ಸ್ಥಳೀಯ ಸುದ್ದಿ

ವ್ಯಕ್ತಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪುತ್ತೂರು: ಕಾರು ತಾಗಿದ ‌ಕಾರಣವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸ ಭಟ್ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ವ್ಯಕ್ತಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು Read More »

ಮಾ.7 – 8: ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್- 3

ಮಂಗಳೂರು: ಯುವ ಘಟಕ – ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ.) ಮಂಗಳೂರು ಇದರ ವತಿಯಿಂದ ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್-3 ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ಅಂತರ್ ಜಿಲ್ಲಾ ಕ್ರಿಕೆಟ್ ಮತ್ತು ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಮಾ‌ 7 ಮತ್ತು 8 ರಂದು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾಟವು ಬೆಳಿಗ್ಗೆ 7.30 ಪ್ರಾರಂಭಗೊಳ್ಳಲಿದ್ದು, ಉದ್ಘಾಟನಾ ಸಮಾರಂಭ ಮಾ. 7ರ ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.

ಮಾ.7 – 8: ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್- 3 Read More »

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಖಾಲಿ ಇರುವ ಅಕೌಂಟಿಂಗ್ – ಕಚೇರಿ ಸಹಾಯಕರ ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿರುವ, ಅಕೌಂಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಂಪ್ಯೂಟರ್ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗೆ: 9901355730 ನಂಬರ್ ಗೆ resume ಕಳುಹಿಸಿ.

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ Read More »

ಅಕ್ಷಯ ಕಾಲೇಜು ವಾರ್ಷಿಕ ಶಿಬಿರ 2025-26 ಸಮಾರೋಪ

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಅಕ್ಷಯ ಕಾಲೇಜು ಪುತ್ತೂರು ವತಿಯಿಂದ “ನನ್ನ ಭಾರತಕ್ಕಾಗಿ ಯುವಜನತೆ – ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಆಶಯದೊಂದಿಗೆ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಶ್ರೀ ರಾಮಚಂದ್ರ ಪದವಿ ಪರ‍್ವ ವಿದ್ಯಾಲಯದಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ವಹಿಸಿದ್ದರು. ಅಧ್ಯಕ್ಷ ಜಯಂತ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಏಳು ದಿನಗಳ ಕಾಲ ಪರ್ನೆ ಪರಿಸರವನ್ನು ಆಯ್ಕೆ ಮಾಡಿಕೊಂಡು ಶಿಬಿರವನ್ನು

ಅಕ್ಷಯ ಕಾಲೇಜು ವಾರ್ಷಿಕ ಶಿಬಿರ 2025-26 ಸಮಾರೋಪ Read More »

ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ರವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಂಘದ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶ ಮತ್ತು ಗಣ್ಯರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026 ಸಮಾರಂಭದಲ್ಲಿ ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ಅವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮತಿ ದಯಾಮಣಿ

ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ರವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ Read More »

ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನ (ಗ್ರಾಜ್ಯುಯೇಷನ್ ಡೇ) ಏರ್ಪಡಿಸಲಾಯಿತು. ಸಮಾರಂಭವನ್ನು ಎಸ್. ಎನ್. ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಸದಸ್ಯೆ ರಶ್ಮಿ ಅಶ್ವಿನ್ ಎಲ್. ಶೆಟ್ಟಿ ಅವರು ಉದ್ಘಾಟಿಸಿದರು. ಅತಿಥಿಯಾಗಿ ಸವಣೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಯಂತ್ ವೈ. ಅವರು ಮಕ್ಕಳೇ ನಮ್ಮ ಆಸ್ತಿ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ, ಸರಿಯಾದ ಗುರಿ, ಗುರುಗಳ ಮೇಲೆ ಗೌರವ ಇರಬೇಕು ಎಂಬ ಹಿತನುಡಿಯೊಂದಿಗೆ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ಅಢ್ವಕೇಟ್ ಅಶ್ವಿನ್ ಎಲ್. ಶೆಟ್ಟಿ

ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ Read More »

ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ. ನೆಕ್ಕಿಲಾಡಿ ಮಸೀದಿಯ ಹಿಂಬದಿಯ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಸಿಕ್ಕಿರುವುದಾಗಿದೆ. ನದಿಯಲ್ಲಿನ ಗಿಡ ಗಂಟಿಗಳ ನಡುವೆ ಶವ ಕಂಡು ಬಂದಿದ್ದು, ನದಿಯಲ್ಲಿ ತೇಲಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ Read More »

