ ಬಂದಿದ್ದರು. ಇದೀಗ ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಾಯಿ, ಮೂವರು ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮುರ ನಿವಾಸಿ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ನಿಧನ Read More »

ಮಾಯಿಲಪ್ಪ ನಿಧನ

ಪುತ್ತೂರು: ಪುಣಚ ಶ್ರೀ ದೇವಿ ವಿದ್ಯಾಕೇಂದ್ರದ ನಿವೃತ್ತ ಅಟೆಂಡರ್, ಬಂಟ್ವಾಳ ನಿವಾಸಿ ಮಾಯಿಲಪ್ಪ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಮೂಲತಃ ಸುಳ್ಯದ ಹಾಸನಡ್ಕ ನಿವಾಸಿಯಾಗಿರುವ ಮಾಯಿಲಪ್ಪ ಅವರು, ಬಂಟ್ವಾಳದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.

ಮಾಯಿಲಪ್ಪ ನಿಧನ Read More »

ಮರೀಲ್ ನಿವಾಸಿ ಯತೀಶ್ ನಿಧನ

ಪುತ್ತೂರು: ಇಲ್ಲಿಯ ಮರೀಲ್ ನಿವಾಸಿ ಯತೀಶ್ (31) ನಿಧನರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಮರೀಲ್ ನಿವಾಸಿ ಯತೀಶ್ ನಿಧನ Read More »

error: Content is protected !!
Scroll to Top