ಅಪಘಾತ

ಸಿಡಿಲು ಬಡಿದು ಬನ್ನೂರು ಗ್ರಾಪಂ ಪಿಡಿಒ ಚಿತ್ರಾವತಿ ಆಸ್ಪತ್ರೆಗೆ ದಾಖಲು

ಪುತ್ತೂರು: ಕಂಪ್ಯೂಟರ್ ಸ್ವಿಚ್ ಆಫ್ ಮಾಡಲು ಹೋದ ವೇಳೆ ಸಿಡಿಲು ಬಡಿದ ಪರಿಣಾಮ ಬನ್ನೂರು ಗ್ರಾಪಂ ಪಿಡಿಒ ಕುಸಿದು ಬಿದ್ದ ಘಟನೆ ಬನ್ನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಇಂದು ನಡೆದಿದೆ ಬನ್ನೂರು ಗ್ರಾಮ ಪಂಚಾಯತ್ ಪಿಡಿಓ ಚಿತ್ರಾವತಿ ಯವರು ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ಸಂದರ್ಭ ಸಿಡಿಲು ಬಡಿದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳದಲ್ಲಿದ್ದ ಸದಸ್ಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು […]

ಸಿಡಿಲು ಬಡಿದು ಬನ್ನೂರು ಗ್ರಾಪಂ ಪಿಡಿಒ ಚಿತ್ರಾವತಿ ಆಸ್ಪತ್ರೆಗೆ ದಾಖಲು Read More »

ಕಟ್ಟಡವೊಂದರಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ

ಉಪ್ಪಿನಂಗಡಿ: ಓರ್ವ ವ್ಯಕ್ತಿಯ ಮೃತದೇಹ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಪತ್ತೆಯಾಗಿದೆ. ಕಟ್ಟಡಕ್ಕೆ ನೀರು ಬಿಡಲು ಬಂದ ವೇಳೆ ಮೃತದೇಹ ಇರುವ  ಶಂಕೆ ತಿಳಿದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಧಾವಿಸಿ, ತನಿಕೆ ನಡೆಸುತ್ತಿದ್ದಾರೆ.

ಕಟ್ಟಡವೊಂದರಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ Read More »

ನಿವೃತ್ತ ಯೋಧ ಕೂಸಪ್ಪ ಶೆಟ್ಟಿ ನಿಧನ

ವಿಟ್ಲ : ವಿಟ್ಲದ ಮಂಗಲಪದವು ನಿವಾಸಿ ನಿವೃತ್ತ ಸೈನಿಕ ಕೂಸಪ್ಪ ಶೆಟ್ಟಿ(81) ವಯೋ ಸಹಜವಾಗಿ  ಸ್ವಗೃಹದಲ್ಲಿ ನಿಧನರಾಗಿದ್ದಾರೆ.   ಇವರು ಪುತ್ತೂರು ಮಾಜಿ ಸೈನಿಕ ಸಂಘದ ಅತ್ಯಂತ ಹಿರಿಯ ಸದಸ್ಯರಾಗಿದ್ದು, ಭಾರತೀಯ ಭೂಸೇನೆಯಲ್ಲಿ 20 ವರ್ಷಗಳ ಸೇವೆ ಗೈದಿದ್ದ ಇವರು 1962 ಮತ್ತು 1971 ರ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಪುತ್ತೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ಎಂ. ಕೆ. ನಾರಾಯಣ ಭಟ್, ಉಪಾಧ್ಯಕ್ಷ ದಾಸಪ್ಪ ಪೂಜಾರಿ, ಕಾರ್ಯದರ್ಶಿ ನಾಗಪ್ಪ ಗೌಡ ಮತ್ತು ಅನೇಕ ಮಾಜಿ ಸೈನಿಕರು ಮೃತರ

ನಿವೃತ್ತ ಯೋಧ ಕೂಸಪ್ಪ ಶೆಟ್ಟಿ ನಿಧನ Read More »

ಆರ್‌ಎಸ್ಎಸ್ ಪ್ರಚಾರಕ ಪ್ರಸಾದ್ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ, ಡಿ.2: ಸೋಮವಾರ ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನಡೆದಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದರು ಬಳಿಕ ಮುಳುಗಿ ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ

ಆರ್‌ಎಸ್ಎಸ್ ಪ್ರಚಾರಕ ಪ್ರಸಾದ್ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ Read More »

ಭೀಕರ ಅಪಘಾತ : ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸಾವು

ತಿರುವನಂತಪುರಂ: ಕೇರಳದ ಅಲಪುಳ ಜಿಲ್ಲೆಯ ಚಂಗನಶ್ಶೇರಿ ಸಮೀಪ ನಿನ್ನೆ ರಾತ್ರಿ ಭಾರಿ ಮಳೆಯಿಂದಾಗಿ ರಸ್ತೆ ಸರಿಯಾಗಿ ಗೋಚರಿಸದೆ ಸರ್ಕಾರಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಂದನಂ ಮೆಡಿಕಲ್‌ ಕಾಲೇಜಿನ ಪ್ರಥಮ ವರ್ಷ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಸಂದೀಪ್ ವಲ್ಸನ್, ಆಯೂಷ್ ಶಾಜಿ, ಮಹಮ್ಮದ್ ಇಬ್ರಾಹಿಂ ಪಿಪಿ, ದೇವನಂದನ್, ಮಹಮ್ಮದ್ ಅಬ್ದುಲ್ ಜಬ್ಬರ್ ಮೃತಪಟ್ಟವರು. ಕರ್ಲಕೋಡ್ ಎಂಬಲ್ಲಿ ಸೋಮವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ

