ಅಪಘಾತ

ಟಿಪ್ಪರ್ ಗುದ್ದಿ ಮೆಡಿಕಲ್ ವಿದ್ಯಾರ್ಥಿನಿ ಸಾವು, ಸಹ ಸವಾರೆ ಗಂಭೀರ

ಬೆಂಗಳೂರು: ಟಿಪ್ಪರ್ ‌ಲಾರಿ ಗುದ್ದಿದ ಪರಿಣಾಮ ಕಾಲೇಜಿನಿಂದ ಆ್ಯಕ್ಟಿವಾ ಮೂಲಕ ತೆರಳುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ‌ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಸಮೀಪ ಈ ದುರಂತ ನಡೆದಿದೆ. ಕೃತಿಕಾ (21) ಎಂಬವರೇ ‌ಮೃತ ದುರ್ದೈವಿ. ಹಿಂಬದಿ ಸವಾರೆ ಹಂಸ ಎಂಬವರು ಗಂಭೀರ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಎಂಬಿಬಿಎಸ್ ವಿದ್ಯಾರ್ಥಿನಿಯರು ಕಾಲೇಜು ಮುಗಿಸಿ ಆ್ಯಕ್ಟಿವಾ ಮೂಲಕ ಗೇಟ್ ಹೊರಗೆ ಬರುತ್ತಿದ್ದರು. ಈ ವೇಳೆ ಅತಿವೇಗದಿಂದ ಬಂದ […]

ಟಿಪ್ಪರ್ ಗುದ್ದಿ ಮೆಡಿಕಲ್ ವಿದ್ಯಾರ್ಥಿನಿ ಸಾವು, ಸಹ ಸವಾರೆ ಗಂಭೀರ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ

ಸುಳ್ಯ: ನಿನ್ನೆ ರಾತ್ರಿ ದೊಡ್ಡತೋಟ ಬಳಿಯ ಕಾಸಿನಗೋಡ್ಲು ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಕಾರಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಕಾರು ಮಾವಿನಕಟ್ಟೆಯಿಂದ ಸುಳ್ಯದತ್ತ ಬರುತ್ತಿರುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ Read More »

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ : ತಂದೆ, ಐವರು ಮಕ್ಕಳಿಗೆ ಗಾಯ

ಉಪ್ಪಿನಂಗಡಿ: ವೇಗವಾಗಿ ಬಂದ ಕಾರು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಆಟೋ ಚಾಲಕರಾದ ಅವರ ತಂದೆ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಾಳುಗಳನ್ನು ಆಟೋ ಚಾಲಕ ಕಲಂದರ್ ಶಾಫಿ ಮತ್ತು ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5) ಮತ್ತು ಸಝ್ಮಾ (4) ಎಂದು ಗುರುತಿಸಲಾಗಿದೆ. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಮತ್ತು ಮಹಮ್ಮದ್ ಜಾಝೀರ್

ಆಟೋರಿಕ್ಷಾಕ್ಕೆ ಕಾರು ಡಿಕ್ಕಿ : ತಂದೆ, ಐವರು ಮಕ್ಕಳಿಗೆ ಗಾಯ Read More »

ನಿಯಂತ್ರಣ ತಪ್ಪಿದ ರಥ ಹರಿದು ಮಹಿಳೆಯ ಕಾಲು ಕಟ್

ಕಲಬುರ್ಗಿ: ಶರಣ ಬಸವೇಶ್ವರ ಜಾತ್ರೆಯ ವೇಳೆ ನಿಯಂತ್ರಣಕ್ಕೆ ಸಿಗದ ರಥ ಮಹಿಳೆಯ ಮೇಲೆ ಹರಿದು ಕಾಲುಗಳು ಕತ್ತರಿಸಿ ಹೋಗಿರುವ ಘಟನೆ ಯಡ್ರಾಮಿ ತಾಲೂಕಿನ ಅರಳಗುಂಡಗಿಯಲ್ಲಿ ನಡೆದಿದೆ. ಜಾತ್ರಾ ಪ್ರಯುಕ್ತ ನಡೆದ ರಥೋತ್ಸವದ ವೇಳೆ ಈ ದುರ್ಘಟನೆ ನಡೆದಿದೆ. ರಥ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಂದ ಪರಿಣಾಮ ಮಹಿಳೆಯ ಕಾಲಿನ ಮೇಲೆ ಹರಿದಿದೆ. ಘಟನೆಯಲ್ಲಿ ಮಹಿಳೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಕಾಲು ಕಳಕೊಂಡ ಮಹಿಳೆಯನ್ನು ನಾಗಮ್ಮ ಎಂದು ಗುರುತಿಸಲಾಗಿದೆ. ರಥ ನೋಡಲು ನಿಂತುಕೊಂಡಿದ್ದ ಅವರ ಮೇಲೆ ರಥ

