ಅಪಘಾತ

ಇಚ್ಚಂಪಾಡಿ ಸೇತುವೆ ಬಳಿ ಸ್ನಾನಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಕಡಬ: ತಾಲೂಕಿನ ಇಚ್ಚಂಪಾಡಿಯಲ್ಲಿ ಸೇತುವೆಯೊಂದ ಬಳಿ ನೀರಿನಲ್ಲಿ ಸ್ನಾನಕ್ಕೆ ಇಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಇಚ್ಚಂಪಾಡಿ ಗ್ರಾಮದ ಕೆಡೆಂಬೇಲು ಮನೆ ನಿವಾಸಿ ಜಯಾನಂದ ಶೆಟ್ಟಿ ಯವರ ಮಗ ಚೇತನ್ ಶೆಟ್ಟಿ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತನು ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈ ದಿನ ರಜೆಯ ಸಂದರ್ಭ ಮನೆಯಲ್ಲೇ ಇದ್ದನು. ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ […]

ಇಚ್ಚಂಪಾಡಿ ಸೇತುವೆ ಬಳಿ ಸ್ನಾನಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು Read More »

ಪ್ರಸಿದ್ಧ ಭಕ್ತಿ ಗಾಯಕ, ತಬಲಾ ವಾದಕ ಸಂಕೀರ್ತನ್‍ ಅಪಘಾತದಲ್ಲಿ ಮೃತ್ಯು

ಉಡುಪಿ : ಕಾರು ಚಾಲಕನ ನಿರ್ಲಕ್ಷದಿಂದ ಪ್ರಸಿದ್ಧ ಭಕ್ತಿ ಗಾಯಕ ಮತ್ತು ತಬಲಾ ವಾದಕ ಆಳ್ವಾಸ್ ಸಂಕೀರ್ತನ್ (28) ಮೃತಪಟ್ಟಿದ್ದಾರೆ ಉಡುಪಿಯ ಕಿನ್ನಿಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ಸಂಭವಿಸಿದ್ದು, ಕುಂದಾಪುರದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರನ್ನು ಚಾಲಕ ಅಜಾಗರೂಕತೆ ಯಿಂದ ಚಲಾಯಿಸುತ್ತಿದ್ದುದರಿಂದ ಕಾರು  ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ  ರಸ್ತೆ ಡಿವೈಡರ್ ಏರಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿ ಸಂಕೀರ್ತ

ಪ್ರಸಿದ್ಧ ಭಕ್ತಿ ಗಾಯಕ, ತಬಲಾ ವಾದಕ ಸಂಕೀರ್ತನ್‍ ಅಪಘಾತದಲ್ಲಿ ಮೃತ್ಯು Read More »

ಕೆಎಸ್‍ ಆರ್ ಟಿಸಿ ಬಸ್‍ ಡಿಕ್ಕಿಯಾಗಿ ಆಟೋ ಚಾಲಕ ಮೃತ್ಯು

ಫರಂಗಿಪೇಟೆ: ಬಸ್ ಡಿಕ್ಕಿಯಾಗಿ ಆಟೋ ಚಾಲಕನೊರ್ವ ಸಾವನ್ನಪ್ಪಿರುವ ಘಟನೆ ಹತ್ತನೇ ಮೈಲ್ ಕಲ್ಲು ಎಂಬಲ್ಲಿ ನಡೆದಿದೆ. ಅಮೆಮ್ಮಾರ್ ನಿವಾಸಿ ಝಾಹಿದ್ (28) ಮೃತಪಟ್ಟವರು. ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುಗುವಾಗ ಮಂಗಳೂರಿನಿಂದ ಬರುತ್ತಿದ್ದ ಕೆಎಸ್  ಆರ್ ಟಿಸಿ ಬಸ್ ಡಿಕ್ಕಿಯಾಗಿ ಝಾಹಿದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಎಸ್‍ ಆರ್ ಟಿಸಿ ಬಸ್‍ ಡಿಕ್ಕಿಯಾಗಿ ಆಟೋ ಚಾಲಕ ಮೃತ್ಯು Read More »

ಪೂಜೆ ವೇಳೆ ಉಟ್ಟ ಬಟ್ಟೆಗೆ ಬೆಂಕಿ ತಗುಲಿ ವೃದ್ಧೆ ಮೃತ್ಯು

ಮಂಗಳೂರು: ಪೂಜೆ ಮಾಡುತ್ತಿದ್ದ ವೇಳೆ ಬಟ್ಟೆಗೆ ಬೆಂಕಿ ತಗುಲಿ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ನಗರದ ಮೇರಿಹಿಲ್ ಸಮೀಪದ ಗುರುನಗರ ನಿವಾಸಿ ಸರೋಜಿನಿ (64) ಮೃತಪಟ್ಟವರು.  ಅವರನ್ನು ರಕ್ಷಿಸಲು ಮುಂದಾದ ಪುತ್ರ ಅಕ್ಷಯ್ (20)ಗೆ ಸುಟ್ಟ ಗಾಯವಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಸರೋಜಿನಿಯ ಬಟ್ಟೆಗೆ ಬೆಂಕಿ ತಗುಲಿತ್ತು. ಈ ವೇಳೆ ಪುತ್ರ ಆಕೆಯನ್ನು ರಕ್ಷಿಸಲು ಮುಂದಾಗಿದ್ದು, ಆತನಿಗೂ ಬೆಂಕಿಯಿಂದ ಸುಟ್ಟಗಾಯವಾಗಿತ್ತು. ವಿಷಯ ತಿಳಿದ

