ಸುದ್ದಿ

ಗ್ಯಾರಂಟಿಯಿಂದಾಗಿ ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ

ಸರಕಾರಿ ನೌಕರರು ಸೇವೆ ಎಂದು ಭಾವಿಸಿ ಕೆಲಸ ಮಾಡಿ ಎಂಬುದಾಗಿ ವಿನಂತಿ ಮಾಡಿಕೊಂಡ ಮುಖ್ಯಮಂತ್ರಿ ಹೈದರಾಬಾದ್‌: ಬಿಟ್ಟಿ ಯೋಜನೆಗಳನ್ನು ಕೊಟ್ಟು ಅಧಿಕಾರಕ್ಕೇರುವ ಕಾಂಗ್ರೆಸ್‌ನ ಗ್ಯಾರಂಟಿ ರಾಜಕಾರಣ ತಿರುಗುಬಾಣವಾಗುವ ಸಾಧ್ಯತೆ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಬಲದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗುತ್ತಿಲ್ಲ ಎಂಬ ಕೂಗು ಎದ್ದಿರುವಾಗಲೇ ಇದೇ ಸೂತ್ರ ಬಳಸಿಕೊಂಡು ಅಧಿಕಾರ ಹಿಡಿದಿರುವ ತೆಲಂಗಾಣದ ಕಾಂಗ್ರೆಸ್‌ ಸರಕಾರ ಕೂಡ ಗ್ಯಾರಂಟಿಗಳಿಂದಾಗಿ ಖಜಾನೆ ಬರಿದಾಗಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ […]

ಗ್ಯಾರಂಟಿಯಿಂದಾಗಿ ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ Read More »

ಅಕ್ಷಯ (ಗ್ಲೋರಿಯಾ) ಕಾಲೇಜ್ : ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ | ಅಧ್ಯಕ್ಷರಾಗಿ ಪ್ರಶಾಂತ ಪೂವಜ ಆಯ್ಕೆ

ಪುತ್ತೂರು : ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ ಯನ್ನು  ಪೂರ್ವ  ವಿದ್ಯಾರ್ಥಿ  ಶ್ರೀ ಚಂದ್ರಶೇಖರ ಕಿಲಾರ್ ಕಜೆ   ನಿರ್ವಹಿಸಿ,  ಅಕ್ಷಯ ಕಾಲೇಜ್  ತನ್ನ ಪೂರ್ವದಲ್ಲಿ  ಶ್ರೀಯುತ  ದಿ. ಆನಂದ ಆಚಾರ್ಯ  ಅವರು  ಸ್ಥಾಪಿಸಿದ ಗ್ಲೋರಿಯಾ  ಎಂಬ ಸಂಸ್ಥೆ ಯನ್ನು ಮುನ್ನಡೆಸಿದ ಮತ್ತು ಕಟ್ಟಿ  ಬೆಳೆಸಿದ ಕೀರ್ತಿ  ಜಯಂತ್  ನಡು ಬೈಲ್  ಅವರಿಗೆ  ಸಲ್ಲುತ್ತದೆ . ಪುತ್ತೂರಿನಲ್ಲಿ  ವಿದ್ಯಾಭ್ಯಾಸ  ಕ್ಷೇತ್ರಕ್ಕೆ  ದಿ. ಆನಂದ ಆಚಾರ್ಯ ಕೊಟ್ಟ  ಕೊಡುಗೆ, ಅವರ ನೆನಪು ಮತ್ತು  ಸಾಧನೆ  ಸದಾ  ಜೀವಂತವಾಗಿದೆ. ಹಳೇ  ವಿದ್ಯಾರ್ಥಿ

ಅಕ್ಷಯ (ಗ್ಲೋರಿಯಾ) ಕಾಲೇಜ್ : ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ | ಅಧ್ಯಕ್ಷರಾಗಿ ಪ್ರಶಾಂತ ಪೂವಜ ಆಯ್ಕೆ Read More »

