ನಿಧನ

ನಾಳೆ ಮೈಸೂರಿನಲ್ಲಿ ಎಸ್‌.ಎಲ್‌.ಭೈರಪ್ಪ ಅಂತ್ಯಕ್ರಿಯೆ

ರಾಷ್ಟ್ರಪತಿ, ಪ್ರಧಾನಿಯಿಂದ ಶೋಕ ಸಂದೇಶ ಬೆಂಗಳೂರು : ಕನ್ನಡದ ಹೆಮ್ಮೆಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್ ಭೈರಪ್ಪನವರು ಬುಧವಾರ ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಮೈಸೂರಿನಲ್ಲಿ ನೆರವೇರಲಿದೆ. ಇಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪನವರ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1 ಗಂಟೆ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ 3 […]

ನಾಳೆ ಮೈಸೂರಿನಲ್ಲಿ ಎಸ್‌.ಎಲ್‌.ಭೈರಪ್ಪ ಅಂತ್ಯಕ್ರಿಯೆ Read More »

ಪ್ರಸಿದ್ಧ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ

ಕನ್ನಡ ಸಾರಸ್ವತ ಲೋಕದ ಪ್ರಸಿದ್ಧ ಕಾದಂಬರಿಕಾರ, ಹಿರಿಯ ಸಾಹಿತಿ ಎಸ್ ಎಲ್. ಭೈರಪ್ಪ ಬುಧವಾರ(ಸೆ24) ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ಪ್ರಾಯವಾಗಿದ್ದು, ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಭೈರಪ್ಪ ಅವರು ಪರ್ವ, ಆವರಣ, ಗೃಹಭಂಗ ಸೇರಿದಂತೆ ಅನೇಕ ಕಾದಂಬರಿಗಳನ್ನು ಬರೆದಿದ್ದರು. ಪರ್ವ, ಉತ್ತರಕಾಂಡ, ಅವರಣ, ವಂಶವೃಕ್ಷಸೇರಿ ಹಲವು ಕೃತಿಗಳನ್ನು ಎಲ್ ಭೈರಪ್ಪ ರಚಿಸಿದ್ದರು. ಮೈಸೂರಿನಲ್ಲಿ ವಾಸವಿದ್ದರು. ಅವರ ಅನೇಕ ಕೃತಿಗಳು ಮರಾಠಿ, ಗುಜರಾತ್ ಸೇರಿದಂತೆ ದೇಶದ ಅನೇಕ

ಪ್ರಸಿದ್ಧ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ Read More »

ಅನಾರೋಗ್ಯದಿಂದ ಪುತ್ತೂರಿನ ಖ್ಯಾತ ಜ್ಯೋತಿಷಿ ನಿಧನ

ಪುತ್ತೂರು: ನರಿಮೊಗರು ನಿವಾಸಿ ಖ್ಯಾತ ಜ್ಯೋತಿಷಿ ವರ್ಧಮಾನ ಜೈನ್ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಅವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ. ಅವರಿಗೆ 56 ವರ್ಷಗಳಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದ ಪುತ್ತೂರಿನ ಖ್ಯಾತ ಜ್ಯೋತಿಷಿ ನಿಧನ Read More »

ಚಕ್ರವರ್ತಿ ಸೂಲಿಬೆಲೆ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನ

ಬೆಂಗಳೂರು : ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರ ಸಾವಿನ ವಿಷಯವನ್ನು ಚಕ್ರವರ್ತಿ ಸೂಲಿಬೆಲೆಯವರು ಸೋಷಿಯಲ್‌ ಮೀಡಿಯಾ ಮೈಲಕ ತಿಳಿಸಿದ್ದಾರೆ. ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟ್ವೀಟ್‌ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಆತ್ಮೀಯರಾದ ಚಕ್ರವರ್ತಿ ಸೂಲಿಬೆಲೆ ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ಅವರು

