ಸುದ್ದಿ

ತಲೆಗೆ ಗಾಯವಾಗಿ ವೃದ್ಧ ಸಾವು : ಸಾವಿನ ಬಗ್ಗೆ ಅನುಮಾನ

ಮನೆಯಲ್ಲೇ ಬಿದ್ದಿತ್ತು 73ರ ಹರೆಯದ ವ್ಯಕ್ತಿಯ ಶವ ಕಡಬ: ವೃದ್ಧರೊಬ್ಬರು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ನೆಲ್ಯಾಡಿಯಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಶವ ಪತ್ತೆಯಾಗಿದೆ. ಮೃತರನ್ನು ಕಡಬ ನೆಲ್ಯಾಡಿ ಗ್ರಾಮದ ನಿವಾಸಿ ಕೆ.ಸಿ. ವರ್ಗೀಸ್ (73) ಎಂದು ಗುರುತಿಸಲಾಗಿದೆ. ಕೆ.ವಿ.ಥಾಮಸ್ ಸಲ್ಲಿಸಿದ ದೂರಿನ ಪ್ರಕಾರ, ಭಾನುವಾರ ಮಧ್ಯಾಹ್ನ ಚಿಕಿತ್ಸೆಗಾಗಿ ತನ್ನ ತಾಯಿಯನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾತ್ರಿ 8 ಗಂಟೆಗೆ ಅವರನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋದ ನಂತರ, ರಾತ್ರಿ 11 ಗಂಟೆಗೆ ಮನೆಗೆ […]

ತಲೆಗೆ ಗಾಯವಾಗಿ ವೃದ್ಧ ಸಾವು : ಸಾವಿನ ಬಗ್ಗೆ ಅನುಮಾನ Read More »

ಮತ್ತೆ ತಾರಕಕ್ಕೇರಿದ ಕಾಂಗ್ರೆಸ್‌ ಕುರ್ಚಿ ಫೈಟ್‌ : ಡಿಕೆಶಿ ದಿಢೀರ್‌ ದಿಲ್ಲಿ ದೌಡು

ಭಾರಿ ಕುತೂಹಲ ಕೆರಳಿಸಿದ ಡಿಕೆಶಿ ಹೈಕಮಾಂಡ್‌ ಭೇಟಿ ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ಎರಡನೇ ಸುತ್ತಿನ ಕುರ್ಚಿ ಜಗಳ ತಾರಕಕ್ಕೇರಿದೆ. ಶಿವಕುಮಾರ್‌ ಈ ಸಲ ಏನಾದರೊಂದು ತೀರ್ಮಾನವಾಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದು, ಅವರ ಇತ್ತೀಚೆಗಿನ ಹೇಳಿಕೆಗಳು ಮತ್ತು ನಡೆಗಳು ಇದನ್ನು ಪುಷ್ಟೀಕರಿಸುತ್ತಿವೆ. ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ವದಂತಿಗಳು ಮುಂದುವರಿದಿರುವಂತೆಯೇ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯನ್ನು ಕೈಬಿಟ್ಟು ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ

ಮತ್ತೆ ತಾರಕಕ್ಕೇರಿದ ಕಾಂಗ್ರೆಸ್‌ ಕುರ್ಚಿ ಫೈಟ್‌ : ಡಿಕೆಶಿ ದಿಢೀರ್‌ ದಿಲ್ಲಿ ದೌಡು Read More »