ಅಕ್ಷಯ ಕೆರಿಯರ್ ಅಕಾಡೆಮಿಯ ಉಚಿತ ವಿಮಾನಯಾನ ತರಬೇತಿ ಯಶಸ್ವಿ

ಪುತ್ತೂರು: ಅಕ್ಷಯ ಕೆರಿಯರ್ ಅಕಾಡೆಮಿ, ಪುತ್ತೂರು ವತಿಯಿಂದ ಡಿಪ್ಲೊಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ವಿದ್ಯಾರ್ಥಿಗಳಿಗಾಗಿ “ವಿಮಾನಯಾನ” ವಿಶೇಷ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣದ ನೈಜ ಕಾರ್ಯಪದ್ಧತಿ ಮತ್ತು ಉದ್ಯೋಗಾವಕಾಶಗಳ ಅರಿವು ಮೂಡಿಸುವುದು ತರಬೇತಿಯ ಮುಖ್ಯ ಉದ್ದೇಶವಾಗಿತ್ತು. ತರಬೇತಿಯ ಭಾಗವಾಗಿ ವಿದ್ಯಾರ್ಥಿಗಳು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್, ಬೆಂಗಳೂರುಗೆ ಭೇಟಿ ನೀಡಿದರು. ಅಲ್ಲಿ ನಡೆಯುವ ಚೆಕ್-ಇನ್, ಬೋರ್ಡಿಂಗ್, ಭದ್ರತಾ ತಪಾಸಣೆ, ಗ್ರೌಂಡ್ ಹ್ಯಾಂಡ್ಲಿಂಗ್ ಹಾಗೂ ಗ್ರಾಹಕ ಸೇವೆ ಸೇರಿದಂತೆ ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು

ಅಕ್ಷಯ ಕೆರಿಯರ್ ಅಕಾಡೆಮಿಯ ಉಚಿತ ವಿಮಾನಯಾನ ತರಬೇತಿ ಯಶಸ್ವಿ Read More »

ಕಡಬದ ‌ಯುವಕ ಐರ್ಲೆಂಡಿನಲ್ಲಿ ಮೃತಪಟ್ಟ ‌ಸ್ಥಿತಿಯಲ್ಲಿ ಪತ್ತೆ

ಕಡಬ: ಉದ್ಯೋಗಕ್ಕಾಗಿ ಐರ್ಲೆಂಡಿಗೆ ತೆರಳಿದ್ದ ಕಡಬದ ಯುವಕನೊಬ್ಬ ತನ್ನ ನಿವಾಸದಲ್ಲೇ ನಿಗೂಢವಾಗಿ ಮೃತಪಟ್ಚಿರುವ ಘಟನೆ ನಡೆದಿದೆ. ಮೃತನನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿಯ ಸಾಂಜೋ ‌ಸುನಿಲ್ (31) ಎಂದು ಗುರುತಿಸಲಾಗಿದೆ. ಸಾಂಜೋ ಅವರು ಐರ್ಲೆಂಡಿನ ತಮ್ಮ ನಿವಾಸದಲ್ಲಿ ಶವವಾಗಿ ‌ಪತ್ತೆಯಾಗಿದ್ದು, ಐರಿಶ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಪತಿಯ ಸಾವಿನ ವಿಷಯ ಕೇಳಿದ ಸಾಂಜೋ ಅವರ ಪತ್ನಿ ಆಘಾತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದಾಗಿ ತಿಳಿದು ಬಂದಿದೆ.

ಕಡಬದ ‌ಯುವಕ ಐರ್ಲೆಂಡಿನಲ್ಲಿ ಮೃತಪಟ್ಟ ‌ಸ್ಥಿತಿಯಲ್ಲಿ ಪತ್ತೆ Read More »

ಅಡಿಕೆ ಕಳ್ಳತನ: ಓರ್ವ ಆರೋಪಿಗೆ ನ್ಯಾಯಾಂಗ ಬಂಧನ, ಮತ್ತೊಬ್ಬನಿಗೆ ನಿರೀಕ್ಷಣಾ ಜಾಮೀನು

ಕಡಬ: ತಮ್ಮ ತೋಟದಿಂದ ಅಡಿಕೆ ಕಳ್ಳತನ ಮಾಡಿರುವುದಾಗಿ ‌ಅಲಂಕಾರಿನ ಸತೀಶ್ ಎಂಬವರು ಜ. 25ರಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪ್ರಕರಣದ ಆರೋಪಿಗಳಲ್ಲಿ ಓರ್ವನಿಗೆ ನ್ಯಾಯಾಂಗ ಬಂಧನ ಮತ್ತು ಇನ್ನೊಬ್ಬನಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ. ಸತೀಶ್ ಅವರ ತೋಟದಿಂದ ಅಡಿಕೆ ಕಳವು ಮಾಡಿ ಆರೋಪಿಗಳಾದ ಕಾಯಿಕಾಣ ಗ್ರಾಮದ ಜಯಂತ್ ಎಂ. ಮತ್ತು ಕಾಣಿಯೂರು ಗ್ರಾಮದ ಲಿಂಗಪ್ಪ ಎಂಬವರು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಪೈಕಿ ಜಯಂತ್‌ಗೆ ನ್ಯಾಯಾಂಗ

ಅಡಿಕೆ ಕಳ್ಳತನ: ಓರ್ವ ಆರೋಪಿಗೆ ನ್ಯಾಯಾಂಗ ಬಂಧನ, ಮತ್ತೊಬ್ಬನಿಗೆ ನಿರೀಕ್ಷಣಾ ಜಾಮೀನು Read More »

error: Content is protected !!
Scroll to Top