ಸುದ್ದಿ

ಪುಷ್ಪ-2 ಸಿನೆಮಾ ನೋಡುವಾಗ ಅಭಿಮಾನಿಗಳ ನೂಕುನುಗ್ಗಲು : ಕಾಲ್ತುಳಿತಕ್ಕೆ ಮಹಿಳೆ ಬಲಿ

ಮಗನ ಸ್ಥಿತಿ ಚಿಂತಾಜನಕ; ಅನೇಕ ಮಂದಿಗೆ ಗಾಯ ಹೈದರಾಬಾದ್:‌ ಸ್ಟಾರ್‌ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನೆಮಾದ ಪ್ರೀಮಿಯರ್‌ ಶೋ ವೇಳೆ ಜನರ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ರೋಡ್ಸ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ದಿಲ್‌ಸುಖ್‌ನಗರದ ರೇವತಿ ಎಂದು ಗುರುತಿಸಲಾಗಿದೆ. ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಸಿನೆಮಾಕ್ಕೆ ಬಂದಿದ್ದರು.ರಾತ್ರಿ 10.30ರ ಸುಮಾರಿಗೆ ಥಿಯೇಟರ್‌ನಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. […]

ಪುಷ್ಪ-2 ಸಿನೆಮಾ ನೋಡುವಾಗ ಅಭಿಮಾನಿಗಳ ನೂಕುನುಗ್ಗಲು : ಕಾಲ್ತುಳಿತಕ್ಕೆ ಮಹಿಳೆ ಬಲಿ Read More »

ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ

ಬಿಜೆಪಿಯ ಒಳಜಗಳ ಸದ್ಯಕ್ಕೆ ಶಮನ ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ದಿಲ್ಲಿಯಲ್ಲಿ ಬಿಜೆಪಿ ಹೈಕಮಾಂಡ್ ಶಿಸ್ತಿನ ಪಾಠ ಮಾಡಿದೆ. ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಸ್​ಗೆ 6 ಪುಟಗಳ ಉತ್ತರ ನೀಡಿರುವ ಯತ್ನಾಳ್, ಖುದ್ದು ಹಾಜರಾಗಿ ಲಿಖಿತ ಮಾತ್ರವಲ್ಲದೆ ಮೌಖಿಕವಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಚೌಕಟ್ಟು ಮೀರಿ ಹೋಗದಂತೆ

ಯತ್ನಾಳ್‌ಗೆ ಹೈಕಮಾಂಡ್‌ ಶಿಸ್ತಿನ ಪಾಠ : ಪಕ್ಷದ ಚೌಕಟ್ಟಿನೊಳಗಿರಲು ಖಡಕ್‌ ಸೂಚನೆ Read More »

ಹಾಸನದಲ್ಲಿ ಕಾಂಗ್ರೆಸ್‌ ʼಜನ ಕಲ್ಯಾಣʼ ಬಲಪ್ರದರ್ಶನಕ್ಕೆ ಕ್ಷಣಗಣನೆ

ಲಕ್ಷಕ್ಕೂ ಮೀರಿ ಜನ ಭಾಗವಹಿಸುವ ನಿರೀಕ್ಷೆ; ಸಚಿವರ ದಂಡೇ ಹಾಸನದತ್ತ ಬೆಂಗಳೂರು: ಉಪಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕಾಂಗ್ರೆಸ್​ ಈಗ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಜೆಡಿಎಸ್‌-ಬಿಜೆಪಿ ಎರಡಕ್ಕೂ ಟಕ್ಕರ್‌ ಕೊಡಲು ‘ಕೈ’ ತಂತ್ರ ಹೂಡಿದೆ.ಅರಸೀಕೆರೆ ರಸ್ತೆಯ ಎಸ್​.ಎಂ ಕೃಷ್ಣ ನಗರದಲ್ಲಿರುವ ಕೆ.ಎಸ್​ ಸಿಎ ಕ್ರಿಕೆಟ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಲಕ್ಷ ಲಕ್ಷ ಜನರ ಆಗಮನದ ನಿರೀಕ್ಷೆ ಇದೆ. ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ

ಹಾಸನದಲ್ಲಿ ಕಾಂಗ್ರೆಸ್‌ ʼಜನ ಕಲ್ಯಾಣʼ ಬಲಪ್ರದರ್ಶನಕ್ಕೆ ಕ್ಷಣಗಣನೆ Read More »

ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿದ್ದೀರಿ?