ಪೂಜೆ ವೇಳೆ ಉಟ್ಟ ಬಟ್ಟೆಗೆ ಬೆಂಕಿ ತಗುಲಿ ವೃದ್ಧೆ ಮೃತ್ಯು Read More »

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‍ ಪಲ್ಟಿ | ಹಲವರಿಗೆ ಗಾಯ

ಗುಂಡ್ಯ: ಖಾಸಗಿ ಬಸ್ ಪಲ್ಟಿಯಾಗಿ ಹಲವಾರು ಪ್ರಯಾಣಿಕರು ಗಾಯಗೊಂಡು ಹಲವರು ಗಾಯಗೊಂಡ ಘಟನೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಇಂದು ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ ಸುಮಾರು 3:30 ರ ವೇಳೆ ಗುಂಡ್ಯ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂವರು ತೀವ್ರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಫಹದ್ (20) ಮೂಡಬಿದ್ರೆ, ರಂಝೀನ್(25) ಪರಂಗಿಪೇಟೆ, ಉಮ್ಮರ್ (53)ದೇರಳಕಟ್ಟೆ,

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‍ ಪಲ್ಟಿ | ಹಲವರಿಗೆ ಗಾಯ Read More »

ಡಿವೈಡರ್ ಏರಿದ ಕಾರು| ಪ್ರಾಣಪಾಯದಿಂದ ಪಾರು

ಉಡುಪಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರದಲ್ಲಿರುವ ಕಿಯಾ ಶೋ ರೂಂ ಬಳಿ ನಡೆದಿದೆ. ಹರಿಯಾಣ ಮೂಲದ ವ್ಯಕ್ತಿಗೆ ಸೇರಿದ್ದು ಎನ್ನಲಾಗಿರುವ  ಈ ವಾಹನವನ್ನು ಕೆಲವೇ ದಿನಗಳ ಹಿಂದೆ ಖರೀದಿಸಲಾಗಿತ್ತು. ಕಾರು ಮಂಗಳೂರಿನಿಂದ ಹರಿಯಾಣ ಕಡೆಗೆ ಪ್ರಯಾಣಿಸುತ್ತಿತ್ತು. ಕಾರಿನಲ್ಲಿ ಮೂರು ಮಂದಿ ಪ್ರಯಾಣ ಮಾಡುತ್ತಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಮತ್ತು ಡಿವೈಡರ್‌ನಲ್ಲಿದ್ದ ಕ್ರಾಶ್ ಗಾರ್ಡ್‌ಗೆ ಗಣನೀಯ ಹಾನಿಯಾಗಿದ್ದು. ಘಟನೆಯ ಬಗ್ಗೆ ಕಾಪು ಪೊಲೀಸ್ ಠಾಣೆಯ

ಡಿವೈಡರ್ ಏರಿದ ಕಾರು| ಪ್ರಾಣಪಾಯದಿಂದ ಪಾರು Read More »

ಕಾಡಾನೆ ದಾಳಿಗೆ ರಿಕ್ಷಾ ಜಖಂ| ಆಪಾಯದಿಂದ ಪಾರಾದ ಚಾಲಕ

ಧರ್ಮಸ್ಥಳ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆಟೋರಿಕ್ಷಾವೊಂದು ಸಂಪೂರ್ಣ ಜಖಂಗೊಂಡಿರುವ ಘಟನೆ ಧರ್ಮಸ್ಥಳದ ಬೊಳಿಯಾ‌ರ್ ನಲ್ಲಿ ನಡೆದಿದೆ. ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಸಂದರ್ಭ ಮನೆಯ ಸಮೀಪವೇ ಕಾಡಾನೆಗಳ ಹಿಂಡು ರಸ್ತೆ ಮಧ್ಯೆ ಎದುರಾಗಿದ್ದು ಇದನ್ನು ಗಮನಿಸಿ ಆತಂಕಗೊಂಡ ದಿನೇಶ್ ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ದೂರದಲ್ಲಿ ಅಡಗಿ ನಿಂತರು. ಈ ವೇಳೆ ಗುಂಪಿನಲ್ಲಿದ್ದ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ

ಕಾಡಾನೆ ದಾಳಿಗೆ ರಿಕ್ಷಾ ಜಖಂ| ಆಪಾಯದಿಂದ ಪಾರಾದ ಚಾಲಕ Read More »

