ನಿಧನ

ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮುಖ್ಯೋಪಾಧ್ಯಾಯ ಶರಣಪ್ಪ ಉಮರಾಗಿ ಹೃದಯಾಘಾತದಿಂದ ನಿಧನ

ಕೆದಿಲ: ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮರಾಗಿರವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶರಣಪ್ಪ ರವರು ಪಾಟ್ರಕೋಡಿ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಮಾಡಿದ್ದು, ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶರಣಪ್ಪ ಉಮರಾಗಿಯವರು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಕುಟುಂಬಸ್ಥರನ್ನು, ಬಂಧು-ಬಳಗವನ್ನು ಅಗಲಿದ್ದಾರೆ.

ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮುಖ್ಯೋಪಾಧ್ಯಾಯ ಶರಣಪ್ಪ ಉಮರಾಗಿ ಹೃದಯಾಘಾತದಿಂದ ನಿಧನ Read More »

ಕಲಾಪ್ರೇಮಿ ಕೆ.ಹರಿಪ್ರಸಾದ್ ಭಟ್ ನಿಧನ

ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿಯ ವೈದಿಕ ಮನೆತನದ ಸುಬ್ರಾಯ ಭಟ್ಟರ ಪುತ್ರ ಹರಿಪ್ರಸಾದ್ (68 ವರ್ಷ) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾಗಿದ್ದ ಇವರು ಬಳಿಕ ಉಡುಪಿ ಪುತ್ತಿಗೆ ಮಠದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದು ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಉತ್ತಮ ವಾಲಿಬಾಲ್ ಆಟಗಾರರಾಗಿದ್ದ ಇವರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು .ಯಕ್ಷಗಾನ ಕಲಾವಿದನಲ್ಲದಿದ್ದರೂ ತನ್ನ ಗೇರುಕಟ್ಟೆ ಮನೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ

ಕಲಾಪ್ರೇಮಿ ಕೆ.ಹರಿಪ್ರಸಾದ್ ಭಟ್ ನಿಧನ Read More »

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು

ಪುತ್ತೂರು:  ಫ್ಲಿಪ್‍ ಕಾರ್ಟ್‍ ಡೆಲಿವರಿ ಸಿಬ್ಬಂದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಸೇಡಿಯಾಪು ಕಜೆ ನಿವಾಸಿ ದುರ್ಗಾ ಪ್ರಸಾದ್ (30) ಮೃತಪಟ್ಟವರು. ಮೃತರು ತಂದೆ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು Read More »

ತುಳು ರಂಗಭೂಮಿ ಕಲಾವಿದ ಸುರೇಶ್‍ ವಿಟ್ಲ ನಿಧನ

ವಿಟ್ಲ: ತುಳು ರಂಗ ಭೂಮಿ ಕಲಾವಿದ, ಮಂಜೇಶ್ವರ ಶಾರದಾ ಆರ್ಟ್ಸ್ನ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ತುಳು ರಂಗಭೂಮಿ ಕಲಾವಿದ ಸುರೇಶ್‍ ವಿಟ್ಲ ನಿಧನ Read More »

ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಮನೋಜ್‌ ಕುಮಾರ್‌ ನಿಧನ

ರಾಷ್ಟ್ರಪ್ರೇಮದ ಚಿತ್ರಗಳಿಂದ ಪ್ರಸಿದ್ಧರಾಗಿದ್ದ ಮನೋಜ್‌ ಕುಮಾರ್‌ ಮುಂಬಯಿ: ಬಾಲಿವುಡ್‌ನ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ ಇಂದು ನಸುಕಿನ ವೇಳೆ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಾ ಇದ್ದರು. ಅವರು ರಾಷ್ಟ್ರಪ್ರೇಮದ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರು. ಈ ಕಾರಣಕ್ಕೆ ಅವರಿಗೆ ‘ಭಾರತ್ ಕುಮಾರ್’ ಎಂಬ ಹೆಸರು ಇತ್ತು.ಮನೋಜ್ ಕುಮಾರ್ ಅವರನ್ನು ಕೆಲ ವಾರಗಳ ಹಿಂದೆ ಮುಂಬಯಿಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ

ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಮನೋಜ್‌ ಕುಮಾರ್‌ ನಿಧನ Read More »

ಬೈಕ್‍ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ  ಮಹಿಳೆ

ಉಡುಪಿ : ರಸ್ತೆಯಲ್ಲಿ ನಡೆದುಕೊಂಡು ಹೋದ ಮಹಿಳೆಯೋರ್ವಳಿಗೆ ಬೈಕ್‍ ಸವಾರ ಡಿಕ್ಕಿಹೊಡೆದು, ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಮೃತ ಮಹಿಳೆ ಮೇರಿವಾಜ್ ಮಿಯಾರು ನಿವಾಸಿಯಾಗಿದ್ದು ರಸ್ತೆ ಬದಿ ನಡೆದುಕೊಂಡು ಬರುತ್ತಿರುವಾಗಲೇ ಹಿ೦ಬದಿಯಿ೦ದ ವೇಗವಾಗಿ ಬಂದ ಬೈಕ್ ಸವಾರ ಸಂತೋಷ್ ಎಂಬವರು ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಮಹಿಳೆ ಕೆಲ ದೂರ ಹೋಗಿ ಬಿದ್ದಿದ್ದು ಅಪಘಾತದ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸಂತೋಷ್ ಕೂಡ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ

