ಸುದ್ದಿ

ಎರಡನೇ ಟಿ20ಯಲ್ಲಿ ಭಾರತಕ್ಕೆ ವಿಶ್ವದಾಖಲೆಯ ಗರಿಯೊಂದಿಗೆ ಗೆಲುವು

ಪಾಕಿಸ್ತಾನ ಹೆಸರಲ್ಲಿದ್ದ ದಾಖಲೆಯನ್ನು ಧೂಳೀಪಟ ಮಾಡಿದ ಟೀಂ ಇಂಡಿಯಾ ರಾಯ್‌ಪುರ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನೂ ಆತಿಥೇಯ ಭಾರತ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್​ಗಳಿಂದ ಗೆದ್ದುಕೊಳ್ಳುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದೆ. ಇಶನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟಿ20 ಪಂದ್ಯವನ್ನು […]

ಎರಡನೇ ಟಿ20ಯಲ್ಲಿ ಭಾರತಕ್ಕೆ ವಿಶ್ವದಾಖಲೆಯ ಗರಿಯೊಂದಿಗೆ ಗೆಲುವು Read More »

ನವ ವಿವಾಹಿತೆ ಆತ್ಮಹತ್ಯೆಗೆ ಶರಣು

ಕಲಬುರ್ಗಿ: ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ವಿವಾಹವಾದ ಕೇವಲ ಎರಡೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಸಿದ್ದೇಶ್ವರ ಕಾಲನಿಯಲ್ಲಿ ‌ನಡೆದಿದೆ. ನೇಣಿಗೆ ಶರಣಾದ ಮಹಿಳೆಯನ್ನು ಅನುಸೂಯ ಆಕಡೆ (26) ಎಂದು ಗುರುತಿಸಲಾಗಿದೆ. ಅನುಸೂಯಾ ತನ್ನ ಅತ್ತೆ ಮಗ ಅವಿನಾಶ್ ಎನ್ನುವವರನ್ನು ಕುಟುಂಬ ವರ್ಗದ ಸಮ್ಮುಖದಲ್ಲೇ ಎರಡು ತಿಂಗಳ ಹಿಂದೆ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ಗಂಡನ ಜೊತೆಗೆ ಹಳ್ಳಿಯಲ್ಲಿ ಜೀವನ ನಡೆಸುವ ವಿಚಾರದಲ್ಲಿ ಆಕೆ ಬೇಸತ್ತಿದ್ದಳು. ಆಕೆಯ ಮೂವರು ಸಹೋದರಿಯರು ಬೆಂಗಳೂರು, ಮುಂಬೈ ಮೊದಲಾದ ಮಹಾನಗರಗಳಲ್ಲಿ

ನವ ವಿವಾಹಿತೆ ಆತ್ಮಹತ್ಯೆಗೆ ಶರಣು Read More »

ಕಾಂಗ್ರೆಸ್ ವಿರುದ್ಧ ಮತ್ತೆ ಬಂಡಾಯದ ಬಾವುಟ ಬೀಸಿದ ಶಶಿ ತರೂರ್?

ತಿರುವನಂತಪುರಂ: ಕೇರಳದ ಕಾಂಗ್ರೆಸ್ ನಾಯಕ ಶಶಿ ತರೂರ್ ಸ್ವ ಪಕ್ಷದ ವಿರುದ್ಧ ಮತ್ತೆ ಬಂಡಾಯದ ಬಾವುಟ ಬೀಸಿದಂತಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಸಭೆಯಿಂದ ಅವರು ದೂರ ಉಳಿದಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊಚ್ಚಿಗೆ ಆಗಮಿಸಿದ್ದ ಸಂದರ್ಭದಲ್ಲಿ ತಮಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂಬ ಕಾರಣಕ್ಕೆ ತರೂರ್ ಅಸಮಾಧಾನಗೊಂಡಿದ್ದಾರೆ. ಕೆಲವು ತಿಂಗಳುಗಳಿಂದ ತರೂರ್ ಅವರು ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರಿಂದ ಅಂತರ ಕಾಪಾಡಿಕೊಂಡಿದ್ದಾರೆ. ಬಿಜೆಪಿ ಜೊತೆಗೆ ಸಂಪರ್ಕ ಇರಿಸಿಕೊಂಡಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಈ

ಕಾಂಗ್ರೆಸ್ ವಿರುದ್ಧ ಮತ್ತೆ ಬಂಡಾಯದ ಬಾವುಟ ಬೀಸಿದ ಶಶಿ ತರೂರ್? Read More »

