ಸುದ್ದಿ

ಇಲಾಖೆ ವರ್ಗಾವಣೆಯಲ್ಲಿ ಯತೀಂದ್ರ ಕೈವಾಡ : ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಸಚಿವ

ಮುಖ್ಯಮಂತ್ರಿ ಮಗನ ಕಾರುಬಾರಿನಿಂದ ಪ್ರಭಾವಿ ಸಚಿವರೇ ಕಂಗಾಲಾಗಿದ್ದ ಮಾಹಿತಿ ಬಹಿರಂಗ ಬೆಂಗಳೂರು : ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬೇಸತ್ತು ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿ ಸಿದ್ದರಾಮಯ್ಯನವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ವಿಸೆಷ ಅಧಿವೇಶನ ನಡೆಯುತ್ತಿರುವಾಗಲೇ ಕಂಗ್ರೆಸ್‌ ತಾನಾಗಿ ವಿಪಕ್ಷಕ್ಕೆ ದಾಳಿ ಮಾಡಲು ಹೊಸ ಅಸ್ತ್ರವೊಂದನ್ನು ಕೊಟ್ಟಂತಾಗಿದೆ. ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪದಿಂದ […]

ಇಲಾಖೆ ವರ್ಗಾವಣೆಯಲ್ಲಿ ಯತೀಂದ್ರ ಕೈವಾಡ : ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಸಚಿವ Read More »

ಅಸಭ್ಯ ವೀಡಿಯೊ ವೈರಲ್‌ : ಕಾಲೇಜು ವಿದ್ಯಾರ್ಥಿ ಬಂಧನ

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಯುವಕನೊಬ್ಬ ಹಲವು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ರಾಸಲೀಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಸಂಚಲನ ಮೂಡಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂಬ ಯುವಕನನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯೇನೆಪೊಯ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯು ವಿವಿಧ ಯುವತಿಯರೊಂದಿಗೆ ಚಕ್ಕಂದವಾಡಿ ಖಾಸಗಿ ಕ್ಷಣಗಳನ್ನು ಸ್ವತಃ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ.

ಅಸಭ್ಯ ವೀಡಿಯೊ ವೈರಲ್‌ : ಕಾಲೇಜು ವಿದ್ಯಾರ್ಥಿ ಬಂಧನ Read More »

ಅಜಿತ್‌ ಪವಾರ್‌ ಅಂತ್ಯಕ್ರಿಯೆ ಇಂದು : ಮೋದಿ, ಅಮಿತ್‌ ಶಾ ಆಗಮಿಸುವ ಸಾಧ್ಯತೆ

ವಿಮಾನ ಅವಘಡದಲ್ಲಿ ದುರ್ಮರಣವನ್ನಪ್ಪಿರುವ ಮಹಾರಾಷ್ಟ್ರದ ಡಿಸಿಎಂ ಮುಂಬೈ: ವಿಮಾನ ಅವಘಡದಲ್ಲಿ ದುರ್ಮರಣವನ್ನಪ್ಪಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ಇಂದು ಬಾರಾಮತಿಯಲ್ಲಿ ನೆರವೇರಲಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಪವಾರ್ ಕುಟುಂಬ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಾದ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅಂತ್ಯಕ್ರಿಯೆಯನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಕೀಯ ರಂಗದ ನಾಯಕರು ಮತ್ತು ಎಲ್ಲ ವರ್ಗದ ಜನರು ಅಂತ್ಯಕ್ರಿಯೆಯಲ್ಲಿ

ಅಜಿತ್‌ ಪವಾರ್‌ ಅಂತ್ಯಕ್ರಿಯೆ ಇಂದು : ಮೋದಿ, ಅಮಿತ್‌ ಶಾ ಆಗಮಿಸುವ ಸಾಧ್ಯತೆ Read More »

ಬೃಹತ್‌ ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : 10 ಮಂದಿ ಬಂಧನ

ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರುತ್ತಿದ್ದ ಆರೋಪಿಗಳು ಬೆಂಗಳೂರು : ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿ ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್ ಬಳಸಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್,

