ಅಪಘಾತ

ಹೃದಯಾಘಾತಕ್ಕೆ ಯುವಕ ಬಲಿ

ಬಂಟ್ವಾಳ: ಕೃಷಿ ಸಂಬಂಧಿ ಕೆಲಸದಲ್ಲಿ ತೊಡಗಿಕೊಂಡಿದ್ದ ಯುವಕನೊಬ್ಬ ಎದೆನೋವಿನ ಕಾರಣಕ್ಕೆ ಹೃದಯಾಘಾತದಿಂದ ಮೃತಪಟ್ಚ ಘಟನೆ ಕುಕ್ಕಿಪಾಡಿ ಎಂಬಲ್ಲಿ ನಡೆದಿದೆ. ಮೃತನನ್ನು ‌ಪ್ರಶಾಂತ್ ಆಚಾರ್ಯ (24) ಎಂದು ಗುರುತಿಸಲಾಗಿದೆ. ಇವರು ಕುಕ್ಕಿಪಾಡಿ ಗ್ರಾಮದ ಮಾಡಮೆ ‌ಎಂಬಲ್ಲಿನ ಶ್ರೀರಾಮ ಆಚಾರ್ಯ ಅವರ ಎರಡನೇ ಪುತ್ರ. ಸಿದ್ಧಕಟ್ಟೆಯ ಯಂತ್ರೋಪಕರಣದ ಅಂಗಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಭಾನುವಾರ ಅರಂತಾಡಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಸಿದ್ಧಕಟ್ಟೆಯ ‌ಆಸ್ಪತ್ರೆಯ ವೈದ್ಯರ ನಿರ್ದೇಶನದಂತೆ ಮೂಡುಬಿದಿರೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, […]

ಹೃದಯಾಘಾತಕ್ಕೆ ಯುವಕ ಬಲಿ Read More »

ಬೃಹತ್ ಮರ ಮುರಿದು ಬಿದ್ದು ಕಾರು ಜಖಂ

ಸುಳ್ಯ: ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಪವಾಡ ಸದೃಶ ಎಂಬಂತೆ ಪಾರಾದ ಘಟನೆ ಬೇಂಗಮಲೆ ಎಂಬಲ್ಲಿ ನಡೆದಿದೆ. ಬೆಳ್ಳಾರೆಯ ಪಂಜದ ಕಡೆಗೆ ಉಮ್ಮರ್ ಎಂಬವರ ಬಾಡಿಗೆ ಕಾರಿನಲ್ಲಿ ಸಾಲ ವಸೂಲಾತಿ ಕೆಲಸಕ್ಕೆ ಬ್ಯಾಂಕ್ ಮೆನೇಜರ್ ಉತ್ಸವ್ ಚಕ್ರವರ್ತಿ ಅವರು ಪ್ರಯಾಣಿಸುತ್ತಿದ್ದರು. ಕೆಲಸ ಮುಗಿಸಿ ಮರಳುವ ವೇಳೆ ಬೃಹತ್ ಮರ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ದೊಡ್ಡ ಮಟ್ಟದ

ಬೃಹತ್ ಮರ ಮುರಿದು ಬಿದ್ದು ಕಾರು ಜಖಂ Read More »

ಏರ್‌ ಆಂಬುಲೆನ್ಸ್‌ ಪತನಗೊಂಡು ಏಳು ಮಂದಿ ಸಾವು

ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿದ್ದ ಖಾಸಗಿ ಏರ್‌ ಆಂಬುಲೆನ್ಸ್‌ ಪತನ ಹೊಸದಿಲ್ಲಿ: ಜಾರ್ಖಂಡ್‌ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಏರ್‌ ಆಂಬುಲೆನ್ಸ್‌ ಪತನಗೊಂಡು ಅದರಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಏರ್ ಆ್ಯಂಬುಲೆನ್ಸ್‌ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಚಾತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಹೇಳಿದ್ದಾರೆ. ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (ವಿಐ-ಎಜೆವಿ) ರಾಂಚಿ ವಿಮಾನ ನಿಲ್ದಾಣದಿಂದ ರಾತ್ರಿ 7.11ಕ್ಕೆ ಟೇಕಾಫ್‌

ಏರ್‌ ಆಂಬುಲೆನ್ಸ್‌ ಪತನಗೊಂಡು ಏಳು ಮಂದಿ ಸಾವು Read More »

