ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್: 3 ವರ್ಷದ ಮಗು ಸಾವು
ಗೆಸ್ಟ್ ಹೌಸ್ ಒಂದರ ಗೇಟ್ ಕಳಚಿಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಬಳಿ ನಡೆದಿದೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು, ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು. ಪುಟ್ಟ ಮಗು ಸುಶಾಂತ್ ಪ್ರತಿನಿತ್ಯವೂ ಮನೆ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್ ಆಗಿ ಗೆಸ್ಟ್ ಹೌಸ್ನ ಗೇಟ್ ಕಳಚಿ ಬಿದ್ದಿದ್ದು, ಆಟವಾಡುತ್ತಿದ್ದ ಮಗುವಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು […]
ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್: 3 ವರ್ಷದ ಮಗು ಸಾವು Read More »