ಅಯೋಧ್ಯೆ ಮೇಲೆ ದಾಳಿ ಮಾಡುಲುದ್ದೇಶಿಸಿದ್ದ ಉಗ್ರ ಜೈಲಿನಲ್ಲಿ ಹತ್ಯೆ

ಸಹಕೈದಿಯ ಜೊತೆಗೆ ನಡೆದ ಜಗಳದಲ್ಲಿ ಸಾವಿಗೀಡಾದ ಉಗ್ರ ಲಖನೌ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಸೆರೆಯಾಗಿ ಫರಿದಾಬಾದ್ ಜೈಲಿನಲ್ಲಿದ್ದ ಉಗ್ರನನ್ನು ಸಹಕೈದಿಯೊಬ್ಬ ಕೊಲೆ ಮಾಡಿದ್ದಾನೆ. ಅಬ್ದುಲ್ ರೆಹಮಾನ್(20) ಕೊಲೆಯಾದ ಆರೋಪಿಯಾಗಿದ್ದು, ಜೈಲಿನಲ್ಲಿದ್ದ ಕಾಶ್ಮೀರಿ ಯುವಕ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಹತ್ಯೆ ಎಸಗಿದ್ದಾನೆ. ಅಬ್ದುಲ್ ರೆಹಮಾನ್ ಮತ್ತು ಅರುಣ್‌ ಚೌಧರಿ ಮಧ್ಯೆ ಭಾನುವಾರ ಜಗಳ ನಡೆದು ವಿಕೋಪಕ್ಕೆ ತಿರುಗಿ ರಾತ್ರಿ 8 ಗಂಟೆಯ ವೇಳೆಗೆ ಅರುಣ್

ಅಯೋಧ್ಯೆ ಮೇಲೆ ದಾಳಿ ಮಾಡುಲುದ್ದೇಶಿಸಿದ್ದ ಉಗ್ರ ಜೈಲಿನಲ್ಲಿ ಹತ್ಯೆ Read More »

ಎಪಿಕೆ ಫೈಲ್‌ ಡೌನ್‌ಲೋಡ್‌ ಮಾಡಿ 10 ಲ. ರೂ. ಕಳೆದುಕೊಂಡ ವ್ಯಕ್ತಿ

ವ್ಯವಹಾರ ಮಾಡದಿದ್ದರೂ ಖಾತೆಯಿಂದ ಹಣ ಲಪಟಾಯಿಸಿದ ವಂಚಕರು ಮಂಗಳೂರು : ಬರೀ ಎಪಿಕೆ ಫೈಲ್‌ ಡೌನ್‌ಲೋಡ್‌ ಮಾಡಿದ ಬಳಿಕ ವ್ಯಕ್ತಿಯೊಬ್ಬರು 10 ಲ.ರೂ. ಕಳೆದುಕೊಂಡ ಕುರಿತು ದೂರು ದಾಖಲಾಗಿದೆ. ಅಪರಿಚಿತರು ಕಳುಹಿಸಿದ ಎಪಿಕೆ ಲಿಂಕ್ ಡೌನ್ಲೋಡ್ ಮಾಡಿದ ವ್ಯಕ್ತಿಯ ಖಾತೆಯಿಂದ 10 ಲ.ರೂ. ಲಪಟಾಯಿಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ.5ರಂದು ತನಗೆ ಬಂದ ಎಪಿಕೆ ಲಿಂಕ್ ಅನ್ನು ಡೌನ್ಲೋಡ್ ಮಾಡಿದ್ದೆ. ಅದರಲ್ಲಿ ತನ್ನ ಮೊಬೈಲ್ ನಂಬರ್ ನಮೂದಿಸಿದ್ದರು. ನಂತರ ಮತ್ತೊಂದು ಮೊಬೈಲ್ ಸಂಖ್ಯೆಯಿಂದ

ಎಪಿಕೆ ಫೈಲ್‌ ಡೌನ್‌ಲೋಡ್‌ ಮಾಡಿ 10 ಲ. ರೂ. ಕಳೆದುಕೊಂಡ ವ್ಯಕ್ತಿ Read More »

ಟಿ20 ವಿಶ್ವಕಪ್‌ : ಭಾರತದ ಜೊತೆ ಆಡಲು ಪಾಕಿಸ್ತಾನ ನಿರ್ಧಾರ

ಹಣಕಾಸು ನಷ್ಟವನ್ನು ಲೆಕ್ಕ ಹಾಕಿದ ಬಳಿಕ ಆಡಲು ಒಪ್ಪಿಗೆ ಸೂಚಿಸಿದ ಪಾಕ್‌ ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತದ ಜೊತೆಗೆ ಪಂದ್ಯ ಆಡಲು ಕೊನೆಗೂ ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ. ಭಾರತ ವಿರುದ್ಧ ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಇದೀಗ ಸಂಪೂರ್ಣವಾಗಿ ಬಗೆಹರಿದಿದ್ದು, ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ಈ ಸಂಬಂಧ

