ಸುದ್ದಿ

ಚಲಿಸುತ್ತಿರುವಾಗಲೇ ಕಳಚಿದ ಕೆಎಸ್‌ಆರ್‌ಟಿಸಿ ಬಸ್‍ ನ ಟಯರ್

ಬೆಳ್ತಂಗಡಿ: ಚಲಿಸುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್ಸಿನ  ಟಯರ್ ಕಳಚಿ ಹೋದ ಘಟನೆ ಉಜಿರೆ ಸಮೀಪದ ಕಾಶಿಬೆಟ್ಟು ಟಿ.ಬಿ. ಕ್ರಾಸ್-ಕುಂಟಿನಿ ರಸ್ತೆಯಲ್ಲಿ ನಡೆದಿದೆ. ಧರ್ಮಸ್ಥಳ ಕೊಲ್ಲಿ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‍ ಎನ್ನಲಾಗಿದೆ. ಅವಘಡದ ಬಳಿಕ ಕೆಎಸ್‌ಆರ್‌ಟಿಸಿ ಸರಿಯಾಗಿ ಬಸ್ ನೀಡದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಹೆಚ್ಚುವರಿ ಬಸ್ ಹಾಗೂ ಇತರ ಬೇಡಿಕೆ ಮುಂದಿಟ್ಟು ಬುಧವಾರ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಉಜಿರೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೆ ಮತ್ತೆ ಬಸ್ ಟಯರ್ ಸಂಪೂರ್ಣ ಕಳಚಿ ಬೀಳುವ ಮೂಲಕ ಬಸ್‌ನ ಕಳಪೆ […]

ಚಲಿಸುತ್ತಿರುವಾಗಲೇ ಕಳಚಿದ ಕೆಎಸ್‌ಆರ್‌ಟಿಸಿ ಬಸ್‍ ನ ಟಯರ್ Read More »

ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ | ದೇವರ ದರ್ಶನ ಪಡೆದ ಸಾವಿರಾರು ಭಕ್ತರು

ಸುಳ್ಯ: ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ನಡೆಯಿತು. ವಾರ್ಷಿಕ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಈ ಕ್ಷೇತ್ರದ ವಿಶೇಷತೆ. ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಕ್ಷೇತ್ರದಲ್ಲಿ ಪ್ರತಿ ಜ.31ರಂದು ವಾರ್ಷಿಕ ಉತ್ಸವ  ವಿಜೃಂಭಣೆಯಿಂದ ನಡೆಯುತ್ತದೆ. ದೈವಜ್ಞರಾದ

ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ | ದೇವರ ದರ್ಶನ ಪಡೆದ ಸಾವಿರಾರು ಭಕ್ತರು Read More »

ಸ್ನೇಹಮಯಿ ಕೃಷ್ಣಗೆ ಶಕ್ತಿ ತುಂಬಲು ಶಕ್ತಿ ದೇವತೆಗೆ ಪ್ರಾಣಿ ಬಲಿ

ಮೊಬೈಲ್‌ನಲ್ಲಿತ್ತು ಮಂಗಳೂರಿನಲ್ಲಿ ನಡೆದ ಪ್ರಾಣಿ ಬಲಿಯ ಶಾಕಿಂಗ್‌ ವೀಡಿಯೊಗಳು ಮಂಗಳೂರು : ಕೆಲದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಮಸಾಜ್ ಪಾರ್ಲರ್ ಗಲಾಟೆ ಸಂಬಂಧ ಬಂಧನದಲ್ಲಿರುವ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮುಡಾ ಹಗರಣವನ್ನು ಬಯಲಿಗೆಳೆದಿರುವ ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಶಕ್ತಿ ತುಂಬಲು ಪ್ರಾಣಿ ಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ. ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಆರ್​ಟಿಐ ಕಾರ್ಯಕರ್ತ ಗಂಗರಾಜು ಫೋಟೊಗೆ ಹಚ್ಚಿರುವ ವೀಡಿಯೊ ಪೊಲೀಸರಿಗೆ ಲಭ್ಯವಾಗಿದೆ.