ನಿಯಂತ್ರಣ ತಪ್ಪಿದ ರಥ ಹರಿದು ಮಹಿಳೆಯ ಕಾಲು ಕಟ್ Read More »

ಉಪ್ಪಿನಂಗಡಿ : ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಸಾವು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಪದ್ಮುಂಜ ಸಹಕಾರಿ ಸಂಘದ ಹಿರಿಯ ಉದ್ಯೋಗಿ ಚಿದಾನಂದ ಗೌಡ (56) ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದವರು. ಬಂದಾರು ಗ್ರಾಮದ ಕುರಾಯ ನಿವಾಸಿಯಾಗಿರುವ ಚಿದಾನಂದ ಗೌಡ ಕಾರ್ಯನಿಮಿತ್ತ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಬೊಳ್ಳಾರ್ ಎಂಬಲ್ಲಿ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ

ಉಪ್ಪಿನಂಗಡಿ : ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಸಾವು Read More »

ಅಪಘಾತ : ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವು

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತ ಬೆಂಗಳೂರು: ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು-ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರದ ಆಗರ ಕ್ರಾಸ್ ಬಳಿ ಇಂದು ನಸುಕಿನ ಹೊತ್ತು ನಡೆದಿದೆ. ಮೃತರನ್ನು ಸೈಯದ್ ಪಾಷ (22), ಯೂನಿಫ್ ಬಾನ್ (23), ಅಜರ್ ಪಾಷ (22) ಎಂದು ಗುರುತಿಸಲಾಗಿದೆ. ಫರಾಜ್ ಎಂಬವನಿಗೆ ಗಂಭೀರ ಗಾಯವಾಗಿದ್ದು, ಆತನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗ್ಗಿನ ಜಾವ 3

ಅಪಘಾತ : ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವು Read More »

ಸೈಕಲ್‌ನಿಂದ ಬಿದ್ದು ಬಾಲಕ ಸಾವು

ವಿಟ್ಲ: ಬಾಲಕ ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ವಿಟ್ಲ ಸಮೀಪ ಕೊಳ್ನಾಡು ಎಂಬಲ್ಲಿ ಸಂಭವಿಸಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಸ್ಮ ಎಂಬವರ ಪುತ್ರ ಆಸಿಫ್‌ (12) ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಬಾಲಕ. ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುವ ವೇಳೆ ರಸ್ತೆಯ ತಿರುವಿನಲ್ಲಿ ಸೈಕಲ್‌ ನಿಯಂತ್ರಣ ತಪ್ಪಿ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಆಸೀಪ್‌ನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲವೆಂದು ಸ್ಥಳೀಯರು

ಸೈಕಲ್‌ನಿಂದ ಬಿದ್ದು ಬಾಲಕ ಸಾವು Read More »

