ಸುದ್ದಿ

ಬಿಹಾರ ಗೆಲುವು ವೋಟ್‌ ಚೋರಿ ಸುಳ್ಳಿಗೆ ಸಿಕ್ಕಿದ ಉತ್ತರ : ಕ್ಯಾ.ಬ್ರಿಜೇಶ್‌ ಚೌಟ

ಅಪಪ್ರಚಾರಕ್ಕೆ ತಕ್ಕ ಪಾಠ ಕಲಿಸಿದ ಬಿಹಾರದ ಮತದಾರರು ಎಂದ ಸಂಸದ ಮಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಫಲಿತಾಂಶವು ಬಿಜೆಪಿಗೆ ಮತ್ತಷ್ಟು ಬಲ ನೀಡಲಿದೆ. ಅಷ್ಟೇಅಲ್ಲ, ಕಾಂಗ್ರೆಸ್ ನಾಯಕರ ಸುಳ್ಳು ವೋಟ್ ಚೋರಿ ಆರೋಪಕ್ಕೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಳಗೊಂಡಿರುವ ಎನ್‌ಡಿಎ ಬಹುಮತ ಸಾಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸದರು, ಪ್ರಧಾನಮಂತ್ರಿ […]

ಬಿಹಾರ ಗೆಲುವು ವೋಟ್‌ ಚೋರಿ ಸುಳ್ಳಿಗೆ ಸಿಕ್ಕಿದ ಉತ್ತರ : ಕ್ಯಾ.ಬ್ರಿಜೇಶ್‌ ಚೌಟ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ದೇವಿನಗರದಲ್ಲಿ ಮಲ್ಲಿಗೆ ಕೃಷಿ ತರಬೇತಿ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯ ಮಟ್ಟದ ಮಲ್ಲಿಗೆ ಕೃಷಿ ತರಬೇತಿ ಕಾರ್ಯಕ್ರಮವನ್ನು ದೇವಿನಗರ ವತ್ಸಲಾ ನಾಯಕ್ ಅವರ ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ತೋರಕಟ್ಟೆ ಒಕ್ಕೂಟದ ಅಧ್ಯಕ್ ರಘು ನಾಯ್ಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ವತ್ಸಲಾ ನಾಯಕ್ ಮಲ್ಲಿಗೆ ಕೃಷಿ ನಾಟಿ ಮತ್ತು ಮಲ್ಲಿಗೆಯ ಗಿಡದ ಹುಳುಗಳ ಹಾವಳಿಯನ್ನು ನಾಶಮಾಡುವುದನ್ನು ವಿವರಿಸಿ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಐತಪ್ಪ ಪೂಜಾರಿ ಅವರು ಸ್ವಉದ್ಯೋಗ ಮಾಡುವ ಬಗ್ಗೆ ಮಾಹಿತಿ ನೀಡಿದರು. ಮೇಲ್ವಿಚಾರಕಿ ಮೀನಾಕ್ಷಿ ಪ್ರಾಸ್ತಾವಿಕವಾಗಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ದೇವಿನಗರದಲ್ಲಿ ಮಲ್ಲಿಗೆ ಕೃಷಿ ತರಬೇತಿ Read More »

ಬಿ.ಸಿ.ರೋಡ್‌ ಅಪಘಾತ : ಮೃತರ ಸಂಖ್ಯೆ ಮೂರಕ್ಕೇರಿಕೆ

ಬೆಳ್ಳಂಬೆಳಗ್ಗೆ ಸರ್ಕಲ್‌ಗೆ ಗುದ್ದಿದ ಇನ್ನೋವಾ ಕಾರು ; ಉಡುಪಿ ಕೃಷ್ಣ ಮಠಕ್ಕೆ ಹೋಗುತ್ತಿದ್ದ ಯಾತ್ರಿಕರು ಮಂಗಳೂರು : ಇಂದು ಮುಂಜಾನೆ ಬಿ.ಸಿ.ರೋಡ್‌ನಲ್ಲಿ ಕಾರು ಸರ್ಕಲ್‌ಗೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಉಡುಪಿ ಬರುತ್ತಿದ್ದ ಕಾರು ಬೆಳ್ಳಂಬೆಳಗ್ಗೆ ಬಿ.ಸಿ.ರೋಡ್‌ನಲ್ಲಿ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಲ್‌ಗೆ ಗುದ್ದಿದ ರಭಸಕ್ಕೆ

ಬಿ.ಸಿ.ರೋಡ್‌ ಅಪಘಾತ : ಮೃತರ ಸಂಖ್ಯೆ ಮೂರಕ್ಕೇರಿಕೆ Read More »