ಸ್ನೇಹಮಯಿ ಕೃಷ್ಣಗೆ ಶಕ್ತಿ ತುಂಬಲು ಶಕ್ತಿ ದೇವತೆಗೆ ಪ್ರಾಣಿ ಬಲಿ Read More »

ಲಾರಿಯಡಿಗೆ ಬಿದ್ದ ಬೈಕ್ | ಸವಾರ ಗಂಭೀರ ಗಾಯ

ಮಂಗಳೂರು : ನಿಯಂತ್ರಣ ತಪ್ಪಿ ಲಾರಿಯಡಿಗೆ ಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮುಕ್ಕ ಸಮೀಪ ನಡೆದಿದೆ. ಅತಿ ವೇಗದಿಂದ ಚಲಿಸುತ್ತಿದ್ದ ಲಾರಿ ಸಡನ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಲಾರಿಯಡಿ ಬಿದ್ದಿದೆ. ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಸ್ಕಾಂಗೆ ಸೇರಿದ ಲಾರಿ ಇದಾಗಿದ್ದು, ವಿದ್ಯುತ್ ಕಂಬಗಳನ್ನು ರವಾಣಿಸುತ್ತಿತ್ತು ಎನ್ನಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಲಾರಿಯಡಿಗೆ ಬಿದ್ದ ಬೈಕ್ | ಸವಾರ ಗಂಭೀರ ಗಾಯ Read More »

ಮನೆಯೊಳಗೆ ಕಳ್ಳ ನುಸುಳಿ ನಗದು ಕಳವು

ಮಿತ್ತಬಾಗಿಲು : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಹೊಡೆದು, ಗಾಡ್ರೇಜಿನಿಂದ ಸುಮಾರು 25,000 ರೂ. ಕಳವು ಮಾಡಿದ ಘಟನೆ ಜ. 29 ರಂದು ರಾತ್ರಿ ನಡೆದಿದೆ. ಮಿತ್ತ ಬಾಗಿಲು ಗ್ರಾಮದ ಕಿಲ್ಲೂರಿನ ಯಶೋಧರ ಮತ್ತು ವೇದಾವತಿ ದಂಪತಿಯವರ ಮನೆಯಲ್ಲಿ ನಡೆದಿದೆ.   ಘಟನಾ ವಿರುದ್ದ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯೊಳಗೆ ಕಳ್ಳ ನುಸುಳಿ ನಗದು ಕಳವು Read More »

ನಾಳೆಯಿಂದ ಪಂಜ ಪಂಚಲಿಂಗೇಶ್ವರ ಸನ್ನಿದಾನದಲ್ಲಿ ಜಾತ್ರೋತ್ಸವ : ಫೆ. 1 ರಿಂದ ಫೆ. 9ರ ತನಕ ವಿಜೃಂಭನೆಯಿಂದ ಜರುಗಲಿದೆ ಜಾತ್ರಾ ಸಂಭ್ರಮ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಫೆ. 1ರಿಂದ 9ರ ತನಕ ವೈಭವದಿಂದ ನಡೆಯಲಿದೆ. ಪ್ರತಿ ದಿನ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮೆಯ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕಾಗಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆ. 1ರಂದು ದೇಗುಲದಲ್ಲಿ ಪೂರ್ವಾಹ್ನ 7.30ರಿಂದ ಶ್ರೀ ಗಣಪತಿ ಹವನ, ಶ್ರೀ ರುದ್ರ ಹವನ ಮತ್ತು ವೇದಪಾರಾಯಣಗಳ ಆರಂಭವಾಗಲಿದೆ. ಪೂರ್ವಾಹ್ನ 10.30ರಿಂದ ಗರಡಿ ಬೈಲ್ ಮೂಲ ನಾಗನ ಕಟ್ಟೆಯಲ್ಲಿ

ನಾಳೆಯಿಂದ ಪಂಜ ಪಂಚಲಿಂಗೇಶ್ವರ ಸನ್ನಿದಾನದಲ್ಲಿ ಜಾತ್ರೋತ್ಸವ : ಫೆ. 1 ರಿಂದ ಫೆ. 9ರ ತನಕ ವಿಜೃಂಭನೆಯಿಂದ ಜರುಗಲಿದೆ ಜಾತ್ರಾ ಸಂಭ್ರಮ Read More »

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಮ್ರಧ್ವಜ ಕಾಳಗ ತಾಳಮದ್ದಳೆ

ಗುರುವಾಯನ ಕೆರೆ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಶ್ರೀ ಮಹಾಭಾರತ ಸರಣಿಯ 63ನೇ ಕಾರ್ಯಕ್ರಮವಾಗಿ ತಾಮ್ರಧ್ವಜ ಕಾಳಗ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ,  ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ಮಯೂರಧ್ವಜ),ಶಿವಾನಂದ ಭಂಡಾರಿ (ನಾರದ ),ಹರೀಶ ಆಚಾರ್ಯ ಬಾರ್ಯ (ತಾಮ್ರಧ್ವಜ ), ದಿವಾಕರ ಆಚಾರ್ಯ ಗೇರುಕಟ್ಟೆ (ನಕುಲ ಧ್ವಜ ), ರಾಘವ ಮೆದಿನ (ಶ್ರೀಕೃಷ್ಣ ), ರಾಘವ. ಯಚ್ (ಅರ್ಜುನ )

