ಸುದ್ದಿ

ಬೆಂಕಿ ಅವಘಡ : 13 ಇಲೆಕ್ಟ್ರಿಕ್‌ ಸ್ಕೂಟರ್‌ ಸುಟ್ಟು ಕರಕಲು

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶೋರೂಂಗೆ ಬೆಂಕಿ ಹೊತ್ತಿಕೊಂಡು 13 ಇಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿರುವ ಘಟನೆ ಕೆ.ಆರ್ ಪುರದ ಟಿ.ಸಿ ಪಾಳ್ಯ ಸಿಗ್ನಲ್ ಬಳಿ ನಡೆದಿದೆ. ಬುಧವಾರ ರಾತ್ರಿ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ತಿದ್ದಂತೆಯೇ ಶೋರೂಂ ಸಿಬ್ಬಂದಿ ಓಡಿ ಹೊರಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಶೋರೂಂನಲ್ಲಿದ್ದ 13 ಇಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ […]

ಬೆಂಕಿ ಅವಘಡ : 13 ಇಲೆಕ್ಟ್ರಿಕ್‌ ಸ್ಕೂಟರ್‌ ಸುಟ್ಟು ಕರಕಲು Read More »

ಕಾಂಗ್ರೆಸ್‌ ಹಿಂದೂ ದ್ವೇಷದ ಅತಿರೇಕ : ಕ್ಯಾ.ಬ್ರಿಜೇಶ್‌ ಚೌಟ ಆಕ್ರೋಶ

ಪರ್ಯಾಯದಲ್ಲಿ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಾರಿಸಿದ್ದಕ್ಕೆ ಕಾಂಗ್ರೆಸ್‌ ವಿರೋಧ ಮಂಗಳೂರು: ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಿಸಿರುವುದನ್ನು ವಿರೋಧಿಸುತ್ತಿರುವ ನಿಲುವು ಕಾಂಗ್ರೆಸ್‌ನವರ ಹಿಂದೂ ವಿರೋಧಿ ಮಾನಸಿಕತೆ ಹಾಗೂ ತುಷ್ಟೀಕರಣ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮತೀಯ ಹಾಗೂ ಮೂಲಭೂತವಾದಿಗಳನ್ನು ಓಲೈಸುವುದಕ್ಕಾಗಿ ಹಿಂದೂ ಸಮಾಜವನ್ನು ಪದೇಪದೆ ಟಾರ್ಗೆಟ್‌ ಮಾಡುತ್ತಿದೆ. ವಿಧಾನಸೌಧದಲ್ಲೇ ಪಾಕಿಸ್ತಾನದ ಪರ

ಕಾಂಗ್ರೆಸ್‌ ಹಿಂದೂ ದ್ವೇಷದ ಅತಿರೇಕ : ಕ್ಯಾ.ಬ್ರಿಜೇಶ್‌ ಚೌಟ ಆಕ್ರೋಶ Read More »

ಡಾ.ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲು

ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಪುತ್ತೂರು : ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಡಾ.ಕಲ್ಲಡ ಪ್ರಭಾಕರ ಭಟ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನಿವಾಸಿ ರಾಮಚಂದ್ರ ಕೆ. ಎಂಬವರು ನೀಡಿದ ದೂರಿನ ಪ್ರಕಾರ 12.01.2026ರಂದು ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ.ಕಲ್ಲಡ ಪ್ರಭಾಕರ ಭಟ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತೆ, ಕೋಮುಧ್ವೇಷ ಹಾಗೂ

ಡಾ.ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲು Read More »

