ಸುದ್ದಿ

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಪ್ತ ಕಾರ್ಯದರ್ಶಿಯಾಗಿ ಜಯಪ್ರಕಾಶ್‍ ಎನ್‍. ನೇಮಕ

ಪುತ್ತೂರು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಆಪ್ತ ಕಾರ್ಯದರ್ಶಿಯನ್ನಾಗಿ ಜಯಪ್ರಕಾಶ್‍ ಎ. ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ ಅಧೀನ ಕಾರ್ಯದರ್ಶಿ ಎನ್‍.ಜಯಂತಿ ಅವರು ಈ ನೇಮಕ ಮಾಡಿ ಆದೇಶಿಸಿದ್ದಾರೆ. ಜಯಪ್ರಕಾಶ್‍ ಎನ್‍. ಅವರು ಈ ಹಿಂದೆ ಡಿ.ವಿ.ಸದಾನಂದ ಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಾಗೂ ಕೇಂದ್ರ ಸಚಿವರಾಗಿದ್ದಾಗ ಅವರ ಪಿ.ಎ. ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಪ್ತ ಕಾರ್ಯದರ್ಶಿಯಾಗಿ ಜಯಪ್ರಕಾಶ್‍ ಎನ್‍. ನೇಮಕ Read More »

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದ ಯುವಕ| ಯುವಕ ಮೃತ್ಯು

ಮಂಗಳೂರು : ಸ್ನೇಹಿತರೊಂದಿಗೆ  ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಫಳೀರ್‌ನಲ್ಲಿ ಜನವರಿ 15 ರಂದು ನಡೆದಿದೆ. ಮೃತಪಟ್ಟ ಯುವಕ ಅಟ್ಟಾವರ್ ಐವರಿ ಟವರ್ ನಿವಾಸಿಯಾಗಿದ್ದ ಮತ್ತು ಅದ್ದೂರು ಮೂಲದ ಶರೀಫ್ ಅವರ ಪುತ್ರ ಶಹೀಮ್ (20) ಎಂದು ತಿಳಿದು ಬಂದಿದೆ. ಸ್ನೇಹಿತರೊಂದಿಗೆ ಆಡುತ್ತಿದ್ದ ವೇಳೆ  ಬ್ಯಾಡ್ಮಿಂಟನ್  ಆಟಗಾರ ಶಹೀಮ್  ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದಿದ್ದು ಅವರನ್ನು  ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅದೇ ಸಮಯದಲ್ಲಿ ಶಹೀಮ್ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಶಹೀಮ್

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದ ಯುವಕ| ಯುವಕ ಮೃತ್ಯು Read More »

ಜ.18 : ಮಹೋತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವ | ಸಮರ್ಪಣ್ ವಿಟ್ಲ ಅರ್ಪಿಸುವ ‘ಸಮರ್ಪಣ್ ಕಲೋತ್ಸವ – 2025” | ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ

ವಿಟ್ಲ : ಮಹೋತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವರ ಬಯ್ಯದ ಬಲಿ ಉತ್ಸವ ಜ.18 ಶನಿವಾರ ನಡೆಯಲಿದ್ದು, ಅಂದು ಸಮರ್ಪಣ್‍ ವಿಟ್ಲ ಅರ್ಪಿಸುವ ಸಮರ್ಪಣ್ ಕಲೋತ್ಸವ – 2025 ಜರುಗಲಿದೆ. ಕಲೋತ್ಸವದ ಅಂಗವಾಗಿ ರಾತ್ರಿ 8 ರಿಂದ ಸಾಧಕರಿಗೆ ಗೌರವಾರ್ಪಣೆ ಹಾಗೂ ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್  ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಗುತ್ತು, ಬೆಂಗಳೂರು ಕೆ.ಎಸ್. ಆರ್.

ಜ.18 : ಮಹೋತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವ | ಸಮರ್ಪಣ್ ವಿಟ್ಲ ಅರ್ಪಿಸುವ ‘ಸಮರ್ಪಣ್ ಕಲೋತ್ಸವ – 2025” | ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ Read More »

ಸೈಫ್‌ ಅಲಿ ಖಾನ್‌ಗೆ ಸರ್ಜರಿ : ಪ್ರಾಣಾಪಾಯದಿಂದ ಪಾರು

ಆರು ಕಡೆ ಇರಿದು ಗಾಯಗೊಳಿಸಿದ್ದ ದರೋಡೆಕೋರರು ಮುಂಬಯಿ : ಇಂದು ನಸುಕಿನ ಹೊತ್ತು ದರೋಡೆಕೋರರಿಂದ ಇರಿತಕ್ಕೊಳಗಾಗಿದ್ದ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರಿಗೆ ನಗರದ ಲೀಲಾವತಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದೆ. ಈ ವೇಳೆ ಸೈಫ್‌ ಮೈಮೇಲಾದ ಗಾಯದಲ್ಲಿ ಚಾಕುವಿನ ತುಂಡೊಂದು ಸಿಕ್ಕಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸವೆ.ಸೈಫ್‌ಗೆ ಆರು ಕಡೆ ಇರಿಯಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆತಂದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಸುಮಾರು ಮೂರು ತಾಸು ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರ

ಸೈಫ್‌ ಅಲಿ ಖಾನ್‌ಗೆ ಸರ್ಜರಿ : ಪ್ರಾಣಾಪಾಯದಿಂದ ಪಾರು Read More »

ಜ.18 : ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11

ವಿಟ್ಲ : ಕೆ.ಪಿ.ಎಲ್‍. ಕುಳಾಲು ಇದರ ಆಶ್ರಯದಲ್ಲಿ ಲೀಗ್ ಮಾದರಿಯ ಹೊನಲು ಬೆಳಕಿನ ಅಂಡರ್ ಆರ್ಮ್‍ ಕ್ರಿಕೆಟ್ ಪಂದ್ಯಾಟ ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11, ಜ.18 ರಂದು ಸಂಜೆ 7 ಗಂಟೆಗೆ ಕುಳಾಲು ವಾರಾಹಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11ರ ಕ್ರಿಕೇಟ್‍ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 15,555 KPL ಟ್ರೋಫಿ ಹಾಗೂ ದ್ವಿತೀಯ ಬಹುಮಾನ 11,111 KPL ಟ್ರೋಫಿಯನ್ನು ನೀಡಲಿದ್ದಾರೆ. ಉತ್ತಮ ದಾಂಡಿಗ, ಉತ್ತಮ ದಾಳಿಗಾರ, ಹಾಗೂ ಸವ್ಯಸಾಚಿ ಟ್ರೋಫಿಯನ್ನು

ಜ.18 : ಕುಳಾಲು ಪ್ರೀಮಿಯರ್ ಲೀಗ್‍ ಸೀಸನ್‍ 11 Read More »

ಏರೋಸ್ಪೇಸ್‌ ಇಂಜಿನಿಯರ್‌ ಈಗ ನಾಗಸಾಧು

ಕೈತುಂಬ ಸಂಬಳದ ನೌಕರಿ, ಐಷರಾಮಿ ಬದುಕು ತೊರೆದು ಅಧ್ಯಾತ್ಮದತ್ತ ಹೋದ ಪ್ರತಿಭಾವಂತ ಪ್ರಯಾಗ್‌ರಾಜ್‌ : ಇಲ್ಲಿ ನಡೆಯುತ್ತಿರುವ ವೈಭವದ ಮಹಾಕುಂಭಮೇಳದಲ್ಲಿ ಅನೇಕ ವಿಸ್ಮಯಗಳು ಗಮನ ಸೆಳೆಯುತ್ತವೆ. ಮಹಾಕುಂಭಮೇಳದ ಪ್ರಧಾನ ಅಂಗವಾಗಿರುವ ನಾಗಸಾಧುಗಳ ವಿಚಿತ್ರ ವೇಷಭೂಷಣ, ವರ್ತನೆ, ನಿಗೂಢ ಬದುಕು ಎಲ್ಲವೂ ಕುತೂಹಲಕರವಾಗಿವೆ. ಒಬ್ಬೊಬ್ಬ ನಾಗಸಾಧು ಒಂದೊಂದು ವೈಶಿಷ್ಟ್ಯ ಹೊಂದಿದ್ದಾರೆ. ಕುಂಭಮೇಳ ಜರುಗುವಾಗ ಮಾತ್ರ ನಾಗರಿಕ ಪ್ರಪಂಚದಲ್ಲಿ ಕಾಣಿಸಿಕೊಳ್ಳುವ ಈ ನಾಗಸಾಧುಗಳನ್ನು ನೋಡಲು, ಅವರ ಆಶೀವಾದ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ನಾಗಸಾಧುಗಳ ಪೈಕಿ ಈ ಸಲ ಬಹಳ ಸುದ್ದಿ

ಏರೋಸ್ಪೇಸ್‌ ಇಂಜಿನಿಯರ್‌ ಈಗ ನಾಗಸಾಧು Read More »

6.80 ಕೋ.ರೂ. ಮೌಲ್ಯದ ಡ್ರಗ್ಸ್‌ ನಾಶ ಮಾಡಿದ ಮಂಗಳೂರು ಪೊಲೀಸರು

ಮಂಗಳೂರು: ಮಂಗಳೂರು ಪೊಲೀಸರು ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಸುಮಾರು 6.80 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಿದ್ದಾರೆ. ಮೂಲ್ಕಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ನಿನ್ನೆ ನಾಶ ಮಾಡಲಾಗಿದೆ. ನ್ಯಾಯಾಲಯದ ಅನುಮತಿಯೊಂದಿಗೆ 2024 ಮತ್ತು 2023ರಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಇದು ಪ್ರತಿ ವರ್ಷದ ಪ್ರಕ್ರಿಯೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. 37 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. ಸುಮಾರು

6.80 ಕೋ.ರೂ. ಮೌಲ್ಯದ ಡ್ರಗ್ಸ್‌ ನಾಶ ಮಾಡಿದ ಮಂಗಳೂರು ಪೊಲೀಸರು Read More »