ಸಾಲ ಮರುಪಾವತಿ ಮಾಡುವಲ್ಲಿ ವಿಫಲ | ಕಟ್ಟಡ ಮುಟ್ಟುಗೋಲು

ಪುತ್ತೂರು: ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಬೈಪಾಸ್ ರಸ್ತೆಯಲ್ಲಿರುವ ಕಟ್ಟಡವೊಂದಕ್ಕೆ ಬೀಗ ಜಡಿದು ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ. ಬಿಲ್ಡಿಂಗ್ ನಲ್ಲಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್, ಬೋರ್ಡಿಂಗ್ ಆಂಡ್ ಲಾಡ್ಜ್, ಇತರ ಅಂಗಡಿ ಮಳಿಗೆ ಮತ್ತು ಹಾಲ್ ಸಮೇತವಾಗಿ ಇಡೀ ಕಟ್ಟಡಕ್ಕೆ ಬ್ಯಾಂಕಿನವರು ಬೀಗ ಹಾಕಿದ್ದಾರೆ. 31-07-2024ಕ್ಕೆ ಅನ್ವಯವಾಗುವಂತೆ ಎರಡು ಕೋಟಿಗೂ ಅಧಿಕ ಮೊತ್ತದ ಸಾಲ ಹಾಗೂ ಬಡ್ಡಿಯನ್ನು ಮರುಪಾವತಿ ಮಾಡುವಂತೆ ಬ್ಯಾಂಕ್ ನೋಟೀಸ್ ಮಾಡಿದ್ದರೂ ಮರುಪಾವತಿಯಾಗಲಿಲ್ಲ ಎನ್ನುವ ಕಾರಣಕ್ಕಾಗಿ ಬ್ಯಾಂಕಿನವರು ನಿಯಮಾನುಸಾರ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ

ಸಾಲ ಮರುಪಾವತಿ ಮಾಡುವಲ್ಲಿ ವಿಫಲ | ಕಟ್ಟಡ ಮುಟ್ಟುಗೋಲು Read More »

ಭಯೋತ್ಪಾದಕರ ದಾಳಿಗೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು

ಒಂದೇ ವಾರದಲ್ಲಿ 2500 ಸೈನಿಕರ ರಾಜೀನಾಮೆ ಇಸ್ಲಾಮಾಬಾದ್‌: ಬಲೂಚಿಸ್ಥಾನ ಪ್ರತ್ಯೇಕವಾದಿ ಹೋರಾಟಗಾರರು ಇತ್ತೀಚೆಗೆ ಬೆನ್ನುಬೆನ್ನಿಗೆ ನಡೆಸಿದ ಎರಡು ದಾಳಿಗಳಿಂದ ಕಂಗೆಟ್ಟಿರುವ ಪಾಕಿಸ್ಥಾನದ ಸೈನಿಕರು ಈಗ ಸೈನ್ಯವನ್ನೇ ಬಿಟ್ಟು ಹೋಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಂಡುಕೋರರು ಒಂದಿಡೀ ರೈಲನ್ನೇ ಅಪಹರಿಸಿ ಒತ್ತೆಸೆರೆಯಲ್ಲಿಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಪ್ರಯಾಣಿಕರ ಜೊತೆ ಅನೇಕ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಎರಡೇ ದಿನದಲ್ಲಿ ಸೇನೆಯ ವಾಹನಗಳ ಮೇಲೆ ದಾಳಿ ಮಾಡಿ 90 ಯೋಧರನ್ನು ಕೊಂದಿದ್ದರು. ಈ ಎರಡು ಘಟನೆಗಳು ಪಾಕಿಸ್ಥಾನ ಸೇನೆಯ ಜಂಘಾಬಲವನ್ನು

ಭಯೋತ್ಪಾದಕರ ದಾಳಿಗೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು Read More »

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು

ಭಾರತದ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಭೂಸ್ಪರ್ಶ ನ್ಯೂಯಾರ್ಕ್‌: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರ ಭೂಮಿಗೆ ಮರಳುವ ಪ್ರಯಾಣ ಶುರುವಾಗಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ. ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ಸಂಜೆ ಸುನೀತಾ ವಿಲ್ಲಿಯಮ್ಸ್‌ ಹೊತ್ತ ಗಗನನೌಕೆ ಭೂಸ್ಪರ್ಶ ಮಾಡಲಿದೆ. ಈ ಇಬ್ಬರು ಗಗನಯಾತ್ರಿಗಳು ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಅಪರೂಪದ ಕ್ಷಣಗಳನ್ನು ನಾಸಾ ನೇರಪ್ರಸಾರ

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು Read More »