ಚಕ್ರವರ್ತಿ ಸೂಲಿಬೆಲೆ ತಂದೆ ದೇವದಾಸ್ ಸುಬ್ರಾಯ ಶೇಟ್ ನಿಧನ Read More »

ಪುತ್ತೂರಿನ ಕಿನ್ನಿಪಿಲಿ ರಾಧಾಕೃಷ್ಣ ಶೆಟ್ಟಿ ನಿಧನ

ಪುತ್ತೂರು : ಪಿಲಿ ರಾಧಣ್ಣ ಎಂದೇ ಹೆಸರುವಾಸಿಯಾಗಿದ್ದ ಪುತ್ತೂರಿನ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ (60) ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ನಿನ್ನೆ ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿತ್ತು ಆದರೆ ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರುವಾಸಿಯಾಗಿದ್ದ ಇವರು ಕಿನ್ನಿ ಪಿಲಿಯಾಗಿ ಟೋಪಿ ಹಾಕಿಕೊಂಡು ಹೊರಟ ಸಣ್ಣ ಹುಡುಗ ಮುಂದೆ ಪಿಲಿ ರಾಧಣ್ಣ ಆಗಿ ಗುರುತಿಸಿಕೊಂಡರು. ಮೃತರು ಪತ್ನಿ ಸುನಂದ,

ಪುತ್ತೂರಿನ ಕಿನ್ನಿಪಿಲಿ ರಾಧಾಕೃಷ್ಣ ಶೆಟ್ಟಿ ನಿಧನ Read More »

ಸೌಪರ್ಣಿಕಾ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಸಾವಿನ ಸುತ್ತ ಕವಿದಿದೆ ನಿಗೂಢ ಉಡುಪಿ: ಕೊಲ್ಲೂರಿನಲ್ಲಿ ಸೌಪರ್ಣಿಕಾ ನದಿಗೆ ಈಜಲು ಇಳಿದು ನಾಪತ್ತೆಯಾಗಿದ್ದ ಬೆಂಗಳೂರಿನ ಮಹಿಳೆಯ ಶವ ಶನಿವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ಬೆಂಗಳೂರು ತ್ಯಾಗರಾಜನಗರ ನಿವಾಸಿ ಸಿ.ಆರ್.ಗೋವಿಂದರಾಜು-ವಿಮಲಾ ಎಂಬವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ. ಆ. 27ರಂದು ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಅವರು ನಂತರ ಕಾಣೆಯಾಗಿದ್ದರು. ಪೊಲೀಸರು ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ 2 ದಿನ ನದಿಯಲ್ಲಿ ಹುಡುಕಾಡಿದ್ದರು. ಆದರೆ ನದಿಯಲ್ಲಿ ಮಳೆಯ ನೀರು

ಸೌಪರ್ಣಿಕಾ ನದಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಮುಳಿಯ ಶ್ಯಾಮ್‍ ಭಟ್‍ ಪತ್ನಿ ಸುಲೋಚನ ಶ್ಯಾಮ್‍ ಭಟ್‍ ನಿಧನ

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ ಸರಾಫ್‍ ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನ ಶ್ಯಾಮ್ ಭಟ್ (71ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.28ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಮುಳಿಯ ಶ್ಯಾಮ್ ಭಟ್, ಪುತ್ರರಾದ ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಕೇಶವ ಪ್ರಸಾದ್ ಮುಳಿಯ, ಎಂಡಿ ಕೃಷ್ಣನಾರಾಯಣ ಮುಳಿಯ, ಪುತ್ರಿ ಡಾ.ವಿದ್ಯಾ ಸರಸ್ಪತಿ, ಸೊಸೆಯಂದಿರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿಕೃಷ್ಣ ಮುಳಿಯ, ಅಳಿಯ ಡಾ.ಶ್ಯಾಮ್‌ ಸುಂದರ್ ಮತ್ತು ಮೊಮ್ಮಕ್ಕಳಾದ ಆಶುಲ್ ತೇಜಸ್ವಿ,

