ನಿಧನ

ಗುಡ್ಡೆಯಲ್ಲಿ ಅನ್ಯವ್ಯಕ್ತಿಯ ಶವ ಪತ್ತೆ

ವಿಟ್ಲ: ಗುಡ್ಡೆಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾದ ಘಟನೆ ಸಾಲೆತ್ತೂರು ಸಮೀಪದ ಪಾಲ್ತಾಜೆ ಎಂಬಲ್ಲಿ ನಡೆದಿದೆ. ಸ್ಥಳದಲ್ಲಿ ಸಾರ್ವಜನಿಕರು ಧಾವಿಸಿದ್ದು,  ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ .ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಗುಡ್ಡೆಯಲ್ಲಿ ಅನ್ಯವ್ಯಕ್ತಿಯ ಶವ ಪತ್ತೆ Read More »

ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

ಕಡಬ: ಅತ್ಯುತ್ತಮ ಹೆಸರಾಂತ ಕಬಡ್ಡಿ ಆಟಗಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿಯಲ್ಲಿ ಗಮನ ಸೆಳೆದಿದ್ದ ಕಡಬದ ಕೋಕಿಲಾನಂದ ಆಸ್ಪತ್ರೆಯಲ್ಲಿ ನಿಧನರಾದರು. ಇತ್ತೀಚೆಗೆ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಕೋಕಿಲಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರ ಚಿಕಿತ್ಸೆಗೆ ಹಲವು ಧಾನಿಗಳು ಆರ್ಥಿಕ ಸಹಾಯವನ್ನು ನೀಡಿದ್ದರು. ಕೋಕಿಲಾನಂದ ಅವರು ಕಡಬ ನಿವಾಸಿಯಾಗಿದ್ದು, ಕೇವಲ ಕಬಡ್ಡಿ ಆಟ ಮಾತ್ರವಲ್ಲದೆ ಊರಿನ ಕೆಲವೊಂದು ಸಮಸ್ಯೆಗೆ ಹೋರಾಟ ಕೂಡಾ ನಡೆಸಿದ್ದರು. ಕಡಬದಲ್ಲಿ ಆನೆ ದಾಳಿಯ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳ

ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ Read More »

ಸೀತಾರಾಮ ಪಟ್ಟೆ ವಿಧಿವಶ

ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡೀಲಿನಲ್ಲಿರುವ ಬಾಳಪ್ಪ ಕಾಂಪ್ಲೆಕ್ಸ್’ನಲ್ಲಿ ಎಸ್.ಆರ್. ಹಾರ್ಡ್’ವೇರ್ ಉದ್ಯಮ ನಡೆಸುತ್ತಿದ್ದ ಸೀತಾರಾಮ ಪಟ್ಟೆಯವರು ಇಂದು ಮುಂಜಾನೆ 5.30ಕ್ಕೆ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈಚೆಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಶೋಭಾ ಮತ್ತು ಅಂಬಿಕಾ ಸೆಂಟ್ರಲ್ ಸ್ಕೂಲ್’ನಲ್ಲಿ 10ನೆ ತರಗತಿ ವ್ಯಾಸಂಗ ಮಾಡುತ್ತಿರುವ ಮಗಳು ಮನಸ್ವಿ ಮತ್ತು 6ನೆ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರನ್ನು ಅಗಲಿದ್ದಾರೆ. ಸೀತಾರಾಮ ಅವರು ಪಡೀಲ್’ನಲ್ಲಿರುವ ‘ಸಮೃದ್ಧಿ ಕಾಂಪ್ಲೆಕ್ಸ್’ನ ಮಾಲಕರು ಆಗಿದ್ದರು. ಪುಟ್ಟದೊಂದು ಸರಕು ಸಾಗಣೆಯ

ಸೀತಾರಾಮ ಪಟ್ಟೆ ವಿಧಿವಶ Read More »

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಏ.17 ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಏ.18 ರಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು Read More »