ಬೃಹತ್‌ ಡ್ರಗ್ಸ್‌ ಜಾಲ ಭೇದಿಸಿದ ಪೊಲೀಸರು : 10 ಮಂದಿ ಬಂಧನ Read More »

ಪಾನಮತ್ತ ನಟನಿಂದ ಸರಣಿ ಅಪಘಾತ

ಯದ್ವಾತದ್ವಾ ಕಾರು ಓಡಿಸಿ ಹಲವು ವಾಹನಗಳಿಗೆ ಗುದ್ದಿದ ನಟ ಬೆಂಗಳೂರು: ಕನ್ನಡದ ನಟನೊಬ್ಬ ಪಾನಮತ್ತನಾಗಿ ಯದ್ವಾತದ್ವಾ ಕಾರು ಚಲಾಯಿಸಿ ಸರಣಿ ಅಪಘಾತ ಎಸಗಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕೆಲವು ಚಿತ್ರಗಳಲ್ಲಿ ಹೀರೊ ಆಗಿ ನಟಿಸಿದ್ದ ಮಯೂರ್ ಪಟೇಲ್​ ಎಂಬಾತ ಶರಾಬಿನ ಮತ್ತಿನಲ್ಲಿ ಫಾರ್ಚೂನರ್ ಕಾರನ್ನು ವೇಗವಾಗಿ ಓಡಿಸಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂಬಂಧ ಮಯೂರ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ.

ಪಾನಮತ್ತ ನಟನಿಂದ ಸರಣಿ ಅಪಘಾತ Read More »

ದೈವಗಳ ಮೂರ್ತಿ, ಕಡ್ಸಲೆ ಕದ್ದವರು ಅರೆಸ್ಟ್‌

ಜನರಿಲ್ಲದ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ರೌಡಿಶೀಟರ್‌ ​ಮಂಗಳೂರು : ಭಕ್ತಿಯ ಕೇಂದ್ರವಾದ ದೈವಸ್ಥಾನದ ಪೂಜಾ ಪರಿಕರಗಳನ್ನು ಕದ್ದುಕೊಂಡು ಹೋಗಿದ್ದ ಕಳ್ಳರಿಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಮನೆಯ ಛಾವಣಿಯ ಹಂಚು ತೆಗೆದು ಒಳನುಗ್ಗಿ, ದೈವಗಳ ಮೂರ್ತಿ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದ ಅನ್ಯಮತೀಯ ಕಳ್ಳರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.​​ಕುಳಾಯಿ ಗ್ರಾಮದ ಅಮಿತಾ ಎಂಬವರ ತಾಯಿ ಮನೆಯಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು. ಆದರೆ ಮನೆಯಲ್ಲಿ ಯಾರೂ ಖಾಯಂ ವಾಸವಿಲ್ಲ. ಜನ ವಾಸವಿಲ್ಲದ ಈ ಮನೆಯನ್ನೇ ಗುರಿಯಾಗಿಸಿಕೊಂಡ ಕಳ್ಳರು ಕಳೆದ

ದೈವಗಳ ಮೂರ್ತಿ, ಕಡ್ಸಲೆ ಕದ್ದವರು ಅರೆಸ್ಟ್‌ Read More »

4ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 50 ರನ್‌ ಸೋಲು

ವ್ಯರ್ಥವಾದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್‌ ವಿಶಾಖಪಟ್ಟಣ : ಇಲ್ಲಿನ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 4ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡ ಕೊನೆಗೂ ಈ ಟಿ20 ಸರಣಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್ 215 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ

4ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 50 ರನ್‌ ಸೋಲು Read More »