ಬೈಕ್‍ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ  ಮಹಿಳೆ Read More »

ಆಲೋವೆರಾ ಜ್ಯೂಸ್ ಎಂದು ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿ | ಚಿಕಿತ್ಸೆ ಫಲಿಸದೆ ಬಾಲಕಿ ಮೃತ್ಯು

ಬೆಂಗಳೂರು : ಆಲೋವೆರಾ ಜ್ಯೂಸ್ ಎಂದು ತಪ್ಪಾಗಿ ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ನಡೆದಿದೆ. ಮೃತಳು 9ನೇ ತರಗತಿಯ ವಿದ್ಯಾರ್ಥಿನಿ 11ನೇ ವರ್ಷದ ಬಾಲಕಿ ನಿಧಿ ಕೃಷ್ಣ ಎಂದು ಹೇಳಲಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನಿಧಿ ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ, ಮನೆಯವರು ಅಲೋವೆರಾ ಜ್ಯೂಸ್‌ನ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಎಂಬ ಕ್ರಿಮಿನಾಶಕ ಔಷಧವನ್ನು ತುಂಬಿದ್ದರು. ಇದರಿಂದ ಮಾ.18ರಂದು ಬಾಲಕಿ ಜ್ಯೂಸ್ ಎಂದು ಭಾವಿಸಿ ಈ ಕ್ರಿಮಿನಾಶಕವನ್ನು

ಆಲೋವೆರಾ ಜ್ಯೂಸ್ ಎಂದು ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿ | ಚಿಕಿತ್ಸೆ ಫಲಿಸದೆ ಬಾಲಕಿ ಮೃತ್ಯು Read More »

ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್  ನಿಧನ

ಗುಜರಾತ್ : ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್ (92) ಮಂಗಳವಾರ ಬೆಳಿಗ್ಗೆ ನವಸಾರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನೀಲಾಂಬೆನ್, ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು,  ಅವರು ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರು ಮಹಾತ್ಮ ಗಾಂಧಿಯವರ ಮಗ ಹರಿದಾಸ್ ಗಾಂಧಿಯವರ ಮೊಮ್ಮಗಳು, ನೀಲಾಂಬೆನ್ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರೊಂದಿಗೆ ನವಸಾರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.ಅವರ ಅಂತ್ಯಕ್ರಿಯೆಯ ಮೆರವಣಿಗೆ ಇಂದು

ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್  ನಿಧನ Read More »

ಹೃದಯಾಘಾತದಿಂದ ಯುವಕ ಮೃತ್ಯು

ಪುತ್ತೂರು: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪೆರ್ನೆಯಲ್ಲಿ ಇಂದು ಸಂಜೆ ನಡೆದಿದೆ. ಪೆರ್ನೆ ನಿವಾಸಿ ವೃತ್ತಿಯಲ್ಲಿ ವೆಲ್ಡಿಂಗ್‍ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ (27) ಮೃತ ಯುವಕ. ಅವರು ಉತ್ತಮ ಕಬಡ್ಡಿ ಆಟಗಾರರೂ ಆಗಿದ್ದರು. ಮೃತರು ತಾಯಿ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಯುವಕ ಮೃತ್ಯು Read More »

ತೆಂಕುತಿಟ್ಟಿನ ಹಿರಿಯ ಮದ್ಲೆಗಾರ ಬಿ.ಗೋಪಾಲಕೃಷ್ಣ ಕುರುಪ್ ನಿಧನ

ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ  ಮತ್ತು ಯಕ್ಷಗಾನದ ಪರಂಪರೆಯ ಬಗ್ಗೆ ಅಪೂರ್ವ ಜ್ಞಾನವನ್ನು ಹೊಂದಿದ್ದ  ರಾಜ್ಯ ಪ್ರಶಸ್ತಿ ಪುರಸ್ಕೃತ  ಬಿ.ಗೋಪಾಲಕೃಷ್ಣ ಕುರುಪ್ (90ವರ್ಷ) ಮಾರ್ಚ್ 19 ರಂದು ನಿಧನರಾದರು. ಚೆಂಡೆ-ಮದ್ದಲೆ ನುಡಿತಗಳಲ್ಲಿ ಅಪೂರ್ವಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಪಠ್ಯರೂಪದಲ್ಲಿ ದಾಖಲಿಸಿದ ಮೊದಲಿಗರಾಗಿದ್ದರು. 1952 ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶದೊಂದಿಗೆ ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ ಇವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿದರು.  ಹಿರಿಯ ಬಲಿಪ ನಾರಾಯಣ ಭಾಗವತ,  ಅಗರಿ ಶ್ರೀನಿವಾಸ ಭಾಗವತ,  ಕುದ್ರೆಕೂಡ್ಲು ರಾಮ ಭಟ್ಟ,

ತೆಂಕುತಿಟ್ಟಿನ ಹಿರಿಯ ಮದ್ಲೆಗಾರ ಬಿ.ಗೋಪಾಲಕೃಷ್ಣ ಕುರುಪ್ ನಿಧನ Read More »

error: Content is protected !!
Scroll to Top