ಅದಕ್ಕೊಂದು ಸ್ವಯಂಮಾಪಕ ಇಲ್ಲಿದೆ ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿರುತ್ತೀರಿ ಅಷ್ಟು ಯಶಸ್ಸು ನಿಮ್ಮದಾಗುತ್ತದೆ. ನೀವು ಪಾಸಿಟಿವ್ ಆಗಿದ್ದರೆ ನಿಮ್ಮ ಬದುಕು ಇನ್ನೊಬ್ಬರಿಗೆ ಮಾದರಿ ಆಗುತ್ತದೆ. ನೀವು ಎಲ್ಲರಿಗೂ ಸ್ಫೂರ್ತಿ ತುಂಬುವ ಐಕಾನ್ ಆಗುತ್ತೀರಿ. ನಿಮ್ಮ ಬದುಕು ಇತರರಿಗೆ ಯಶೋಗಾಥೆ ಆಗುತ್ತದೆ. ನಿಮ್ಮ ಸಿಗ್ನೇಚರ್ ಸಾವಿರಾರು ಮಂದಿಗೆ ಆಟೋಗ್ರಾಫ್ ಆಗುತ್ತದೆ. ನಿಮ್ಮ ಆತ್ಮವಿಶ್ವಾಸದ ಮಟ್ಟವು ಯಾವಾಗಲೂ ಒಂದೇ ರೀತಿ ಇರುತ್ತದೆ. ಸೋಲು ನಿಮ್ಮನ್ನು ಕಂಡು ಹೆದರುತ್ತದೆ. ನಿಮ್ಮ ಬದುಕಿನ ಪುಸ್ತಕ ಸಾವಿರಾರು ಮಂದಿಗೆ ಪ್ರೇರಣೆ ಕೊಡುವ ಆಟೊಬಯೋಗ್ರಾಫಿ ಆಗುತ್ತದೆ.

ನೀವೆಷ್ಟು ಪಾಸಿಟಿವ್ ಥಿಂಕರ್ ಆಗಿದ್ದೀರಿ? Read More »

ಡಿ.11 -14. : ದತ್ತ ಜಯಂತಿ ಹಿನ್ನಲೆಯಲ್ಲಿ ಮುಳ್ಳಯ್ಯನಗಿರಿಗೆ ನಿರ್ಬಂಧ : ಜಿಲ್ಲಾಡಳಿತ ಆದೇಶ

ಚಿಕ್ಕಮಗಳೂರು : ದತ್ತ ಪಾದುಕೆ ದರ್ಶನ ಹಾಗೂ ದತ್ತ ಜಯಂತಿಯ ಹಿನ್ನಲೆ ಪ್ರವಾಸಿಗರಿಗೆ 4 ದಿನ ಮುಳ್ಳಯ್ಯನ ಗಿರಿ ಹಾಗೂ ಮಾಣಿಕ್ಯಧಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ವಿಶ್ವಹಿಂದೂ ಪರಿಷದ್, ಬಜರಂಗದಳದ ನೇತೃತ್ವದಲ್ಲಿ ದತ್ತ ಜಯಂತಿ ಡಿ.11ರಿಂದ 14ರವರೆಗೆ ನಡೆಯಲಿದೆ. ಈ ಹಿನ್ನೆಲೆ ನಾಲ್ಕು ದಿನಗಳವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಅಧಿಕೃತ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್  ಡಿ. 15ರ ಸಂಜೆಯ ನಂತರ ಮುಳ್ಳಯ್ಯನ ಗಿರಿಧಾಮ, ಚಂದ್ರದ್ರೋಣ ಪರ್ವತ ತಪ್ಪಲಿಗೆ ಪ್ರವಾಸಕ್ಕೆ ಅನುವು ಮಾಡಲಾಗಿದೆ ಎಂದು

ಡಿ.11 -14. : ದತ್ತ ಜಯಂತಿ ಹಿನ್ನಲೆಯಲ್ಲಿ ಮುಳ್ಳಯ್ಯನಗಿರಿಗೆ ನಿರ್ಬಂಧ : ಜಿಲ್ಲಾಡಳಿತ ಆದೇಶ Read More »

ಸಂಪ್ಯದಲ್ಲಿ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ

ಪುತ್ತೂರು : ಪುತ್ತೂರು ಬಿರುಮಲೆ ಬೆಟ್ಟವನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ 2 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಮಂಗಳವಾರ ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಸಂಪ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣ, ಉದ್ಯೋಗ ನೀಡುವ ದೃಷ್ಟಿಕೋನವನ್ನಿಟ್ಟುಕೊಂಡು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇನೆ. ಒಟ್ಟಾರೆಯಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದ ಅವರು, ಈಗಾಗಲೇ

ಸಂಪ್ಯದಲ್ಲಿ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ Read More »

ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಮೇಶ್ವರಂ ಮಾದರಿಯಲ್ಲಿ ಸ್ಫೋಟದ ಬೆದರಿಕೆ