ಕರ್ನಾಟಕದಲ್ಲೂ ಗವರ್ನರ್‌ V/S ಗವರ್ನಮೆಂಟ್‌ ಸಂಘರ್ಷ

ವಿಶೇಷ ಅಧಿವೇಶನದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲರು ಬೆಂಗಳೂರು: ಇಂದು ಆರಂಭವಾಗಲಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌ ನಿರಾಕರಿಸಿರುವುದು ಗಂಭೀರವಾದ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಭಾಷಣದಲ್ಲಿ ಉಲ್ಲೇಖಿಸಲಾಗಿರುವ 11 ಪಾರಾಗಳನ್ನು ತಿದ್ದುಪಡಿ ಮಾಡುವಂತೆ ಅಥವಾ ಕೈಬಿಡುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ರಾಜ್ಯಪಾಲರ ಈ ಷರತ್ತಿಗೆ ನಕಾರ ವ್ಯಕ್ತಪಡಿಸಿದೆ. ಸರ್ಕಾರ ಬರೆದುಕೊಟ್ಟ ಭಾಷಣವನ್ನೇ ರಾಜ್ಯಪಾಲರು ಓದಬೇಕು ಎಂದು ಪಟ್ಟು ಹಿಡಿದಿದೆ. ಈ ವಿಚಾರವಾಗಿ

ಕರ್ನಾಟಕದಲ್ಲೂ ಗವರ್ನರ್‌ V/S ಗವರ್ನಮೆಂಟ್‌ ಸಂಘರ್ಷ Read More »

ಮೊದಲ ಟಿ20 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ

ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌ ನಾಗಪುರ: ನ್ಯೂಜಿಲೇಂಡ್‌ ವಿರುದ್ಧದ ಮೂರು ದಿನಗಳ ಏಕದಿನಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಮತ್ತು ರಿಂಕು ಸಿಂಗ್‌ ಅವರ ಸ್ಫೋಟಕ ಆಟದಿಂದ 48 ರನ್‌ಗಳಿಂದ ಗೆದ್ದುಕೊಂಡಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 239 ರನ್‌ಗಳ ಕಠಿಣ ಗುರಿ ಪಡೆದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ ಹೊಡೆದು ಸೋಲು

ಮೊದಲ ಟಿ20 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ Read More »

ದ.ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನ ಜಾಗೃತಿ ಕಾರ್ಯಕ್ರಮ

ಬೀದಿ ನಾಟಕದ ಮುಖೇನ ಅರೋಗ್ಯದ ಮಹತ್ವದ ಕುರಿತು ಮಾಹಿತಿ ಮಂಗಳೂರು : ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಲ್ಯ ಅಂಗನವಾಡಿ ಕೇಂದ್ರ 1 ರ ಬಳಿ ಇಂದು ದ.ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಗರದ ಪಿಂಗಾರ ಕಲಾ ಸಂಘ ತಂಡದ ಕಲಾವಿದರಿಂದ ಜನಜಾಗೃತಿಗಾಗಿ ಬೀದಿನಾಟಕ ನಡೆಯಿತು. ಈ ಬೀದಿ ನಾಟಕದಲ್ಲಿ ಮಲೇರಿಯಾ, ಡೆಂಗ್ಯೂ, ಇಲಿಜ್ವರ, ಮಧುಮೇಹ, B.P, ಪಾರ್ಶ್ವವಾಯು, ಕುಷ್ಠರೋಗ, ಅಂಧತ್ವ

ದ.ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನ ಜಾಗೃತಿ ಕಾರ್ಯಕ್ರಮ Read More »

ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್

ನವದೆಹಲಿ: ಅಸಂಖ್ಯಾತ ದಾಖಲೆಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಬರೆದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ 27 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಡಿ. 27, 2025 ರಂದು ಅವರು ನಿವೃತ್ತರಾಗಿರುವುದಾಗಿ ನಾಸಾ ಘೋಷಿಸಿದೆ. ಸುನೀತಾ ಅವರ ಕೊನೆಯ ಬಾಹ್ಯಾಕಾಶ ಯಾನವು ಅತ್ಯಂತ ರೋಚಕವಾಗಿತ್ತು. ಕೇವಲ 10 ದಿನಗಳ ಮಿಷನ್ ಎಂದು ಜೂನ್ 2024ರಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ತೆರಳಿದ್ದ ಅವರು, ತಾಂತ್ರಿಕ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬರೋಬ್ಬರಿ ಒಂಬತ್ತುವರೆ ತಿಂಗಳುಗಳ

ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ Read More »