ವಿಶ್ವ ವೇದಿಕೆಯಲ್ಲಿ ಭಾರತದ ಆರ್ಥಿಕತೆಯನ್ನು ಹಾಡಿ ಹೊಗಳಿದ ಡಿ.ಕೆ.ಶಿ.: ಕಾಂಗ್ರೆಸ್‌ಗೆ ಮುಖಭಂಗ

ದಾವೋಸ್: ಜಾಗತಿಕ ವೇದಿಕೆಯಲ್ಲಿ ಭಾರತದ ಆರ್ಥಿಕತೆಯನ್ನು ಕರ್ನಾಟಕದ ಡಿಸಿಎಂ ಡಿ. ಕೆ. ಶಿವಕುಮಾರ್ ಹೊಗಳಿದ್ದು, ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದಿಂದ ನೋಡುತ್ತಿದೆ ಎಂದು ಹೇಳಿದ್ದಾರೆ. ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂ‌ನಲ್ಲಿ ‌ಮಾತನಾಡಿದ ಅವರು, ಭಾರತದ ಸಾಧನೆಯ ಮೇಲೆ, ಮುಂದೆ ಸಾಗುತ್ತಿರುವ ಭಾರತದ ನಿರಂತರ ವೇಗದ ಮೇಲೆ ಪ್ರಪಂಚದ ವಿಶ್ವಾಸ ಅಧಿಕವಾಗುತ್ತಿದೆ ಎಂದಿದ್ದಾರೆ. ಇನ್ನು ಡಿ ಕೆ ಶಿವಕುಮಾರ್ ಅವರು ವಿಶ್ವ‌ವೇದಿಕೆಯಲ್ಲಿ ನಿಂತು ಭಾರತದ ಆರ್ಥಿಕತೆಯನ್ನು ಹೊಗಳಿದ್ದು ಬಿಜೆಪಿಗೆ ಅಸ್ತ್ರವಾಗಿದ್ದರೆ, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ

ವಿಶ್ವ ವೇದಿಕೆಯಲ್ಲಿ ಭಾರತದ ಆರ್ಥಿಕತೆಯನ್ನು ಹಾಡಿ ಹೊಗಳಿದ ಡಿ.ಕೆ.ಶಿ.: ಕಾಂಗ್ರೆಸ್‌ಗೆ ಮುಖಭಂಗ Read More »

ಡಿಜಿಪಿ ರಾಮಚಂದ್ರ ರಾಸಲೀಲೆ ಪ್ರಕರಣ: ತನಿಖೆಗೆ ಎಡಿಜಿಪಿ ಹಿತೇಂದ್ರ ಅವರಿಗೆ ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ರಾಮಚಂದ್ರ ಅವರು ಕರ್ತವ್ಯದ ವೇಳೆ, ಕಚೇರಿಯಲ್ಲೇ‌ ಮಹಿಳೆಯರ ಜೊತೆ ಸರಸವಾಡುವ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆಗೆ ಆದೇಶ ನೀಡಿರುವುದಾಗಿದೆ.

ಡಿಜಿಪಿ ರಾಮಚಂದ್ರ ರಾಸಲೀಲೆ ಪ್ರಕರಣ: ತನಿಖೆಗೆ ಎಡಿಜಿಪಿ ಹಿತೇಂದ್ರ ಅವರಿಗೆ ಸರ್ಕಾರ ಸೂಚನೆ Read More »

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಯಾವಾಗ ಗೊತ್ತಾ?

ಪುತ್ತೂರು: ಮೂವತ್ತಮೂರನೇ ವರ್ಷದ ಪ್ರಖ್ಯಾತ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಜ. 24 -25 ರಂದು ನಡೆಯಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿನ ದೇವರಮಾರು ಗದ್ದೆಯಲ್ಲಿ ‌ನೂರಾರು ಜೋಡಿ ಕೋಣಗಳು ಸ್ಪರ್ಧಿಸುವ ಮೂಲಕ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿ ನಡೆಯುವ ಈ ಐತಿಹಾಸಿಕ ಕಂಬಳಕ್ಕೆ ಪ್ರತಿ ಬಾರಿಯಂತೆ ಚಲನಚಿತ್ರ ತಾರೆಯರು, ಪ್ರಖ್ಯಾತ ವ್ಯಕ್ತಿಗಳು ಆಗಮಿಸುವ ಮೂಲಕ ಕಂಬಳದ ಮೆರುಗನ್ನು ಹೆಚ್ಚಿಸಲಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ, ಬಿಗ್‌ಬಾಸ್‌ ನಲ್ಲಿ ಫಸ್ಟ್ ರನ್ನರ್ ಅಪ್