ಪಿ.ಸಿ. ಜಯರಾಮರಿಗೆ ಮುಖ್ಯಮಂತ್ರಿಯವರಿಂದ ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು, ಅರಮನೆ ಮೈದಾನ: ಸುಳ್ಯ ತಾಲೂಕಿನ ಮಡಪ್ಪಾಡಿಯ ಹಿರಿಯ ಸಹಕಾರಿ, ಮಡಪ್ಪಾಡಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಪೂರ್ವಾಧ್ಯಕ್ಷ, ಪಿ.ಸಿ. ಜಯರಾಮರಿಗೆ ಕರ್ನಾಟಕ ಸರಕಾರವು ನೀಡುವ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಯನ್ನು ನಿನ್ನೆ ನವೆಂಬರ್ 14 ರಂದು ಬೆಂಗಳೂರಿನ ಪ್ಯಾಲೇಸ್ ಗೌಂಡ್‌’ನಲ್ಲಿ ಜರುಗಿದ ಅದ್ದೂರಿಯ ಸಹಕಾರ ಸಪ್ತಾಹ ಸಮಾರಂಭದ ಉದ್ಘಾಟನಾ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜಯರಾಮರ ಹುಟ್ಟೂರ ಮತ್ತು ಪರವೂರ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಪಿ.ಸಿ. ಜಯರಾಮರಿಗೆ ಮುಖ್ಯಮಂತ್ರಿಯವರಿಂದ ಸಹಕಾರ ರತ್ನ ಪ್ರಶಸ್ತಿ ಪ್ರದಾನ Read More »

ಉಸಿರು ಚೆಲ್ಲಿದ ಹಸಿರು ಮಾತೆ

ಬೆಂಗಳೂರು: ಉಸಿರಾಟದ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ನಿಧನಕ್ಕೆ ಸಿಎಂ ಸೇರಿ ಗಣ್ಯರಿಂದ ಸಂತಾಪ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಮಕ್ಕಳ ದಿನಾಚರಣೆಯಂದು ನಿಧನವೃಕ್ಷಗಳನ್ನು ಮಕ್ಕಳಂತೆಯೇ ಪ್ರೀತಿಸುತ್ತಿದ್ದ “ವೃಕ್ಷಮಾತೆ” ತಿಮ್ಮಕ್ಕ ಮಕ್ಕಳ ದಿನಾಚರಣೆ ಯಂದೇ ನಿಧನವಾಗಿದ್ದು ಅಚ್ಚರಿಯಾಗಿದೆ.

ಉಸಿರು ಚೆಲ್ಲಿದ ಹಸಿರು ಮಾತೆ Read More »

ಹೀನಾಯ ಸೋಲಿಗೆ ಚುನಾವಣಾ ಆಯೋಗವನ್ನು ದೂಷಿಸುತ್ತಿರುವ ಕಾಂಗ್ರೆಸ್‌ ನಾಯಕರು

ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ ಎಂದು ಆರೋಪ ನವದೆಹಲಿ: ಬಿಹಾರ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಕಾಂಗ್ರೆಸ್‌ ನಾಯಕರು ಚುನಾವಣಾ ಅಯೋಗವನ್ನು ಸ್ಪರ್ಧೆಗೆ ಬಿದ್ದವರಂತೆ ದೂಷಿಸತೊಡಗಿದ್ದಾರೆ. ಸೋಲಿನ ಎಲ್ಲ ಹೊಣೆಯನ್ನು ಚುನಾವಣಾ ಆಯೋಗಕ್ಕೆ ಕಟ್ಟುತ್ತಿದ್ದಾರೆ. ಕಾಂಗ್ರೆಸ್‌ನ ಅಧಿನಾಯಕ ರಾಹುಲ್‌ ಗಾಂಧಿ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌, ವಕ್ತಾರ ಹರೀಶ್‌ ಖೇರಾ ಅವರಿಂದ ಹಿಡಿದು ಪ್ರತಿಯೊಬ್ಬರು ಚುನಾವಣಾ ಆಯೋಗದ ಸಹಕಾರದಿಂದಲೇ ಬಿಜೆಪಿ ಗೆಲ್ಲುತ್ತಿದೆ ಎಂದು ಹೇಳುತ್ತಿದ್ದಾರೆ. ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಸಭೆಯ ವಿರೋಧ

ಹೀನಾಯ ಸೋಲಿಗೆ ಚುನಾವಣಾ ಆಯೋಗವನ್ನು ದೂಷಿಸುತ್ತಿರುವ ಕಾಂಗ್ರೆಸ್‌ ನಾಯಕರು Read More »

ಕಾಡಿನಂಚಿನಲ್ಲಿ ಬೀಡುಬಿಟ್ಟಿವೆ 21 ಹುಲಿಗಳು : ಅರಣ್ಯಾಧಿಕಾರಿ ಎಚ್ಚರಿಕೆ

ಹುಲಿ ಸೆರೆಹಿಡಿಯುವ ಕಾರ್ಯಾಚರಣೆ ಚುರುಕು ಮೈಸೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ಬರೋಬರಿ 21 ಹುಲಿಗಳು ಬಂದಿವೆ ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ, ಸರಗೂರು ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಮೂವರ ರೈತರು ಬಲಿಯಾದ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಅರಣ್ಯ ಇಲಾಖೆ ಜನರನ್ನು ಕಾಡಿದ್ದ ಹುಲಿಯನ್ನು ಸೆರೆಹಿಡಿದಿತ್ತು. ಜೊತೆಗೆ ಕಾಡಂಚಿನ ರೈತರ ರಕ್ಷಣೆಗೆ ಹಲವು ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಈ ನಡುವೆ ಒಂದಲ್ಲ ಎರಡಲ್ಲ ಬರೋಬ್ಬರಿ 21 ಹುಲಿಗಳು ಎಂಟ್ರಿ