ಟಿ20 ವಿಶ್ವಕಪ್‌ : ಭಾರತದ ಜೊತೆ ಆಡಲು ಪಾಕಿಸ್ತಾನ ನಿರ್ಧಾರ Read More »

ಪ್ಲಾಸ್ಟಿಕ್‌ ಗೋಡೌನ್‌ ಬೆಂಕಿಗಾಹುತಿ

ಬೆಂಗಳೂರು: ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸೋಮವಾರ ಮಧ್ಯರಾತ್ರಿ ಈ ಅವಘಡ ನಡೆದಿದೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಇನ್ನೂ ಬೆಂಕಿ ಹತೋಟಿಗೆ ಬಂದಿಲ್ಲ. ಪ್ಲಾಸ್ಟಿಕ್ ಗೋಡೌನ್ ಸಮೀಪವೇ ಗ್ಯಾಸ್ ಸಿಲಿಂಡರ್ ಗೋಡೌನ್ ಇತ್ತು. ಗ್ಯಾಸ್ ಗೋಡೌನ್‌ಗೆ ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಆಗುವ ಸಾಧ್ಯತೆಯಿತ್ತು. ಸದ್ಯ ಭಾರಿ ಅನಾಹುತವೊಂದು ತಪ್ಪಿದೆ.

ಪ್ಲಾಸ್ಟಿಕ್‌ ಗೋಡೌನ್‌ ಬೆಂಕಿಗಾಹುತಿ Read More »

ಮುಡಾ ಹಗರಣ ಮುಚ್ಚಿ ಹಾಕಲು ಲೋಕಾಯುಕ್ತರಿಗೆ ಲಂಚ : ಸ್ನೇಹಮಯಿ ಕೃಷ್ಣ ಆರೋಪ

ಮತ್ತೆ ಜೀವ ಪಡೆದುಕೊಂಡ ಮುಡಾ ಹಗರಣ ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸಂಭವಿಸಿದ ಬಹುಕೋಟಿ ಸೈಟ್‌ ಹಗರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಅಧಿಕಾರಿಗಳಿಗೆ ಕೋಟಿಗಟ್ಟಲೆ ರೂಪಾಯಿ ಲಂಚ ನೀಡಲಾಗಿದೆ ಎಂಬ ಸ್ಫೋಟಕ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಿಂದ ಕೋಟಿಗಟ್ಟಲೆ ರೂಪಾಯಿ ಲಂಚ ಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಗೆ ಕೋಟಿಗಟ್ಟಲೆ ಹಣ ಲಂಚ

ಮುಡಾ ಹಗರಣ ಮುಚ್ಚಿ ಹಾಕಲು ಲೋಕಾಯುಕ್ತರಿಗೆ ಲಂಚ : ಸ್ನೇಹಮಯಿ ಕೃಷ್ಣ ಆರೋಪ Read More »

ವಿವಾಹಿತನ ಜೊತೆ ಮಗಳ ಪ್ರೇಮ: ಮರ್ಯಾದೆಗಂಜಿ ‌ಸಾವಿಗೆ ಶರಣಾದ ತಾಯಿ ಮತ್ತು ಮಗಳು

ಮಂಡ್ಯ: ವಿವಾಹವಾದ ಪುರುಷನ ಜೊತೆಗೆ ಮಗಳ ಪ್ರೇಮ ಸಂಬಂಧದ ಕಾರಣಕ್ಕೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ (46) ಮತ್ತು ಅವರ ಪುತ್ರಿ ಪ್ರಿಯಾಂಕ(19) ಮೃತಪಟ್ಟವರು. ಪ್ರಿಯಾಂಕ ತನ್ನದೇ ಗ್ರಾಮದ 34 ವರ್ಷದ ಮುತ್ತು ರಾಜ್ ಎಂಬವನ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಆದರೂ ಪ್ರಿಯಾಂಕಳನ್ನು ಪ್ರೀತಿಸುವ‌ ನಾಟಕವಾಡುತ್ತಿದ್ದ. ನಿತ್ಯವೂ ಇವರ ಮನೆಗೆ