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಮ್ರಧ್ವಜ ಕಾಳಗ ತಾಳಮದ್ದಳೆ Read More »

ಪುತ್ತೂರಿನ ಉದ್ಯಮಿಯನ್ನು ಅಪಹರಿಸಿ 28 ಲ.ರೂ. ದರೋಡೆ

ಕಾರು ಅಡ್ಡಗಟ್ಟಿ ಅಜ್ಞಾತ ಸ್ಥಳಕ್ಕೆ ಒಯ್ದು ಚಿತ್ರಹಿಂಸೆ ಬೆಂಗಳೂರು: ಪುತ್ತೂರಿನ ಉದ್ಯಮಿಯೊಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಚಿತ್ರಹಿಂಸೆ ನೀಡಿ, 28 ಲಕ್ಷ ರೂ. ದೋಚಿರುವ ಘಟನೆ ಬೆಂಗಳೂರಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಕೊಲ್ಪೆ ಗ್ರಾಮದ ನಿವಾಸಿ ಇಕ್ಬಾಲ್ ಅಪಹರಣಕ್ಕೆ ಒಳಗಾದವರಾಗಿದ್ದು, ಇವರು ಪೆಟ್ರೋಲ್‌ ಬಂಕ್ ಹಾಗೂ ಟ್ರಾನ್ಸ್‌ಪೋರ್ಟ್ ವ್ಯವಹಾರ ಹೊಂದಿದ್ದಾರೆ. ಜ.24ರಂದು ಇಕ್ಬಾಲ್‌ ದೇವನಹಳ್ಳಿಯ ಹೋಟೆಲ್‌ಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಬೆಂಗಳೂರಿನಲ್ಲಿರುವ ಸ್ನೇಹಿತ ಕರೀಂ ಮನೆಯಲ್ಲಿ ಉಳಿದುಕೊಂಡು ಮರುದಿನ

ಪುತ್ತೂರಿನ ಉದ್ಯಮಿಯನ್ನು ಅಪಹರಿಸಿ 28 ಲ.ರೂ. ದರೋಡೆ Read More »

ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ

ಪುತ್ತೂರು  : ಅಖಿಲ ಕರ್ನಾಟಕ ಹಿರಿಯರ ಸೇವಾಪ್ರತಿಷ್ಠಾನ( ರಿ ) ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಪುತ್ತೂರು ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಹಿರಿಯರ ಸೇವಾ ಸಂಘಟನೆಯನ್ನು ಸದಸ್ಯರ ಸೇರ್ಪಡೆ ಮಾಡುವ ಮೂಲಕ ಬಲಪಡಿಸಬೇಕೆಂದು  ತಿಳಿಸಿದರು. ಪ್ರತೀ ತಿಂಗಳ ಕೊನೆಯ  ಗುರುವಾರ ಸಭೆ ನಡೆಸುವ  ಮತ್ತು ಸಮಾಜದ ವಿವಿದ ರಂಗಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೇಂದ್ರ

ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ Read More »

ಬೈಕ್ ಡಿಕ್ಕಿ ; ಮಹಿಳೆ ಮೃತ್ಯು

ಬಿ.ಸಿ.ರೋಡ್ : ರಸ್ತೆ ದಾಟಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತುಕೊಂಡಿದ್ದ ವಯಸ್ಸಾದ  ಮಹಿಳೆಯೋರ್ವರಿಗೆ ದ್ವಿಚಕ್ರ ವಾಹನ‌ ಡಿಕ್ಕಿಯಾಗಿ ಮೃತಪಟ್ಟ ಘಟನೆ ಬಿಸಿರೋಡಿನ ಕೈಕಂಬದ ಮಿತ್ತಬೈಲು ಎಂಬಲ್ಲಿ ಜ.30 ರಂದು ಗುರುವಾರ ಸಂಜೆ ವೇಳೆ ನಡೆದಿದೆ. ಪುದು ಸಮೀಪದ ‌ಸುಜೀರು ನಿವಾಸಿ ಬೀಪಾತುಮ್ಮ ( 68) ಮೃತಪಟ್ಟ ಮಹಿಳೆ.  ಮಿತ್ತಬೈಲು ಮೊಹಿದ್ದೀನ್ ಜುಮಾಮಸೀದಿ ಹಾಲ್ ನಲ್ಲಿ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮ ಮುಗಿಸಿ ,ವಾಪಸು ಮನೆ ಕಡೆಗೆ ಹೋಗುವುದಕ್ಕೆ ಹೆದ್ದಾರಿಯನ್ನು ದಾಟಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಅತೀವೇಗ

ಬೈಕ್ ಡಿಕ್ಕಿ ; ಮಹಿಳೆ ಮೃತ್ಯು Read More »

error: Content is protected !!
Scroll to Top