ಔರಂಗಜೇಬನ ಗೋರಿ ತೆರವುಗೊಳಿಸಲು ಬೃಹತ್‌ ಪ್ರತಿಭಟನೆ : ವ್ಯಾಪಕ ಹಿಂಸಾಚಾರ

ಹಲವು ವಾಹನಗಳು ಬೆಂಕಿಗಾಹುತಿ, ಕಲ್ಲು ತೂರಾಟದಲ್ಲಿ ಪೊಲೀಸರಿಗೆ ಗಾಯ ಮುಂಬಯಿ: ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಗಲ ದೊರೆ ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕೆಂಬ ಬೇಡಿಕೆ ಹಿಂಸಾಚಾರಕ್ಕೆ ತಿರುಗಿದ್ದು, ನಿನ್ನೆ ನಾಗಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಅನೇಕ ವಾಹನಗಳನ್ನು ಸುಟ್ಟು ಹಾಕಲಾಗಿದೆ. ನಾಗಪುರ ನಗರದಲ್ಲಿ ಆರ್‌ಎಸ್‌ಎಸ್‌ ಮುಖ್ಯ ಕಚೇರಿಯಿರುವ ಮಹಲ್‌ನಲ್ಲಿ ಹಿಂದು ಸಂಘಟನೆಗಳು ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕೆಂದು ಅಗ್ರಹಿಸಿ ಪ್ರತಿಭಟನೆ ನಡೆಸಿದಾಗ ಹಿಂಸಾಚಾರ ಸ್ಫೋಟಗೊಂಡಿದೆ. ಬಜರಂಗ ದಳ, ವಿಶ್ವ ಹಿಂದು ಪರಿಷತ್‌ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಪ್ರತಿಭಟನೆ ವೇಳೆ

ಔರಂಗಜೇಬನ ಗೋರಿ ತೆರವುಗೊಳಿಸಲು ಬೃಹತ್‌ ಪ್ರತಿಭಟನೆ : ವ್ಯಾಪಕ ಹಿಂಸಾಚಾರ Read More »

ಇತಿಹಾಸ ಪ್ರಸಿದ್ದ  ಮಹತೋಭಾರ  ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಜಾತ್ರೆಗೆ ಬ್ರಹ್ಮರಥ ಮಂದಿರದಿಂದ ರಥವನ್ನು ಹೊರ ತರುವ ಮುಹೂರ್ತ | ರಥ ಕಟ್ಟುವ ಸ್ಥಳ ಸೂಚಿಸಿದ ಪುಷ್ಪ

ಪುತ್ತೂರು: ಇತಿಹಾಸ ಪ್ರಸಿದ್ದ  ಮಹತೋಭಾರ  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.17ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ. ಪ್ರತಿ ವರ್ಷದಂತೆ ರಥ ಕಟ್ಟುವ ಸ್ಥಳದಲ್ಲಿ ಬಿಲ್ವಪತ್ರೆ ಭೂಸ್ಪರ್ಶ ಮಾಡುತ್ತಿದ್ದು, ಈ ಭಾರಿ ಪುಷ್ಪದ ಮಾಲೆಯೊಂದು ಭೂ ಸ್ಪರ್ಶ ಮಾಡಿದೆ. ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು

ಇತಿಹಾಸ ಪ್ರಸಿದ್ದ  ಮಹತೋಭಾರ  ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಜಾತ್ರೆಗೆ ಬ್ರಹ್ಮರಥ ಮಂದಿರದಿಂದ ರಥವನ್ನು ಹೊರ ತರುವ ಮುಹೂರ್ತ | ರಥ ಕಟ್ಟುವ ಸ್ಥಳ ಸೂಚಿಸಿದ ಪುಷ್ಪ Read More »

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಮಾ. 18 (ನಾಳೆ) ರಂದು 10:30 ಕ್ಕೆ ಹಾಗೂ  ಸಂಜೆ  7:15ರ ಸಮಯಕ್ಕೆ  ಚಿತ್ರ ಪ್ರದರ್ಶನಗೊಳ್ಳಲಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ Read More »

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು

ಸುಳ್ಯ : ಅಂಗಳದಲ್ಲಿ ನಿಂತಿದ್ದ ಕಾರು ಹಿಂದಕ್ಕೆ ಚಲಿಸಿದಾಗ ವ್ಯಕ್ತಿಯೋರ್ವರು ಮೇಲೇ ಹರಿದುಹೋಗಿರುವ ಪರಿಣಾಮ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿವೃತ್ತ ರೇಂಜರ್ ಜೋಸೆಫ್ (74) ಎಂದು ಪತ್ತೆಹಚ್ಚಲಾಗಿದೆ. ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ಜೋಸೇಫ್ ಅವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಅರಣ್ಯ ಇಲಾಖೆಯಲ್ಲಿ

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು Read More »

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ

ಉಪ್ಪಿನಂಗಡಿ  : ಉಪ್ಪಿನಂಗಡಿ  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 69ನೇ ಕಾರ್ಯಕ್ರಮವಾಗಿ ಗಾಂಧಾರಿ ವಿವಾಹ  ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ,ಪ್ರಕಾಶ ಅಭ್ಯಂಕರ ಬೆಳ್ತಂಗಡಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ  ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ, ಅರ್ಜುನ ಅಭ್ಯಂಕರ ಬೆಳ್ತಂಗಡಿ,  ಅರ್ಥಧಾರಿಗಳಾಗಿ ಸತೀಶ ಶಿರ್ಲಾಲು (ದ್ವಾಪರ), ರವೀಂದ್ರದರ್ಬೆ ( ಕಲಿ)

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ Read More »

error: Content is protected !!
Scroll to Top