ಬಿಜೆಪಿ ಸಕ್ರಿಯ ಕಾರ್ಯಕರ್ತ ರಮೇಶ್ ನಿಧನ

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಮೃತರನ್ನು ರಮೇಶ್(45) ಎನ್ನಲಾಗಿದೆ. ರಮೇಶ್ ರವರು ಉತ್ತಮ ಕ್ರೀಡಾ ಸಂಘಟಕ ಹಾಗೂ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಹಿಂದೂ ಹಿತರಕ್ಷಣಾ ಸಮಿತಿಯ ಸಂಘಟಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಸಾಲೆತ್ತೂರಿನಲ್ಲಿ ಆಚರಿಸಲು ಶ್ರಮ ವಹಿಸಿದ್ದರು. ಮೃತರು ಪತ್ನಿ, ಪುತ್ರಿ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಬಿಜೆಪಿ ಸಕ್ರಿಯ ಕಾರ್ಯಕರ್ತ ರಮೇಶ್ ನಿಧನ Read More »

ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ

ಪುತ್ತೂರು: ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿಲ್ಲ. ಬಳಿಕ ಮನೆ ಮಾಲಕರಿಗೆ ಕರೆ ಮಾಡಿ ವಿಚಾರಿಸಿದರು. ಅವರು ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಿಜಯ್ ಅವರು ಅವಿವಾಹಿತರಾಗಿದ್ದು, ಮುಕ್ವೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ

ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ Read More »

ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮುಖ್ಯೋಪಾಧ್ಯಾಯ ಶರಣಪ್ಪ ಉಮರಾಗಿ ಹೃದಯಾಘಾತದಿಂದ ನಿಧನ

ಕೆದಿಲ: ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮರಾಗಿರವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶರಣಪ್ಪ ರವರು ಪಾಟ್ರಕೋಡಿ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಮಾಡಿದ್ದು, ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶರಣಪ್ಪ ಉಮರಾಗಿಯವರು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಕುಟುಂಬಸ್ಥರನ್ನು, ಬಂಧು-ಬಳಗವನ್ನು ಅಗಲಿದ್ದಾರೆ.

ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮುಖ್ಯೋಪಾಧ್ಯಾಯ ಶರಣಪ್ಪ ಉಮರಾಗಿ ಹೃದಯಾಘಾತದಿಂದ ನಿಧನ Read More »

ಕಲಾಪ್ರೇಮಿ ಕೆ.ಹರಿಪ್ರಸಾದ್ ಭಟ್ ನಿಧನ

ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿಯ ವೈದಿಕ ಮನೆತನದ ಸುಬ್ರಾಯ ಭಟ್ಟರ ಪುತ್ರ ಹರಿಪ್ರಸಾದ್ (68 ವರ್ಷ) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾಗಿದ್ದ ಇವರು ಬಳಿಕ ಉಡುಪಿ ಪುತ್ತಿಗೆ ಮಠದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದು ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಉತ್ತಮ ವಾಲಿಬಾಲ್ ಆಟಗಾರರಾಗಿದ್ದ ಇವರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು .ಯಕ್ಷಗಾನ ಕಲಾವಿದನಲ್ಲದಿದ್ದರೂ ತನ್ನ ಗೇರುಕಟ್ಟೆ ಮನೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ

ಕಲಾಪ್ರೇಮಿ ಕೆ.ಹರಿಪ್ರಸಾದ್ ಭಟ್ ನಿಧನ Read More »

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು

ಪುತ್ತೂರು:  ಫ್ಲಿಪ್‍ ಕಾರ್ಟ್‍ ಡೆಲಿವರಿ ಸಿಬ್ಬಂದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಸೇಡಿಯಾಪು ಕಜೆ ನಿವಾಸಿ ದುರ್ಗಾ ಪ್ರಸಾದ್ (30) ಮೃತಪಟ್ಟವರು. ಮೃತರು ತಂದೆ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು Read More »

ತುಳು ರಂಗಭೂಮಿ ಕಲಾವಿದ ಸುರೇಶ್‍ ವಿಟ್ಲ ನಿಧನ

ವಿಟ್ಲ: ತುಳು ರಂಗ ಭೂಮಿ ಕಲಾವಿದ, ಮಂಜೇಶ್ವರ ಶಾರದಾ ಆರ್ಟ್ಸ್ನ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ತುಳು ರಂಗಭೂಮಿ ಕಲಾವಿದ ಸುರೇಶ್‍ ವಿಟ್ಲ ನಿಧನ Read More »

error: Content is protected !!
Scroll to Top