ಅಪಘಾತದಲ್ಲಿ ಮಲಯಾಳಂ ನಟನ ತಂದೆ ಸಾವು, ನಟನಿಗೆ ಗಂಭೀರ ಗಾಯ

ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಚೆನ್ನೈ: ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಬೆಳಗ್ಗೆ ತಮಿಳುನಾಡು ಬಳಿ ಅಪಘಾತಕ್ಕೀಡಾಗಿ ಚಾಕೊ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿಗೆ ಗಂಭೀರಗಾಯಗಳಾಗಿವೆ. ಅಪಘಾತದ ಸಮಯದಲ್ಲಿ, ಶೈನ್, ಹಾಗೂ ಅವರ ತಾಯಿ, ಸಹೋದರ, ತಂದೆ ಮತ್ತು ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶೈನ್‌ ಮತ್ತು ಅವರ ತಾಯಿಯನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮಲಯಾಳಂ ನಟನ ತಂದೆ ಸಾವು, ನಟನಿಗೆ ಗಂಭೀರ ಗಾಯ Read More »

ಸರ್ಕಾರದ ಬೇಜವಾಬ್ದಾರಿ, ಕ್ರಿಕೆಟ್ ಅಸೋಸಿಯೇಶನ್‌ ಅವಿವೇಕದಿಂದ ಭಾರಿ ದುರಂತ

ಸಂಭ್ರಮವನ್ನು ಸೂತಕವಾಗಿ ಬದಲಾಯಿಸಿದ ಕಾಲ್ತುಳಿತ ಘಟನೆ ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ 11 ಜನರ ಸಾವಿಗೆ ಕಾರಣವಾದ ಘೋರ ಕಾಲ್ತುಳಿತ ದುರ್ಘಟನೆಗೆ ಸರ್ಕಾರ ಮತ್ತು ಕರ್ನಾಟಕ ಕ್ರಿಕೆಟ್‌ ಅಸೋಸಿಯೇಶನ್‌ನ ಅವಿವೇಕಿ ನಿರ್ಧಾರವೇ ಕಾರಣ ಎನ್ನುವುದು ಗಾಢವಾಗಿ ಗೋಚರಿಸುತ್ತಿದೆ. ಸಿದ್ಧತೆ ಇಲ್ಲದೆ ಕಾರ್ಯಕ್ರಮ ನಡೆಸಿದರೆ ನಿಯಂತ್ರಣ ಮಾಡುವುದು ಕಷ್ಟ ಎಂದು ಪೊಲೀಸರು ತಿಳಿಸಿದ್ದರೂ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ ಪಟ್ಟುಹಿಡಿದು ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಕಾಲ್ತುಳಿತ ನಡೆದಿದೆ ಎಂಬ ಗಂಭೀರ ಆರೋಪ ಈಗ ಕೇಳಿ

ಸರ್ಕಾರದ ಬೇಜವಾಬ್ದಾರಿ, ಕ್ರಿಕೆಟ್ ಅಸೋಸಿಯೇಶನ್‌ ಅವಿವೇಕದಿಂದ ಭಾರಿ ದುರಂತ Read More »

ಐಪಿಎಲ್‍  ಫೈನಲ್‍ ನಲ್ಲಿ ಆರ್ ಸಿಬಿ ಚಾಂಪಿಯನ್ | ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರೀ ಜನಸ್ತೋಮ | ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಹಲವರು ಕಾಲ್ತುಳಿತಕ್ಕೆ ಬಲಿ

ಬೆಂಗಳೂರು: 18ನೇ ಐಪಿಎಲ್‍ ಫೈನಲ್‍ ನಲ್ಲಿ ಆರ್ ಸಿಬಿ ಚಾಂಪಿಯನ್ ಆಗಿದ್ದು, ಈ ಸಂಬಂಧ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದ್ದಂತೆ ಭಾರೀ ಜನಸ್ತೋಮ ನೆರೆದಿದ್ದು, ಈ ಸಂದರ್ಭ ಕಾಲ್ತುಳಿತಕ್ಕೆ ಹಲವರು ಬಲಿಯಾಗಿದ್ದಾರೆ. ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ನೂಕುನುಗ್ಗಾಟದಲ್ಲಿ  ಕಾಲ್ತುಳಿತಕ್ಕೆ  15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರನ್ನು ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ಮಂದಿ ಅಭಿಮಾನಿಗಳು

ಐಪಿಎಲ್‍  ಫೈನಲ್‍ ನಲ್ಲಿ ಆರ್ ಸಿಬಿ ಚಾಂಪಿಯನ್ | ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರೀ ಜನಸ್ತೋಮ | ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಹಲವರು ಕಾಲ್ತುಳಿತಕ್ಕೆ ಬಲಿ Read More »

error: Content is protected !!
Scroll to Top