ಹತ್ತನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ

ವಿಟ್ಲ: ನಗರದ ಕೊಡಂಗಾಯಿ ಬಳಿಯ ಮೂರುಕಜೆಯ ವಿದ್ಯಾ ಸಂಸ್ಥೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಬೆಂಗಳೂರು ಮೂಲದ ವೈಗಲಕ್ಷ್ಮೀ ಎಂಬಾಕೆಯೇ ಮೃತ ವಿದ್ಯಾರ್ಥಿನಿ. ಆಕೆ ನಿನ್ನೆಯಿಂದ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ‌ಮರಣೋತ್ತರ ಪರೀಕ್ಷಾ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ Read More »

ಎರಡು ವರ್ಷದ ಕಂದನನ್ನು ಕೊಂದ ಚಿಕ್ಕಮ್ಮ ಪೊಲೀಸರ ವಶಕ್ಕೆ

ನವದೆಹಲಿ: ಎರಡು ವರ್ಷದ ಮಗುವನ್ನು ಸ್ವಂತ ಚಿಕ್ಕಮ್ಮನೇ ಕತ್ತು ಹಿಸುಕಿ ‌ಕೊಂದಿರುವ ಘಟನೆ ನವದೆಹಲಿಯ ಮುಖರ್ಜಿ ನಗರದ SFS ಫ್ಲ್ಯಾ‌ಟ್‌ಗಳ ಹತ್ತಿರದ ಉದ್ಯಾನವನದಲ್ಲಿ ನಡೆದಿದೆ. ಆರೋಪಿ ಅಜ್ರಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಬಾಲಕನನ್ನು ಹಾದಿ ಎಂದು ಗುರುತಿಸಲಾಗಿದ್ದು, ಆತ ತನ್ನ ತಾಯಿಯ ಜೊತೆ ಅಜ್ಜಿ ಮನೆಗೆ ಬಂದಿದ್ದ. ಮಧ್ಯಾಹ್ನದ ವೇಳೆ ಮಗುವಿನ ತಾಯಿಯ ತಂಗಿ ಹಾದಿಯನ್ನು ಉದ್ಯಾನಕ್ಕೆ ‌ಕರೆದೊಯ್ದಿದ್ದಾಳೆ. ಅಲ್ಲಿ ಅವಳು ಮಗುವನ್ನು ಕೊಂದಿರುವ ಆರೋಪ ಕೇಳಿ ಬಂದಿದೆ. ಆ ಬಳಿಕ ಶವವನ್ನು ತನ್ನ

ಎರಡು ವರ್ಷದ ಕಂದನನ್ನು ಕೊಂದ ಚಿಕ್ಕಮ್ಮ ಪೊಲೀಸರ ವಶಕ್ಕೆ Read More »

ಅತಿವೇಗದಿಂದ ಬಂದ ಕಾರು ಸರ್ಕಾರಿ ಬಸ್ಸಿಗೆ ಢಿಕ್ಕಿ

ಕಾಸರಗೋಡು: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ. ಬಸ್‌ಗೆ ಗುದ್ದಿರುವ‌ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ. ಕರ್ನಾಟಕದ ಪುತ್ತೂರು ವಿಭಾಗದ ಬಸ್ಸು ಇದಾಗಿದ್ದು ಕಾಸರಗೋಡಿನಿಂದ ಪ್ರಯಾಣಿಕರನ್ನು ಹೊತ್ತು ಪುತ್ತೂರಿನ ಕಡೆಗೆ ಬರುತ್ತಿತ್ತು. ಈ ವೇಳೆ ಅತಿ ವೇಗದಿಂದ ಬಂದ ಸ್ವಿಫ್ಟ್ ಕಾರು ಬಸ್‌ಗೆ ಗುದ್ದಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ‌ಇಬ್ಬರಿಗೆ ಗಾಯಗಳಾಗಿರುವುದಾಗಿಯೂ ವರದಿಯಾಗಿದೆ.

ಅತಿವೇಗದಿಂದ ಬಂದ ಕಾರು ಸರ್ಕಾರಿ ಬಸ್ಸಿಗೆ ಢಿಕ್ಕಿ Read More »

ಪುತ್ತೂರು : ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಏಕ ಬಳಕ್ಕ ಪರಿಸರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂನಿಂದ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ.ಸ್ಥಳೀಯರಾದ ಲ್ಯಾನ್ಸಿ ಬಳಕ್ಕ ಅಜಿತ್ ಪ್ರಸಾದ್ ರೈ ಮತ್ತು ಉಮೇಶ್ ದೇವಾಡಿಗ ಅವರಿಗೆ ಸೇರಿದ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಲ್ಯಾನ್ಸಿ ಬಳಕ್ಕ ಅವರಿಗೆ ಸೇರಿದ ಗದ್ದೆಯಲ್ಲಿ 40 ಫೀಟ್ ಉದ್ದದ ಪಿವಿಸಿ ಪೈಪ್‌, ವೀಳ್ಯ ಕೃಷಿಗೆ ಹಾನಿ ಉಂಟಾಗಿದೆ. ಬೆಂಕಿ‌ ನಂದಿಸಲು ಸ್ಥಳೀಯರು ಶ್ರಮಿಸಿದರು.