ವಿಟ್ಲದ ನೂಜಿಯಲ್ಲಿ ಮತ್ತೊಂದು ಭಾರಿ ಸ್ಫೋಟ

ದಾಸ್ತಾನು ಇಟ್ಟ ಪಟಾಕಿ ಬಿಸಿಲಿಗೆ ಸ್ಫೋಟಿಸಿ ಆತಂಕ ವಿಟ್ಲ: ವಿಟ್ಲ ಸಮೀಪದ ಕಂಬಳಬೆಟ್ಟು ನೂಜಿ ಎಂಬಲ್ಲಿ ಮ್ತೊಮ್ಮೆ ಭಾರಿ ಸ್ಫೋಟ ಸಂಭವಿಸಿದೆ. ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸಿಡಿದು ಭಾರಿ ಸ್ಫೋಟಗೊಂಡ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಕಳೆದ ವರ್ಷ ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಡ್ಕ ಪರಿಸರದ ಕೋರೆಯಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟ ಗೊಂಡ ಘಟನೆ ನಡೆದಿತ್ತು. ಈ ಘಟನೆಯಿಂದ ಆಸುಪಾಸಿನ ಮನೆಗಳಿಗೆ, ಮರ ಗಿಡಗಳಿಗೆ ಹಾನಿಯಾಗಿತ್ತು. ಇದೀಗ ಮತ್ತೆ ಅದೇ ಪರಿಸರದಲ್ಲಿ ಶುಕ್ರವಾರ ಮಧ್ಯಾಹ್ನ

ವಿಟ್ಲದ ನೂಜಿಯಲ್ಲಿ ಮತ್ತೊಂದು ಭಾರಿ ಸ್ಫೋಟ Read More »

ಕಾರು – ಬೈಕ್ ಅಪಘಾತ: ಮೂರು ಸಾವು

ಗದಗ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟ ಘಟನೆ ಮುಂಡರಗಿಯ ಮೇವುಂಡಿ ಎಂಬಲ್ಲಿ ನಡೆದಿದೆ. ಮೃತರನ್ನು ‌ಶಿವಪ್ಪ ಪಾಟ್ಲಿ, ಮುತ್ತಪ್ಪ ‌ಮುದುಗಣ್ಣವರ್, ಆನಂದ ಲಕ್ಷ್ಮೇಶ್ವರಮಠ ಎಂದು ಗುರುತಿಸಲಾಗಿದೆ. ಒಂದೇ ಬೈಕಿನಲ್ಲಿ ಈ ಮೂವರು ಮುಂಡರಗಿಯಿಂದ ಜಂತ್ಲಿ ಗ್ರಾಮಕ್ಕೆ ಹೋಗುತ್ತಿದ್ದರು. ಕಾರು ಡೋಣಿ ಗ್ರಾಮದಿಂದ ಮುಂಡರಗಿಯತ್ತ ಹೋಗುತ್ತಿತ್ತು. ಬೈಕ್ ಸವಾರರ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದೆ. ಕಾರು

ಕಾರು – ಬೈಕ್ ಅಪಘಾತ: ಮೂರು ಸಾವು Read More »

ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ವಾಹನ ಪಲ್ಟಿ: ಚಾಲಕನಿಗೆ ಗಾಯ

ದೊಡ್ಡಬಳ್ಳಾಪುರ: ಮೇಷ್ಟ್ರು ಮನೆ ಸರ್ಕಲ್ ಸಮೀಪ ಕಲ್ಲಂಗಡಿ ಹಣ್ಣುಗಳನ್ನು ಸಾಗಾಟ‌ ಮಾಡುತ್ತಿದ್ದ ಕ್ಯಾಂಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ ಅವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲಂಗಡಿ ಹಣ್ಣುಗಳನ್ನು ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ‌ಸಾಗಿಸಲಾಗುತ್ತಿತ್ತು. ಈ ವೇಳೆ ಅನಿರೀಕ್ಷಿತವಾಗಿ ಈ ದುರ್ಘಟನೆ ನಡೆದಿದೆ. ಪಲ್ಟಿಯಾದ ರಭಸಕ್ಕೆ ವಾಹನದಲ್ಲಿದ್ದ ಕಲ್ಲಂಗಡಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದೆ. ಸಾರ್ವಜನಿಕರು ಈ ಹಣ್ಣುಗಳನ್ನು ತೆಗೆದುಕೊಂಡು ಹೋದ ಘಟನೆ ನಡೆದಿದೆ.

ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ವಾಹನ ಪಲ್ಟಿ: ಚಾಲಕನಿಗೆ ಗಾಯ Read More »

error: Content is protected !!
Scroll to Top