ಸಾಲಗಾರರ ಕಾಟ: ವ್ಯಕ್ತಿ ಆತ್ಮಹತ್ಯೆ

ಹಾಸನ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಪುರ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲದ ಕೃಷ್ಣಪ್ಪ ಎಂಬವರೇ ಮೃತ ದುರ್ದೈವಿ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ‌ವಿಡಿಯೋ ಮಾಡಿರುವ ಅವರು, ಒಂದು ಲಕ್ಷ ರೂ. ಸಾಲಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿಯ ಕೇಸ್. ಈ ಕಿರುಕುಳವನ್ನು ‌ನಾನು ಇನ್ಯಾವ ಕಾಲಕ್ಕೆ ತಡೆದುಕೊಳ್ಳಲಿ ಎಂದು ಕಣ್ಣೀರಿಟ್ಟಿದ್ದಾರೆ. ನೆಲಮಂಗಲದ ರಮೇಶ್ ಮತ್ತು ಮಂಜು ಎಂಬವರ ಹೆಸರನ್ನು ಉಲ್ಲೇಖ ಮಾಡಿದ್ದು, ನಾನು

ಸಾಲಗಾರರ ಕಾಟ: ವ್ಯಕ್ತಿ ಆತ್ಮಹತ್ಯೆ Read More »

ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಮುರ್ಮು ಮಾತು

ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನಗಳನ್ನು ‌ಕುರಿತು ಇಂದು ರಾಷ್ಚ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದರು. ವಿಕಸಿತ ಭಾರತದ ಸಂಕಲ್ಪ ಮತ್ತು ಕಳೆದ ದಶಕದ ಸಾಧನೆಗಳನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು. ಇದೇ ವೇಳೆ ಡಾ. ಬಿ. ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ‌ಸ್ಮರಿಸಿದ ಅವರು, ಜಾತಿ ಮತಗಳ ಬೇಧವಿಲ್ಲದೆ ಸಮಾನ ಅವಕಾಶಗಳನ್ನು ಎಲ್ಲರಿಗೂ ಸಂವಿಧಾನ ನೀಡಿದೆ. ಸರ್ಕಾರದ ಮೂಲ ಉದ್ದೇಶ ಸಾಮಾಜಿಕ ನ್ಯಾಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಮುರ್ಮು ಮಾತು Read More »

ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಜಿತ್‌ ಪವಾರ್‌ ದುರ್ಮರಣ

ಪ್ರಧಾನಿ ಮೋದಿ, ಗಣ್ಯರಿಂದ ಸಂತಾಪದ ಮಹಾಪೂರ ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಪ್ರಭಾವಿ ರಾಜಕೀಯ ನಾಯಕ ಅಜಿತ್‌ ಪವಾರ್‌ ವಿಮಾನ ಅವಘಡದಲ್ಲಿ ಮೃತ್ಯುವಿಗೀಡಾಗಿರುವ ದುರ್ಘಟನೆ ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದೆ. ನಿನ್ನೆ ಮುಂಬೈಯಲ್ಲಿ ಸಚಿವ ಸಂಪುಟ ಸಭಯಲ್ಲಿ ಭಾಗವಹಿಸಿ ಇಂದು ಬೆಳಗ್ಗೆ 8 ಗಂಟೆಗೆ ಕಿರು ವಿಮಾನದಲ್ಲಿ ತನ್ನ ತವರು ಕ್ಷೇತ್ರವಾದ ಬಾರಾಮತಿಗೆ ಹೊರಟಿದ್ದ ಅಜಿತ್‌ ಪವಾರ್‌ 8.45ಕ್ಕೆಲ್ಲ ಇನ್ನಿಲ್ಲವಾಗಿದ್ದಾರೆ. ಬಾರಾಮತಿಯ ಜಿಲ್ಲಾ ಪರಿಸತ್‌ ಚುನಾವಣೆಯ ಪ್ರಚಾರಕ್ಕೆಂದು ಹೊರಟಿದ್ದ ಅವರ ಪಾಲಿಗೆ ಇದುವೇ ಕೊನೆಯ ಪ್ರಯಾಣವಾಗಿತ್ತು. ನಾಲ್ಕು ಸಭೆಗಳಲ್ಲಿ

ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಜಿತ್‌ ಪವಾರ್‌ ದುರ್ಮರಣ Read More »

error: Content is protected !!
Scroll to Top