ದಶಮಾನೋತ್ಸವದ  ಪ್ರಯುಕ್ತ ಶ್ರೀಮಾತಾ ಅರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ

ಉಜಿರೆ : ಯಕ್ಷಭಾರತಿ(ರಿ )ಕನ್ಯಾಡಿ ಬೆಳ್ತಂಗಡಿ ಇದರ ದಶಮಾನೋತ್ಸವದ  ಪ್ರಯುಕ್ತ ಶ್ರೀಮಾತಾ ಅರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ನಾಗರಾಜ ಕಾಂಪೌಂಡ್ ಆವರಣದಲ್ಲಿ  ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ ಬಯಲಾಟ ಮತ್ತು ಸನ್ಮಾನ ಕಾರ್ಯಕ್ರಮ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ವಹಿಸಿದ್ದರು. ಅತಿಥಿಗಳಾಗಿ ಪದ್ಮಶೇಖರ ಜೈನ್ ಕಾವಳಕಟ್ಟೆ,ಭಾಗವತ ಪಟ್ಲ ಸತೀಶ್ ಶೆಟ್ಟಿ, ಭುಜಬಲಿ ಧರ್ಮಸ್ಥಳ, ಉಜಿರೆ ಲಕ್ಷ್ಮಿ ಗ್ರೂಪ್ಸ್ ಮೋಹನ ಕುಮಾರ್, ಉಜಿರೆ ಶ್ರೀ ದುರ್ಗಾ ಇಂಡಸ್ಟ್ರೀಸ್ ರಮೇಶ್

ದಶಮಾನೋತ್ಸವದ  ಪ್ರಯುಕ್ತ ಶ್ರೀಮಾತಾ ಅರ್ಟ್ಸ್ ಉಜಿರೆ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ Read More »

ನಟ ಸೈಫ್‌ ಅಲಿ ಖಾನ್‌ ಮೇಲೆ ಮಾರಕಾಸ್ತ್ರದಿಂದ ದಾಳಿ

ದರೋಡೆ ಮಾಡಲು ಮನೆಗೆ ನುಗ್ಗಿದವರಿಂದ ಚಾಕು ಇರಿತ ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಿನ್ನೆ ರಾತ್ರಿ ಮಾರಕಾಸ್ತ್ರದಿಂದ ದಾಳಿ ಮಾಡಲಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 2.30ರ ವೇಳೆಗೆ ಈ ಘಟನೆ ನಡೆದಿದೆ. ದರೋಡೆಕೋರರು ಅವರ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಅವರು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು

ನಟ ಸೈಫ್‌ ಅಲಿ ಖಾನ್‌ ಮೇಲೆ ಮಾರಕಾಸ್ತ್ರದಿಂದ ದಾಳಿ Read More »

ಅದಾನಿ ಸಮೂಹವನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ

ವಾಷಿಂಗ್ಟನ್‌ : ಭಾರತದ ಅಗ್ರಗಣ್ಯ ಉದ್ಯಮಿ ಗೌತಮ್‌ ಅದಾನಿಯವರ ನೇತೃತ್ವದ ಅದಾನಿ ಕಂಪನಿಗಳಿಗೆ ಇನ್ನಿಲ್ಲದಂತೆ ಕಾಟ ಕೊಟ್ಟಿದ್ದ ಹಿಂಡನ್‌ಬರ್ಗ್‌ ಸಂಸ್ಥೆಗೆ ಬೀಗ ಬಿದ್ದಿದೆ. ಹಿಂಡನ್‌ಬರ್ಗ್‌ ರೀಸರ್ಚ್‌ ಕಂಪನಿಯನ್ನು ಮುಚ್ಚುತ್ತಿರುವುದಾಗಿ ಅದರ ಸಂಸ್ಥಾಪಕ ನೇಟ್‌ ಆಂಡರ್‌ಸನ್‌ ಹೇಳಿದ್ದಾರೆ. ನಾವು ಏನು ಸಾಧಿಸಬೇಕೆಂದಿದ್ದೆವೋ ಅದನ್ನು ಸಾಧಿಸಿದ್ದೇವೆ. ಈಗ ಕಂಪನಿಯನ್ನು ಮುಚ್ಚುವ ಸಮಯ ಬಂದಿದೆ. ಈ ಸಂಸ್ಥೆಯನ್ನು ನಡೆಸಿದ್ದು ಬದುಕಿ ಅದ್ಭುತ ಸಾಹಸವಾಗಿತ್ತು ಎಂದು ನೇಟ್‌ ಹೇಳಿದ್ದಾರೆ.2023ರಲ್ಲಿ ಅದಾನಿ ಕಂಪನಿಯ ವಿರುದ್ಧ ಹಿಂಡನ್‌ಬರ್ಗ್‌ ಬಿಡುಗಡೆ ಮಾಡಿದ್ದ ವರದಿ ಇಡೀ ಜಗತ್ತಿನಲ್ಲಿ ಕೋಲಾಹಲ

ಅದಾನಿ ಸಮೂಹವನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ Read More »

error: Content is protected !!
Scroll to Top