ವಿವಾಹಿತನ ಜೊತೆ ಮಗಳ ಪ್ರೇಮ: ಮರ್ಯಾದೆಗಂಜಿ ‌ಸಾವಿಗೆ ಶರಣಾದ ತಾಯಿ ಮತ್ತು ಮಗಳು Read More »

ಉದ್ಯಮಿ ಎವಿಆರ್‌ಗೆ ಬೆದರಿಕೆ, ಹಣಕ್ಕಾಗಿ ಬೇಡಿಕೆ: ಕೃಷಿ ತಾಪಂಡ ‌ಮನೆಯಿಂದಲೇ ಆರೋಪಿ ವೈಶಾಖ್ ಬಂಧನ

ಬೆಂಗಳೂರು: ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿಗೆ ಬೆದರಿಕೆ ಒಡ್ಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ‌ ಗೆಳೆಯ ವೈಶಾಖ್‌ನನ್ನು ಎಚ್ ಎ ಎಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕೃಷಿ ತಾಪಂಡ ಮನೆಯಲ್ಲೇ ಬಂಧಿಸಿರುವುದು ಈ ಪ್ರಕರಣದ ಕಾವು ಹೆಚ್ಚಿಸಿದೆ. ಕಳೆದ ಜನವರಿ ತಿಂಗಳಲ್ಲಿ ಎವಿಆರ್‌ಗೆ ಕೊರಿಯರ್ ಒಂದು ಬಂದಿದ್ದು, ಅದರಲ್ಲಿ ನಿನ್ನ ಮತ್ತು ನಟಿಯ ಜಗಳವನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನನ್ನ ಗ್ಯಾರೇಜ್‌ಗೆ ಆರರಿಂದ ಏಳು ಕೋಟಿ ರೂ. ಗಳನ್ನು ನೀಡಬೇಕು.

ಉದ್ಯಮಿ ಎವಿಆರ್‌ಗೆ ಬೆದರಿಕೆ, ಹಣಕ್ಕಾಗಿ ಬೇಡಿಕೆ: ಕೃಷಿ ತಾಪಂಡ ‌ಮನೆಯಿಂದಲೇ ಆರೋಪಿ ವೈಶಾಖ್ ಬಂಧನ Read More »

ಸಾಲದ ಮೇಲಿನ ಬಡ್ಡಿ ದರ ಮನ್ನಾ : ಅಲ್ಪಸಂಖ್ಯಾತರಿಗೆ ಇನ್ನೊಂದು ಬಂಪರ್‌ ಕೊಡುಗೆ

ವಿಪಕ್ಷಗಳ ಭಾರಿ ವಿರೋಧದ ಹೊರತಾಗಿಯೂ ಅನುಷ್ಠಾನಕ್ಕೆ ಮುಂದಾದ ಸರ್ಕಾರ ಬೆಂಗಳೂರು : 2013–14ರಿಂದ 2018–19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾದ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವ ಒನ್‌ಟೈಮ್ ಸೆಟ್ಲ್‌ಮೆಂಟ್ ಯೋಜನೆಗೆ ಇತ್ತೀಚೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ವಿಚಾರ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ವಿಪಕ್ಷಗಳು ಕಿಡಿ ಕಾರಿದ್ದು, ಅಲ್ಪಸಂಖ್ಯಾತರಿಗೆ ಮಾತ್ರ ಸಾಲದ ಬಡ್ಡಿ ಮನ್ನಾ ಮಾಡಿ ರೈತರು ಮತ್ತು ಹಿಂದುಳಿದ ವರ್ಗಗಳು ಸೇರಿ ಇತರ ಸಮುದಾಯಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿವೆ.

ಸಾಲದ ಮೇಲಿನ ಬಡ್ಡಿ ದರ ಮನ್ನಾ : ಅಲ್ಪಸಂಖ್ಯಾತರಿಗೆ ಇನ್ನೊಂದು ಬಂಪರ್‌ ಕೊಡುಗೆ Read More »

error: Content is protected !!
Scroll to Top