ಸುದ್ದಿ

ಉಗ್ರರನ್ನು ಮಟ್ಟ ಹಾಕಲೇ ಬೇಕು, ಎಲ್ಲ ಬೆಂಬಲ ಕೊಡುತ್ತೇವೆ ಎಂದ ವಿಪಕ್ಷಗಳು

ಕಾಶ್ಮೀರದಲ್ಲಿ ಭದ್ರತಾ ಲೋಪವಾಗಿದೆ ಎಂದು ಒಪ್ಪಿಕೊಂಡ ಸರಕಾರ ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಹಿನ್ನೆಲೆಯಲ್ಲಿ ಉಗ್ರರನ್ನು ಮಟ್ಟ ಹಾಕಲು ಸರಕಾರ ಕೈಗೊಳ್ಳುವ ಯಾವುದೇ ಕ್ರಮವನ್ನು ಬೆಂಬಲಿಸುವುದಾಗಿ ವಿಪಕ್ಷಗಳು ಹೇಳಿವೆ. ಸಂಸತ್ ಭವನದಲ್ಲಿ ನಿನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲ ಪ್ರಮುಖ ವಿಪಕ್ಷಗಳು ಉಗ್ರರನ್ನು ಮಟ್ಟಹಾಕಲೇ ಬೇಕು ಎಂದು ಪ್ರತಿಪಾದಿಸಿವೆ. ಸಭೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಚರ್ಚಿಸಿ ಉಗ್ರರ ಕೃತ್ಯವನ್ನು ಒಕ್ಕೂರಲಿನಿಂದ ಖಂಡಿಸಲಾಗಿದೆ. ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡರೂ ತಮ್ಮ ಬೆಂಬಲವಿದೆ […]

ಉಗ್ರರನ್ನು ಮಟ್ಟ ಹಾಕಲೇ ಬೇಕು, ಎಲ್ಲ ಬೆಂಬಲ ಕೊಡುತ್ತೇವೆ ಎಂದ ವಿಪಕ್ಷಗಳು Read More »

ಹಿಂದೂಗಳ ಹತ್ಯೆಯನ್ನು ಸಮರ್ಥಿಸಿಕೊಂಡ ಅಸ್ಸಾಂನ ಶಾಸಕ

ಗುವಾಹಟಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ನಡೆದ ಹಿಂದೂಗಳ ನರಮೇಧಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಸಮರ್ಥಿಸಿಕೊಂಡಿದ್ದ ಅಸ್ಸಾಂನ ವಿರೋಧ ಪಕ್ಷವಾಗಿರುವ ಎಐಯುಡಿಎಫ್‌ ಶಾಸಕ ಅಮಿನುಲ್‌ ಇಸ್ಲಾಂನನ್ನು ಪೊಲೀಸರು ಬಂಧಿಸಿದ್ದಾರೆ. ನಾಗಾಂವ್ ಜಿಲ್ಲೆಯ ನಿವಾಸದಲ್ಲಿ ಶಾಸಕನನ್ನು ಬಂಧಿಸಲಾಗಿದೆ. ಪಕ್ಷದ ಶಾಸಕನ ಹೇಳಿಕೆ ಕುರಿತು ಎಐಯುಡಿಎಫ್ ಅಂತರ ಕಾಯ್ದುಕೊಂಡಿದೆ. ಇದು ಶಾಸಕನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನ ಸಮರ್ಥಿಸಿಕೊಂಡಿರುವ ಶಾಸಕನ ವಿಡಿಯೋ ನೋಡಿದ್ದೇವೆ. ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಶಾಸಕರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.

ಹಿಂದೂಗಳ ಹತ್ಯೆಯನ್ನು ಸಮರ್ಥಿಸಿಕೊಂಡ ಅಸ್ಸಾಂನ ಶಾಸಕ Read More »

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ದಾಳಿ | ಆಲಂಕಾರಿನಲ್ಲಿ ಬೃಹತ್ ಪ್ರತಿಭಟನಾ ಸಭೆ

ಅಲಂಕಾರು : ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪ್ರತಿಭಟನಾ ಸಭೆ ಇಂದು ಆಲಂಕಾರಿನಲ್ಲಿ ನಡೆಯಿತು. ಈ ವೇಳೆ ನವೀನ್‍ ನೆರಿಯ ಹಾಗೂ ಆಲಂಕಾರಿನ ಎಲ್ಲಾ ಹಿಂದೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ದಾಳಿ | ಆಲಂಕಾರಿನಲ್ಲಿ ಬೃಹತ್ ಪ್ರತಿಭಟನಾ ಸಭೆ Read More »

