ರೈಲು ಡಿಕ್ಕಿ : ಇಬ್ಬರು ಮೃತ್ಯು
ಕಾಸರಗೋಡು: ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಪಳ್ಳಂ ರೈಲ್ವೇ ಸೇತುವೆ ಬಳಿ ಇಂದು ಮುಂಜಾನೆ ನಡೆದಿದೆ. 20 ರಿಂದ 25 ವರ್ಷದೊಳಗಿನ ಇಬ್ಬರು ಯುವಕರು ಮೃತಪಟ್ಟಿದ್ದು, ಮೃತರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಮುಂಜಾನೆ ಸುಮಾರು 5.30 ರ ಹೊತ್ತಿಗೆ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ದೂರಿನದಂತೆ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರೈಲು ಡಿಕ್ಕಿ : ಇಬ್ಬರು ಮೃತ್ಯು Read More »