ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ | ಬಿಜೆಪಿಯಿಂದ ಜಿ.ಎಲ್.ಬಲರಾಮ ಆಚಾರ್ಯ, ಡಾ.ಎಂ.ಕೆ.ಪ್ರಸಾದ್, ಮುರಳೀಧರ ಅವರ ಮನೆಗೆ ತೆರಳಿ ಸನ್ಮಾನ
ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿಯಿಂದ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ವಾಜಪೇಯಿಯವರು ಪುತ್ತೂರಿನಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿದ ಮತ್ತು ವಾಜಪೇಯಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನೆಗೆ ತೆರಳಿ ಮನೆ ಮಂದಿಯನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮಕ್ಕೆ ನಡೆಯುತ್ತಿದೆ. 1991 ರಲ್ಲಿ ಪುತ್ತೂರಿನಲ್ಲಿ ವಾಜಪೇಯಿ ಬಂದಾಗ ಅವರನ್ನು ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದ ಜಿ.ಎಲ್.ಬಲರಾಮ ಅಚಾರ್ಯ ಅವರನ್ನು ಅವರ ಕೊಂಬೆಟ್ಟು ನಿವಾಸದಲ್ಲಿ, […]