ಮೇ 1 : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ, ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಹಾಗೂ ಸಂಘದ ವಾರ್ಷಿಕ ಮಹಾಸಭೆ ಮೇ 1 ಗುರುವಾರ ಬೆಳಿಗ್ಗೆ 9.30 ಕ್ಕೆ ಬಪ್ಪಳಿಗೆಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್‍ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ ಶೈಕ್ಷಣಿಕವಾಗಿ ಆರು ಮಂದಿ ಸಾಧಕರಿಗೆ ಅಭಿನಂದಿಸಲಾಗುವುದು. ದೆಹಲಿ ಗಣರಾಜ್ಯೋತ್ಸವದಲ್ಲಿ ಪ್ರಧಾನಮಂತ್ರಿ ರ‍್ಯಾಲಿಯಲ್ಲಿ, ದೆಹಲಿ ಕರ್ತವ್ಯಪಥ ರಾಜ್ಯೋತ್ಸವ ಪಥಸಂಚಲನದಲ್ಲಿ, ಗಣರಾಜ್ಯೋತ್ಸವ ಕರ್ತವ್ಯಪಥದಲ್ಲಿ, ಸಾಂಸ್ಕೃತಿಕ

ಮೇ 1 : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ, ಸಂಘದ ವಾರ್ಷಿಕ ಮಹಾಸಭೆ Read More »

ಕಾರು-ಆಕ್ಟಿವಾ ಡಿಕ್ಕಿ | ಆಕ್ಟಿವಾ ಸವಾರ ಗಂಭೀರ ಗಾಯ

ಪುತ್ತೂರು : ಕಾರು ಮತ್ತು ಅಕ್ಟಿವಾ ನಡುವೆ ಅಪಘಾತ ಸಂಭವಿಸಿದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಬಳಿ ನಡೆದಿದೆ. ಘಟನೆಯಿಂದಾಗಿ ಆಕ್ಟಿವಾ ಸಂಪೂರ್ಣ ಜಖಂಗೊಂಡಿದೆ. ಕೊಡಿಪ್ಪಾಡಿ ನಿವಾಸಿ ರಫೀಕ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಅದೇ ರಸ್ತೆಯಾಗಿ ತೆರಳುತ್ತಿದ್ದ ಉದ್ಯಮಿ ಉಜ್ವಲ್ ಪ್ರಭು ತಕ್ಷಣ ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರು-ಆಕ್ಟಿವಾ ಡಿಕ್ಕಿ | ಆಕ್ಟಿವಾ ಸವಾರ ಗಂಭೀರ ಗಾಯ Read More »

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಕಂಡಕ್ಟರ್‌

ವೀಡಿಯೊ ವೈರಲ್‌ ಆದ ಬಳಿಕ ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಮಂಗಳೂರು: ಮುಡಿಪು -ಸ್ಟೇಟ್‌ ಬ್ಯಾಂಕ್‌ ಮಧ್ಯೆ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್‌ ನಿರ್ವಹಕ ಚಲಿಸುತ್ತಿರುವ ಬಸ್ಸಿನಲ್ಲೇ ಯುವತಿಗೆ ಕಿರುಕುಳ ನೀಡಿದ ಘಟನೆ ಸಂಭವಿಸಿದೆ. ನಿದ್ರಿಸುತ್ತಿದ್ದ ಯುವತಿಗೆ ನಿರ್ವಾಹಕ ಕಿರುಕುಳ ನೀಡಿದ್ದು, ಪ್ರಯಾಣಿಕರೊಬ್ಬರು ಇದನ್ನು ವೀಡಿಯೊ ಮಾಡಿದ್ದರು. ಈ ವೀಡಿಯೊ ವೈರಲ್‌ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು, ಆರೋಪಿ ನಿರ್ವಾಹಕ ಬಾಗಲಕೋಟೆ ಮೂಲದ ಪ್ರದೀಪ್‌ (40) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 22ರಂದು ಮುಡಿಪುವಿನಿಂದ ಸ್ಟೇಟ್‌ ಬ್ಯಾಂಕ್​​ನತ್ತ ತೆರಳುತ್ತಿದ್ದ

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಕಂಡಕ್ಟರ್‌ Read More »

ಬಾವಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಬಾವಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.24 ರಂದು ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ನಡೆದಿದೆ. ಮೃತ ವ್ಯಕ್ತಿ ಬೆಳ್ತಂಗಡಿ ನಿವಾಸಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾರವರ ಪತಿ ವಿನೋದ್ (48) ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಾವಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು Read More »