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಯಾವಾಗ ಗೊತ್ತಾ? Read More »

ಋತುಚಕ್ರ ರಜೆಗೆ ಪುರುಷ ನೌಕರರಿಂದ ವಿರೋಧ

ಉಳಿದ ನೌಕರರ ಮೇಲೆ ಹೆಚ್ಚು ಕೆಲಸದೊತ್ತಡ ಬೀಳುತ್ತಿದೆ ಎಂದು ಆಕ್ಷೇಪ ಬೆಂಗಳೂರು: ಸರ್ಕಾರಿ ಮಹಿಳಾ ನೌಕರರಿಗೆ ಸರ್ಕಾರ ವಿಶೇಷ ಕೊಡುಗೆಯಾಗಿ ನೀಡಿರುವ ಋತುಚಕ್ರ ರಜೆಗೆ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಭಾಗದ ನೌಕರರು ಈ ಕುರಿತು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಋತುಚಕ್ರ ರಜೆ ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಬಾಣದ ರಂಗಯ್ಯ

ಋತುಚಕ್ರ ರಜೆಗೆ ಪುರುಷ ನೌಕರರಿಂದ ವಿರೋಧ Read More »

ನಕ್ಸಲ್‌ ಮುಖಂಡನ ಸಹಿತ 15 ಮಾವೋವಾದಿಗಳ ಹತ್ಯೆ

ತಲೆಗೆ 1 ಕೋಟಿ ರೂ. ಬಹುಮಾನ ಹೊತ್ತಿದ್ದ ನಕ್ಸಲ್‌ ನಾಯಕ ನವದೆಹಲಿ: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರು ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯಲ್ಲಿ ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್‌ ಮುಖಂಡನ ಸಹಿತ 15 ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹತ್ಯೆಯಾದ ನಕ್ಸಲ್‌ ಮುಖಂಡನನ್ನು ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯ ಪತಿರಾಮ್ ಮಾಂಝಿ ಎಂದು ಗುರುತಿಸಲಾಗಿದೆ. 1 ಕೋಟಿ ಬಹುಮಾನ

ನಕ್ಸಲ್‌ ಮುಖಂಡನ ಸಹಿತ 15 ಮಾವೋವಾದಿಗಳ ಹತ್ಯೆ Read More »

ವಿಧಾನಮಂಡಲವನ್ನು ಸುಳ್ಳಿನ ಕಾರ್ಖಾನೆಯಾಗಿ ಮಾಡಿದ ಕಾಂಗ್ರೆಸ್‌ : ಕ್ಯಾ.ಚೌಟ

ರಾಜ್ಯಪಾಲರನ್ನು ಅವಮಾನಿಸಿದ ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ಮಂಗಳೂರು: ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿಯೇ ಘನವೆತ್ತ ರಾಜ್ಯಪಾಲರನ್ನು ಅವಮಾನಿಸಿದ ಘಟನೆ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದಿವಾಳಿತನ ಮತ್ತು ಹತಾಶೆಯನ್ನು ಬಿಂಬಿಸುತ್ತಿದೆ. ಸಂವಿಧಾನದಡಿಯಲ್ಲೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಅದೇ ಸಂವಿಧಾನದ ಕಗ್ಗೊಲೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಜಂಟಿ ಅಧಿವೇಶನ ವೇಳೆ ರಾಜ್ಯಪಾಲರನ್ನು ತಡೆದು ಅಗೌರವದಿಂದ ನಡೆದುಕೊಂಡು ಕಾಂಗ್ರೆಸ್‌ನವರ ಮಾನಸಿಕತೆಯನ್ನು ಟೀಕಿಸಿರುವ ಕ್ಯಾ.ಚೌಟ ನಿರಂತರವಾಗಿ ಕೇಂದ್ರ ಸರ್ಕಾರದ ಯೋಜನೆಗಳ

ವಿಧಾನಮಂಡಲವನ್ನು ಸುಳ್ಳಿನ ಕಾರ್ಖಾನೆಯಾಗಿ ಮಾಡಿದ ಕಾಂಗ್ರೆಸ್‌ : ಕ್ಯಾ.ಚೌಟ Read More »

ಸರ್ಕಾರಿ ಉದ್ಯೋಗ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳ : ಸಂಪುಟ ತೀರ್ಮಾನ

ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಹೆಚ್ಚಳ ಬೆಂಗಳೂರು: ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಮತ್ತು ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲಾಗಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಜನರಿಗೆ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಉದ್ಯೋಗ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳ : ಸಂಪುಟ ತೀರ್ಮಾನ Read More »

error: Content is protected !!
Scroll to Top