ಪುತ್ತೂರು : ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ Read More »

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸವಾರರಿಬ್ಬರ ಸಾವು

ಹಾಸನ: ಬೈಕ್‌ಗಳು ಢಿಕ್ಕಿ ಹೊಡೆದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಚ ಘಟನೆ ಗುಟ್ಟೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ನಡೆದಿದೆ. ಮೃತರನ್ನು ಗುಟ್ಟೇನಹಳ್ಳಿ ನಿವಾಸಿ ರಾಕೇಶ್ (28) ಮತ್ತು ವಲ್ಲಭಾಯಿ ರಸ್ತೆಯ ಮಯೂರ(25) ಎಂದು ಗುರುತಿಸಲಾಗಿದೆ. ರಾಕೇಶ್ ಅವರ ಬೈಕ್ ಮತ್ತು ಮಯೂರ್ ಅವರ ಹೋಂಡಾ ಆಕ್ಟಿವಾ ನಡುವೆ ಅಪಘಾತ ಸಂಭವಿಸಿರುವುದಾಗಿದೆ. ಸವಾರರ ಅತಿ ವೇಗ ಮತ್ತು ನಿಯಂತ್ರಣ ತಪ್ಪಿದ ಕಾರಣವೇ ಈ ಅಪಘಾತ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸವಾರರಿಬ್ಬರ ಸಾವು Read More »

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ

ಉಡುಪಿ: ಸರಕು ಸಾಗಿಸುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಘಟನೆ ಗುರುವಾರ ತಡರಾತಿ ಬೈಂದೂರು ಸಮೀಪ ಸಂಭವಿಸಿದೆ. ಗುರುವಾರ ಮಧ್ಯರಾತ್ರಿ ಸುಮಾರಿಗೆ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66 ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು ರಾತ್ರಿ 1 ಗಂಟೆ ಸುಮಾರಿಗೆ ಯಡ್ತರೆ ಬೈಪಾಸ್‌ನಿಂದ ಮುಂದಕ್ಕೆ ಸಾಗಿ ಬಿಜೂರು ಬಳಿ ಆಗಮಿಸುವಾಗ ಹಿಂಬದಿಯ ಟಯರ್ ಸ್ಫೋಟಗೊಂಡು ಲಾರಿಗೆ ಬೆಂಕಿ ತಗುಲಿದೆ. ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ Read More »

ಸ್ಕೂಟರ್‌ನಲ್ಲಿ ದಿಢೀರ್ ಬೆಂಕಿ: ಕ್ಷಣಮಾತ್ರದಲ್ಲಿ ಸುಟ್ಟು ಕರಕಲು

ಉಡುಪಿ: ಮನೆಯಂಗಳದಲ್ಲಿ ‌ನಿಲ್ಲಿಸಿದ್ದ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಶಿರ್ವದ ಪಂಜಿಮಾರು ಪಾಲಮೆಯಲ್ಲಿ ನಡೆದಿದೆ. ಈ ಸ್ಕೂಟರ್ ಅನ್ನು ಕೇವಲ ಒಂದು ತಿಂಗಳ ಹಿಂದಷ್ಟೇ ಖರೀದಿ ಮಾಡಲಾಗಿತ್ತು. ಮಂಗಳೂರಿನಿಂದ ಕೇವಲ ಒಂದು ತಿಂಗಳ ಹಿಂದಷ್ಟೇ ಸ್ಕೂಟರ್ ಅನ್ನು ಖರೀದಿ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ಮನೆಯ ಅಂಗಳದಲ್ಲಿ ಅದನ್ನು ಮಾಲೀಕರು ಪಾರ್ಕ್ ಮಾಡಿದ್ದರು. ದಿಢೀರ್ ಎಂದು ಅದಕ್ಕೆ ಬೆಂಕಿ ಹಿಡಿದುಕೊಂಡಿದ್ದು, ಕೆಲವೇ ಸಮಯದಲ್ಲಿ ಗಾಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

ಸ್ಕೂಟರ್‌ನಲ್ಲಿ ದಿಢೀರ್ ಬೆಂಕಿ: ಕ್ಷಣಮಾತ್ರದಲ್ಲಿ ಸುಟ್ಟು ಕರಕಲು Read More »

error: Content is protected !!
Scroll to Top