ಪಾಕಿಸ್ಥಾನದ ಭೂಸೇನಾ ಮುಖ್ಯಸ್ಥ ಮುನೀರ್‌ನನ್ನು ಉಗ್ರ ಒಸಾಮ ಬಿನ್‌ ಲಾಡೆನ್‌ಗೆ ಹೋಲಿಸಿದ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ

ಪಹಲ್ಗಾಮ್‌ ದಾಳಿಗೆ ಮುನೀರ್‌ ಕಾರಣ ಎಂದು ನೇರ ಆರೋಪ ವಾಷಿಂಗ್ಟನ್‌ : ಪಾಕಿಸ್ತಾನದ ಭೂಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಅಮೆರಿಕ ಅಲ್‌ ಕಾಯಿದಾ ಉಗ್ರ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭಯಾನಕ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವಿದೆ ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್ ರೂಬಿನ್ ನೇರವಾಗಿ ಆರೋಪಿಸಿದ್ದಾರೆ. ಜನರಲ್‌ ಮುನೀರ್‌ ಅರಮನೆಯಲ್ಲಿ ವಾಸಿಸುತ್ತಿದ್ದರೆ, ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ. ಇವರಿಬ್ಬರ ನಡುವೆ ಇದೊಂದೇ ವ್ಯತ್ಯಾಸ

ಪಾಕಿಸ್ಥಾನದ ಭೂಸೇನಾ ಮುಖ್ಯಸ್ಥ ಮುನೀರ್‌ನನ್ನು ಉಗ್ರ ಒಸಾಮ ಬಿನ್‌ ಲಾಡೆನ್‌ಗೆ ಹೋಲಿಸಿದ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ Read More »

ಎರಡು ಮನೆಗಳಿಗೆ ನುಗ್ಗಿದ ಕಳ್ಳ |  ಬೆಲೆಬಾಳುವ ನಗ- ನಗದು ಕಳವು

ಉಪ್ಪಿನಂಗಡಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳ ಲಕ್ಷಾಂತರ ರೂ. ಬೆಲೆಬಾಳುವ ನಗ ನಗದನ್ನು ಕಳವು ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಡೆದಿದೆ. ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಅವರ ಮನೆಯಲ್ಲಿ ಪತ್ನಿ ಮತ್ತು ನಾದಿನಿ ಮನೆಯೊಳಗೆ ಮಲಗಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ ಕಳ್ಳ ಒಟ್ಟು 12 ಗ್ರಾಂ ತೂಕವಿರುವ 3 ಉಂಗುರ, ಹಾಗೂ 6 ಗ್ರಾಂ ತೂಕವಿರುವ 4 ಉಂಗುರ ಮತ್ತು 3 ಸಾವಿರ ನಗದು ಹಣ ಕದ್ದೊಯ್ದಿದ್ದಾನೆ. ಇದೇ ಗ್ರಾಮದ ಕೋಡಿ

ಎರಡು ಮನೆಗಳಿಗೆ ನುಗ್ಗಿದ ಕಳ್ಳ |  ಬೆಲೆಬಾಳುವ ನಗ- ನಗದು ಕಳವು Read More »

ಕ್ರಿಕೆಟ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌ಗೆ ಕೊಲೆ ಬೆದರಿಕೆ

ಐಸಿಸ್‌ ಕಾಶ್ಮೀರ ಖಾತೆಯಿಂದ ಐ ಕಿಲ್‌ ಯೂ ಎಂದು ಧಮ್ಕಿ ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಐಸಿಸ್ ಕಾಶ್ಮೀರ ಎಂಬ ಖಾತೆಯಿಂದ ಕೊಲೆ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಜೀವ ಬೆದರಿಕೆಯೊಡ್ಡಲಾಗಿದ್ದು, ಈ ಬಗ್ಗೆ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ಗಂಭೀರ್ ದೂರು ನೀಡಿದ್ದಾರೆ.ಗೌತಮ್ ಗಂಭೀರ್ ಬುಧವಾರ ದೆಹಲಿ ಪೊಲೀಸರನ್ನು ಸಂಪರ್ಕಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೆಯೇ ತಮ್ಮ ಕುಟುಂಬದ ಭದ್ರತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ ಎಂದು ರಾಜೇಂದ್ರ

ಕ್ರಿಕೆಟ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌ಗೆ ಕೊಲೆ ಬೆದರಿಕೆ Read More »

error: Content is protected !!
Scroll to Top