ಮುಳಿಯ ಶ್ಯಾಮ್‍ ಭಟ್‍ ಪತ್ನಿ ಸುಲೋಚನ ಶ್ಯಾಮ್‍ ಭಟ್‍ ನಿಧನ Read More »

ಕೆಜಿಎಫ್‌ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ

ಯಶ್‌, ಪುನೀತ್‌ ರಾಜ್‌ಕುಮಾರ್‌ ಮುಂತಾದವರ ಜೊತೆ ನಟಿಸಿದ್ದ ಪ್ರತಿಭಾವಂತ ಉಡುಪಿ : ಕನ್ನಡ ಚಿತ್ರರಂಗದ ನಟ ಮತ್ತು ಕಲಾ ನಿರ್ದೇಶಕ ದಿನೇಶ್ ಮಂಗಳೂರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ, ‘ಕೆಜಿಎಫ್’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ನಟಿಸಿದ್ದರು. ಆಗಸ್ಟ್ 25ರಂದು ಬೆಳಗ್ಗೆ ಕುಂದಾಪುರದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿ ಜಿಲ್ಲೆಯ ಕುಂದಾಪುರದ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ,

ಕೆಜಿಎಫ್‌ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ Read More »

ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು

ಒಂದೇ ದಿನ ಇಬ್ಬರು ಸಹೋದರರ ಸಾವಿನಿಂದ ಆಘಾತಕ್ಕೊಳಗಾದ ಕುಟುಂಬ ಮಂಗಳೂರು: ತಮ್ಮನ ಅಂತ್ಯಕ್ರಿಯೆಗಾಗಿ ದೂರದ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಅಂತ್ಯಕ್ರಿಯೆ ಮುಗಿಯುವ ಮೊದಲೇ ಸಾವಿಗೀಡಾದ ಘಟನೆ ಕಟೀಲು ಸಮೀಪ ನಿಡ್ಡೋಡಿ ಎಂಬಲ್ಲಿ ಶನಿವಾರ ಸಂಭವಿಸಿದೆ. ನಿಡ್ಡೋಡಿಯ ಮುದಲಾಡಿಗುತ್ತು ಮನೆಯ ಪ್ರವೀಣ್‌ ಶೆಟ್ಟಿ (49) ಮತ್ತು ಸಾಯಿಪ್ರಸಾದ್‌ ಶೆಟ್ಟಿ (52) ಒಂದೇ ದಿನ ಸಾವಿಗೀಡಾದ ಸಹೋದರರು. ಪ್ರವೀಣ್‌ ಶೆಟ್ಟಿ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಅವರ ಪರಿಸ್ಥಿತಿ ಉಲ್ಬಣಿಸಿತ್ತು. ಮನೆಯವರು ಗುಜರಾತ್‌ನಲ್ಲಿರುವ ಸಾಯಿಪ್ರಸಾದ್‌ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದರು.

ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು Read More »

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ

ಬೆಂಗಳೂರು: ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಶುಕ್ರವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಶ್ರೀಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ತಡರಾತ್ರಿ 12:01 ಗಂಟೆ ಸುಮಾರಿಗೆ ಭೈರವೈಕ್ಯರಾಗಿದ್ದಾರೆ. ಸ್ವಾಮೀಜಿಗಳ ಅಂತಿಮ ದರ್ಶನವನ್ನು ಇಂದು (ಶನಿವಾರ) ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಧಾರ್ಮಿಕ ಮುಖಂಡರು, ಪೀಠಾಧ್ಯಕ್ಷರ ನೇತೃತ್ವದಲ್ಲಿ ಭೈರವೈಕ್ಯರಾದ ಶ್ರೀಗಳ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಶ್ರೀಗಳ ಉತ್ತರಾಧಿಕಾರಿಗಳಾದ ನಿಶ್ಚಲಾನಂದನಾಥ ಸ್ವಾಮೀಜಿ

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ Read More »

error: Content is protected !!
Scroll to Top