ಭೀಕರ ಅಪಘಾತ : ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸಾವು Read More »

ಸಿಡಿಲು ಬಡಿದು ಕೆಯ್ಯೂರಿನ ನಾರಾಯಣ ಮೃತ್ಯು

ಪುತ್ತೂರು: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆಯ್ಯೂರಿನಲ್ಲಿ ನಡೆದಿದೆ. ಕೆಯೂರು ನಿವಾಸಿ ನಾರಾಯಣ (45) ಮೃತ ವ್ಯಕ್ತಿ. ಮನೆಯ ಮುಂಭಾಗದ ಶೀಟ್ ನಲ್ಲಿ ಬಲ್ಬು ಹೊತ್ತುತ್ತಿಲ್ಲ ಎಂದು ಸರಿ ಪಡಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ನೆಲಕ್ಕೆ ಕುಸಿದು ಬಿದ್ದ ನಾರಾಯಣ ಅವರನ್ನು ಕೂಡಲೇ ಆಸ್ಪತ್ರೆಗೆ ಕಕರೆತರಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದರು. ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

ಸಿಡಿಲು ಬಡಿದು ಕೆಯ್ಯೂರಿನ ನಾರಾಯಣ ಮೃತ್ಯು Read More »

ನದಿಗೆ ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

ನದಿಗೆ ಈಜಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ವೆ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಗುಮೊಲ ನಿವಾಸಿ ಜಯಂತ ನಾಯ್ಕ್‍ ಹಾಗೂ ಬೆಳ್ವೆ ಶ್ರೀಶ ಆಚಾರ್ ಮೃತಪಟ್ಟವರು ಬೆಳ್ವೆ ಸಮೀಪದ ಗೊಮ್ಮೋಲ್‍ ಚರ್ಚ್‍ ಹಿಂಭಾಗ ಒಳ್ಳೆ ಹೊಂಡಕಜ್ಕೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಈಜಲು ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.

ನದಿಗೆ ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು Read More »

 ಗುರುಪ್ರಕಾಶ್‍ ಅನಾರೋಗ್ಯದಿಂದ ನಿಧನ

ಪುತ್ತೂರು : ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪ್ರಕಾಶ್‍ ನಿಧನರಾಗಿದ್ದಾರೆ. ಪುತ್ತೂರು ಎಪಿಎಂಸಿ ರಸ್ತೆ ನಿವಾಸಿ ಕೆಲ ಸಮಯದಿಂದ ಅನಾರೋಗ್ಯವಾಗಿದ್ದರು. ಮೃತರು ತಾಯಿ , ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

 ಗುರುಪ್ರಕಾಶ್‍ ಅನಾರೋಗ್ಯದಿಂದ ನಿಧನ Read More »

ಯುವಕ ಆತ್ಮ ಹತ್ಯೆಗೆ ಶರಣು

ಬೆಳ್ತಂಗಡಿ : ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ರಾಯಿ ಗ್ರಾಮದ ಮಾಬೆಟ್ಟ ನಿವಾಸಿ ಸುದರ್ಶನ್ ಶೆಟ್ಟಿ (26) ಆತ್ಮ ಹತ್ಯೆ ಮಾಡಿಕೊಂಡವರು. ಪಿತ್ತಜನಕಾಂಗದಿಂದ  ಬಳಲುತ್ತಿದ್ದ ಸುದರ್ಶನ್ ಶೆಟ್ಟಿ ಮಂಗಳೂರಿನ ವೆನ್ಲಾಕ್‍ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಪಿತ್ತಜನಕಾಂಗ ಖಾಯಿಲೆ ಕಡಿಮೆಯಾಗದೆ ಇದ್ದರಿಂದ ಮನನೊಂದು ಸುದರ್ಶನ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಯುವಕ ಆತ್ಮ ಹತ್ಯೆಗೆ ಶರಣು Read More »

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ : ಗಿರಿಯಪ್ಪ ಎಂಬುವವರು ತೆಂಗಿನಕಾಯಿ ಕೀಳಲು ಹೋಗಿ ಆಯಾ ತಪ್ಪಿ ಕೆಳಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನಲ್ಲಿ  ನಡೆದಿದೆ. ಅವರ ತೋಟದ ತೆಂಗಿನ ಮರದಿಂದ ಕಾಯಿ ಕೀಳಲು ಮರಕ್ಕೆ ಹತ್ತಿದ್ದರು. ಈ ವೇಳೆ ಜಾರಿ ಕೆಳಗೆ ಬಿದ್ದು ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ದಿನದ 24 ಗಂಟೆಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಗಿರಿಯಪ್ಪ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಿರಿಯಪ್ಪ ಅವರನ್ನು ಬದುಕಿಸಲು

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

error: Content is protected !!
Scroll to Top