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಳ್ಳ ಪೊಲೀಸರ ಬಲೆಗೆ

ಬೆಂಗಳೂರು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಸೈಕೋ ಕಳ್ಳನೊಬ್ಬ ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಕೇರಳ ಮೂಲದ ಅಮಲ್ (23) ಎಂದು ಗುರುತಿಸಲಾಗಿದೆ. ಮನೆಗಳನ್ನು ದೂರದಿಂದಲೇ ಗುರುತು ಮಾಡಿ ಅಲ್ಲಿ ಒಣ ಹಾಕಿರುತ್ತಿದ್ದ ‌ಮಹಿಳೆಯರ ಒಳ ಉಡುಪುಗಳನ್ನು ಯಾರೂ ಇಲ್ಲದ ಸಮಯ ನೋಡಿ ಕಳ್ಳತನ ಮಾಡುತ್ತಿದ್ದ. ಅವುಗಳನ್ನು ಧರಿಸಿ ಫೋಟೋ ತೆಗೆದು ವಿಕೃತ ಆನಂದ ಅನುಭವಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಮಲ್ ವಾಸವಿದ್ದ ‌ಮನೆಯಲ್ಲೂ ಮಹಿಳೆಯರ ಒಳ ಉಡುಪು ಸಂಗ್ರಹಿಸಿ ಇಟ್ಟುಕೊಂಡಿದ್ದ ಎಂದು ತನಿಖೆಯ ವೇಳೆ

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಳ್ಳ ಪೊಲೀಸರ ಬಲೆಗೆ Read More »

ಉದಯನಿಧಿ ಸ್ಟಾಲಿನ್‌ನ ಹಿಂದೂ ವಿರೋಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮ: ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳುನಾಡಿನ ಉಪಮುಖ್ಯಮಂತ್ರಿ ಉದಯ ನಿಧಿ ಸ್ಟಾಲಿನ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮಾನವಾದವು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಹೈಕೋರ್ಟಿನ ಮಧುರೈ ಪೀಠವು ಕಠಿಣ ಪದಗಳಲ್ಲಿ ಅವಲೋಕನ ಮಾಡಿದ್ದು, ಡಿಎಂಕೆಯಿಂದ ನೂರು ವರ್ಷಗಳಲ್ಲಿ ಹಿಂದೂ ಧರ್ಮದ ಮೇಲೆ ಸ್ಪಷ್ಟ ದಾಳಿ ನಡೆದಿದೆ. ಅದೇ ಸೈದ್ಧಾಂತಿಕ ವಂಶಕ್ಕೆ ಉದಯ ನಿಧಿ ಸೇರಿದವರು ಎಂದು ಹೇಳಿದೆ. ಜೊತೆಗೆ ದ್ವೇಷ ಭಾಷಣ ಆರಂಭಿಸಿದವರು ಶಿಕ್ಷೆಗೆ ಒಳಗಾಗದೆ ಉಳಿಯುತ್ತಾರೆ ಎನ್ನುವ ಕಳವಳವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಕಳೆದ 100

ಉದಯನಿಧಿ ಸ್ಟಾಲಿನ್‌ನ ಹಿಂದೂ ವಿರೋಧಿ ಹೇಳಿಕೆಗಳು ದ್ವೇಷ ಭಾಷಣಕ್ಕೆ ‌ಸಮ: ಮದ್ರಾಸ್ ಹೈಕೋರ್ಟ್ Read More »

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕನಾಗಿದ್ದ ಕಾಮುಕ ಎಲಿಯಾಸ್ ಪಿಂಟೋ‌ನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಎಲಿಯಾಸ್ ಪಿಂಟೋ(55) ತಾನು ಕಾರ್ಯ ನಿರ್ವಹಿಸುತ್ತಿದ್ದ ಕಾಲೇಜಿನ ಪ್ರಥಮ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ತನ್ನ ಲೈಂಗಿಕ ಕಾಮನೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದ. ಸಂತ್ರಸ್ತ ಹುಡುಗಿ ಕ್ರೀಡಾ ಅಭ್ಯಾಸಕ್ಕೆ ಬಂದು ಒಂದು ಸುತ್ತು ಓಡಿ ಆ ಬಳಿಕ ವರಾಂಡದಲ್ಲಿ ನಿಂತಿದ್ದಳು. ಈ ವೇಳೆ ಆರೋಪಿ ಪಿಂಟೋ ಕಾರಣ ಕೇಳಿದ್ದು,

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ Read More »

error: Content is protected !!
Scroll to Top