ಸಂದೇಶದಲ್ಲಿರುವ ಹೆಸರುಗಳನ್ನು ನೋಡಿ ಪೊಲೀಸರು ಹೈರಾಣ ಮಂಗಳೂರು : ರಾಮೇಶ್ವರಂ ಕೆಫೆ ಮಾದರಿಯಲ್ಲಿ ಬಾಂಬ್ ಇರಿಸಿದ್ದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಬಂದ ಬಗ್ಗೆ ತಡವಾಗಿ ವರದಿಯಾಗಿದೆ. ನ.30ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಕ್ರಮ್ ವಾಯ್ಕರ್‌ ಎನ್ನುವ ಹೆಸರಲ್ಲಿದ್ದ ಇಮೇಲ್‌ನಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಬಜಪೆ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ದೂರು ನೀಡಿದ್ದಾರೆ. ಇಂಥ ಬೆದರಿಕೆ ಕರೆಗಳು ಈಗ ಮಾಮೂಲಿಯಾಗಿದ್ದರೂ ಈ ಸಂದೇಶದಲ್ಲಿ ಉಲ್ಲೇಖಿಸಿರುವ ಕೆಲವು

ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಮೇಶ್ವರಂ ಮಾದರಿಯಲ್ಲಿ ಸ್ಫೋಟದ ಬೆದರಿಕೆ Read More »

ಮುಡಾ ಹಗರಣ : ಇ.ಡಿಯಿಂದ ಸಿದ್ದರಾಮಯ್ಯ ವಿರುದ್ಧ ಮಹತ್ವದ ಸಾಕ್ಷ್ಯ ಸಂಗ್ರಹ

ಸೈಟ್‌ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಿಕ್ಕಿದೆ ಹಲವು ಪುರಾವೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಮುಡಾದಲ್ಲಿ ಹಗರಣ ನಡೆದೇ ಇಲ್ಲ, ಎಲ್ಲ ವಿಪಕ್ಷಗಳ ಅಪಪ್ರಚಾರ ಎನ್ನುತ್ತಿರುವ ಸಿದ್ದರಾಮಯ್ಯನವರಿಗೆ ಈ ಸಾಕ್ಷ್ಯಗಳು ಉರುಳಾಗಿ ಪರಿಣಮಿಸಲಿವೆ ನ್ನಲಾಗಿದೆ. ಮುಡಾದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿ.ಎಂ ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಹಲವು ಪುರಾವೆಗಳನ್ನು ಜಾರಿ

ಮುಡಾ ಹಗರಣ : ಇ.ಡಿಯಿಂದ ಸಿದ್ದರಾಮಯ್ಯ ವಿರುದ್ಧ ಮಹತ್ವದ ಸಾಕ್ಷ್ಯ ಸಂಗ್ರಹ Read More »

ಜಿಲ್ಲಾ ಸಮಿತಿಗಳಿಗೆ ಮರಳು ಬ್ಲಾಕ್‌ ಹಂಚಿಕೆ ಹೊಣೆ

ಹೊಸ ಮರಳು ನೀತಿ ಕುರಿತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾಹಿತಿ ಬೆಂಗಳೂರು : ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಸರಕಾರ ಹೊಸ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ಉದ್ದೇಶದಿಂದ ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಸಮಿತಿಗಳಿಗೆ ನೀಡಲು ನಿರ್ಧರಿಸಲಾಗಿದೆ.

ಜಿಲ್ಲಾ ಸಮಿತಿಗಳಿಗೆ ಮರಳು ಬ್ಲಾಕ್‌ ಹಂಚಿಕೆ ಹೊಣೆ Read More »

ಆಟೋ ಚಾಲಕ ನಾಪತ್ತೆ : ಪ್ರಕರಣ ದಾಖಲು

ವಿಟ್ಲ: ಆಟೋ ಚಾಲಕರೊಬ್ಬರು ಬಾಡಿಗೆಗೆಂದು ತೆರಳಿ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಧನರಾಜ್ ನಾಪತ್ತೆಯಾಗಿದ್ದು, ಅವರ ಆಟೋ ರಿಕ್ಷಾ, ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ. ಮೊಬೈಲ್ ಸ್ವಿಚ್ ಆಗಿದೆ. ನ.28 ರಂದು ತನ್ನ ಮನೆಯಿಂದ ಆಟೋರಿಕ್ಷಾವನ್ನು ತೆಗೆದುಕೊಂಡು ಬೆಳಿಗ್ಗೆ ಹೊರಟಿದ್ದು ವಾರ ಕಳೆದರೂ ಮನೆಗೆ ವಾಪಸು ಬಂದಿಲ್ಲ. ಈ ಬಗ್ಗೆ ಸಂಬಂದಿಕರಲ್ಲಿ ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾರೆ ಮನಯವರು ಠಾಣೆಗೆ ನೀಡಿದ ಎಂದು ದೂರಿನಲ್ಲಿ

ಆಟೋ ಚಾಲಕ ನಾಪತ್ತೆ : ಪ್ರಕರಣ ದಾಖಲು Read More »

error: Content is protected !!
Scroll to Top