ಕಾಡಿನಂಚಿನಲ್ಲಿ ಬೀಡುಬಿಟ್ಟಿವೆ 21 ಹುಲಿಗಳು : ಅರಣ್ಯಾಧಿಕಾರಿ ಎಚ್ಚರಿಕೆ Read More »

ಬಿ.ಸಿ.ರೋಡ್‌ : ಕಾರು ವೃತ್ತಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು

ಬಂಟ್ವಾಳ : ಇನ್ನೋವಾ ಕಾರೊಂದು ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಕಾರು ಶನಿವಾರ ಮುಂಜಾನೆ 5ರ ವೇಳೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ನೇರವಾಗಿ ಢಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು ಐವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬೆಂಗಳೂರು ಮೂಲದವರು ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಬಿ.ಸಿ.ರೋಡ್‌ : ಕಾರು ವೃತ್ತಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು Read More »

ಸುರತ್ಕಲ್‌ನಲ್ಲಿ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ

ಹೆದ್ದಾರಿ ಬಂದ್‌ ಮಾಡಿ ಸುರಕ್ಷತಾ ಕ್ರಮ ಕೈಗೊಂಡ ಅಧಿಕಾರಿಗಳು ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಜಂಕ್ಷನ್‌ನಲ್ಲಿ ಅಥರ್ವಾ ಆಸ್ಪತ್ರೆ ಬಳಿ ಸಿಎನ್‌ಜಿ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಒಂದರಲ್ಲಿ ಶುಕ್ರವಾರ ರಾತ್ರಿ ಸೋರಿಕೆ ಉಂಟಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾಯಿತು. ಕೂಡಲೇ ಸುರಕ್ಷತಾ ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಲಾಯಿತು. ಬೈಕಂಪಾಡಿ ಗೈಲ್ ಪಂಪ್‌ನಿಂದ ಸಿಎನ್‌ಜಿ ತುಂಬಿಸಿಕೊಂಡು ಉಡುಪಿ ಕಡೆ ಹೋಗುತ್ತಿದ್ದ ಟ್ಯಾಂಕರ್ ಸುರತ್ಕಲ್ ತಲುಪುತ್ತಿದ್ದಂತೆ ಸೋರಿಕೆ ಆರಂಭವಾಗಿತ್ತು. ಚಾಲಕ ತಕ್ಷಣ ಟ್ಯಾಂಕರನ್ನು ಹೆದ್ದಾರಿ ಬದಿ ನಿಲ್ಲಿಸಿ ಅಪಾಯದ ಮುನ್ಸೂಚನೆಯನ್ನು

ಸುರತ್ಕಲ್‌ನಲ್ಲಿ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ Read More »

ಬಿಹಾರ ಫಲಿತಾಂಶ : ಪಕ್ಷಗಳ ಅಂತಿಮ ಬಲಾಬಲ

200 ದಾಟಿ ಇತಿಹಾಸ ನಿರ್ಮಿಸಿದ ಎನ್‌ಡಿಎ ಮೈತ್ರಿಕೂಟ ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಎಲ್ಲ ಎಕ್ಸಿಟ್‌ ಪೋಲ್‌ಗಳನ್ನು ತಲೆಕೆಳಗು ಮಾಡಿ ಮತ್ತೆ ಅಧಿಕಾರಕ್ಕೇರಿದೆ. ಎನ್‌ಡಿಎ 202, ಮಹಾಘಟಬಂಧನ್‌ 35 ಹಾಗೂ ಇತರ 6 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಕಾಂಗ್ರೆಸ್ ಎಂದಿನಂತೆ ಹೇಳೋಕೆ ಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡ ಆರ್‌ಜೆಡಿ ಮಣ್ಣು ಮುಕ್ಕಿದೆ. ಮತಪಟ್ಟಿ ಪರಿಷ್ಕರಣೆಗೆ ವಿರೋಧ, ಮತಕಳವು ಆರೋಪ, ಅತ್ಯಧಿಕ ಮತದಾನ, ಶೇ.47ರಷ್ಟು ಮಹಿಳಾ ಮತದಾರರಿಂದ ವೋಟಿಂಗ್ ದಾಖಲೆಗಳ ವಿಶೇಷತೆ ನಡುವೆ

ಬಿಹಾರ ಫಲಿತಾಂಶ : ಪಕ್ಷಗಳ ಅಂತಿಮ ಬಲಾಬಲ Read More »

error: Content is protected !!
Scroll to Top